ಹಸ್ತಗಳ ನಲ್ಮೆಯ ಆರೈಕೆಗೆ ಈ ಮನೆಮದ್ದೇ ಸಾಕು

By: Arshad
Subscribe to Boldsky

ಗೃಹಿಣಿಯರಿಗೆ ದಿನದಲ್ಲಿ ಎಚ್ಚರಿದ್ದಷ್ಟೂ ಹೊತ್ತು ಕೆಲಸವಿರುತ್ತದೆ. ತಮ್ಮ ಆರೋಗ್ಯದ ಕಾಳಜಿಗಾಗಿ ಅವರು ಸಮಯ ನೀಡುವುದು ಕಡಿಮೆ. ಪರಿಣಾಮವಾಗಿ ಪೋಷಣೆಯ ಕೊರತೆ ಎದುರಾಗುತ್ತದೆ. ಕೈಗಳು ಒರಟಾಗುತ್ತವೆ. ಆದರೆ ಇನ್ನು ಒರಟು ಕೈಗಳ ಬಗ್ಗೆ ಈಗ ಚಿಂತೆ ಬೇಡ. ಕೋಮಲವಾದ ಕೈಗಾಗಿ ಪಾಲಿಸಬೇಕಾದ 7 ನಿಯಮಗಳು

ಏಕೆಂದರೆ ಬೋಲ್ಡ್ ಸ್ಕೈ ಕೆಲವು ವಿಧಾನಗಳನ್ನು ಸಲಹೆ ಮಾಡಿದ್ದು ಇವು ಅಡುಗೆ ಮನೆಯ ಸುಲಭ ಪರಿಕರಗಳಾಗಿದ್ದು ಒರಟು ಕೈಗಳಿಗೆ ಥಟ್ಟನೇ ಸೌಮ್ಯತೆ ನೀಡುವಲ್ಲಿ ನೆರವಾಗುತ್ತವೆ.

ವಿಶೇಷವಾಗಿ ಕೈಗಳ ಚರ್ಮಕ್ಕೆ ಹೆಚ್ಚಿನ ಆರ್ದ್ರತೆ ನೀಡುವುದು, ಸತ್ತ ಜೀವಕೋಶಗಳನ್ನು ನಿವಾರಿಸುವುದು, ಕೊಳೆ ಮತ್ತು ಒಣಗಿದ ಬೆವರನ್ನು ನಿವಾರಿಸುವ ಮೂಲಕ ಕೈಗಳು ಮೃದುವಾಗಿರಿಸಲು ಸಾಧ್ಯವಾಗುತ್ತದೆ. ಬನ್ನಿ, ಈ ವಿಧಾನಗಳು ಯಾವುವು ಎಂಬುದನ್ನು ನೋಡೋಣ.... 

ಕೊಬ್ಬರಿ ಎಣ್ಣೆ

ರಾತ್ರಿ ಮಲಗುವ ಮುನ್ನ ಕೊಂಚ ಕೊಬ್ಬರಿ ಎಣ್ಣೆಯನ್ನು ಎರಡೂ ಹಸ್ತಗಳಿಗೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿ ಇಡಿಯ ರಾತ್ರಿ ಹಾಗೇ ಇರಲು ಬಿಡಿ. ಇದಲ್ಲಿರುವ ಕೊಬ್ಬಿನ ಆಮ್ಲಗಳು ಆರ್ದತೆ ನೀಡುವ ಮೂಲಕ ಒಣಗಿರುವ ಹಸ್ತಗಳು ಮೃದುವಾಗಿರಲು ನೆರವಾಗುತ್ತದೆ.   ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಹಾಲಿನ ಕೆನೆ

