For Quick Alerts
ALLOW NOTIFICATIONS  
For Daily Alerts

ಉಪ್ಪಿನಿಂದಲೂ ಸ್ಕ್ರಬ್ ತಯಾರಿಸಬಹುದೇ? ನಂಬಲೇಬೇಕು

By Super
|

ಸ್ಕ್ರಬ್‌ಗಳ ವಿಶೇಷತೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ಈ ಪದ್ಧತಿಯ ಬಳಕೆ ತೀರಾ ಕಮ್ಮಿ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಪ್ರಚಲಿತಗೊಳ್ಳುತ್ತಿದ್ದು, ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ನೆರವಾಗುತ್ತಿದೆ. ಈಗಿನ ಕಾಲದಲ್ಲಿ ಹೆಚ್ಚಿನವರು ಸೆಲೂನ್‌ಗೆ ತೆರಳಿ ಸ್ಕ್ರಬ್ ಮಾಡಿಸಿಕೊಳ್ಳುತ್ತಿದ್ದಾರೆ.

How salt scrubs leave you with fresh, glowing skin

ಕೆಲವೊಂದು ವಿಧಾನಗಳು ಪರಿಣಾಮಕಾರಿಯಾಗಿದ್ದರೂ, ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ದೀರ್ಘಕಾಲದಲ್ಲಿ ಚರ್ಮದ ಸಮಸ್ಯೆಗಳು ಉಂಟಾಗುವ ಅಪಾಯವಿರುತ್ತದೆ. ಆದ್ದರಿಂದ ನೈಸರ್ಗಿಕ ವಿಧಾನಗಳ ಬಳಕೆಯ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ. ಉಪ್ಪಿನ ಸ್ಕ್ರಬ್ ಬಗ್ಗೆ ಈ ಲೇಖನದಲ್ಲಿ ನಿಮಗಾಗಿ ಮಾಹಿತಿ ನೀಡಲಾಗಿದೆ. ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ

ಈ ಸ್ಕ್ರಬ್ ವಿಧಾನವು ಕೇವಲ ಚರ್ಮದ ಸತ್ತಜೀವಕೋಶಗಳನ್ನು ನಾಶಮಾಡುವುದಲ್ಲದೇ ನಿಮಗೆ ಮೃದುವಾದ ತ್ವಚೆಯನ್ನು ನೀಡಲು ನೆರವಾಗುತ್ತದೆ. ನಿಮ್ಮ ಸ್ನಾಯುಗಳ ಸೆಳೆತ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು ಹೆಚ್ಚು ನೆರವಾಗುತ್ತದೆ. ಆಪಾಯಕಾರಿ ಚರ್ಮ ಕಾಯಿಲೆಗಳಾದ ಎಕ್ಸೀಮಾ, ಅಥ್ಲೀಟ್ಸ್ ಫೂಟ್ ನಂತಹ ಸಮಸ್ಯೆಗಳನ್ನು ಮತ್ತು ಚರ್ಮದ ನವೆಯಾಗುವ, ಉರಿಯುವ ಸಮಸ್ಯೆಗಳನ್ನು ನಿವಾರಿಸಲು ಸ್ಕ್ರಬ್‌ ಪದ್ಧತಿಯು ಅತ್ಯಂತ ಪರಿಣಾಮಕಾರಿಯಾಗಿದೆ.

