For Quick Alerts
ALLOW NOTIFICATIONS  
For Daily Alerts

ಹಲ್ಲುಗಳು ಕಪ್ಪೆಂದು ಕೊರಗಬೇಡಿ, ಬೆಳ್ಳಗಾಗಲು ಹೀಗೆ ಮಾಡಿ

By Jaya subramanya
|

ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಿಮ್ಮ ಸುಂದರವಾದ ಹಲ್ಲುಗಳಿಂದ ಅರಿಯುವುದಾಗಿದೆ ಎಂಬ ಮಾತಿದೆ. ಮುತ್ತಿನಂತಹ ದಂತಪಂಕ್ತಿಯನ್ನು ಪ್ರದರ್ಶಿಸಿ ಮಂದಹಾಸವನ್ನು ಸೂಸಿದರೆ ಯಾರು ಕೂಡ ಬೆರಗಾಗಿ ನಿಲ್ಲಲೇಬೇಕು. ಆದರೆ ಇಲ್ಲಿ ಮುತ್ತಿನಂತಹ ದಂತ ಎಂಬ ಮಾತಿಗೆ ಹೆಚ್ಚು ಒತ್ತು ನೀಡುತ್ತಿದ್ದು ಇದುವೇ ಸುಂದರವಾಗಿಲ್ಲ ಎಂದಾದಲ್ಲಿ ನಿಮ್ಮ ವ್ಯಕ್ತಿತ್ವದ ಮೇಲೆ ಇದು ಪರಿಣಾಮವನ್ನು ಬೀರಬಲ್ಲುದು. ಹಳದಿ ಹಲ್ಲಿನ ಸಮಸ್ಯೆಗೆ, ಪವರ್ ಫುಲ್ ಮನೆಮದ್ದು

ಇದುವೇ ಮುತ್ತಿನಂತಹ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದಲ್ಲಿ ನಿಮ್ಮ ನಗು ಎಷ್ಟೇ ಮನಸ್ಫೂರ್ವಕವಾಗಿದ್ದರೂ ಎದುರಿದ್ದವರು ನಿಮ್ಮನ್ನು ಗುರುತಿಸುವುದು ಬೇರೆಯೇ ವಿಧದಲ್ಲಾಗಿರುತ್ತದೆ. ಕ್ಷಣಮಾತ್ರದಲ್ಲಿ ಹಳದಿ ಹಲ್ಲುಗಳನ್ನು ಶುಭ್ರಶ್ವೇತ ವರ್ಣಕ್ಕೆ ತಿರುಗಿಸಿ!

ಹಾಗಿದ್ದರೆ ಹಳದಿಗಟ್ಟಿದ ಹಲ್ಲುಗಳ ಕಲೆಯನ್ನು ನಿವಾರಿಸಲು ಏನಾದರೂ ಸಲಹೆಗಳಿಲ್ಲವೇ ಎಂಬುದಾಗಿ ನೀವು ಯೋಚಿಸುತ್ತಿದ್ದಲ್ಲಿ ಇಂದಿನ ಲೇಖನದಲ್ಲಿ ಆ ಸಲಹೆಯನ್ನು ನಾವು ನೀಡಲಿದ್ದೇವೆ. ಏಳು ನೈಸರ್ಗಿಕ ಸಾಮಾಗ್ರಿಗಳನ್ನು ನಿಮ್ಮ ಹಳದಿಗಟ್ಟಿದ ಹಲ್ಲುಗಳಿಗಾಗಿ ನಾವು ನೀಡುತ್ತಿದ್ದು ಇದು ಬಿಳಿಯಾಗಿ ಹೊಳೆಯುವಂತೆ ಮಾಡುವುದು ಖಂಡಿತ.... ಮುಂದೆ ಓದಿ....

