ಕಾಲ್ಬೆರಳ ಉಗುರಿನ ಶಿಲೀಂಧ್ರಕ್ಕೆ ನೈಸರ್ಗಿಕ ಮನೆಮದ್ದು

ನಾವು ಪಾದಗಳಿಗೆ ನೀರು ಹೊಯ್ದು ಒಂದಕ್ಕೊಂದು ಉಜ್ಜಿಕೊಂಡು ಸ್ವಚ್ಛಗೊಳಿಸಿದರೆ ಆಯ್ತು ಎಂದು ಕೊಳ್ಳುತ್ತೇವೆ. ಆದರೆ ಕಾಲುಬೆರಳುಗಳ ಸಂಧಿ-ಉಗುರುಗಳ ಅಂಚುಗಳಲ್ಲಿ ಅಂಟಿಕೊಂಡಿದ್ದ ಕೊಳೆಯಿಂದಾಗಿ ಈ ಉಗುರಿನ ಫಂಗಸ್ ಸೋಂಕು ಶೀಘ್ರವಾಗಿ ಹರಡುತ್ತದೆ...

By: Hemanth
Subscribe to Boldsky

ಕೆಲವರಿಗೆ ಕಾಲಿನ ಬೆರಳಿನ ಉಗುರಿನ ಬದಿಯಲ್ಲಿ ಸಹಿಸಲು ಅಸಾಧ್ಯವಾಗಿರುವ ನೋವು ಕಾಣಿಸಿಕೊಳ್ಳುತ್ತದೆ. ಈ ನೋವಿನ ನಿವಾರಣೆಗಾಗಿ ಏನೇನೋ ಪ್ರಯತ್ನ ಮಾಡಬೇಕಾಗುತ್ತದೆ. ಕೆಲವೊಮ್ಮೆ ಇದು ನಡೆಯಲಾರದಷ್ಟು ನೋವನ್ನು ಉಂಟು ಮಾಡುತ್ತದೆ. ಇದನ್ನೇ ಕಾಲ್ಬೆರಳ ಉಗುರಿನ ಶಿಲೀಂಧ್ರ ಎನ್ನಲಾಗುತ್ತದೆ.  (ಕಾಲ್ಬೆರಳ ಉಗುರಿನ ಫಂಗಸ್)

Toenail Fungus

ಉಗುರುಗಳ ಹೊರಪದರದಿಂದಾಗಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವೈದ್ಯಕೀಯ ವಿಜ್ಞಾನದ ಪ್ರಕಾರ ಇದನ್ನು ಒನ್ಯಕೊಮೈಕೊಸಿಸ್' ಎಂದು ಕರೆಯಲಾಗುತ್ತದೆ. ಉಗುರು ಹಳದಿಯಾಗುವುದು, ದಪ್ಪಗೆ ಆಗುವುದು ಅಥವಾ ವಾಸನೆ ಕಾಣಿಸಿಕೊಳ್ಳುವುದು ಇದರ ಲಕ್ಷಣಗಳು. ಈ ಸೋಂಕನ್ನು ಹಾಗೆ ಬಿಟ್ಟರೆ ಇದರಿಂದ ಉರಿಯೂತ, ನೋವು ಮತ್ತು ಬೆರಳು ಊದಿಕೊಳ್ಳುವಂತೆ ಮಾಡಬಹುದು. ಕಾಲ್ಬೆರಿಳಿನ ಈ ಸಮಸ್ಯೆಗೆ ಹಲವಾರು ಮದ್ದುಗಳಿವೆ.   ಕಾಲ್ಬೆರಳ ಉಗುರು ಶಿಲೀಂಧ್ರಕ್ಕೆ ಫಲಪ್ರದ ಮನೆಮದ್ದು

ಇದನ್ನು ಬಳಸಿರುವವರು ಅದರ ಅಡ್ಡಪರಿಣಾಮದಿಂದ ಸಮಸ್ಯೆಗೆ ಗುರಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದನ್ನು ಶಸ್ತ್ರಚಿಕಿತ್ಸೆ ಮೂಲಕವೂ ನಿವಾರಣೆ ಮಾಡಲಾಗುತ್ತದೆ. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಸಂಪೂರ್ಣವಾಗಿ ಗುಣಮುಖ ಮಾಡಬಲ್ಲ ನೈಸರ್ಗಿಕ ಮಾಸ್ಕ್ ಗಳು ಇರುವಾಗ ದುಬಾರಿ ಚಿಕಿತ್ಸೆಗೆ ಹಣ ವೆಚ್ಚ ಮಾಡುವುದು ಯಾಕೆ? ಕಾಲ್ಬೆರಳ ಉಗುರಿನ ಶಿಲೀಂಧ್ರ (ಕಾಲ್ಬೆರಳ ಉಗುರಿನ ಫಂಗಸ್) ಸಮಸ್ಯೆಗೆ ಇರುವ ನೈಸರ್ಗಿಕ ಮಾಸ್ಕ್‌ಗಳ ಬಗ್ಗೆ ವಿವರ ನೀಡಲಾಗಿದೆ. ಇದನ್ನು ಬಳಸಿಕೊಂಡು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ.

