ವಯಸ್ಸಾದರೇನಂತೆ? ಸಂತಸದ ನಗು ಚೆಲ್ಲುತ್ತಾ ಯುವಕರಂತೆ ಕಾಣಿ!

By: Hemanth
Subscribe to Boldsky

ಏನೇನೋ ಕನಸು ಕಂಡಿರುತ್ತೇವೆ. ಕೆಲವು ನಿಜವಾಗಿರುತ್ತದೆ. ಮತ್ತೆ ಕೆಲವು ಹಾಗೆ ಉಳಿದಿರುತ್ತದೆ. ಹದಿಹರೆಯದಲ್ಲಿ ನಮ್ಮ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುತ್ತೇವೆ. ಆದರೆ 30 ದಾಟಿದ ಬಳಿಕ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ.

ಇದರ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಯಾಕೆಂದರೆ ಕೆಲವೊಂದು ಸೌಂದರ್ಯದ ಟಿಪ್ಸ್‌ಗಳು ನಿಮ್ಮ ಯೌವನದ ನಗುವನ್ನು ಮರಳಿ ತರಳಿದೆ ಮತ್ತು ನಿಮಗೆ ಮೊದಲಿನ ಸೌಂದರ್ಯವನ್ನು ನೀಡಲಿದೆ. ವಯಸ್ಸಾಗುವುದನ್ನು ಎಷ್ಟೇ ಶ್ರೀಮಂತನಿಂದಲೂ ತಡೆಯಲು ಸಾಧ್ಯವಿಲ್ಲ. ಮುಖದ ನವ ಯೌವನ- ಅದೂ ಕೂಡ ಬರೀ ಒಂದೇ ವಾರದಲ್ಲಿ!
ಆದರೆ ವಯಸ್ಸಾಗುತ್ತಿರುವ ಲಕ್ಷಣಗಳನ್ನು ಮರೆಮಾಚಬಹುದು ಅಷ್ಟೇ. ಯೌವನದ ದಿನಗಳಲ್ಲಿ ನಮ್ಮ ನಗು ಇತರರನ್ನು ನಮ್ಮತ್ತ ಸೆಳೆಯುವಂತೆ ಮಾಡುತ್ತದೆ. ಅದೇ ನಗುವನ್ನು ವಯಸ್ಸಾಗುತ್ತಿರುವ ಸಮಯದಲ್ಲೂ ಉಳಿಸಿಕೊಳ್ಳಲು ಬೇಕಾದಂತಹ ಕೆಲವೊಂದು ಸರಳ ಟಿಪ್ಸ್‌ಗಳು ಇಲ್ಲಿವೆ. ಅದನ್ನು ಪಾಲಿಸಿಕೊಂಡು ಹೋಗಿ.

Youthful Smile
 

1. ನಿಮ್ಮ ನಗು ಮತ್ತು ಚರ್ಮವು ಯುವಕರಂತೆ ಕಾಣಬೇಕೆಂದು ನೀವು ಬಯಸುವಿರಾದರೆ ಮೊದಲು ಹಲ್ಲುಗಳನ್ನು ಬಿಳಿಯಾಗಿಸಲು ದಂತವೈದ್ಯರನ್ನು ಭೇಟಿಯಾಗಿ. ತಾತ್ಕಾಲಿಕ ಚಿಕಿತ್ಸೆಯು ನಿಮ್ಮನ್ನು ಯುವಕರಂತೆ ಮಾಡುವುದು.

2. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ವಯಸ್ಸಾಗುವುದನ್ನು ಮರೆಮಾಚುವ ಕ್ರೀಮ್ ಅನ್ನು ಬಳಸಿ ಅಥವಾ ಮನೆಯಲ್ಲೇ ನೈಸರ್ಗಿಕ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಬಾಯಿ ಸುತ್ತಲು ಇರುವಂತಹ ನೆರಿಗೆಗಳು ಮಾಯವಾಗುವುದು.

Youthful Smile
 

3. ನಿಮಗೆ ಸ್ವಲ್ಪ ವಯಸ್ಸಾಗಿ ಹಲ್ಲುಗಳು ಉದುರಿದ್ದರೆ ಆಗ ದಂತವೈದ್ಯರಲ್ಲಿಗೆ ಹೋಗಿ ನಕಲಿ ಹಲ್ಲುಗಳ ಜೋಡಣೆ ಅಥವಾ ಬೇರೆ ಯಾವುದಾದರೂ ವಿಧಾನ ಅನುಸರಿಸಿ. ಇದರಿಂದ ಹೊಳೆಯುವ ಹಲ್ಲುಗಳು ನಿಮ್ಮದಾಗುವುದು.   ಮನೆಮದ್ದು ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ

4. ವಯಸ್ಸಾಗಿದೆ ಎಂದು ಸಾರಿ ಹೇಳುವಂತಹ ತುಟಿಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ. ಇದಕ್ಕೆ ಪ್ಯಾಕ್ ಬಳಸಿಕೊಂಡರೆ ನೀವು ಯೌವನದ ಸೌಂದರ್ಯವನ್ನು ಮರಳಿ ಪಡೆಯಬಹುದಾಗಿದೆ.

Youthful Smile
 

5. ನಿಮಗೆ ಹದಿಹರೆಯದ ನಗು ಮತ್ತು ಯುವಕರಂತೆ ಕಾಣಬೇಕೆಂದರೆ ತುಟಿಗೆ ಲಘುವಾಗಿರುವ ಬಣ್ಣವನ್ನು ಬಳಸಿ. ಇದು ನೆರಿಗೆಯನ್ನು ಮರೆಮಾಚುವುದು. ಗಾಢವಾದ ಬಣ್ಣವು ನೆರಿಗೆಯು ಎದ್ದು ಕಾಣುವಂತೆ ಮಾಡುತ್ತದೆ.

English summary

Follow These Simple Beauty Tips For A Youthful Smile!

If you are someone who is reaching your mid-thirties and you feel that you are losing your youthful charm, then worry not, there are a few beauty tips that can help you look younger! You are not alone when it comes to feeling anxious about getting older and losing that youthful smile!
Please Wait while comments are loading...
Subscribe Newsletter