For Quick Alerts
ALLOW NOTIFICATIONS  
For Daily Alerts

ಮನೆಮದ್ದು ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ

|

ದೈನ೦ದಿನ ಬಳಕೆಯ ಉತ್ಪನ್ನಗಳಲ್ಲಿರಬಹುದಾದ ಹಾನಿಕಾರಕ ರಾಸಾಯನಿಕಗಳು ಹಾಗೂ ಅವುಗಳಿ೦ದಾಗಬಹುದಾದ ಆರೋಗ್ಯ ಸ೦ಬ೦ಧಿ ದುಷ್ಪರಿಣಾಮಗಳ ಕುರಿತ೦ತೆ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಲಾರ೦ಭಿಸಿದ೦ತೆ, ನಮ್ಮಲ್ಲನೇಕರು ಸಾಧ್ಯವಾದಷ್ಟು ರಾಸಾಯನಿಕಗಳಿ೦ದೊಡಗೂಡಿದ ಗೃಹಬಳಕೆಯ ಉತ್ಪನ್ನಗಳ ಬಳಕೆಯಿ೦ದ ಕಾಲಕ್ರಮೇಣವಾಗಿ ಎಲ್ಲಾ ಬಗೆಯ ನೈಸರ್ಗಿಕ ಉತ್ಪನ್ನಗಳ ಬಳಕೆಯತ್ತ ವಾಲತೊಡಗಿದ್ದಾರೆ. ಅದು ಮನೆಯಲ್ಲಿಯೇ ತಯಾರಿಸಿದ ಲೋಶನ್‌ಗಳು, ಶಾ೦ಪೂಗಳು, ಹಲ್ಲನ್ನು ನೈಸರ್ಗಿಕವಾಗಿ ಬಿಳುಪಾಗಿಸುವ ಮನೆಮದ್ದಾಗಿರಬಹುದು. ಮುತ್ತಿನಂತಹ ಸುಂದರ ಹಲ್ಲುಗಳಿಗಾಗಿ ಡಯಟ್ ಸಲಹೆಗಳು

ಸಾಮಾನ್ಯವಾಗಿ, ಇತ್ತೀಚೆಗೆ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆಯ ಟೂಥ್‍ಪೇಸ್ಟ್ ಬಳಸಿದರೂ ಪ್ರಯೋಜನವಾಗುವುದಿಲ್ಲ. ಹಾಗಾಗಿ ಇವೆಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮನೆಮದ್ದಿನ ಮೊರೆ ಹೋಗುವುದೇ ಸೂಕ್ತ. ಹೀಗಾಗಿ ಬೋಲ್ಡ್ ಸ್ಕೈ ಇಂದು ನಿಮ್ಮ ಸು೦ದರವಾದ ದ೦ತಪ೦ಕ್ತಿಯನ್ನು ಹಳದಿ ಬಣ್ಣದಿ೦ದ ಲಕಲಕನೆ ಹೊಳೆಯುವ೦ತಹ ಶುಭ್ರ ಶ್ವೇತವರ್ಣಕ್ಕೆ ತಿರುಗಿಸಲು ನೆರವಾಗಬಲ್ಲ ಮಾರ್ಗೋಪಾಯಗಳನ್ನು ನೀಡಿದೆ, ಮುಂದೆ ಓದಿ..