Orange peels

ಕಿತ್ತಳೆ ಸಿಪ್ಪೆ

ಕ್ಯಾಲ್ಶಿಯಮ್ ಮತ್ತು ವಿಟಮಿನ್ ಸಿ ಯನ್ನು ಇದು ಹೊಂದಿದ್ದು, ಇದು ಹಳದಿ ಕಲೆಯನ್ನು ನಿವಾರಿಸುವುದು ಮಾತ್ರವಲ್ಲದೆ, ನಿಮ್ಮ ಹಲ್ಲುಗಳನ್ನು ಶುಭ್ರವಾಗಿಸುವುದು ಖಂಡಿತ. ಕಿತ್ತಳೆ- ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ ಬೆರಗಾಗಲೇಬೇಕು..!

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

*ಸೂರ್ಯನ ಬಿಸಿಲಿಗೆ ನೇರವಾಗಿ ಕಿತ್ತಳೆ ಸಿಪ್ಪೆಯನ್ನು ಇಡಿ, ನಂತರ ಸಂಪೂರ್ಣವಾಗಿ ಒಣಗಿದ ಮೇಲೆ ಹುಡಿಮಾಡಿಕೊಳ್ಳಿ
ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲು ಪೌಡರ್ ಅನ್ನು ಬಳಸಿ
*ನಿತ್ಯವೂ ಈ ಹುಡಿಯನ್ನು ಬಳಸಿಕೊಂಡು ನಿಮ್ಮ ಹಲ್ಲುಗಳನ್ನು ಶುಭ್ರವಾಗಿಸಿ

ಲಿಂಬೆ

ಸಿಟ್ರಿಕ್ ಆಸಿಡ್ ಮತ್ತು ಬ್ಲೀಚಿಂಗ್ ಅಂಶವನ್ನು ಲಿಂಬೆಯು ಹೊಂದಿದ್ದು ನಿಮ್ಮ ಹಲ್ಲುಗಳ ಕಲೆಗಳನ್ನು ಹೋಗಲಾಡಿಸಲು ಇದನ್ನು ಮುಖ್ಯ ಸಾಮಾಗ್ರಿಯನ್ನಾಗಿ ಬಳಸಿಕೊಳ್ಳಬಹುದಾಗಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

*ಒಂದು ಗ್ಲಾಸ್‎ನಷ್ಟು ತಣ್ಣೀರಿಗೆ ಕೆಲವು ಹನಿಗಳಷ್ಟು ಲಿಂಬೆ ರಸವನ್ನು ಹಾಕಿ
*ನಿಮ್ಮ ಬಾಯಿ ಮುಕ್ಕಳಿಸಲು ಈ ದ್ರಾವಣವನ್ನು ಬಳಸಿಕೊಳ್ಳಿ
*ಸೂಚನೆ: ನಿಮ್ಮ ಹಳದಿಗಟ್ಟಿದ ಹಲ್ಲುಗಳನ್ನು ಶುಭ್ರವಾಗಿಸುವಲ್ಲಿ ಈ ಅಡುಗೆ ಮನೆಯ ಸಾಮಾಗ್ರಿ ಅದ್ಭುತವಾಗಿ ಕೆಲಸ ಮಾಡುತ್ತದೆ ಆದರೆ ಇದನ್ನು ಹೆಚ್ಚು ಬಳಸುವುದು ಹಲ್ಲುಗಳ ಪದರವನ್ನು ಕಳೆಗುಂದಿಸಬಹುದು. ಆದ್ದರಿಂದ ಜಾಗರೂಕತೆಯಿಂದ ಇದನ್ನು ಬಳಸಿಕೊಳ್ಳಿ.

