For Quick Alerts
ALLOW NOTIFICATIONS  
For Daily Alerts

ಉಗುರಿನ ಬಣ್ಣ ಹಳದಿ ಆಗಿದೆಯೇ? ಇನ್ನು ಚಿಂತೆ ಬಿಡಿ...

By Manu
|

ನಮ್ಮ ಉಗುರುಗಳು ನಮ್ಮ ಆರೋಗ್ಯದ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತವೆ. ಆದರೆ ಕೆಲವೊಮ್ಮೆ ಆರೋಗ್ಯ ವಂತರಾಗಿದ್ದರೂ ಉಗುರುಗಳು ಮಾತ್ರ ಹಳದಿಯಾಗಿದ್ದು ಪುರುಷರಿಗೂ ಮಹಿಳೆಯರಿಗೂ ಮುಜುಗರವುಂಟುಮಾಡುತ್ತದೆ. ಸಾಮಾನ್ಯವಾಗಿ ಉಗುರಿಗೆ ಬಳಿಯುವ ಬಣ್ಣದಲ್ಲಿರುವ ರಾಸಾನಯನಿಕಗಳಿಂದಾಗಿ ಉಗುರು ಹಳದಿಯಾಗುತ್ತದೆ. ವಿಶೇಷವಾಗಿ ಗಾಢ ಬಣ್ಣ ಬಳಿಯಲು ಬಳಸಲಾಗುವ ರಾಸಾಯನಿಕಗಳು ಈ ಬದಲಾವಣೆಗೆ ಹೆಚ್ಚು ಕಾರಣವಾಗಿವೆ. ಅಷ್ಟಕ್ಕೂ ಕೈ ಬೆರಳಿನ ಉಗುರು ಇರುವುದು ಏತಕ್ಕೆ..?

ಆದ್ದರಿಂದ ಉಗುರಿನ ಬಣ್ಣ ಹಚ್ಚುವುದು ಅನಿವಾರ್ಯವಾದರೆ ಮೊದಲು ಪಾರದರ್ಶಕ ಬೇಸ್ ಕೋಟ್ ಹಚ್ಚಿ ಅದರ ಮೇಲೆ ನಿಮ್ಮ ಆಯ್ಕೆಯ ಬಣ್ಣವನ್ನು ಹಚ್ಚುವುದು ಉತ್ತಮ. ಇನ್ನುಳಿದಂತೆ ಹಳದಿ ಬಣ್ಣ ಬರಲು ಉಗುರಿನ ಸಂಧಿ ಮತ್ತು ಬುಡದಲ್ಲಿ ಶಿಲೀಂಧ್ರದ ಸೋಂಕು, ಯಕೃತ್ ನ ತೊಂದರೆ, ಅತಿ ಹೆಚ್ಚಿನ ಧೂಮಪಾನ, ಅಸಮರ್ಪಕ ಜೀವನ ಶೈಲಿ ಮೊದಲಾದವು ಕಾರಣವಾಗಿವೆ. ಈ ಬಣ್ಣದಿಂದ ಹೊರಬರಲು ಕೆಲವು ಸಮರ್ಥ ವಿಧಾನಗಳಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

ಲಿಂಬೆಹಣ್ಣು

ಲಿಂಬೆಹಣ್ಣು

ಲಿಂಬೆರಸ ನಿಸರ್ಗ ನೀಡಿರುವ ಒಂದು ಬಿಳಿಚುಕಾರಕವಾಗಿದ್ದು ಉಗುರುಗಳ ಹಳದಿ ಬಣ್ಣವನ್ನು ನಿವಾರಿಸಲೂ ಸಮರ್ಥವಾಗಿದೆ. ಅಲ್ಲದೇ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ (astringent) ಗುಣವನ್ನೂ ಹೊಂದಿದೆ. ಉಗುರುಗಿನ ಹಳದಿ ಬಣ್ಣ ನಿವಾರಿಸಲು ಒಂದು ಚಿಕ್ಕ ಬೋಗುಣಿಯಲ್ಲಿ ಅರ್ಧದಷ್ಟು ಮಟ್ಟಿಗೆ ಕೆಲವು ಲಿಂಬೆಗಳಿಂದ ಹಿಂಡಿ ಸಂಗ್ರಹಿಸಿದ ರಸವನ್ನು ತುಂಬಿ. ಈ ರಸದಲ್ಲಿ ಉಗುರುಗಳನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷ ಮುಳುಗಿಸಿಡಿ. ಬಳಿಕ ಸೌಮ್ಯ ಟೂಥ್ ಬ್ರಷ್ ಒಂದನ್ನು ಬಳಸಿ ನಯವಾಗಿ ಉಜ್ಜಿಕೊಳ್ಳಿ. ತದನಂತರ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಂಡು ಉಗುರು ಮತ್ತು ಬೆರಳುಗಳಿಗೆ ತೇವಕಾರ ಲೋಷನ್ (moisturizing lotion) ಹಚ್ಚಿ. ಉತ್ತಮ ಪರಿಣಾಮ ಪಡೆಯಲು ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆಹಣ್ಣು