ತುಳಸಿ ಎಲೆ ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ

ತುಳಸಿ ಎಲೆ ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ

ತುಳಸಿ ಎಲೆಯು ಸಾಮಾನ್ಯವಾಗಿ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆಸಕ್ತಿಕರವಾಗಿರುವುದೇನೆಂದರೆ, ಅದು ಅರೋಗ್ಯಕರ ಬಿಳಿ ಹಲ್ಲುಗಳನ್ನು ಹೊಂದಿರುವುದಕ್ಕೂ ಕೂಡ ಒಳ್ಳೆಯದು. ತುಳಸಿ ಎಲೆಯನ್ನು ಕೇವಲ ಬಾಯಿಯ ಅರೋಗ್ಯ ಆರೈಕೆಯಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಹಲ್ಲುಗಳನ್ನು ಬಹಳ ಅಗತ್ಯವಾದ ಹೊಳೆಯುವ ಹಲ್ಲುಗಳನ್ನಾಗಿ ಮಾಡುವುದೇ ಅಲ್ಲದೆ ಪೈಯೋರಿಯಾ ಅಥವ ಒಸಡುಗಳ ರಕ್ತಸ್ರಾವವನ್ನು ರಕ್ಷಿಸಿ ಅನೇಕ ದಂತ ಸಮಸ್ಯೆಗಳಿಗೆ ಪರಿಹಾರಕೊಡುತ್ತದೆ. ಆಯುರ್ವೇದದಲ್ಲಿ ತುಳಸಿ ಎಲೆಯನ್ನು ನಿಮ್ಮ ಹಳದಿ ಹಲ್ಲುಗಳಿಗೆ ಬಳಸಿಕೊಳ್ಳುವುದಕ್ಕೆ ಅನೇಕ ವಿಧಾನಗಳಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನೆಯಲ್ಲಿ ತಯಾರಿಸಬಹುದಾದ ಹಲ್ಲು ಪುಡಿ

ಮನೆಯಲ್ಲಿ ತಯಾರಿಸಬಹುದಾದ ಹಲ್ಲು ಪುಡಿ

*ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ನೆರಳಲ್ಲಿ ಇಟ್ಟು ಒಣಗಿಸಿ

*ಒಮ್ಮೆ ತುಳಸಿ ಎಲೆಗಳು ಸಂಪೂರ್ಣವಾಗಿ ಒಣಗಿದ ಮೇಲೆ, ಅದನ್ನು ಗ್ರೈಂಡ್ ಮಾಡಿ ಪುಡಿಮಾಡಿ

*ಈ ಪುಡಿಯನ್ನು ನಿಮ್ಮ ಹಲ್ಲುಗಳನ್ನು ಬ್ರಶ್ ಮಾಡಲು ಬಳಸಿ.

*ನಿಮ್ಮ ಬೆರಳಿನಿಂದ ಕೂಡ ತುಳಸಿ ಪುಡಿಯಿಂದ ಹಲ್ಲುಗಳನ್ನು ಉಜ್ಜಬಹುದು ಅಥವ *ತುಳಸಿ ಪುಡಿಯನ್ನು ನಿಮ್ಮ ಎಂದಿನ ಟೂತ್ ಪೇಸ್ಟ್ ಜೊತೆ ಮಿಶ್ರಣಮಾಡಿ ಬಳಸಲೂ ಬಹುದು.

ಅಡುಗೆ ಸೋಡಾ ಬಳಸಿ

ಅಡುಗೆ ಸೋಡಾ ಬಳಸಿ

ಅಡುಗೆ ಸೋಡಾ ಹಳದಿ ಹಲ್ಲುಗಳು ಬಿಳುಪಾಗಲು ಬಹಳ ಹಿಂದಿನಿಂದಲೂ ಬಳಸಿರುತ್ತಾರೆ. ಮತ್ತು ಇದು ಪರಿಣಾಮಕಾರಿ, ಅತ್ಯಂತ ಪರಿಣಾಮಕಾರಿ! ಆದರೆ ಈ ಅಡಿಗೆಸೋಡಾ ಬಳಸಿದಾಗ ಹಲ್ಲಿಗೆ ಅದರಿಂದಾಗುವ ಹಾನಿಯನ್ನು ನೀವು ತಿಳಿದುಕೊಳ್ಳಬೇಕು. ಅಡಿಗೆಸೋಡಾನಲ್ಲಿರುವ ಸವೆಯುವ ಗುಣದಿಂದ ಹಲ್ಲುಗಳ ಮೇಲಿನ ಕವಚವನ್ನು ಉಜ್ಜುವಾಗ ಕ್ರಮೇಣ ತೆಗೆದುಹಾಕಿಬಿಡುತ್ತದೆ. ಆದರೆ ಈ ಸವೆಯುವ ಗುಣದಿಂದ ಪ್ರಚಲಿತ ಕಲೆಗಳು ಮತ್ತು ಹಲ್ಲುಗಳ ಮೇಲಣ ಲೋಳೆಯಂಥ ನಿಕ್ಷೇಪವನ್ನು ತೆಗೆಯಲು ಸಹಕಾರಿಯಾಗಿದೆ.