ತುಳಸಿ

ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಬ್ಲೀಚಿಂಗ್ ಗುಣಗಳನ್ನು ಇದು ಹೊಂದಿದ್ದು, ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡಿ ನಿಮ್ಮ ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ
*ಸೂರ್ಯನ ಬಿಸಿಲಿನಲ್ಲಿ ಹಿಡಿಯಷ್ಟು ತುಳಸಿಯನ್ನು ಒಣಗಿಸಲು ಇಡಿ
*ಇದು ಒಣಗಿದ ನಂತರ, ಇದನ್ನು ಹುಡಿಮಾಡಿಕೊಳ್ಳಿ
*ನಿಮ್ಮ ಟೂತ್‎ಪೇಸ್ಟ್‎ನೊಂದಿಗೆ ಈ ಹುಡಿಯನ್ನು ಮಿಶ್ರಮಾಡಿಕೊಳ್ಳಿ ಮತ್ತು ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲು ಬಳಸಿ
ನಿಮ್ಮ ಹಲ್ಲುಗಳ ಹಳದಿತನವನ್ನು ಹೋಗಲಾಡಿಸಲು ಈ ನೈಸರ್ಗಿಕ ವಿಧಾನವನ್ನು ಅನುಸರಿಸಿ ಮತ್ತು ಫಲಿತಾಂಶಗಳನ್ನು ಕಂಡುಕೊಳ್ಳಿ. ಆರೋಗ್ಯ ರಕ್ಷಕ- 'ತುಳಸಿ ಎಲೆಯ' ಜಬರ್ದಸ್ತ್ ಪವರ್

ಅರಿಶಿನ ಹುಡಿ

ಉತ್ಕರ್ಷಣ ನಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಅಂಶಗಳನ್ನು ಒಳಗೊಂಡಿರುವ ಅರಶಿನವು ನಿಮ್ಮ ಹಲ್ಲುಗಳಿಂದ ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಲಿದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

*ಅರಿಶಿನವನ್ನು ಚೆನ್ನಾಗಿ ಹುಡಿಮಾಡಿಕೊಳ್ಳಿ ಇದನ್ನು ಚಿಟಿಕೆಯಷ್ಟು ಉಪ್ಪಿನೊಂದಿಗೆ ಬೆರೆಸಿಕೊಳ್ಳಿ ಮತ್ತು ಐದು ಹನಿಗಳಷ್ಟು ಲಿಂಬೆ ರಸವನ್ನು ಇದಕ್ಕೆ ಸೇರಿಸಿ
*ನಿಮ್ಮ ಹಲ್ಲುಗಳನ್ನು ಎಂದಿನಂತೆ ಉಜ್ಜಿಕೊಳ್ಳಿ
*ಎರಡು ವಾರಗಳಿಗೊಮ್ಮೆ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಈ ಮನೆಔಷಧವನ್ನು ಬಳಸಿಕೊಳ್ಳಿ ಮತ್ತು ಆಶ್ಚರ್ಯಕರ ಫಲಿತಾಂಶವನ್ನು ನೋಡಿ.

ಸ್ಟ್ರಾಬೆರ್ರಿ

ವಿಟಮಿನ್ ಸಿ ಯನ್ನು ಹೊಂದಿರುವ ಸ್ಟ್ರಾಬೆರ್ರಿಯು, ನೈಸರ್ಗಿಕ ಹಲ್ಲುಗಳ ಸ್ವಚ್ಛಕ ಎಂಬುದಾಗಿ ಕರೆಯಲ್ಪಟ್ಟಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

*ನುಣ್ಣನೆಯ ಪೇಸ್ಟ್ ತಯಾರಿಸಿಕೊಳ್ಳಲು ಕೆಲವು ಸ್ಟ್ರಾಬೆರ್ರಿಗಳನ್ನು ಹುಡಿಮಾಡಿಕೊಳ್ಳಿ
*ನಿಮ್ಮ ಬೆರಳುಗಳನ್ನು ಬಳಸಿಕೊಂಡು, ಹಲ್ಲುಗಳಿಗೆ ಮಸಾಜ್ ಮಾಡಿ
*ದಿನಕ್ಕೆ ಎರಡು ಬಾರಿ ಹೀಗೆ ಮಾಡಿ ಮತ್ತು ವ್ಯತ್ಯಾಸವನ್ನು ಗಮನಿಸಿಕೊಳ್ಳಿ

