For Quick Alerts
ALLOW NOTIFICATIONS  
For Daily Alerts

ಸ್ನಾನ ಮಾಡುವಾಗ ಈ ರೀತಿಯ ತಪ್ಪು ಮಾತ್ರ ಮಾಡಬೇಡಿ!

By Hemanth
|

ಕೆಲವೊಂದು ಕೆಲಸಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಅದರಲ್ಲಿ ಬೆಳಿಗ್ಗೆ ಎದ್ದು ಹೋಗಿ ಸ್ನಾನ ಮಾಡುವುದು, ವಾಕಿಂಗ್‌ಗೆ ಹೋಗುವುದು, ಉಪಹಾರ ಮಾಡುವುದು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸ್ನಾನ ಮಾಡದೆ ಇದ್ದರೆ ಅದು ನಮಗೆ ಮಾತ್ರವಲ್ಲದೆ ನಮ್ಮ ಸಮೀಪದಲ್ಲಿ ಇರುವವರಿಗೂ ತೊಂದರೆಯನ್ನು ಉಂಟು ಮಾಡುತ್ತದೆ.

ಸ್ನಾನ ಮಾಡುವುದು ಅತೀ ಅಗತ್ಯವಾಗಿದೆ. ಎರಡೂ ಹೊತ್ತು ಸ್ನಾನ ಮಾಡುವವರು ಇದ್ದಾರೆ. ಸ್ನಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿ ಉಲ್ಲಾಸ ಉಂಟಾಗುತ್ತದೆ. ಬಿಸಿ ನೀರಿನ ಸ್ನಾನ, ಎಣ್ಣೆ ಸ್ನಾನ ಹಾಗೂ ತಣ್ಣೀರಿನ ಸ್ನಾನ ಹೀಗೆ ಹಲವಾರು ವಿಧದಲ್ಲಿ ಜನರು ಸ್ನಾನ ಮಾಡುತ್ತಾರೆ. ಆದರೆ ಸ್ನಾನ ಮಾಡುವಾಗ ನಾವು ಮಾಡುವಂತಹ ಕೆಲವೊಂದು ತಪ್ಪುಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಇದನ್ನು ಈ ಲೇಖನದಲ್ಲಿ ತಿಳಿದುಕೊಂಡು ಮುಂದೆ ಅದನ್ನು ತಿದ್ದುಕೊಳ್ಳಬಹುದು.

shower

ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿನ ಸ್ನಾಯಗಳಿಗೆ ಆರಾಮ ಸಿಗಬಹುದು. ಆದರೆ ಚರ್ಮದಲ್ಲಿನ ನೈಸರ್ಗಿಕ ಎಣ್ಣೆಯು ಬಿಸಿ ನೀರಿನಿಂದಾಗಿ ಕಳೆದುಹೋಗುವುದು. ಬಿಸಿ ನೀರಿನ ಸ್ನಾನದಿಂದ ಚರ್ಮವು ಒಣಗಿದಂತೆ ಆಗಬಹುದು. ತುಂಬಾ ತಂಪಾದ ಹವಾಮಾನವಿರುವ ಪ್ರದೇಶದಲ್ಲಿ ವಾಸಿಸುತ್ತಾ ಇದ್ದರೆ ಆಗ ಅತಿ ಬಿಸಿ ನೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಬಳಸಿ. 'ತಣ್ಣೀರಿನ ಸ್ನಾನ' ನಿಜಕ್ಕೂ ಇದು ಆರೋಗ್ಯಕ್ಕೆ ಸೋಪಾನ....

ಸ್ನಾನ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದು
ಸ್ನಾನ ಮಾಡಲು ನಿಮಗೆ ಅರ್ಧ ಗಂಟೆ ಬೇಕಾಗುತ್ತದೆಯಾ? ಹಾಗಾದರೆ ಇದನ್ನು ಓದಿ. ಯಾಕೆಂದರೆ ದೀರ್ಘ ಸಮಯ ಸ್ನಾನ ಮಾಡುವುದರಿಂದಾಗಿ ಚರ್ಮದಲ್ಲಿನ ನೈಸರ್ಗಿಕ ಎಣ್ಣೆಯಂಶವು ಕಡಿಮೆಯಾಗುವುದು. ಇದರಿಂದ ಚರ್ಮದಲ್ಲಿ ತೇವಾಂಶವು ಉಳಿದುಕೊಳ್ಳುವುದಿಲ್ಲ. ಸ್ನಾನ ಮಾಡಲು 10 ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳದಿರಿ.

