For Quick Alerts
ALLOW NOTIFICATIONS  
For Daily Alerts

ಎಷ್ಟೇ ಪರ್ಫ್ಯೂಮ್ ಹಾಕಿದರೂ ಬೆವರಿನ ದುರ್ಗಂಧ ನಿಲ್ಲುವುದಿಲ್ಲವೇ?

By Arshad
|

ಬೆವರುಸಾಲೆ ಮತ್ತು ಅದರಿಂದ ಎದುರಾಗುವ ದುರ್ಗಂಧದಿಂದ ಪಾರಾಗಲು ಇಂದು ಮಾರುಕಟ್ಟೆಯಲ್ಲಿ ವಿವಿಧ ಸುಗಂಧಪೂರಿತ ದ್ರವಗಳು ಅಥವಾ ಡಿಯೋಡರೆಂಟ್‌ಗಳು ಲಭ್ಯವಿವೆ. ಬೆವರ ದುರ್ಗಂಧ ಅತಿ ಹೆಚ್ಚಾಗಿ ಹೊಮ್ಮುವ ಸ್ಥಳವೆಂದರೆ ಕಂಕುಳು. ಅಂತೆಯೇ ಬೆನ್ನು, ಎದೆ, ಕುತ್ತಿಗೆಗಳಲ್ಲೂ ಬೆವರಿನ ಮೂಲಕ ದುರ್ಗಂಧ ಹೊಮ್ಮುತ್ತದಾದರೂ ಕಂಕುಳಿನಷ್ಟಿಲ್ಲ.

ದುರ್ಗಂಧ ಇನ್ನೊಂದು ಅಂಗವೆಂದರೆ ಪಾದ. ಆದರೆ ಈ ಬೆವರು ಕಾಲುಚೀಲಕ್ಕೆ ಅಂಟಿಕೊಂಡಿರುವುದರಿಂದ ಕಾಲುಚೀಲ (ಸಾಕ್ಸ್) ತೆಗೆಯುವವರೆಗೂ ತೊಂದರೆ ನೀಡುವುದಿಲ್ಲ. (ತೆಗೆದಾಕ್ಷಣ ಮಾತ್ರ ಹತ್ತಿರ ನಿಲ್ಲುವಂತಿಲ್ಲ).

ಈ ಡಿಯೋಡರೆಂಟ್‍‌ಗಳನ್ನು (ಪರ್ಫ್ಯೂಮ್ ಅಥವಾ ಸುಗಂಧದ್ರವ್ಯ) ಕಂಕುಳು, ಬೆನ್ನು ಮತ್ತು ಎದೆಗೆ ಹಚ್ಚಿಕೊಂಡರೂ ಒಂದೆರಡು ಗಂಟೆಗಳ ಬಳಿಕ ನಿಧಾನವಾಗಿ ಇದರ ಪ್ರಭಾವ ಕಡಿಮೆಯಾಗುತ್ತಾ ಬಂದು ದುರ್ಗಂಧ ಮತ್ತೊಮ್ಮೆ ಹೊಮ್ಮಲು ಪ್ರಾರಂಭವಾಗುತ್ತದೆ. ಘಮ ಘಮಿಸುವ ಸುಗಂಧ ದ್ರವ್ಯವನ್ನು ಮನೆಯಲ್ಲೇ ತಯಾರಿಸಿ!

ಸಾಮಾನ್ಯವಾಗಿ ಯಾವುದೇ ಸುವಾಸನೆಯ ಪ್ರಸಾಧನವನ್ನು ಹಚ್ಚಿಕೊಂಡ ಎರಡು ಗಂಟೆಯ ಬಳಿಕ ಇದರ ಪ್ರಭಾವ ಇಲ್ಲವಾಗುತ್ತದೆ. ಹಾಗಾದರೆ ಕೊಂಚ ಹೆಚ್ಚಿನ ಕಾಲ ಬರುವಂತೆ ಮಾಡಲು ಏನು ಮಾಡುವುದು? ಹೆಚ್ಚಿನವರು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚಿಮುಕಿಸುವುದು ಎಂಬ ಅಭಿಪ್ರಾಯ ಹೊಂದಿರುತ್ತಾರೆ.