ಬೇಕಿಂಗ್ ಸೋಡಾ

ಸೋಡಿಯಂ ಬೈಕಾರ್ಬೋನೇಟ್ ಮತ್ತು ಅಲ್ಕಲೈನ್, ಬೇಕಿಂಗ್ ಸೋಡಾದಲ್ಲಿದ್ದು ಹಲ್ಲುಗಳ ಕಲೆಗಳನ್ನು ಹೋಗಲಾಡಿಸಲು ಇದು ಉತ್ತಮ ಸಲಹೆಯಾಗಿದೆ. ನಿಮ್ಮ ಹಲ್ಲುಗಳಲ್ಲಿರುವ ಆಸಿಡಿಟಿಯನ್ನು ಇದು ನಿವಾರಿಸಿ ಪಿಎಚ್ ಬ್ಯಾಲೆನ್ಸ್ ಅನ್ನು ಇದು ಮರುಸಂಗ್ರಹಿಸುತ್ತದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

*ಒಂದು ಚಮಚದಷ್ಟು ಬೇಕಿಂಗ್ ಸೋಡಾವನ್ನು ತೆಗೆದುಕೊಳ್ಳಿ ಇದಕ್ಕೆ ಕೆಲವು ಹನಿಗಳಷ್ಟು ಲಿಂಬೆ ರಸವನ್ನು ಸೇರಿಸಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ
*ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲು ಈ ಪೇಸ್ಟ್ ಬಳಸಿ
*ನಿಮ್ಮ ಬಾಯಿಯನ್ನು ತೊಳೆದುಕೊಳ್ಳಿ

ತೆಂಗಿನೆಣ್ಣೆ

ಲಾರಿಕ್ ಆಸಿಡ್ ಇದರಲ್ಲಿದ್ದು ಹಳದಿ ಅಂಶವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಇದು ಕೊಲ್ಲುತ್ತದೆ, ಮತ್ತು ನಿಮ್ಮ ಹಲ್ಲುಗಳನ್ನು ಹಳದಿಯಾಗಿಸಲು ಇದು ಬಿಡುವುದಿಲ್ಲ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

*ಬೆಳಗ್ಗಿನ ಜಾವ, ಬ್ರಶ್ ಮಾಡುವ ಮುನ್ನ ಆರ್ಗಾನಿಕ್ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ ನಿಮ್ಮ ಬಾಯಿಗೆ ಹಾಕಿಕೊಳ್ಳಿ
*ಈ ಎಣ್ಣೆಯಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಚೆನ್ನಾಗಿ ಎಣ್ಣೆ ಬಾಯಿಯಲ್ಲಿ ಓಡಾಡುವಂತೆ ಮಾಡಿ
*15 ರಿಂದ 20 ನಿಮಿಷಗಳ ಕಾಲ ಹೀಗೆ ಮಾಡಿ
*ಬಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಬ್ರಶ್ ಮಾಡಿ ನಿಮ್ಮ ಹಲ್ಲುಗಳನ್ನು ಬಿಳಿ ಮತ್ತು ಶುಭ್ರವಾಗಿಸಲು ಈ ಮನೆಮದ್ದನ್ನು ಆರಾಮದಾಯಕವಾಗಿ ಬಳಸಿಕೊಳ್ಳಬಹುದಾಗಿದೆ.

English summary

Herbal Ingredients For Whiter Teeth

It takes a person about 15 seconds to determine whether you are aesthetically appealing or not. And a big part of that decision is based on your smile, which includes your teeth. And when your pearlies are dirty blotted yellow in colour, needless to say it kills the look. So, what you need are home remedies to whiten your teeth! read more...
X
Desktop Bottom Promotion