For Quick Alerts
ALLOW NOTIFICATIONS  
For Daily Alerts

ಅಂದದ ಪಾದಕ್ಕೆ, ಮನೆಯಲ್ಲೇ ಪಾರ್ಲರ್ ಮಟ್ಟದ ಆರೈಕೆ

By jaya subramanaya
|

ನಮ್ಮ ಕಾಲು ಮತ್ತು ಪಾದಗಳನ್ನು ಅವರಿತವಾಗಿ ನಾವು ದುಡಿಸಿಕೊಳ್ಳುತ್ತೇವೆ. ಹೀಲ್ಸ್ ಮತ್ತು ಇತರೆ ಆರಾಮದಾಯಕ ಚಪ್ಪಲಿಗಳನ್ನು ಧರಿಸಿ ಅತ್ತಿಂದಿತ್ತ ಓಡಾಡುತ್ತೇವೆ. ನಮ್ಮ ಕಾಲುಗಳ ಸಹಾಯದಿಂದಲೇ ಎಷ್ಟೋ ಕಿಲೋಮೀಟರ್ ನಡೆಯುವುದು, ಓಡುವುದು, ಹೀಗೆ ಕಾಲುಗಳು ಮತ್ತು ಪಾದಗಳೇ ಇಲ್ಲ ಎಂದಾದರೆ ಆ ಸ್ಥಿತಿಯನ್ನು ನೆನೆಸಿಕೊಳ್ಳುವುದೂ ಕಷ್ಟ ಅಲ್ಲವೇ? ಹಾಗಿದ್ದರೆ ನಿಮಗಾಗಿ ಹಗಲಿರುಳೂ ಶ್ರಮಿಸುವ ಈ ಪಾದಗಳ ಆರೈಕೆಯನ್ನು ನೀವು ಸೂಕ್ತವಾಗಿ ಮಾಡಲೇಬೇಕು. ಇದಕ್ಕಾಗಿ ನೀವೇನು ತಿಂಗಳು, ವರ್ಷಗಳನ್ನು ವ್ಯಯಿಸಬೇಕಾಗಿಲ್ಲ ಕೆಲವೊಂದು ನಿಮಿಷಗಳು ಮಾತ್ರ ಸಾಕು.

DIY: This Summer Try A Milk Pedicure For Soft Feet

ನಿಮ್ಮ ಪಾದಗಳ ಆರೈಕೆಗಾಗಿ ಸಲೂನ್‎ಗಳಲ್ಲಿ ಹಲವಾರು ವಿಧಗಳ ಪೆಡಿಕ್ಯೂರ್ಸ್ ಲಭ್ಯವಿದೆ. ನೀರಿನಲ್ಲಿ ಕಾಲುಗಳನ್ನು ಊರಿ ನಡೆಸುವ ಪೆಡಿಕ್ಯೂರ್ ಚಿಕಿತ್ಸೆಗಳೇ ಇದಾಗಿವೆ. ಸಲೂನ್ ಆಧಾರಿತ ಪೆಡಿಕ್ಯೂರ್‎ಗಳನ್ನು ಹಲವಾರು ಕ್ರೀಮ್‎ಗಳು ಇತರೆ ಉತ್ಪನ್ನಗಳನ್ನು ಒಳಗೊಂಡಿದ್ದು ಇವುಗಳು ಮೃತ ಕೋಶಗಳನ್ನು ನಿವಾರಿಸಿ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸುತ್ತವೆ. ಅಂದದ ಪಾದಕ್ಕೆ, ಬೇಕಿದೆ ಚೆಂದದ ಆರೈಕೆ...

ಪಾದಗಳನ್ನು ಸುಕೋಮಲಗೊಳಿಸಲು ಮತ್ತು ವಿರಾಮ ನೀಡುವುದಕ್ಕಾಗಿ ಪಾರ್ಲರ್‎ಗಳು ರಾಸಾಯನಿಕಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುತ್ತಾರೆ. ಇವುಗಳ ಹೆಚ್ಚು ಪರಿಮಳಯುಕ್ತವಾಗಿದ್ದರೂ ಇದರಲ್ಲಿರುವ ವಿಷಕಾರಿ ಅಂಶಗಳು ಪಾದಗಳಲ್ಲಿ ಬೇರೆ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಪಾದಗಳನ್ನು ನೆನೆಸಿಡುವುದು ಪಡೆಕ್ಯೂರ್‎ನ ವಿಧಾನಗಳಲ್ಲಿ ಒಂದಾಗಿದೆ.

