For Quick Alerts
ALLOW NOTIFICATIONS  
For Daily Alerts

ಕಾಡುವ ಸನ್‍ ಟ್ಯಾನ್‍ ಸಮಸ್ಯೆಗೆ ಮಜ್ಜಿಗೆ-ಓಟ್ಸ್ ಲೇಪನ

By Manu
|

ಬೀಚುಗಳಲ್ಲಿ ಸಮಯ ಕಳೆಯುವ ಚಿತ್ರಗಳನ್ನು ನೋಡಿದಾಗ ನಿಮಗೂ ಅಲ್ಲಿ ಸಮಯ ಕಳೆಯಬೇಕೆಂದು ಮನಸ್ಸಾಯಿತೇ? ಆದರೆ ಸನ್ ಟ್ಯಾನ್ ಹೊರತಾಗಿ ಹೊರಗೆ ಹೋಗಬೇಡಿ. ಏಕೆಂದರೆ ಸೂರ್ಯನ ಕಿರಣಗಳು ಚರ್ಮದ ಬಣ್ಣವನ್ನು ಗಾಢಗೊಳಿಸಬಹುದು. ಅಭ್ಯಾಸವಿಲ್ಲದವರಿಗೆ ಉರಿ, ಕೆಂಪಗಾವುವುದು, ಸೂಕ್ಷ್ಮಗೆರೆಗಳು ಮೂಡುವುದು ಮೊದಲಾದ ತೊಂದರೆಗಳೂ ಎದುರಾಗಬಹುದು.

ಆದರೆ ಸನ್ ಟ್ಯಾನ್ ಹಚ್ಚಲಿಕ್ಕೂ ಒಂದು ಕ್ರಮವಿದೆ. ಇದನ್ನು ಕೆಳಗಿನಿಂದ ಮೇಲಕ್ಕೆ ಸವರುವಂತೆ, ಏಕಪ್ರಕಾರವಾಗಿರುವಂತೆ, ಸೂರ್ಯನಿಗೆ ಒಡ್ಡುವ ಚರ್ಮದ ಅಷ್ಟೂ ಭಾಗಕ್ಕೆ ಆವರಿಸುವಂತೆ ಹಚ್ಚಿಕೊಳ್ಳಬೇಕು. ಆದರೆ ಸರಿಯಾಗಿ ಹಚ್ಚಿಕೊಳ್ಳದೇ ಇದ್ದರೆ, ಮರೆತು ಒಂದು ಭಾಗಕ್ಕೆ ಹಚ್ಚಿಕೊಳ್ಳದೇ ಇದ್ದರೆ, ಚರ್ಮ ಗಾಢವರ್ಣಕ್ಕೆ ತಿರುಗಬಹುದು.

DIY Buttermilk And Oats Face Pack To Remove Sun Tan

ಸೂರ್ಯರಶ್ಮಿಗೆ ಹೆಚ್ಚಿನ ಹೊತ್ತು ಒಡ್ಡಿಕೊಂಡಿದ್ದರೆ ಸೂರ್ಯ ಕಿರಣಗಳಲ್ಲಿರುವ UVA ಮತ್ತು UVB ಪ್ರಭೆಗಳು ಚರ್ಮದ ಮೇಲೆ ಗಾಢ ಪರಿಣಾಮ ಉಂಟುಮಾಡುತ್ತವೆ. ಇದರಿಂದ ಚರ್ಮದ ಕ್ಯಾನ್ಸರ್, ಎಕ್ಸಿಮಾ, ಮೆಲಾನೋಮಾ ಮೊದಲಾದ ತೊಂದರೆಗಳೂ ಎದುರಾಗಬಹುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಒಡ್ಡುವ ಸಂದರ್ಭ ಬಂದಾಗ ಸೂಕ್ತ ಎಚ್ಚರಿಕೆಗಳನ್ನು ವಹಿಸುವುದೇ ಜಾಣತನದ ಕ್ರಮವಾಗಿದೆ.

ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಸೂರ್ಯನ ಕಿರಣಗಳಿಗೆ ಒಡ್ಡಲೇ ಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಒಡ್ಡಿದ್ದ ಚರ್ಮದ ಭಾಗ ಹೆಚ್ಚು ಗಾಢಗೊಳ್ಳುತ್ತದೆ. ಎಷ್ಟೋ ಸಲ ಸರಿಯಾದ ಸನ್ ಟ್ಯಾನ್ ಉಪಯೋಗಿಸಿಯೂ ಚರ್ಮ ಗಾಢವರ್ಣ ಪಡೆಯುತ್ತದೆ. ವಿಶೇಷವಾಗಿ ಬಟ್ಟೆಗಳ ಅಂಚುಗಳಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ.

ಇದನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಪ್ರಸಾದನಗಳು ಲಭ್ಯವಿದ್ದರೂ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಈ ಮುಖಲೇಪವನ್ನು ಬಳಸುವ ಮೂಲಕ ಸಮರ್ಥವಾಗಿ ಈ ವರ್ಣವನ್ನು ಸಹಜವರ್ಣದತ್ತ ತರಬಹುದು. ಇದಕ್ಕೆ ಬೇಕಾಗಿರುವುದು ಬರೆಯ ಓಟ್ಸ್ ಮತ್ತು ಮಜ್ಜಿಗೆ ಮಾತ್ರ. ಬನ್ನಿ, ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ: ಈ ಎಣ್ಣೆಗಳಿರುವಾಗ ಸನ್ ಟ್ಯಾನ್ ಚಿಂತೆ ಏಕೆ?

ಅಗತ್ಯವಿರುವ ಸಾಮಾಗ್ರಿಗಳು:
*ಓಟ್ಸ್ ಅಥವಾ ಓಟ್ಮೀಲ್ - ಮೂರು ದೊಡ್ಡಚಮಚ
*ಮಜ್ಜಿಗೆ: ಕಾಲು ಕಪ್
*ಲಿಂಬೆ ರಸ: ಎರಡು ಚಿಕ್ಕ ಚಮಚ

ಓಟ್ಮೀಲ್ ಅಥವಾ ಓಟ್ಸ್‌ನ ರವೆಯಲ್ಲಿ ಚರ್ಮದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು ಸಮರ್ಥವಾದ ಪೋಷಕಾಂಶಗಳಿವೆ. ಈ ಗುಣ ಚರ್ಮದ ಗಾಢವರ್ಣವನ್ನೂ ನಿವಾರಿಸಲು ಬಳಕೆಯಾಗುತ್ತದೆ. ಸತ್ತ ಜೀವಕೋಶಗಳ ಪದರ ನಿವಾರಣೆಯಾಗುವ ಮೂಲಕ ಗಾಢವಾದ ಹೊರಪದರ ನಿವಾರಣೆಯಾಗಿ ಸಹಜವರ್ಣದ ಹೊಸ ಜೀವಕೋಶಗಳು ಕಾಣತೊಡಗುತ್ತವೆ.

ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಇದು ಚರ್ಮದ ಜೀವಕೋಶಗಳನ್ನು ಸಡಿಲಿಸಿ ಗಾಢವಾಗಿದ್ದ ವರ್ಣದ್ರವ್ಯ ಕರಗಲು ನೆರವಾಗುತ್ತದೆ. ಅಲ್ಲದೇ ಮಜ್ಜಿಗೆಯಲ್ಲಿ ಮೊಡವೆಗಳನ್ನು ಉಂಟುಮಾಡುವ ಸೂಕ್ಷ್ಮಾಣುಗಳನ್ನು ನಿವಾರಿಸಿ ಹೊರಚರ್ಮ ಉತ್ತಮ ಆರೋಗ್ಯದಿಂದಿರಲು ನೆರವಾಗುತ್ತದೆ.

ಲಿಂಬೆರಸವೂ ಒಂದು ಆಮ್ಲವಾಗಿದ್ದು ಚರ್ಮವನ್ನು ಬಿಳಿಚಿಸಲು ನೆರವಾಗುತ್ತದೆ. ಅಲ್ಲದೆ ಸೂರ್ಯನ ಪ್ರಭಾವದಿಂದ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳನ್ನು ಮತ್ತೆ ಮೊದಲಿನಂತಾಗಿಸಲು ಲಿಂಬೆಯ ಪೋಷಕಾಂಶಗಳು ನೆರವಾಗುತ್ತವೆ. ಸನ್‍ಟ್ಯಾನ್‍ ನಿವಾರಿಸಲು ಮನೆಯಲ್ಲಿಯೇ ಇದೆ ಮದ್ದುಗಳು

ತಯಾರಿಕಾ ವಿಧಾನ:

*ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ಮಿಶ್ರಣ ಮಾಡಿ ನಯವಾದ ಲೇಪನ ತಯಾರಿಸಿ.
*ಈ ಲೇಪನವನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ.
*ಸಂಜೆಯ ಹೊತ್ತಿನಲ್ಲಿ ಈಗ ತಾನೇ ತಣ್ಣೀರಿನಲ್ಲಿ ತೊಳೆದು ಒರೆಸಿಕೊಂಡು ಗಾಢವಾಗಿದ್ದ ಚರ್ಮದ ಭಾಗಗಳಿಗೆ ಈ ಲೇಪನವನ್ನು ತೆಳುವಾಗಿ ಹಚ್ಚಿ.
*ಸುಮಾರು ಇಪ್ಪತ್ತು ನಿಮಿಷ ಕಾಲ ಒಣಗಲು ಬಿಡಿ.
*ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಹಾಲಿನ ಅಂಶವಿರುವ ಸೋಪನ್ನು ಬಳಸಿ ತೊಳೆದುಕೊಳ್ಳಿ.
English summary

DIY Buttermilk And Oats Face Pack To Remove Sun Tan

The thought of spending the warm, sunny summer days lounging around on a beach sounds amazing, but you may hesitate to indulge in that because you may be afraid of sun tan and the possible damage it can do to your skin. So, if you are looking for a way to get rid of the sun tan effectively, you could try the homemade buttermilk and oats face pack, which can surely help you out! Recipe To Prepare The Face Pack
X
Desktop Bottom Promotion