For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಹಲ್ಲಿನ ಹೊಳಪಿಗೆ ಎಣ್ಣೆ-ಉಪ್ಪು ಬಳಸಿ ನೋಡಿ!

By Super
|

ನಗು ಎಲ್ಲವನ್ನು ತಿಳಿಸಿಬಿಡುತ್ತದೆ. ನಗುತ್ತಾ ಇದ್ದರೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ. ಆದರೆ ನಗುವಿನಲ್ಲಿ ಪ್ರಮುಖ ಪಾತ್ರ ವಹಿಸುವುದೇ ಹಲ್ಲುಗಳು. ಈ ಹಲ್ಲುಗಳು ಹೊಳೆಯುತ್ತಾ ಇದ್ದರೆ ಆಗ ನಗುವಿಗೆ ಮತ್ತಷ್ಟು ಕಳೆ ಬರುತ್ತದೆ. ಹಲ್ಲುಗಳು ಹೊಳೆಯುತ್ತಲಿದ್ದರೆ ಮುಖದ ಸೌಂದರ್ಯ ಕೂಡ ವೃದ್ಧಿಸುತ್ತದೆ. ಇದೇ ಹಲ್ಲುಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಕೂಡ ತುಂಬಾ ಮುಖ್ಯ. ಕೆಲವು ಮಂದಿಗೆ ಹುಟ್ಟಿನಿಂದಲೇ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಂಡಿರುತ್ತದೆ. ಆರೋಗ್ಯಕರ ಒಸಡುಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಟೂಥ್ ಪೌಡರ್!

2 Kitchen Ingredients Can Whiten Your Teeth In 2 Days!

ಇದರಿಂದ ಬಿಳಿ ಹಲ್ಲುಗಳು ಬರುವುದೇ ಇಲ್ಲ. ಇಂತಹ ಕಾರಣಗಳನ್ನು ಬದಿಗಿಟ್ಟರೆ ಕೆಟ್ಟ ಆಹಾರ ಕ್ರಮ, ಬಾಯಿಯ ಸ್ವಚ್ಛತೆಯನ್ನು ಕಾಪಾಡದೆ ಇರುವುದು, ಧೂಮಪಾನ, ಅತಿಯಾದ ಮದ್ಯ ಸೇವನೆ, ತಂಬಾಕು ಸೇವನೆ, ಅನುವಂಶೀಯತೆ, ಒಸಡಿನ ರೋಗಗಳು ಇತ್ಯಾದಿ ಹಲ್ಲಿನ ಆರೋಗ್ಯವನ್ನು ಕೆಡಿಸುತ್ತದೆ. ಇದರಿಂದ ನಮ್ಮ ಹಲ್ಲುಗಳು ತುಂಬಾ ಕೆಟ್ಟದಾಗಿ ಹಾಗೂ ಅನಾರೋಗ್ಯಕರವಾಗಿ ಕಾಣಿಸುತ್ತದೆ. ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ

ಹಲ್ಲುಗಳು ಬಿಳಿಯಾಗಿರದೆ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅಂತವರು ಫೋಟೋಗಳಿಗೆ ಪೋಸ್ ನೀಡಲು ಹೆದರುತ್ತಾರೆ. ಅವರಲ್ಲಿ ಯಾವುದೇ ರೀತಿಯ ಆತ್ಮವಿಶ್ವಾಸ ಕೂಡ ಇರುವುದಿಲ್ಲ. ಹಳದಿಗೊಂಡಿರುವ ಹಲ್ಲುಗಳನ್ನು ಸರಿಪಡಿಸಲು ವೈಜ್ಞಾನಿಕವಾದ ಕೆಲವೊಂದು ವಿಧಾನಗಳಿವೆ. ಆದರೆ ನೈಸರ್ಗಿಕವಾಗಿ ಇದನ್ನು ಸರಿಪಡಿಸಿಕೊಂಡರೆ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಲೇಸರ್ ಮೂಲಕ ಹಲ್ಲುಗಳನ್ನು ಬಿಳಿ ಮಾಡುವುದರಿಂದ ಕೆಲವರಿಗೆ ಅಡ್ಡಪರಿಣಾಮಗಳು ಕಾಣಿಸಿದೆ. ರಿಫೈಂಡ್ ಮಾಡದೆ ಇರುವ ಅಡುಗೆ ಎಣ್ಣೆ ಮತ್ತು ಉಪ್ಪನ್ನು ಬಳಸಿಕೊಂಡು ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬಹುದು. ಇದರಿಂದ ಯಾವುದೇ ಅಡ್ಡಪರಿಣಾಮ ಕೂಡ ಇಲ್ಲ. ಕ್ಷಣಮಾತ್ರದಲ್ಲಿ ಹಳದಿ ಹಲ್ಲುಗಳನ್ನು ಶುಭ್ರಶ್ವೇತ ವರ್ಣಕ್ಕೆ ತಿರುಗಿಸಿ!

ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳಿಗೊಳಿಸಲು ಬೇಕಾಗುವ ಸಾಮಗ್ರಿಗಳು

*ರಿಫೈಂಡ್ ಮಾಡದೆ ಇರುವ ಅಡುಗೆ ಎಣ್ಣೆ(ತೆಂಗಿನ ಎಣ್ಣೆ, ನೆಲಕಡಲೆ ಎಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆ) ಒಂದು ಚಮಚ
ಒಂದು ಚಮಚ ಉಪ್ಪು
*ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಬಳಸುತ್ತಿರುವ ಎಣ್ಣೆ ಚಿಕಿತ್ಸೆಯನ್ನು ಹಲ್ಲುಗಳನ್ನು ಬಿಳಿಗೊಳಿಸಲು ಬಳಸಬಹುದಾಗಿದೆ. ಎಣ್ಣೆಯನ್ನು ಹಲ್ಲುಗಳಿಗೆ ಹಚ್ಚಿ ಬಳಿಕ ಒರೆಸಿಕೊಂಡಾಗ ಹಲ್ಲುಗಳಲ್ಲಿರುವ ಕಲ್ಮಶ, ಬ್ಯಾಕ್ಟೀರಿಯಾಗಳನ್ನು ದೂರ ಮಾಡುತ್ತದೆ. *ಕಲ್ಮಶವನ್ನು ಹೊರಗೆ ಹಾಕುವುದರೊಂದಿಗೆ ಹಲ್ಲುಗಳು ಬಣ್ಣ ಕಳೆಯದಂತೆ ಮಾಡುತ್ತದೆ. ಇದರಿಂದ ಹಲ್ಲುಗಳು ಬಿಳಿಯಾಗಿರುತ್ತದೆ. ಉಪ್ಪಿನಲ್ಲಿರುವ ಕೆಲವೊಂದು ನೈಸರ್ಗಿಕ ಗುಣಗಳು ಹಲ್ಲಿನ ಮೇಲಿರುವ ಪದರಗಳನ್ನು ತೆಗೆದುಹಾಕುತ್ತದೆ. ಇದರಿಂದ ಹಲ್ಲುಗಳು ಮುತ್ತುಗಳಂತೆ ಹೊಳೆಯುತ್ತಿರುತ್ತದೆ.

ಇದನ್ನು ಮಾಡುವುದು ಹೇಗೆ?
*ಹೇಳಿದಷ್ಟು ಪ್ರಮಾಣದ ಸಾಮಗ್ರಿಯನ್ನು ತೆಗೆದುಕೊಳ್ಳಿ. ನಿಮ್ಮ ಬಾಯಿಯೊಳಗೆ ಇದನ್ನು ಹಾಕಿ. ಇದರ ಬಳಿಕ ಬಾಯಿ ಹಾಗೂ ಹಲ್ಲುಗಳನ್ನು ಎಣ್ಣೆ ಮತ್ತು ಉಪ್ಪಿನಿಂದ ತೊಳೆಯಿರಿ. ಸುಮಾರು 5 ನಿಮಿಷ ಹಲ್ಲುಗಳನ್ನು ತೊಳೆಯಿರಿ.
*ಈ ಮಿಶ್ರಣವು ಹೊಟ್ಟೆಯ ಒಳಗೆ ಹೋಗದಂತೆ ನೋಡಿಕೊಳ್ಳಿ. ಐದು ನಿಮಿಷದ ಬಳಿಕ ಈ ಮಿಶ್ರಣವನ್ನು ಉಗಿಯಿರಿ. ಬಳಿಕ ತಂಪು ನೀರಿನಿಂದ ಬಾಯಿ ತೊಳೆಯಿರಿ. ಅಂತಿಮವಾಗಿ ಹರ್ಬಲ್ ಟೂಥ್ ಪೇಸ್ಟ್ ನಿಂದ ಹಲ್ಲುಗಳನ್ನು ತೊಳೆಯಿರಿ.

English summary

2 Kitchen Ingredients Can Whiten Your Teeth In 2 Days!

They say a great smile can instantly make a person look more appealing. And what makes for a great smile? Yes, you are right, a set of healthy, white teeth! I am sure most of us, at some point, have looked at the flashy white smiles of celebrities and wondered how they managed to attain them.So, if you want a safe and effective method to whiten your teeth, then try the combination of unrefined cooking oil and salt, which can be made right at home!
X
Desktop Bottom Promotion