For Quick Alerts
ALLOW NOTIFICATIONS  
For Daily Alerts

ಹಲ್ಲುಗಳು ಹಳದಿಯಾಗಿದೆಯೇ? ಈ ಮನೆ ಔಷಧ ಪ್ರಯತ್ನಿಸಿ ನೋಡಿ...

By Jaya Subramanya
|

ಹಲ್ಲು ಹಳದಿಯಾಗಿರುವುದು ಮುಜುಗರವನ್ನುಂಟು ಮಾಡುವ ಅಂಶವಾಗಿದೆ. ನಿಮ್ಮ ಸುಂದರವಾದ ಮುಖಾರವಿಂದಕ್ಕೆ ಕಪ್ಪು ಚುಕ್ಕೆಯಾಗಿ ನಿಮ್ಮ ಹಳದಿ ಹಲ್ಲು ಅಣಕಿಸಿದರೆ ಇದರಿಂದ ನಿಮ್ಮಲ್ಲಿ ಕೀಳರಿಮೆ ಉಂಟಾಗುವುದು ಸಹಜವೇ ಆಗಿದೆ. ಮನಸಾರೆ ನಗಲೂ ಆಗದೇ ಮಾತನಾಡಲೂ ಆಗದೇ ನಾವು ಕಷ್ಟಪಡುತ್ತೇವೆ. ನಮ್ಮ ಹಳದಿ ಹಲ್ಲಿನಿಂದ ನಾವು ಇನ್ನೊಬ್ಬರ ಅಪಹಾಸ್ಯಕ್ಕೆ ಒಳಗಾಗಬಾರದು ಎಂದೇ ನಾವು ಹಂಬಲಿಸುತ್ತೇವೆ. ಕ್ಷಣಮಾತ್ರದಲ್ಲಿ ಹಳದಿ ಹಲ್ಲುಗಳನ್ನು ಶುಭ್ರಶ್ವೇತ ವರ್ಣಕ್ಕೆ ತಿರುಗಿಸಿ!

ಅದಾಗ್ಯೂ ಹಲ್ಲು ಹಳದಿಯಾಗಲು ಕಾರಣ ನಾವು ಅವುಗಳನ್ನು ಚೆನ್ನಾಗಿ ಕಾಳಜಿ ಮಾಡದೇ ಇರುವುದರಿಂದಾಗಿದೆ. ನಿಯಮಿತವಾಗಿ ಬ್ರಷ್ ಮಾಡದೇ ಇರುವುದು, ಆಹಾರ ಸೇವನೆ ಮಾಡಿದ ನಂತರ ಬಾಯಿ ಮುಕ್ಕಳಿಸದೇ ಇರುವುದು, ವಯಸ್ಸಿನ ಪ್ರಭಾವ, ಧೂಮಪಾನ ಮೊದಲಾದ ಅಂಶಗಳು ಬಿಳಿಯಾದ ಹಲ್ಲನ್ನು ಹಳದಿಯಾಗಿಸುತ್ತವೆ. ನೈಸರ್ಗಿಕ ಬಿಳುಪಿನ ದಂತ ಪಂಕ್ತಿಗಾಗಿ ಸರಳ ಸಲಹೆಗಳು

ಹಾಗಿದ್ದರೆ ಮುತ್ತಿನಂತೆ ಹೊಳೆಯುವ ದಂತಪಂಕ್ತಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬ ಸಮಸ್ಯೆಗೆ ಇಲ್ಲಿ ಪರಿಹಾರವನ್ನು ನಾವು ನೀಡಲಿದ್ದೇವೆ. ಹಳದಿ ಹಲ್ಲಿಗೆ ಮಂಗಳ ಹಾಡುವ ಮನೆಮದ್ದುಗಳು

ಇದಕ್ಕೆ ನೀವು ಹೆಚ್ಚೇನು ಖರ್ಚು ಮಾಡಬೇಕಾಗಿಲ್ಲ. ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸುವುದರ ಮೂಲಕ ಹೊಳೆಯುವ ಬೆಳ್ಳಗಿನ ಹಲ್ಲನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಬನ್ನಿ ಆ ವಿಧಾನಗಳನ್ನು ಅನುಸರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಹಂತ 1