ಆದರೆ ಈ ಪೆಡಿಕ್ಯೂರ್‎ಗಾಗಿ ಸರಿಯಾದ ರೀತಿಯ ಸಾಮಾಗ್ರಿಗಳನ್ನು ಬಳಸುವುದರಿಂದ ಪ್ರಯೋಜನ ಇನ್ನಷ್ಟು ಉತ್ತಮವಾಗಿರುತ್ತದೆ. ನೀವು ಇದಕ್ಕಾಗಿ ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಪೆಡಿಕ್ಯೂರ್ ಚಿಕಿತ್ಸೆಯನ್ನು ಉತ್ತಮಗೊಳಿಸಬಹುದಾಗಿದೆ. ನಿಮ್ಮ ಪಾದಗಳನ್ನು ನೆನೆಯಿಸುವುದಕ್ಕಾಗಿ ನರಿಶಿಂಗ್ ದ್ರಾವಣಗಳನ್ನು ಬಳಸಬೇಕಾಗುತ್ತದೆ.

ಹಾಲು, ಜೇನು ಮತ್ತು ಇತರ ಸಾಮಾಗ್ರಿಗಳು ಕಾಲುಗಳನ್ನು ನೆನೆಯಿಸುವುದರ ಜೊತೆಗೆ ಎಕ್ಸ್‎ಫೋಲಿಯೇಟಿಂಗ್ ಅಂಶಗಳನ್ನು ಒಳಗೊಂಡಿವೆ. ಹಾಗಿದ್ದರೆ ಇಂತಹ ವಸ್ತುಗಳನ್ನು ಬಳಸಿ ಮನೆಯಲ್ಲೇ ಪಾರ್ಲರ್ ರೀತಿಯ ಪೆಡಿಕ್ಯೂರ್ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ.

ತ್ವರಿತ ಮತ್ತು ಸುಲಭ ಮಾಯಿಶ್ಚರೈಸಿಂಗ್ ಸೋಕ್
ಇದು ಹೆಚ್ಚು ಸರಳ ಮತ್ತು ಬಜೆಟ್ ಸ್ನೇಹಿ ಸೋಕ್ ಆಗಿದೆ. ಅಂತೆಯೇ ಈ ಸಾಮಾಗ್ರಿಗಳು ಸುಲಭವಾಗಿ ದೊರೆಯುತ್ತವೆ. ಹಾಲು ನಿಮ್ಮ ಪಾದಗಳನ್ನು ಮಾಯಿಶ್ಚರೈಸ್ ಮಾಡಿ, ಎಕ್ಸ್‎ಫೋಲಿಯೇಟ್ ಮಾಡುತ್ತದೆ. ಟೀ ಟ್ರಿ ಆಯಿಲ್ ನಿಮ್ಮ ಪಾದಗಳಿಗೆ ಆರಾಮ ನೀಡುತ್ತದೆ. ಉಪ್ಪು ಪಾದಗಳಿಗೆ ಉತ್ತಮ ಆರೈಕೆಯನ್ನು ನೀಡಿ ನೋವುಗಳನ್ನು ದೂರಮಾಡುತ್ತದೆ. ಸಕ್ಕರೆ ಹೆಚ್ಚು ಶಕ್ತಿಯುತವಾಗಿ ಎಕ್ಸ್‎ಫೋಲಿಯೇಂಟ್ ಮಾಡುತ್ತದೆ.

