For Quick Alerts
ALLOW NOTIFICATIONS  
For Daily Alerts

ಕೆಂದುಟಿಯ ಚೆಲುವು ಬೇಕೆಂದರೆ-ಜೇನನ್ನು ಪ್ರಯತ್ನಿಸಿ....

By Arshad
|

ನಿಮ್ಮ ತುಟಿಗಳು ಗಾಢವರ್ಣ ಪಡೆದಿದ್ದು, ಪಕಳೆ ಎದ್ದಿರುವಂತೆ ಮತ್ತು ತೆಳುವಾಗಿದೆ ಅನ್ನಿಸುತ್ತಿದೆಯೇ? ಎಷ್ಟು ಲಿಪ್ ಸ್ಟಿಕ್ ಹಚ್ಚಿಕೊಂಡರೂ ಪರಿಪೂರ್ಣತೆ ಪಡೆದಿದೆ ಎಂದು ಅನ್ನಿಸುತ್ತಿಲ್ಲವೇ, ಹಾಗಾದರೆ ನಿಮ್ಮ ತುಟಿಗಳಿಗೆ ಹೆಚ್ಚಿನ ಪೋಷಣೆಯ ಆರೈಕೆಯಿದೆ ಎಂದರ್ಥ. ಈ ಕೊರತೆಯನ್ನು ನೀಗಿಸಲು ಜೇನು ಅತ್ಯುತ್ತಮವಾದ ಪರಿಹಾರವಾಗಿದೆ. ಜೇನು ಒಂದು ಅತ್ಯುತ್ತಮವಾದ ನೈಸರ್ಗಿಕ ಶಾಮಕ (emollient) ಆಗಿದ್ದು ಇದರಲ್ಲಿ ವಿಟಮಿನ್ ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ಸೂಕ್ತ ಪ್ರಮಾಣದಲ್ಲಿವೆ. ಆರೋಗ್ಯದ ಆಗರ ಸಿಹಿ ಜೇನಿನ ಮಹತ್ವ ಅರಿಯಿರಿ

ವಿಶೇಷವಾಗಿ ವಿಟಮಿನ್ ಇ ತುಟಿಗಳ ಚರ್ಮಕ್ಕೆ ಗಾಢಬಣ್ಣ ಬರುವ ವರ್ಣದ್ರವ್ಯಗಳನ್ನು ತಿಳಿಗೊಳಿಸಿ ಬಣ್ಣವನ್ನು ಪ್ರಖರಗೊಳಿಸುತ್ತದೆ. ಅಲ್ಲದೇ ಜೇನಿನಲ್ಲಿರುವ ಆರ್ದ್ರತೆ ತುಟಿಗಳ ಚರ್ಮಕ್ಕೆ ಹೆಚ್ಚಿನ ಆರೈಕೆ ನೀಡುವ ಮೂಲಕ ಇವು ಮೃದುವಾಗಿ, ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಆದರೆ ಜೇನನ್ನು ಸುಮ್ಮನೇ ಸವರಿದರೆ ಸಾಕೇ? ಇಲ್ಲ ಇದರ ಸರಿಯಾದ ಬಳಕೆ ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್

ಆದರೆ ಇದಕ್ಕೂ ಮುನ್ನ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಅಗತ್ಯ. ಒಡೆದ ತುಟಿಗಳಿಗೆ ಎಂದೂ ನಾಲಿಗೆ ತಾಗಿಸಬಾರದು. ಬಿರಿಯುವ ತುಟಿಗಳಿಗೆ ಇನ್ನೊಂದು ಕಾರಣವೆಂದರೆ ಧೂಮಪಾನ. ಧೂಮಪಾನ ತ್ಯಜಿಸುವುದು, ಹೆಚ್ಚು ನೀರು ಕುಡಿಯುವುದು, ತುಟಿಗಳಿಗೆ SPF ಗುಣವಿರುವ ಲಿಪ್ಸ್ಟಿಕ್ ಗಳನ್ನೇ ಹಚ್ಚುವುದು ಮತ್ತು ಮುಖ್ಯವಾಗಿ ತುಟಿಗಳನ್ನು ಕಚ್ಚುವ ಅಭ್ಯಾಸವನ್ನು ತ್ಯಜಿಸಬೇಕು. ಇದರೊಂದಿಗೆ ಜೇನು ಮತ್ತು ಇತರ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ತುಟಿಗಳಿಗೆ ಹಚ್ಚಿಕೊಂಡಾಗ ತುಟಿಗಳ ಆರೋಗ್ಯ ಮತ್ತು ಸೌಂದರ್ಯವೆರಡೂ ವೃದ್ಧಿಸುತ್ತದೆ.....

ದಾಳಿಂಬೆಹಣ್ಣಿನ ರಸ

ದಾಳಿಂಬೆಹಣ್ಣಿನ ರಸ

ಕೆಲವು ಹನಿ ದಾಳಿಂಬೆರಸ ಮತ್ತು ಒಂದು ಚಿಕ್ಕಚಮಚ ಜೇನನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ತುಟಿಗಳಿಗೆ ಸವರಿ. ರಾತ್ರಿ ಹಚ್ಚಿ ಬೆಳಗ್ಗಿನವರೆಗೂ ಹಾಗೇ ಬಿಡಿ. ಬೆಳಿಗ್ಗೆ ಕೊಂಚ ನೀರಿನಿಂದ ಮೊದಲು ಇದನ್ನು ತೇವಗೊಳಿಸಿ ಬಳಿಕ ನಯವಾಗಿ ಪದರವನ್ನು ಕೆರೆದು ಸ್ವಚ್ಛಗೊಳಿಸಿ. ಈ ಲೇಪನದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳು ತುಟಿಗಳನ್ನು ಒಳಗಿನಿಂದ ತುಂಬಿಕೊಳ್ಳುವಂತೆ ಮಾಡಿ ಕಾಂತಿಯುಕ್ತ ಹಾಗೂ ನೈಸರ್ಗಿಕ ಗುಲಾಬಿ ಬಣ್ಣ ಪಡೆಯಲು ನೆರವಾಗುತ್ತದೆ.