ಹಂತ 1

ಒಂದು ಪಾತ್ರೆಯಲ್ಲಿ ಮುಕ್ಕಾಲು ಪಾಲು ಬೇಕಿಂಗ್ ಸೋಡಾ ತೆಗೆದುಕೊಳ್ಳಿ. ಕ್ರಿಸ್ಟಲ್ ಮತ್ತು ಆಸಿಡ್ ಬೇಕಿಂಗ್ ಸೋಡಾದಲ್ಲಿದ್ದು ನಿಮ್ಮ ಹಲ್ಲಿನ ಹಳದಿ ಪದರವನ್ನು ಇದು ಹೋಗಲಾಡಿಸಲು ನೆರವುಕಾರಿಯಾಗಿದೆ. ಇದು ಹಲ್ಲಿನ ಸಂರಕ್ಷಣೆಯನ್ನು ಮಾಡುತ್ತದೆ. ಆದ್ದರಿಂದ ನಿಯಮಿತವಾಗಿ ಇವುಗಳನ್ನು ಹಲ್ಲುಜ್ಜಲು ಬಳಸಿ.

ಹಂತ 2

ಹಂತ 2

ಬೇಕಿಂಗ್ ಸೋಡಾಗೆ 5 ಹನಿಗಳಷ್ಟು ಲಿಂಬೆ ರಸವನ್ನು ಸೇರಿಸಿಕೊಳ್ಳಿ ಮತ್ತು ಫೋರ್ಕ್ ಬಳಸಿಕೊಂಡು ಚೆನ್ನಾಗಿ ಮಿಶ್ರ ಮಾಡಿ. ಲಿಂಬೆ ರಸದಲ್ಲಿ ಕೂಡ ಆಂಟಿಬ್ಯಾಕ್ಟೀರಿಯಲ್ ಅಂಶಗಳಿದ್ದು, ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಂದು, ನಿಮ್ಮ ಬಾಯಿಯನ್ನು ತಾಜಾ ಮತ್ತು ವಾಸನೆರಹಿತವಾಗಿಸುತ್ತದೆ.

ಹಂತ 3

ಹಂತ 3

ಪರ್ಯಾಯವಾಗಿ ಈ ಮಿಶ್ರಣಕ್ಕೆ ಸ್ಟ್ರಾಬೆರ್ರಿ ತಿರುಳನ್ನು ನಿಮಗೆ ಸೇರಿಸಬಹುದಾಗಿದೆ. ನೈಸರ್ಗಿಕ ಎಂಜಿಮ್ ಸ್ಟ್ರಾಬೆರ್ರಿಯಲ್ಲಿದ್ದು ಇದನ್ನು ಮಾಲಿಕ್ ಆಸಿಡ್ ಎಂದು ಕರೆಯಲಾಗಿದೆ ಇದು ಹಲ್ಲಿನ ಕರೆಯನ್ನು ಹೋಗಲಾಡಿಸುತ್ತದೆ, ಎಲ್ಲವನ್ನೂ ಮಿಶ್ರ ಮಾಡಿ ಮತ್ತು ಕೆಂಪನೆಯ ರಸ ದೊರೆಯುವವರೆಗೂ ಮಿಶ್ರ ಮಾಡುತ್ತಿರಿ.

ಹಂತ 4

ಹಂತ 4

ಬಾಯನ್ನು ಶುದ್ಧ ನೀರಿನಿಂದ ಮುಕ್ಕಳಿಸಿ, ಟಿಶ್ಯೂವನ್ನು ಬಳಸಿಕೊಂಡು ಹಲ್ಲಿನಲ್ಲಿ ಉಳಿದಿರುವ ಲಾಲಾರಸವನಪದರವನ್ನು ಒರೆಸಿ ತೆಗೆಯಿರಿ.