ಸಾಮಾಗ್ರಿಗಳು
*3 ಕಪ್‎ಗಳಷ್ಟು ಹಾಲು - ಸಂಪೂರ್ಣ ಹಾಲು ಅಗತ್ಯ
*5 ಲೀಟರ್‎ಗಳಷ್ಟು ನೀರು
*1 ಚಮಚ ಸಮುದ್ರ ಉಪ್ಪು
*1/2 ಚಮಚ ಟೀ ಟ್ರಿ ಆಯಿಲ್
*1/2 ಕಪ್ ಬಿಳಿ ಸಕ್ಕರೆ
*1/2 ಕಪ್ ಬ್ರೌನ್ ಸಕ್ಕರೆ

ತಯಾರಿಸುವ ವಿಧಾನ
*ಟಬ್‎ಗೆ ನೀರನ್ನು ತುಂಬಿಸಿ. ಇದರಲ್ಲಿ ನಿಮ್ಮ ಪಾದಗಳನ್ನು 5 ನಿಮಿಷಗಳ ಕಾಲ ಮುಳುಗಿಸಿಡಿ.
*ಇದಕ್ಕೆ ಹಾಲು, ಉಪ್ಪು ಮತ್ತು ಟೀ ಟ್ರಿ ಆಯಿಲ್ ಸೇರಿಸಿ. ನಂತರ 15 ನಿಮಿಷ ಮುಳುಗಿಸಿಡಿ
*ಸಕ್ಕರೆ ರೀತಿಯ ಎರಡೂ ಸಾಮಾಗ್ರಿಗಳನ್ನು ಮಿಶ್ರ ಮಾಡಿ ನಿಮ್ಮ ಪಾದಗಳನ್ನು ಬ್ರೌನ್ ಮತ್ತು ಬಿಳಿ ಸಕ್ಕರೆಯೊಂದಿಗೆ ಎಕ್ಸ್‎ಫೋಲಿಯೇಟ್ ಮಾಡಿ.
*ಹೆಚ್ಚುವರಿ 5 ನಿಮಿಷಗಳ ಕಾಲ ಪಾದಗಳನ್ನು ನೆನೆಯಿಸಿ.
*ಎಮರಿ ಬೋರ್ಡ್ ಬಳಸಿ ಪಾದಗಳನ್ನು ತೊಳೆಯಿರಿ.
*ನಿಮ್ಮ ಉಗುರುಗಳ ಸುತ್ತ ತ್ವಚೆಯನ್ನು ಮೃದುಗೊಳಿಸಲು ಕ್ಯುಟಿಕಲ್ ಕ್ರೀಮ್ ಹಚ್ಚಿಕೊಳ್ಳಿ. ಕ್ಯುಟಿಕಲ್ಸ್ ಸ್ವಚ್ಛಮಾಡಿ.
*ಉಗುರು ಬೆಚ್ಚನೆಯ ನೀರಿನಲ್ಲಿ ಪಾದಗಳನ್ನು ತೊಳೆದುಕೊಂಡು ಪಾದಗಳನ್ನು ಒಣಗಿಸಿ
*ನಿಮ್ಮ ಪಾದಗಳನ್ನು ಮೃದುವಾದ ಮಾಯಿಶ್ಚರೈಸರ್ ಬಳಸಿಕೊಂಡು ಮಾಯಿಶ್ಚರೈಸ್ ಮಾಡಿಕೊಳ್ಳಿ. ನೈಸರ್ಗಿಕ ಮಾಯಿಶ್ಚರೈಸ್ ಬಳಸಿ ಇನ್ನಷ್ಟು ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು.
*ಕೊನೆಯದಾಗಿ ನಿಮ್ಮ ಉಗುರುಗಳಿಗೆ ಬಣವನ್ನು ಹಚ್ಚಿ ಇನ್ನಷ್ಟು ಸುಂದರಗೊಳಿಸಬಹುದಾಗಿದೆ.

English summary

DIY: This Summer Try A Milk Pedicure For Soft Feet

We stand on our feet all day wearing tall heels and other uncomfortable footwear. We walk on dirty roads that are polluted. We also wear footwear that causes callouses and corns. The list of the ways we hurt our feet is extensive. So, why not spend a few hours, twice a month, to pamper yourself and treat your feet with the care that they deserve? There are various types of pedicures that you can get at saloons. Each one of these pedicures is based on the concept of soaking feet in water.
X
Desktop Bottom Promotion