For Quick Alerts
ALLOW NOTIFICATIONS  
For Daily Alerts

ದೇಹ, ಮನಸ್ಸುಗಳ ಉಲ್ಲಾಸಕ್ಕೆ 'ಪುದೀನಾ ಎಣ್ಣೆಯ' ಮಸಾಜ್

By Hemanth
|

ದೇಹಕ್ಕೆ ಆಯಾಸವಾದಾಗ ಕೆಲವೊಮ್ಮೆ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ತುಂಬಾ ಆರಾಮವೆನಿಸುತ್ತದೆ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮಸಾಜ್ ಮಾಡುವ ತೈಲಗಳು ಲಭ್ಯವಿದೆ. ಆದರೆ ಮಸಾಜ್ ಮಾಡಿಕೊಳ್ಳಲು ನಾವು ಮನೆಯಲ್ಲೇ ಯಾವುದಾದರೂ ತೈಲವನ್ನು ತಯಾರಿಸಬಹುದು. ಇಂತಹ ಒಂದು ತೈಲವೆಂದರೆ ಅದು ಪುದೀನಾ ತೈಲ.

ಇದು ಚರ್ಮವು ಪುನರ್ಚೇತನಗೊಳ್ಳುವಂತೆ ಮಾಡುತ್ತದೆ. ಪುದೀನಾದ ಎಣ್ಣೆಯಲ್ಲಿ ಮಸಾಜ್ ಮಾಡಿದರೆ ಹಲವಾರು ರೀತಿಯ ಲಾಭಗಳಿವೆ. ಪುದೀನಾದ ಎಣ್ಣೆಗೆ ನೀವು ಯಾವ ರೀತಿಯ ಸಾಮಗ್ರಿಗಳನ್ನು ಹಾಕಿಕೊಳ್ಳಬಹುದು ಅಥವಾ ಹಾಕಿಕೊಳ್ಳಬಾರದು ಎಂದು ನಿರ್ಧರಿಸಬಹುದು. ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಜೊಜೊಬಾ ಎಣ್ಣೆ ಅಥವಾ ದ್ರಾಕ್ಷಿ ಬೀಜಗಳ ಎಣ್ಣೆಯನ್ನು ಬಳಸಿಕೊಳ್ಳಬಹುದು. ಮನೆಯಲ್ಲಿಯೇ ಮಸಾಜ್ ತೈಲವನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಿ. ಪುದೀನಾ ಎಲೆಗಳಿಂದ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

peppermint oil

ಸಾಮಗ್ರಿಗಳು
*ದ್ರಾಕ್ಷಿ ಬೀಜದ ಎಣ್ಣೆ 1 ಬಾಟಲಿ
*ಪುದೀನಾ ಸಾರಭೂತ ಎಣ್ಣೆ -ಕೆಲವು ಹನಿ(ಸುವಾಸನೆಗೆ ಅನುಸಾರವಾಗಿ)

ತಯಾರಿಸುವ ವಿಧಾನ
*ದ್ರಾಕ್ಷಿ ಬೀಜದ ಎಣ್ಣೆ ಸಂಪೂರ್ಣ ಒಂದು ಬಾಟಲಿ ಬೇಕು. ನಿಮಗೆ ಎಷ್ಟು ಸುವಾಸನೆ ಬೇಕೋ ಅಷ್ಟು ಪ್ರಮಾಣದಲ್ಲಿ ಪುದೀನಾ ಎಣ್ಣೆಯ ಕೆಲವು ಹನಿಗಳನ್ನು ಹಾಕಿ. ಪುದೀನಾ ಎಣ್ಣೆಯು ಹೆಚ್ಚಿನ ಸುವಾಸನೆ ಹೊಂದಿರುವ ಕಾರಣ ಕೆಲವೇ ಹನಿಗಳನ್ನು ಬಳಸಿದರೆ ಒಳ್ಳೆಯದು.
*ದ್ರಾಕ್ಷಿ ಬೀಜದ ಎಣ್ಣೆಯು ಯಾವುದೇ ಜಿಡ್ಡನ್ನು ಹೊಂದಿರುವುದಿಲ್ಲ. ಇದು ಮಸಾಜ್ ಗೆ ತುಂಬಾ ಒಳ್ಳೆಯ ತೈಲವಾಗಿದೆ.


ಯಾಕೆಂದರೆ ಇದು ನಿಮ್ಮ ಬಟ್ಟೆಗಳಿಗೆ ಅಂಟಿಕೊಳ್ಳುವುದಿಲ್ಲ. ಪುದೀನಾ ಎಣ್ಣೆಯು ಜಿಡ್ಡನ್ನು ಹೊಂದಿರದ ಕಾರಣದಿಂದ ಇದು ಕೂಡ ದ್ರಾಕ್ಷಿ ಬೀಜದ ಎಣ್ಣೆಯೊಂದಿಗೆ ಸರಿಯಾಗಿ ಮಿಶ್ರಣವಾಗಿ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ.
*ಪುದೀನಾ ಎಣ್ಣೆಯು ನಿಮ್ಮನ್ನು ತುಂಬಾ ಉಲ್ಲಾಸಿತಗೊಳಿಸುತ್ತದೆ ಮತ್ತು ಚರ್ಮವು ಪುನರ್ಚೇತನಗೊಳ್ಳುವುದು. ಈ ಮಸಾಜ್ ಎಣ್ಣೆಯನ್ನು ಬಳಸಿನೋಡಿ. ಇಷ್ಟಪಟ್ಟರೆ ನಮಗೂ ತಿಳಿಸಿ. ಒಂದು ಲೋಟ 'ಪುದೀನಾ ಜ್ಯೂಸ್‌'ನಲ್ಲಿದೆ ಔಷಧೀಯ ಶಕ್ತಿ!
English summary

Heres a DIY peppermint oil to rejuvenate tired skin!

Massage oils that you buy at the stores are amazing, no doubt about it. But with store-bought concoctions, there's the problem of not being able to customise the oil as per your individual needs. This DIY peppermint massage oil is customised to make the skin look and feel rejuvenated.
X
Desktop Bottom Promotion