ಎರಡು ರೀತಿಯಲ್ಲಿ ಬಳಸಬಹುದು
ಉಪ್ಪಿನ ನೀರನ್ನು ನಿಮ್ಮ ಪಾದಗಳಿಗೆ, ಮೊಣಕಾಲು ಮತ್ತು ಇತರೆ ಚರ್ಮದ ಭಾಗಕ್ಕೆ ಒಣಬಟ್ಟೆಯಿಂದ ತಿಕ್ಕಿಕೊಳ್ಳಿ. ನಂತರ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿದರೆ ಚರ್ಮದ ಸತ್ತ ಜೀವಕೋಶಗಳು ದೂರವಾಗುತ್ತದೆ. ಇದನ್ನು ಸುಗಮಗೊಳಿಸಲು ಬಾತ್ ಟಬ್‌ನಲ್ಲಿ ಬಿಸಿನೀರಿನೊಂದಿಗೆ ಸ್ನಾನ ಮಾಡಿದರೆ ಉತ್ತಮ. ನಿಮ್ಮ ಹಸ್ತದ ತುಂಬ ಉಪ್ಪನ್ನು ನೀರಿಗೆ ಬೆರೆಸಿಕೊಳ್ಳಿ. ಇದು ಅರೋಮಾ ಅಂಶವನ್ನು ನೀರಿಗೆ ಸೂಸಲಿದ್ದು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಎಷ್ಟು ಬಾರಿ ಅನುಸರಿಸಬಹುದು

ಉಪ್ಪಿನ ಸ್ಕ್ರಬ್ ಅನ್ನು ಕೆಲವು ಬಾರಿ ಮಾತ್ರ ಉಪಯೋಗಿಸಬೇಕು. ಇದನ್ನು ಸಿಹಿ ಸ್ಕ್ರಬ್ ರೀತಿಯಲ್ಲಿ ಉಪಯೋಗಿಸಿದರೆ ನಿಮ್ಮ ಚರ್ಮಕ್ಕೆ ನವೆಯನ್ನು ಉಂಟುಮಾಡಿ ಸೂಕ್ಷ್ಮ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಉಪ್ಪಿನ ಸ್ಕ್ರಬ್ ಅನ್ನು ವಾರಕ್ಕೆ ಒಂದು ಬಾರಿ ಉಪಯೋಗಿಸಿದರೆ ಸೂಕ್ತವೆಂದು ಸಲಹೆ ನೀಡಲಾಗಿದೆ.

ಎಲ್ಲ ರೀತಿಯ ಚರ್ಮಕ್ಕೂ ಸೂಕ್ತವೇ?
ಎಲ್ಲ ರೀತಿಯ ಲಭ್ಯವಿರುವ ಉಪ್ಪನ್ನು ಚರ್ಮದ ಮೇಲೆ ಬಳಸಲು ಸಾಧ್ಯವಿಲ್ಲ. ನಿಮ್ಮ ಚರ್ಮಕ್ಕೆ ಸೂಕ್ತವಾದ ಉಪ್ಪನ್ನು ಆಯ್ದುಕೊಳ್ಳಬೇಕು. ಎಲ್ಲಾ ರೀತಿಯ ಉಪ್ಪುಗಳು ಸುರಕ್ಷಿತ ಆದರೆ ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಚರ್ಮರೋಗ ತಜ್ಞರ ಸಲಹೆ ಪಡೆದು ಉಪಯೋಗಿಸುವುದು ಸೂಕ್ತ. ನೀವು ಬಳಸುವ ಉಪ್ಪು ಶುದ್ಧವಾಗಿರಬೇಕು ಮತ್ತು ಸಮುದ್ರದ ಉಪ್ಪೇ ಆಗಿರಬೇಕು. ಬಳಸುವಾಗ ನಯವಾಗಿ ವೃತ್ತಾಕಾರದಲ್ಲಿ ತಿಕ್ಕಿಕೊಳ್ಳಬೇಕು. ಚರ್ಮದ ಸಮಸ್ಯೆಗಳನ್ನು ನಿವಾರಿಸಲು ವಿವಿಧ ರೀತಿಯ ಉಪ್ಪುಗಳು, ಖನಿಜ ಸತ್ವಗಳು ಮತ್ತು ತೈಲಗಳನ್ನು ಬಳಸಲಾಗುತ್ತದೆ. ಆದರೆ ತೀಕ್ಷ್ಣವಾದ ಚರ್ಮವಿರುವವರು ಉಪ್ಪಿನ ಸ್ಕ್ರಬ್ ಬಳಸುವ ಮುನ್ನ ತಜ್ಞರ ಮೇಲ್ವಿಚಾರಣೆಯಲ್ಲಿ ಅವರ ಸಲಹೆ ಪಡೆದು ಬಳಸುವುದು ಹೆಚ್ಚು ಸೂಕ್ತ.