Turmeric
 

ಅರಿಶಿನ ಮಾಸ್ಕ್
ಅರಿಶಿನದಲ್ಲಿ ಹಲವಾರು ಆರೋಗ್ಯಕಾರಿ ಗುಣಗಳು ಇವೆ. ಅದೇ ರೀತಿ ಇದರಲ್ಲಿ ಶಿಲೀಂಧ್ರ ವಿರೋಧಿ ಅಂಶಗಳು ಇವೆ. ಕಾಲ್ಬೆರಳ ಉಗುರ ಶಿಲೀಂಧ್ರಕ್ಕಾಗಿ ಅರಿಶಿನವನ್ನು ನೀರಿನೊಂದಿಗೆ ಮಿಶ್ರಣ ಮಾಡಿಕೊಂಡು ಚರ್ಮ ಮತ್ತು ಉಗುರಿನ ಸುತ್ತಲು ಹಚ್ಚಿಕೊಳ್ಳಿ. ಪರಿಣಾಮಕಾರಿ ಫಲಿತಾಂಶ ಪಡೆಯಬೇಕಾದರೆ ದಿನದಲ್ಲಿ ಮೂರು ಸಲ ಈ ಪೇಸ್ಟ್ ಅನ್ನು ಬಳಸಬೇಕು.

coconut oil
 

ತೆಂಗಿನ ಎಣ್ಣೆ
ಬಾಧಿತ ಜಾಗಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ ಮತ್ತು ತೆಂಗಿನ ಎಣ್ಣೆಯಲ್ಲಿ 15 ನಿಮಿಷ ಕಾಲ ಬೆರಳನ್ನು ಅದ್ದಿಡಿ. ಇದರಿಂದ ಊತ ಮತ್ತು ಬೆರಳು ದಪ್ಪಗೆ ಆಗಿರುವುದು ಕಡಿಮೆಯಾಗುವುದು..

lemongrass oil
 

ಲೆಮನ್ ಗ್ರಾಸ್ ತೈಲ
ಕಾಲ್ಬೆರಳ ಉಗುರ ಶಿಲೀಂಧ್ರಕ್ಕೆ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಮದ್ದು ಎಂದರೆ ಅದು ಲೆಮನ್ ಗ್ರಾಸ್ ತೈಲ. ಲೆಮನ್ ಗ್ರಾಸ್ ತೈಲ ಮತ್ತು ಸ್ವಲ್ಪ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ. ನಿಯಮಿತವಾಗಿ ಇದನ್ನು ಹಚ್ಚಿಕೊಂಡರೆ ಸಮಸ್ಯೆಗೆ ಪರಿಹಾರ ಕಾಣಬಹುದು.

ನಸುಕನ್ನೀಲಿ ತೈಲ
ನಸುಕನ್ನೀಲಿ ತೈಲವನ್ನು ಚಹಾ ಮರದ ಎಣ್ಣೆಯೊಂದಿಗೆ ಬೆರೆಸಿ ಬಳಸಿದರೆ ಇದು ಶಿಲೀಂಧ್ರ ನಿವಾರಣೆಗೆ ತುಂಬಾ ಪರಿಣಾಮಕಾರಿ. ಹಚ್ಚಿಕೊಂಡು ಹತ್ತು ನಿಮಿಷ ಹಾಗೆ ಬಿಡಿ. ಬಳಿಕ ತೊಳೆಯಿರಿ.

Castor Oil
 

ಹರಳೆಣ್ಣೆ
ಹರಳೆಣ್ಣೆಯಿಂದ ಒದ್ದೆ ಮಾಡಿದಂತಹ ಹತ್ತಿ ಉಂಡೆಯನ್ನು ಕಾಲ್ಬೆರಳಿಗೆ ಕಟ್ಟಿಕೊಳ್ಳಿ. ಇದರಿಂದ ಊತ, ಬೆರಳು ದಪ್ಪಗೆ ಆಗಿರುವುದು ಮತ್ತು ಶಿಲೀಂಧ್ರದಿಂದ ಆಗುತ್ತಿರುವ ಕಿರಕಿರಿಯನ್ನು ತಪ್ಪಿಸಬಹುದು.

Apple cider vinegar
 

ಆಪಲ್ ಸೀಡರ್ ವಿನೇಗರ್
ಒರಟುತನ ಹೊಂದಿರುವ ಅಕ್ಕಿ ಹಿಟ್ಟಿನೊಂದಿಗೆ ಅರಿಶಿನ ಸೀಡರ್ ವಿನೇಗರ್ ಅನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಂಡು ಮೆತ್ತಗೆ ಸ್ಕ್ರಬ್ ಮಾಡಿ.

ಒರೆಗಾನೊ ಮತ್ತು ಆಲಿವ್ ಎಣ್ಣೆ
ಎರಡು ಹನಿ ಒರೆಗಾನೊ ಎಣ್ಣೆ ಮತ್ತು ಒಂದು ಚಮಚ ಆಲಿವ್ ಎಣ್ಣೆಯನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಶಿಲೀಂಧ್ರದ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ. ಈ ಮಿಶ್ರಣವನ್ನು ಹಚ್ಚಿಕೊಂಡು 30 ಹಾಗೆ ಬಿಡಿ. ಪರಿಣಾಮಕಾರಿ ಫಲಿತಾಂಶಕ್ಕಾಗಿ ನಿಯಮಿತವಾಗಿ ಇದನ್ನು ಬಳಸಿ.

English summary

Herbal Masks For Toenail Fungus

There are many effective medicines to cure toenail fungus, but some people have experienced bad side effects of the medicines. Toenail surgery is also done nowadays. But why do you want to go for severe treatments for your nail when you have wonderful herbal masks that could cure it with no side effects. Here we are going to suggest herbal masks for toenail fungus.
Please Wait while comments are loading...
Subscribe Newsletter