ಹಾಲಿನ ಕೆನೆ ಅಥವಾ ಕ್ರೀಂ ಸಹಾ ಒಣಕೈಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ವಿಶೇಷವಾಗಿ ಕೈಗಳು ಒಣಗಿದ್ದು ಹೊರಪದರ ಗಟ್ಟಿಯಾಗಿ ಪಕಳೆ ಏಳುವಂತಿದ್ದರೆ ಈ ವಿಧಾನ ಸೂಕ್ತವಾಗಿದೆ. ರಾತ್ರಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ಎದ್ದ ಬಳಿಕ ಕೈಗಳಿಗೆ ಹಾಲಿನ ಕೆನೆ ಹಚ್ಚಿಕೊಂಡು ಸುಮಾರು ಅರ್ಧ ಗಂಟೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕೈಗಳು ಮೃದುವಾಗುವವರೆಗೂ ಸೋಪನ್ನು ಮಾತ್ರ ಬಳಸಬೇಡಿ.  ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

ಲೋಳೆಸರ

ಒಂದು ವೇಳೆ ಹಸ್ತಗಳು ವಿಪರೀತ ಒಣಗಿ ಬಿರುಕುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದರೆ ಇದಕ್ಕೆ ಲೋಳೆಸರದ ಲೇಪನವೇ ಸೂಕ್ತ. ರಾತ್ರಿ ಮಲಗುವ ಮುನ್ನ ಈಗತಾನೇ ಮುರಿದ ಕೋಡಿನಿಂದ ಒಸರಿದ ರಸವನ್ನು ಕೈಗಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ ಇಡಿಯ ರಾತ್ರಿ ಹಾಗೇ ಇರಲು ಬಿಡಿ. ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಲೋಳೆಸರ-ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಆಲಿವ್ ಎಣ್ಣೆ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಆರೋಗ್ಯಕರ ಕೊಬ್ಬಿನ ಆಮ್ಲಗಳು ಹಸ್ತಗಳು ಆರ್ದ್ರತೆ ಪಡೆಯಲು ನೆರವಾಗುತ್ತವೆ. ದಿನಕ್ಕೆರಡು ಬಾರಿ ಆಲಿವ್ ಎಣ್ಣೆಯನ್ನು ಕೈಗಳಿಗೆ ಹಚ್ಚಿಕೊಂಡು ಸಾಧ್ಯವಾದಷ್ಟು ಹೊತ್ತು ಇರಿಸಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೌಂದರ್ಯ ದ್ವಿಗುಣಗೊಳಿಸುವಲ್ಲಿ ಆಲಿವ್ ಎಣ್ಣೆಯ ಪಾತ್ರ

ಜೇನು

ಕೊಂಚ ಜೇನನ್ನು ಹಸ್ತವಿಡೀ ಆವರಿಸುವಂತೆ ಹಚ್ಚ್ ಸುಮಾರು ಐದರಿಂದ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ತಕ್ಷಣವೇ ಕೈಗಳು ಸಾಕಷ್ಟು ಮೃದುವಾಗುತ್ತವೆ. ಜೇನು ಒಂದು ಅತ್ಯುತ್ತಮ ತೇವಕಾರಕ ಮತ್ತು ಇದರಲ್ಲಿರುವ ಸೂಕ್ಷ್ಮಾಣುಜೀವಿ ನಿವಾರಕ ಮತ್ತು ಆರ್ದ್ರತೆಯನ್ನು ಉಳಿಸಿಕೊಳ್ಳಲು ನೆರವಾಗುವ ಗುಣಗಳನ್ನು ಹೊಂದಿದೆ.  ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಮೊಸರು

ಕೊಂಚ ಮೊಸರಿನಿಂದ ಕೈಗಳಿಗೆ ಐದು ನಿಮಿಷ ನಯವಾಗಿ ಮಸಾಜ್ ಮೂಲಕ ಹಚ್ಚಿಕೊಂಡು ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ.  ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

 

Story first published: Monday, October 24, 2016, 11:46 [IST]
English summary

Home remedies to get soft hands instantly

Busy women can now rejoice. Here are perfect home remedies for moisturising, exfoliating and gently removing grime and dirt from hands leaving them wonderfully soft....
Please Wait while comments are loading...
Subscribe Newsletter