For Quick Alerts
ALLOW NOTIFICATIONS  
For Daily Alerts

ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!

By Jaya Subramanya
|

ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ ಎರಡೇ? ಬೆವರು, ಬಿಸಿಲಿನ ಝಳ, ಆಯಾಸ, ಬಾಯಾರಿಕೆ, ಸುಸ್ತು ಹೀಗೆ ಸಮಸ್ಯೆಗಳ ಸಾಲು ಕಾಡುತ್ತಲೇ ಇರುತ್ತದೆ. ದೇಹಕ್ಕೆ ಸಾಕಷ್ಟು ನೀರಿನ ಪೂರೈಕೆಯನ್ನು ಮಾಡುತ್ತಾ ದೇಹದ ಸಮತೋಲವನ್ನು ಕಾಪಾಡಬೇಕಾಗುತ್ತದೆ. ಬೇಸಿಗೆಯಲ್ಲಿ ತ್ವಚೆಯು ಬಿಸಿಲಿನ ತೀವ್ರ ಹಾನಿಗೆ ಒಳಗಾಗುವುದರಿಂದ ನಾವು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಬೆಸಿಗೆಯಲ್ಲಿ ಬಿಸಿಲಿನ ಝಳದಿಂದಾಗಿ ನಾವು ಹೆಚ್ಚು ಕಡಿಮೆ ಕುತ್ತಿಗೆಯನ್ನು ಕೆಳಕ್ಕೆ ಹಾಕಿಯೇ ನಡೆಯುತ್ತೇವೆ. ಆಗ ಕುತ್ತಿಗೆಯ ಭಾಗಕ್ಕೆ ಹೆಚ್ಚು ಒತ್ತಡ ಬಿದ್ದು ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಮತ್ತು ಇದು ಅಸಹ್ಯವಾಗಿ ಕಾಣಬಹುದು ಕೂಡ. ಈ ಕಪ್ಪು ಬಣ್ಣವನ್ನು ಹೋಗಲಾಡಿಸಲು ಲಿಂಬೆಯ ಬಳಕೆಯನ್ನೇ ಮಾಡಬೇಕು.

ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಲಿಂಬೆ ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ ಸಿಟ್ರಿಕ್ ಆಸಿಡ್ ಇದೆ ಇದು ತ್ವಚೆಯ ಬಣ್ಣವನ್ನು ಹಿಂದಿನಂತೆ ಮಾಡಲು ಸಹಕಾರಿಯಾಗಿದೆ. ಲಿಂಬೆಯಲ್ಲಿ ವಿಟಮಿನ್ ಸಿ ಅಂಶವಿದ್ದು ಇತರೆ ನ್ಯೂಟ್ರೀನ್ ಅಂಶಗಳನ್ನು ಇದು ಒಳಗೊಂಡಿದೆ ಇದರಿಂದ ಮೃತ ಕೋಶಗಳೂ ನಿವಾರಣೆಯಾಗುತ್ತದೆ. ಸೌಂದರ್ಯ ಹೆಚ್ಚಲು ಮಾಡಿ ಕತ್ತಿನ ಆರೈಕೆ

ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ಲಿಂಬೆಯೊಂದಿಗೆ ನೈಸರ್ಗಿಕ ಉತ್ಪನ್ನಗಳಾದ ಅಲೊವೇರಾ, ಜೇನು, ಆಲೀವ್ ಆಯಿಲ್ಮೊ ದಲಾದವನ್ನು ಬಳಸಬಹುದಾಗಿದೆ. ಹಾಗಿದ್ದರೆ ಲಿಂಬೆಯೊಂದಿಗೆ ಈ ಉತ್ಪನ್ನಗಳನ್ನು ಬಳಸಿಕೊಂಡು ಕುತ್ತಿಗೆಯ ಬಣ್ಣವನ್ನು ಮರಳಿ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ...

ಲಿಂಬೆ ಮತ್ತು ರೋಸ್ ವಾಟರ್

ಲಿಂಬೆ ಮತ್ತು ರೋಸ್ ವಾಟರ್

ಒಂದು ಚಮಚದಷ್ಟು ಲಿಂಬೆ ರಸ ಮತ್ತು ರೋಸ್ ವಾಟರ್ ಅನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಹತ್ತಿಯ ಉಂಡೆಯಿಂದ ಕುತ್ತಿಗೆಯ ಕಪ್ಪು ವರ್ತುಲದ ಭಾಗಕ್ಕೆ ಹಚ್ಚಿಕೊಳ್ಳಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ ಮರುದಿನ ಇದನ್ನು ತೊಳೆದುಕೊಳ್ಳಿ.