ಸೋಪಿನ ಸುವಾಸನೆ ನಿಮಗಿಷ್ಟವೇ?
ಕೆಲವೊಂದು ಸೋಪುಗಳಲ್ಲಿ ಸುವಾಸನೆಗೆ ಬಳಸಿರುವಂತಹ ರಾಸಾಯನಿಕಗಳು ಚರ್ಮದ ತೇವಾಂಶವನ್ನು ಕಡಿಮೆ ಮಾಡಬಹುದು. ಇದು ಚರ್ಮವು ಒಣಗುವಂತೆ ಅಥವಾ ಜೋತು ಬೀಳುವಂತೆ ಮಾಡಬಹುದು. ಪರಾಬೆನ್ ಗಳಿಂದ ಸಂಸ್ಕರಣೆಗೊಂಡ ವಿಷಪೂರಿತ, ಕೃತಕ ಬಣ್ಣ, ಸುವಾಸನೆ, ಸೋಡಿಯಂ ಲೌರ್ಯಲ್ ಸಲ್ಫೇಟ್ ಮತ್ತು ಫಾರ್ಮಲ್ಡಿಹೈಡ್ ಹೊಂದಿರುವಂತಹ ಸೋಪುಗಳಿಂದ ದೂರವಿರಿ. ಸಾರಭೂತ ತೈಲವನ್ನು ಹೊಂದಿರುವ ಸೋಪುಗಳನ್ನು ಬಳಸಿ.

ಮೈಯುಜ್ಜುವ ಬ್ರಶ್ ಬದಲಿಸದೆ ಇರುವುದು
ಚರ್ಮವನ್ನು ಮೈಯುಜ್ಜುವ ಬ್ರಶ್ ನಿಂದ ಉಜ್ಜಿಕೊಂಡರೆ ಸತ್ತ ಚರ್ಮದ ಕೋಶಗಳು ಎದ್ದು ಹೋಗುವುದು. ಇದು ಒಳ್ಳೆಯ ಅಭ್ಯಾಸ. ಆದರೆ ಹಳೆದ ಬ್ರಶ್ ಗಳಲ್ಲಿ ಬ್ಯಾಕ್ಟೀರಿಯಾವು ಶೇಖರಣೆಯಾಗಿರುತ್ತದೆ. ಇದು ನಿಮ್ಮ ಚರ್ಮಕ್ಕೆ ಹಾನಿಕರ. ಇದರಿಂದ ಬ್ರಶ್ ಅನ್ನು ತಿಂಗಳಿಗೊಮ್ಮೆ ಬದಲಾಯಿಸುತ್ತಾ ಇರಿ. ಬ್ಯಾಕ್ಟೀರಿಯಾವಿರುವ ಬ್ರಶ್‌ನಿಂದ ಮೈಯುಜ್ಜಿಕೊಂಡರೆ ತುರಿಕೆ ಕಾಣಿಸಿಕೊಳ್ಳಬಹುದು. ಬ್ರಶ್ ಬದಲಾಗಿ ಬಟ್ಟೆಯನ್ನು ಬಳಸಿದರೆ ಒಳ್ಳೆಯದು.

ಸರಿಯಾಗಿ ತೊಳೆಯಿರಿ
ಸೋಪು ಹಾಗೂ ತಲೆಗೆ ಬಳಸುವಂತಹ ಯಾವುದೇ ಉತ್ಪನ್ನಗಳನ್ನು ಮೊದಲು ಸರಿಯಾಗಿ ತೊಳೆದುಕೊಂಡರೆ ಒಳ್ಳೆಯದು. ಇಲ್ಲವಾದರೆ ಅದರಲ್ಲಿನ ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ಸೇರಿಕೊಂಡು ರಂಧ್ರವನ್ನು ತಡೆದು ಮೊಡವೆಗಳಿಗೆ ಕಾರಣವಾಗಬಹುದು. ಕೂದಲನ್ನು ಸರಿಯಾಗಿ ತೊಳೆದುಕೊಳ್ಳಿ.

English summary

Mistakes we commit while taking a shower

You need to take a shower every day but did you ever think that you can be going wrong with it? All that hot shower and lather may be doing harm to your skin. experts tells what you should not do in a shower.
X
Desktop Bottom Promotion