ಲಿಂಬೆಹಣ್ಣು

ಲಿಂಬೆಹಣ್ಣಿನ ರಸದ ಘಾಟು ಇಷ್ಟವಾಗದಿದ್ದರೆ ಇದರ ಬದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಲಿಂಬೆಯ ಅವಶ್ಯಕ ತೈಲವನ್ನೂ ಬಳಸಬಹುದು. ಇದಕ್ಕಾಗಿ ಒಂದು ಬೋಗುಣಿಯಲ್ಲಿ ಉಗುರುಬೆಚ್ಚನೆಯ ನೀರನ್ನು ಅರ್ಧದಷ್ಟು ತುಂಬಿ ಈ ನೀರಿಗೆ ಅವಶ್ಯಕ ತೈಲದ ಕೆಲವು ಹನಿಗಳನ್ನು ಬೆರೆಸಿ ಕೆಲವು ನಿಮಿಶಗಳ ಕಾಲ ಈ ನೀರಿನಲ್ಲಿ ಉಗುರುಗಳನ್ನು ಅದ್ದಿಕೊಳ್ಳುತ್ತಿರಿ. ಬಳಿಕ ಒಂದೆರದು ನಿಮಿಷಗಳವರೆಗೆ ಸೌಮ್ಯ ಟೂಥ್ ಬ್ರಶ್ ಬಳಸಿ ಉಜ್ಜಿಕೊಳ್ಳಿ. ಇದನ್ನು ದಿನಕ್ಕೆರಡು ಬಾರಿ ಕೆಲವು ವಾರಗಳವರೆಗೆ ಮುಂದುವರೆಸಿ.

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾದಲ್ಲಿರುವ ಬಿಳಿಚಿಸುವ ಮತ್ತು ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣ ಉಗುರುಗಳ ಬಣ್ಣವನ್ನು ಬದಲಿಸಲೂ ನೆರವಾಗುತ್ತದೆ. ಒಂದು ಚಿಕ್ಕ ಬೋಗುಣಿಯಲ್ಲಿ ಒಂದೂವರೆ ದೊಡ್ಡ ಚಮಚ ಅಡುಗೆಸೋಡಾ ಮತ್ತು ಒಂದು ದೊಡ್ಡ ಚಮಚ 3% ಹೈಡ್ರೋಜನ್ ಪೆರಾಕ್ಸೈಡ್ ಲವಣವನ್ನು ಬೆರೆಸಿ. ಕೊಂಚ ನೀರನ್ನು ಸೇರಿಸಿ ದಪ್ಪನೆಯ ಲೇಪನವಾಗಿಸಿ. ಈ ಲೇಪನವನ್ನು ಉಗುರುಗಳ ಮೇಲೆ ಹತ್ತಿಯುಂಡೆಯ ಸಹಾಯದಿಂದ ಹಚ್ಚಿ ಮೂರರಿಂದ ನಾಲ್ಕು ನಿಮಿಷ ಹಾಗೇ ಬಿಡಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಬಾರಿಯಂತೆ ಆರರಿಂದ ಎಂಟು ವಾರಗಳವರೆಗೆ ಈ ವಿಧಾನ ಮುಂದುವರೆಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಡುಗೆ ಸೋಡಾ

ಅಡುಗೆ ಸೋಡಾ

ಇನ್ನೊಂದು ವಿಧಾನದಲ್ಲಿ ಒಂದು ದೊಡ್ಡಚಮಚ ಅಡುಗೆ ಸೋಡಾ, ಒಂದೂವರೆ ಚಿಕ್ಕ ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಿಕ್ಕಚಮಚ ಲಿಂಬೆರಸ ಸೇರಿಸಿ ದಪ್ಪನೆಯ ದ್ರಾವಣ ತಯಾರಿಸಿ. ಸೌಮ್ಯ ಟೂಥ್ ಬ್ರಶ್ ಬಳಸಿ ಉಗುರುಗಳಿಗೆ ಹಚ್ಚಿಕೊಂಡು ಐದು ನಿಮಿಷದ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಪ್ರತಿ ಎರಡು ವಾರಗಳಿಗೊಮ್ಮೆ ಈ ವಿಧಾನ ಪುನರಾವರ್ತಿಸಿ.