ಲಿಂಬೆ ಮತ್ತು ಜೇನು

ಲಿಂಬೆ ಮತ್ತು ಜೇನು

ತ್ವಚೆಯ ಹಲವಾರು ಸಮಸ್ಯೆಗಳಿಗೆ ಇವುಗಳು ಉತ್ತಮ ಪರಿಹಾರವನ್ನು ನೀಡುತ್ತವೆ. ತಾಜಾ ಲಿಂಬೆ ರಸ ಮತ್ತು ನೈಸರ್ಗಿಕ ಜೇನು ನಿಮ್ಮ ಬಳಿ ಇದ್ದರೆ ಆಯಿತು. ಲಿಂಬೆ ರಸಕ್ಕೆ ಹನಿಗಳಷ್ಟು ಜೇನನ್ನು ಬೆರೆಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. 20-25 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ಕುತ್ತಿಗೆಯ ಕಪ್ಪು ವರ್ತುಲವನ್ನು ಹೋಗಲಾಡಿಸಲು ಇದು ಸಹಕಾರಿ.

ಲಿಂಬೆ ಮತ್ತು ಅರಿಶಿನ

ಲಿಂಬೆ ಮತ್ತು ಅರಿಶಿನ

ತಾಜಾ ಲಿಂಬೆ ರಸಕ್ಕೆ ಚಿಟಿಕೆಯಷ್ಟು ಅರಿಶಿನ ಪುಡಿಯನ್ನು ಸೇರಿಸಿ. ಕುತ್ತಿಗೆಯ ಭಾಗಕ್ಕೆ ಇದರ ಲೇಪನವನ್ನು ಮಾಡಿಕೊಳ್ಳಿ ನಂತರ 15-20 ನಿಮಿಷ ಚೆನ್ನಾಗಿ ಉಜ್ಜಕೊಳ್ಳಿ. ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ನಿತ್ಯವೂ ಈ ಪ್ರಕ್ರಿಯೆಯನ್ನು ಅನುಸರಿಸಿ ಫಲಿತಾಂಶವನ್ನು ನೀವೇ ನೋಡಿ.

ಲಿಂಬೆ ಮತ್ತು ಟೊಮೇಟೊ

ಲಿಂಬೆ ಮತ್ತು ಟೊಮೇಟೊ

ಲಿಂಬೆ ರಸಕ್ಕೆ ಟೊಮೇಟೊ ರಸವನ್ನು ಸೇರಿಸಿಕೊಳ್ಳಿ. ಕಪ್ಪಾಗಿರು ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ ನಂತರ 30-35 ನಿಮಿಷಗಳ ಕಾಲ ಹಾಗೆಯೇ ಬಿಡಿ. ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಿ.

ಲಿಂಬೆ, ಆಲೀವ್ ಆಯಿಲ್ ಮತ್ತು ಜೇನು

ಲಿಂಬೆ, ಆಲೀವ್ ಆಯಿಲ್ ಮತ್ತು ಜೇನು

ನಿಮ್ಮ ಕುತ್ತಿಗೆಯ ಭಾಗವನ್ನು ಈ ಮೂರು ಸಾಮಾಗ್ರಿಗಳು ಮಾಯಿಶ್ಚರೈಸ್ ಮಾಡುವುದು ಮಾತ್ರವಲ್ಲದೆ ಮೃತ ಕೋಶಗಳ ನಿವಾರಣೆಯನ್ನು ಮಾಡುತ್ತದೆ. ಒಂದು ಚಮಚ ಜೇನಿಗೆ ಆಲೀವ್ ಆಯಿಲ್ ಮತ್ತು 2 ಚಮಚ ಲಿಂಬೆ ರಸವನ್ನು ಸೇರಿಸಿಕೊಳ್ಳಿ. 25-30 ನಿಮಷಗಳ ಕಾಲ ಕುತ್ತಿಗೆಯನ್ನು ಇದನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ. ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ.

ಲಿಂಬೆಯ ಮ್ಯಾಜಿಕ್

ಲಿಂಬೆಯ ಮ್ಯಾಜಿಕ್

ಲಿಂಬೆಯು ನಿಮ್ಮ ತ್ವಚೆಯನ್ನು ಬೇಗನೇ ಒಣಗಿಸುತ್ತದೆ ಎಂಬುದು ನಿಮ್ಮ ಮನದಲ್ಲಿರಲಿ ಆದ್ದರಿಂದ ಇಲ್ಲಿ ನಾವು ನೀಡಿರುವ ನೈಸರ್ಗಿಕ ಉತ್ಪನ್ನಗಳೊಂದಿಗೆ ಲಿಂಬೆಯನ್ನು ಬೆರೆಸಿಕೊಂಡು ಇವುಗಳನ್ನು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಕಪ್ಪು ಕಲೆಗಳ ನಿವಾರಣೆಯೊಂದಿಗೆ ಕಾಂತಿಯುಕ್ತ ಕುತ್ತಿಗೆಯ ತ್ವಚೆಯನ್ನು ನೀವು ಪಡೆದುಕೊಳ್ಳುತ್ತೀರಿ.

English summary

Effective Methods Of Using Lemon To Clean Dark Neck

In summer, instead of letting the hair down, most of us like to keep it tied. However, it could get embarrassing to tie your hair up, if your neck region is darker than your face's complexion. We often go through great lengths to take proper care of our face, while ignoring the neck region.
X
Desktop Bottom Promotion