ಹಂತ 5

ಹಂತ 5

ಹಳೆಯ ಬ್ರಶ್ ಅನ್ನು ತೆಗೆದುಕೊಂಡು ಪೇಸ್ಟ್‌ನಿಂದ ಹಲ್ಲುಜ್ಜಿಕೊಳ್ಳಿ. ನಂತರ ಈ ಮಿಶ್ರಣವನ್ನು ಹಲ್ಲುಗಳಿಗೆ ಹಚ್ಚಿಕೊಳ್ಳಿ. 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದಕ್ಕಿಂತ ಹೆಚ್ಚಿ ಸಮಯ ಇದನ್ನು ಹಲ್ಲಿನಲ್ಲಿರಿಸಬೇಡಿ. ಇದರಿಂದ ನೈಸರ್ಗಿಕ ಪದರ ನಾಶವಾಗುವ ಸಾಧ್ಯತೆ ಇದೆ.

ಹಂತ 6

ಹಂತ 6

ನಂತರ, ವೃತ್ತಾಕಾರವಾಗಿ ನಿಮ್ಮ ಹಲ್ಲುಗಳನ್ನು 1 ನಿಮಿಷಗಳ ಕಾಲ ಬ್ರಶ್ ಮಾಡಿ. ಉಗುರು ಬೆಚ್ಚನೆಯ ನೀರಿನಿಂದ ಬಾಯಿ ಮುಕ್ಕಳಿಸಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ. ನೆನಪಿರಲಿ ರಾತ್ರಿ ಮಲಗುವ ಮುನ್ನ ಇದನ್ನು ಮಾಡಿ

ಹಂತ 1

ಹಂತ 1

ನಿಮಗೆ ಹೆಚ್ಚಿನ ಸಮಯ ಇಲ್ಲ ಎಂದಾದಲ್ಲಿ, ಒಂದು ಕಪ್‌ನಲ್ಲಿ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. ತೆಂಗಿನೆಣ್ಣೆಯಲ್ಲಿ ಲಾರಿಕ್ ಆಸಿಡ್ ಇದ್ದು ಇದು ಹಲ್ಲಿನ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತದೆ ಇದು ಹಲ್ಲಿನ ಕಲೆಯನ್ನು ನಿವಾರಿಸುತ್ತದೆ.

ಹಂತ 2

ಹಂತ 2

ಸ್ವಲ್ಪ ನಿಮಿಷಗಳ ಕಾಲ ಎಡದಿಂದ ಬಲಕ್ಕೆ ಈ ದ್ರಾವಣವನ್ನು ಮುಕ್ಕಳಿಸಿ. ನಂತರ ಉಗಿಯಿರಿ. ಉಗುರು ಬೆಚ್ಚನೆಯ ನೀರಿನಿಂದ ಬಾಯಿ ಮುಕ್ಕಳಿಸಿ. ರುಚಿ ನಿಮಗೆ ಇಷ್ಟವಾಗಿಲ್ಲ ಎಂದಾದಲ್ಲಿ ಒಂದೆರಡು ತುಳಸಿ ಎಲೆಯನ್ನು ಜಗಿಯಿರಿ ಇದು ತ್ವರಿತವಾಗಿ ಬಾಯಿಯನ್ನು ತಾಜಾಗೊಳಿಸುತ್ತದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡಿರುವ ಹಲ್ಲನ್ನು ಬಿಳುಪಾಗಿಸುವ ವಿಧಾನವನ್ನು ಅನುಸರಿಸಿ ಮತ್ತು ನಿಮ್ಮ ಅನಿಸಿಕೆಯನ್ನು ನಮಗೆ ಬರೆಯಿರಿ.

English summary

Apply This 2-Ingredient Paste On Yellow Teeth & Say Hello To White Teeth!

Natural ingredients included in this herbal remedy for white teeth are - Baking Soda and Lemon Juice. Baking soda is mildly abrasive, which helps scrub teeth, removing any discolouration. Plus, it is alkaline, which helps restore the pH balance of your teeth. Now that you know how these natural ingredients for white teeth work, let's get down to the steps on how to whiten teeth naturally with this teeth whitening tip.
X
Desktop Bottom Promotion