ಆದರೆ ಇದರಿಂದ ಹೊಮ್ಮುವ ಸುವಾಸನೆ ಅಧಿಕವಾಗುತ್ತದೆಯೇ ಹೊರತು ಅಧಿಕ ಸಮಯ ಬರುವುದಿಲ್ಲ. ಇದಕ್ಕೆ ಒಂದು ಸುಲಭ ಉಪಾಯವಿದೆ. ಕಂಕುಳ ಸಹಿತ ದೇಹದ ಇತರ ಭಾಗಗಳಲ್ಲಿ ಕೊಂಚವಾಗಿ ಸಿಂಪಡಿಸಿಕೊಂಡರಾಯಿತು. ಬನ್ನಿ ಇನ್ನಷ್ಟು ಮಾಹಿತಿನ್ನು ಮುಂದೆ ಓದಿ.. ನಿಮ್ಮ ದೇಹದ ದುರ್ಗಂಧವನ್ನು ಹೋಗಲಾಡಿಸುವುದು ಹೇಗೆ?

ಕಿವಿಗಳ ಹಿಂಭಾಗ

ಕಿವಿಗಳ ಹಿಂಭಾಗ

ಹೊರಕಿವಿಯ ಹಿಂಭಾಗದ ಕೂದಲಿಲ್ಲದ ಸ್ಥಳ ಈ ಪ್ರಸಾಧನವನ್ನು ಹಚ್ಚಿಕೊಳ್ಳಲು ಉತ್ತಮವಾಗಿದೆ. ಏಕೆಂದರೆ ಈ ಮೂಳೆಯ ಕೆಳಗೆ ಕಿವಿಯ ಹಿಂಭಾಗವಿರುವುದರಿಂದ ಇದು ಕೊಂಚವೇ ಬಿಸಿಯಾಗುತ್ತದೆ. ಈ ಬಿಸಿ ಡಿಯೋಡರೆಂಟ್ ಸ್ಟಿಕ್ ಮೂಲಕ ಹಚ್ಚಿದ ಪ್ರಸಾಧನವನ್ನು ನಿಧಾನವಾಗಿ ಆವಿಯಾಗಲು ನೆರವು ನೀಡುತ್ತದೆ. ಆದರೆ ಇದರ ಪ್ರಮಾಣ ಅಲ್ಪವಾಗಿದ್ದು ಪೂರ್ಣವಾಗಿ ಆವಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಪರಿಣಾಮವಾಗಿ ಮೈ ದುರ್ಗಂಧ ಹೆಚ್ಚಿನ ಹೊತ್ತು ಹೊರಬರದಂತೆ ನೋಡಿಕೊಳ್ಳುತ್ತದೆ.

ತಲೆಗೂದಲು

ತಲೆಗೂದಲು

ಕೆಲವು ಪ್ರಸಾಧನಗಳ ತಯಾರಕರು ತಮ್ಮ ಉತ್ಪನ್ನ ಬಹುಕಾಲ ಸುವಾಸನೆ ಸೂಸುತ್ತಿರುತ್ತದೆ ಎಂದು ಪ್ರಚಾರ ಮಾಡುತ್ತಾರೆ. ಆದರೆ ಬಹುಕಾಲ ಎಂದರೆ ಎರಡು ಗಂಟೆಗೆ ಬದಲಾಗಿ ಎರಡೂಕಾಲು ಅಥವಾ ಎರಡೂವರೆ ಗಂಟೆ ಬರಬಹುದೇ ವಿನಃ ಇಡಿಯ ದಿನವಲ್ಲ. ಆದರೆ ಈ ಅವಧಿಯನ್ನು ಹೆಚ್ಚಿಸಲು ಸ್ನಾನ ಮಾಡಿ ಕೂದಲು ಒಣಗಿಸಿಕೊಂಡ ಬಳಿಕ ಕೊಂಚ ಡಿಯೋಡರೆಂಟ್ ಸ್ಪ್ರೇ ತಲೆಗೂದಲಿಗೆ ಉಪಯೋಗಿಸಿ ಬಾಚಿಕೊಂಡರೆ ಹೆಚ್ಚಿನ ಹೊತ್ತು ಸುವಾಸನೆ ಹೊಮ್ಮುತ್ತಿರುತ್ತದೆ.