ಹಲ್ಲುಜ್ಜುವ ಪೇಸ್ಟ್

ಹಲ್ಲುಜ್ಜುವ ಪೇಸ್ಟ್

ಈ ಪೇಸ್ಟ್ ನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಎಂಬ ರಾಸಾಯನಿಕವಿದೆ. ಇದು ಹಲ್ಲುಗಳಿಗೆ ಬಿಳುಪು ನೀಡುವ ಕೆಲಸ ಮಾಡುತ್ತದೆ. ಈ ಗುಣ ಉಗುರಿನ ಹಳದಿತನವನ್ನೂ ನಿವಾರಿಸಲು ನೆರವಾಗುತ್ತದೆ. ಆದರೆ ಇದು ಪ್ರಬಲವಾಗಿರಬಾರದು. ಇದರ ಪ್ರಮಾಣ 3%ಕ್ಕಿಂತ ಹೆಚ್ಚಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ.

ವಿಧಾನ

ವಿಧಾನ

ಈ ಪೇಸ್ಟ್ ನಲ್ಲಿರುವ ರಾಸಾಯನಿಕ ಸುರಕ್ಷಿತ ಎಂದು ಪರೀಕ್ಷಿಸಿಕೊಂಡ ಬಳಿಕ ಇದನ್ನು ತೆಳ್ಳಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ

ಬಳಿಕ ಸೌಮ್ಯವಾದ ಬ್ರಶ್ ಉಪಯೋಗಿಸಿ ಈ ಲೇಪನವನ್ನು ಕೆರೆದು ಸಡಿಲಗೊಳಿಸಿ.

ಒಂದು ಹತ್ತಿಯುಂಡೆಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಮುಳುಗಿಸಿ ಸಡಿಲವಾಗಿದ್ದ ಲೇಪನವನ್ನು ನಿವಾರಿಸಿ. ಬಳಿಕ ಹೀಗೇ ಕೈಗಳು ಒಣಗಿರುವಂತೆ ನೋಡಿಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ಹಲ್ಲುಗಳನ್ನು ಬಿಳಿಚಿಸುವ ಮಾತ್ರೆಗಳು

ಹಲ್ಲುಗಳನ್ನು ಬಿಳಿಚಿಸುವ ಮಾತ್ರೆಗಳು

ಹಲ್ಲುಗಳನ್ನು ಬಿಳಿಚಿಸಲು ಕೆಲವು ಮಾತ್ರೆಗಳು ಲಭ್ಯವಿವೆ. ಇದರಲ್ಲಿ ಸೋಡಿಯಂ ಬೈಕಾರ್ಬೋನೇಟ್ ಮತ್ತು ಸಿಟ್ರಿಕ್ ಆಮ್ಲ ಎಂಬ ಎರಡು ರಾಸಾಯನಿಕಗಳಿದ್ದು ಉಗುರಿನ ಬಣ್ಣವನ್ನು ನಿವಾರಿಸಲು ಸಮರ್ಥವಾಗಿವೆ.

ಒಂದು ಚಿಕ್ಕ ಬೋಗುಣಿಯಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿ ಇದರಲ್ಲಿ ಎರಡರಿಂದ ಮೂರು ಮಾತ್ರೆಗಳನ್ನು ಕರಗಿಸಿ.

ಈ ನೀರಿನಲ್ಲಿ ಉಗುರುಗಳನ್ನು ಹದಿನೈದು ನಿಮಿಷ ಮುಳುಗಿಸಿಡಿ

ಈ ವಿಧಾನವನ್ನು ವಾರಕ್ಕೊಂದು ಬಾರಿಯಂತೆ ಒಂದರಿಂದ ಎರಡು ವಾರ ಪುನರಾವರ್ತಿಸಿ.

English summary

How to Get Rid of Yellow Nails

Many of us suffer from the problem of yellow nails. It occurs among both men and women, and can be a source of embarrassment. Most commonly, yellow nails are caused by nail polish. The pigments used in nail polish, particularly darker shades, can stain your nails over time There are some home remedies to get rid of yellow nails that are very effective.
Story first published: Monday, June 6, 2016, 16:28 [IST]
X
Desktop Bottom Promotion