ಉಪ್ಪಿಸ ಸ್ಕ್ರಬ್ ತಯಾರಿಸುವ ವಿಧಾನ
*ಉಪ್ಪು
*ಎಣ್ಣೆ (ಆಲಿವ್ ಅಥವಾ ತೆಂಗಿನೆಣ್ಣೆ)
*ಸುಗಂಧ ದ್ರವ್ಯ ಸಮುದ್ರದ ಉಪ್ಪು
*ಎಪ್ಸಮ್ ಉಪ್ಪು
*ಸಾಚಾ ಉಪ್ಪು ಅಥವಾ ಹಳೆಯ ಉಪ್ಪು ಇವುಗಳಲ್ಲಿ ನಿಮಗೆ ಬೇಕಾದ ಉಪ್ಪನ್ನು ಆಯ್ಕೆ ಮಾಡಿಕೊಳ್ಳಿ. ಸಾಮಾನ್ಯವಾಗಿ ಟೆಬಲ್ ಉಪ್ಪು (ಸಾಮಾನ್ಯ ಉಪ್ಪು) ಅಗ್ಗದಲ್ಲಿ ದೊರೆಯುತ್ತದೆ ಮತ್ತು ಇದು ಸಣ್ಣ ಕಾಳುಗಳನ್ನು ಹೊಂದಿರುತ್ತದೆ. ನಿಮ್ಮ ಚರ್ಮದ ರೀತಿಗೆ ಸರಿ ಹೊಂದುವಂತಹ ಮತ್ತು ನಿಮಗೆ ಸುಲಭವಾಗಿ ಲಭ್ಯವಿರುವ ಎಣ್ಣೆಯನ್ನು ಆಯ್ಕೆ ಮಾಡಿ ಉಪ್ಪುಗೆ ಮಿಶ್ರಣ ಮಾಡಿ. ಆಲಿವ್ ಎಣ್ಣೆ, ತೆಂಗಿನ ಎಣ್ಣೆ , ಬಾದಾಮಿ ಎಣ್ಣೆ, ಎಳ್ಳೆಣ್ಣೆ ಇತ್ಯಾದಿ ತೈಲಗಳು ಚರ್ಮಕ್ಕೆ ಒಳ್ಳೆಯದು. ಇದಕ್ಕೆ ಲ್ಯಾವೆಂಡರ್, ಚಾಕಲೇಟ್, ಕಿತ್ತಳೆ ಇತ್ಯಾದಿ ಸಾರಗಳಿರುವ ಸುಗಂಧ ದ್ರವ್ಯದ ಕೆಲವು ಹನಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ನಾನದ ನಂತರ ನಿಮ್ಮ ಚರ್ಮ ತೇವಭರಿತ ಮತ್ತು ಮೃದುವಾಗಲು ಯಾವಾಗಲೂ ಬಳಸಿ ಅಥವಾ ಮೊಣಕಾಲು ಮತ್ತು ಮೊಣಕೈ ರೀತಿಯ ಒರಟು ಪ್ರದೇಶಗಳಿಗೆ ಇದನ್ನು ಅನ್ವಯಿಸಿ.

English summary

How salt scrubs leave you with fresh, glowing skin

Salt scrubs have multifold benefits. Not only do they exfoliate dead cells to leave the skin looking soft but there is little that compares to a nice warm soak in a tub with salts. It can ease muscular tension and stress and removes joint aches, too. The National Psoriasis Association also vouches for scrubs to help in removing skin itchiness caused by serious skin woes like eczema, athlete's foot.
Story first published: Saturday, February 6, 2016, 19:37 [IST]
X
Desktop Bottom Promotion