ಮೊಣಕೈಯ ಹಿಂಭಾಗ

ಮೊಣಕೈಯ ಹಿಂಭಾಗ

ಕೆಲವು ಪ್ರಸಾಧನಗಳು ಆರ್ದ್ರತೆ ಹೆಚ್ಚಿಸುವ ದ್ರವ (moisturiser) ದಿಂದ ಕೂಡಿದ್ದು ಈ ಪ್ರಸಾಧನವನ್ನು ಮೊಣಕೈಯಿಂದ ಕಂಕುಳವರೆಗಿನ ತೋಳಿನ ಹಿಂಭಾಗ (ಅಂದರೆ ಕೈ ಕೆಳಗಿದ್ದಾಗ ಎದೆಯ ಬದಿಯನ್ನು ತಾಕುವ ತೋಳಿನ ಭಾಗ) ಕ್ಕೆ ಡಿಯೋಡೋರೆಂಟ್ ಸ್ಟಿಕ್ ಹಚ್ಚುವುದರಿಂದ ಸುವಾಸನೆ ಬಹಳ ಕಾಲ ಇರುತ್ತದೆ.

ವಕ್ಷಸ್ಥಳ

ವಕ್ಷಸ್ಥಳ

ಮಹಿಳೆಯರಲ್ಲಿ ಕೆಲವರಿಗೆ ಎದೆಯ ನಡು ಮತ್ತು ಕೆಳಭಾಗದಲ್ಲಿ ಹೆಚ್ಚು ಬೆವರು ಹರಿಯುತ್ತದೆ. ಇದನ್ನು ತಡೆಯಲು ಡಿಯೋಡರೆಂಟ್ ಸ್ಪ್ರೇ ಅನ್ನು ವಕ್ಷಸ್ಥಳದ ಕೆಳಭಾಗದಲ್ಲಿ ಕೆಲವು ಬಾರಿ ಚಿಮುಕಿಸಿ. ಇದರಿಂದ ಬೆವರು ಹರಿಯುವುದು ಕಡಿಮೆಯಾಗಿ ದುರ್ಗಂಧ ಕಡಿಮೆಯಾಗುವ ಜೊತೆಗೇ ಬೆವರು ಹರಿದು ಬಟ್ಟೆಗಳಿಗೆ ಅಂಟಿಕೊಂಡು ನಿಮ್ಮ ನೆಚ್ಚಿನ ಬಟ್ಟೆಗಳ ಅಂದಗೆಡಿಸುವುದನ್ನು ತಪ್ಪಿಸಬಹುದು.

ಪಾದ

ಪಾದ

ಒಂದು ವೇಳೆ ನಿಮ್ಮ ಪಾದ ಬಹುವಾಗಿ ಬೆವರು ಸೂಸುತ್ತಿದ್ದರೆ ಬೆವರನ್ನು ತಡೆಯುವ ಪ್ರಸಾದನವನ್ನು (antiperspirant) ಕೆಲವು ನಿಮಿಷಗಳ ಅಂತರದಲ್ಲಿ ನಾಲ್ಕಾರು ಬಾರಿ ಚಿಮುಕಿಸಿ. ಆದರೆ ಸುಮಾರು ಹತ್ತು ನಿಮಿಷಗಳವೆರೆಗೂ ಅದನ್ನು ಒಣಗಲು ಬಿಡುವುದು ಅವಶ್ಯ. ಬಳಿಕ ಕಾಲುಚೀಲ ಧರಿಸಿ.