ಲಿಂಬೆ ರಸ

ಲಿಂಬೆ ರಸ

ಕೆಲವು ಹನಿ ಲಿಂಬೆರಸ ಮತ್ತು ಒಂದು ಚಿಕ್ಕಚಮಚ ಜೇನನ್ನು ಮಿಶ್ರಣ ಮಾಡಿ ತುಟಿಗಳಿಗೆ ಹಚ್ಚಿ. ಹದಿನೈದು ನಿಮಿಷಗಳ ಬಳಿಕ ಒಂದು ಹಳೆಯ ಹಲ್ಲುಜ್ಜುವ ಬ್ರಶ್ ಬಳಸಿ ಈ ಪದರವನ್ನು ನಯವಾಗಿ ಕೆರೆದು ತೆಗೆಯಿರಿ. ಇದರಲ್ಲಿರುವ ಸಿಟ್ರಿಕ್ ಆಮ್ಲ ತುಂಬಿಕೊಂಡಿದ್ದ ಸೂಕ್ಷ್ಮರಂಧ್ರಗಳನ್ನು ತೆರೆದು ಒಳಗಿನ ಕಲ್ಮಶಗಳು ಹೊರಬರುವಂತೆ ಮಾಡುತ್ತದೆ. ಅಲ್ಲದೇ ಜೇನಿನ ಪೋಷಕಾಂಶಗಳು ಒಳಗಿಳಿದು ವರ್ಣದ್ರವ್ಯಗಳನ್ನು ತೆಳುವಾಗಿಸುತ್ತದೆ. ಗಾಢವರ್ಣ ಪಡೆದಿದ್ದ ತುಟಿಗಳಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ಬರೆಯ ಜೇನು

ಬರೆಯ ಜೇನು

ಸಾಮಾನ್ಯ ತುಟಿಗಳಿಗೆ ಕೊಂಚ ಜೇನನ್ನು ನಯವಾಗಿ ಸವರಿ ಇಡಿಯ ರಾತ್ರಿ ಹಾಗೇ ಬಿಡಿ. ಬಳಿಗ್ಗೆ ಒಂದು ಹಳೆಯ ಹಲ್ಲುಜ್ಜುವ ಬ್ರಶ್ ಬಳಸಿ ಈ ಪದರವನ್ನು ನಯವಾಗಿ ಕೆರೆದು ತೆಗೆಯಿರಿ. ಈ ವಿಧಾನದಿಂದ ತುಟಿಗಳ ಬಣ್ಣ ಉತ್ತಮಗೊಳ್ಳುತ್ತದೆ ಹಾಗೂ ತುಟಿಗಳು ತುಂಬಿಕೊಂಡಂತೆ ಕಾಣುತ್ತದೆ.

ಹಾಲಿನ ಕೆನೆ

ಹಾಲಿನ ಕೆನೆ

ಒಂದು ಚಿಕ್ಕಚಮಚ ಹಾಲಿನ ಕೆನೆ ಮತ್ತು ಒಂದು ಚಿಕ್ಕಚಮಚ ಜೇನನ್ನು ಬೆರೆಸಿ ಈ ಲೇಪನವನ್ನು ತುಟಿಗಳಿಗೆ ದಪ್ಪನಾಗಿ ಹಚ್ಚಿ ಇಡಿಯ ರಾತ್ರಿ ಹಾಗೇ ಇರಲು ಬಿಡಿ. ಬೆಳಿಗ್ಗೆದ್ದು ಬರೆಯ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ತುಟಿಗಳು ನೈಸರ್ಗಿಕ ಗುಲಾಬಿ ಬಣ್ಣವನ್ನೂ, ತುಂಬಿಕೊಂಡಿದ್ದು ಮೃದುವಾಗಿಯೂ ಇರುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಒಂದು ದೊಡ್ಡಚಮದಷ್ಟು ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಇದಕ್ಕೆ ಒಂದು ಚಿಕ್ಕಚಮಚ ಜೇನನ್ನು ಬೆರೆಸಿ. ಚಿಟಿಕೆಯಷ್ಟು ಅರಿಸಿನವನ್ನೂ ಸೇರಿಸಿ. ಈ ಮಿಶ್ರಣದಿಂದ ನಿಮ್ಮ ತುಟಿಗಳನ್ನು ಸುಮಾರು ಐದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಒಂದು ಗಂಟೆ ಕಾಲ ಹಾಗೇ ಒಣಗಲು ಬಿಡಿ. ಅಥವಾ ಇದಕ್ಕೂ ಮುನ್ನವೇ ತುಟಿಗಳ ಚರ್ಮ ಸೆಳೆಯುತ್ತಿದೆ ಎಂದು ಅನ್ನಿಸಿದರೆ ಕೂಡಲೇ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನ ಒಣಗಿದ ಮತ್ತು ಪಕಳೆ ಎದ್ದಿರುವ ತುಟಿಗಳಿಗೆ ಹೆಚ್ಚು ಸೂಕ್ತವಾಗಿದೆ.

English summary

How To Use Honey On Lips? Tips That Work!

Are your lips dark, chapped and thin? Is no amount of lip product giving you the luscious pink pout? If yes, then what you need are homemade honey lip masks. What honey can do? Honey is a natural emollient, plus it has a high ratio of antioxidants and vitamin E, that remove pigmentation from the lips, trap moisture in the skin tissue, making your lips supple and smooth.
X
Desktop Bottom Promotion