ಸಲಹೆ

ಸಲಹೆ

1) ಪ್ರತಿದಿನ ಹೊಸ ಕಾಲುಚೀಲವನ್ನೇ ಧರಿಸಬೇಕು. ಸೋಮಾರಿತನದಿಂದ ನಿನ್ನೆಯ ಕಾಲುಚೀಲ ಧರಿಸಿದರೆ ದುರ್ಗಂಧ ನಾಲ್ಕು ಪಟ್ಟು ಹೆಚ್ಚುವುದು.

2) ಡಿಯೋಡರೆಂಟ್ ಸ್ಪ್ರೇ ಮಾಡುವಾಗ ಹತ್ತಿರದಿಂದ ಸ್ಪ್ರೇ ಮಾಡಬಾರದು. ಕನಿಷ್ಟ ಹದಿನೈದು ಸೆಂಟಿಮೀಟರ್ ಅಂತರವಿರಬೇಕೆಂದು ಅಮೇರಿಕಾದ National Center for Biotechnology Information ಶಿಫಾರಸ್ಸು ಮಾಡುತ್ತದೆ.

3) ಬೆವರು ಹೆಚ್ಚು ಹರಿಯುವವರು ಪ್ರತಿದಿನ ಎರಡು ಬಾರಿ (ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮೊದಲು ಮತ್ತು ಹಿಂದಿರುಗಿದ ಬಳಿಕ) ಸ್ನಾನ ಮಾಡುವುದು ವಿಹಿತ. ಡಿಯೋಡೋರೆಂಟುಗಳನ್ನು ಸಂಜೆಯ ಸ್ನಾನದ ಬಳಿಕ ಉಪಯೋಗಿಸಬೇಡಿ.

ಸಲಹೆ

ಸಲಹೆ

4)ಸೊಂಟದ ಕೆಳಭಾಗ ಮತ್ತು ಜನನಾಂಗಗಳ ಬಳಿ ಡಿಯೋಡರೆಂಟ್ ಗಳನ್ನು ಉಪಯೋಗಿಸದಿರುವುದು ಉತ್ತಮ. ಏಕೆಂದರೆ ಈ ಸ್ಥಳ ಅತಿ ಸಂವೇದನಾಶೀಲವಾದುದರಿಂದ ಡಿಯೋಡರೆಂಟ್‌ನ ಬಳಕೆ ನಿಧಾನವಾಗಿ ಈ ಸಂವೇದನೆಯನ್ನು ಕ್ಷೀಣಿಸುತ್ತದೆ. ವಿಶೇಷವಾಗಿ ಮಹಿಳೆಯರು ಡಿಯೋಡರೆಂಟ್‌ನಿಂದ ದೂರವಿದ್ದು ಸೂಕ್ಷ್ಮ ಪ್ರದೇಶದ ನೈರ್ಮಲ್ಯ ಕಾಪಾಡಲು ಲಭ್ಯವಿರುವ ಮತ್ತು ವೈದ್ಯರು ಸಲಹೆ ನೀಡಿದ ವಿಶೇಷ ಪೌಡರ್ ಅಥವಾ ಔಷಧಿಗಳನ್ನೇ ಬಳಸಿ.

5)ನಿಮ್ಮ ಬೆವರುವಿಕೆಗೆ ತಕ್ಕ ಪ್ರಮಾಣದಲ್ಲಿ ಮಾತ್ರ, ಹಾಗೂ ಅಗತ್ಯವಿರುವ ದಿನಗಳಂದು ಮಾತ್ರ ಉಪಯೋಗಿಸಿ. ಹೆಚ್ಚು ಪ್ರಮಾಣ ಅಥವಾ ರಜಾದಿನಗಳಲ್ಲಿ ಬಳಸದಿರುವುದು ಉತ್ತಮ.

English summary

Weird Places To Spray Deodorant

Well, your beauty routine can't be complete without spraying on some deodorant; say goodbye to body odour. When it comes to the aspect of where to apply deodorant, you would first say 'armpits' as this is the only place where we generally prefer to use a perfume. To smell good throughout the day, read on to know how to apply deodorant spray and where to put deodorant on. 
X
Desktop Bottom Promotion