ಅಡುಗೆ ಸೋಡಾ ಬಳಸಿ

ಅಡುಗೆ ಸೋಡಾ ಬಳಸಿ

ಅಡುಗೆಸೋಡ ಜೊತೆಗೆ ಲಿಂಬೆ ರಸ ಬೆರಸಿ ಬಳಸಿದರೆ ಲಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲ ಕಲ್ಲಿನ ಕವಚದಲ್ಲಿರುವ ಕ್ಯಾಲ್ಸಿಯುಮ್ ಅನ್ನು ಬೇರ್ಪಡಿಸಿ ಹಲ್ಲುಗಳು ಮತ್ತೂ ಸವೆದುಹೋಗಿ ನಿಮ್ಮ ಹಲ್ಲುಗಳ ಬಿಳುಪು ಮತ್ತೂ ಹೆಚ್ಚಾಗಿ ಮಾಡುತ್ತದೆ. ಅಡಿಗೆಸೋಡ ಕೂಡಲೇ ಬಿಳುಪಾಗಿ ಮಾಡಿದರೂ ಅದರ ದೀರ್ಘಕಾಲದ ಬಳಸುವಿಕೆಯಿಂದ ದಂತ ಕವಚಕ್ಕೆ ಅಪಾಯಕಾರಿಯಾಗಬಹುದು. ಆದಾಗ್ಯೂ ನೀವು ಅಡಿಗೆಸೋಡ ಬಳಸಲು ನಿರ್ಧರಿಸಿದ್ದರೆ, ಹಳದಿ ಹಲ್ಲಿಗೆ ಪರಿಹಾರವಾಗಿ ಅಡಿಗೆ ಸೋಡ, ಲಿಂಬೆ ರಸ ಮತ್ತು ಉಪ್ಪಿನ ಮಿಶ್ರಣದಿಂದ ಪೇಸ್ಟ್ ಮಾಡಿಕೊಂಡು ಬಳಸಿ.

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ಒಂದು ಲಿಂಬೆಹಣ್ಣಿನ ಸಿಪ್ಪೆ ತೆಗೆದುಕೊಂಡು ನಿಮ್ಮ ಹಲ್ಲುಗಳ ಮೇಲೆ 1/2 ದಿಂದ 1 ನಿಮಿಷದವರೆಗೆ ಮಾತ್ರ ಉಜ್ಜಿ ನಂತರ ನೀರಿನಿಂದ ತೊಳೆದುಕೊಳ್ಳಿ. ಒಂದು ಚಮಚ ಲಿಂಬೆರಸಕ್ಕೆ ಒಂದು ಚಮಚ ನೀರು ಬೆರಸಿ: ಅದನ್ನು ಬಳಸಿ ನಿಮ್ಮ ಹಲ್ಲುಗಳನ್ನು ಉಜ್ಜಿ. ನೀರಿನಿಂದ ತೊಳೆದುಕೊಂಡ ನಂತರ ನಿಮ್ಮ ಮಾಮೂಲು ಟೂತ್ ಪೇಸ್ಟಿನಿಂದ ಬ್ರಶ್ ಮಾಡಿ.

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ಲಿಂಬೆರಸವನ್ನು ನೀರುಬೆರಸದೇ ಮಾತ್ರ ಬಳಸಬೇಡಿ. ಯಾವಾಗಲೂ ಹಲ್ಲು ಉಜ್ಜುವ ಮೊದಲು ಲಿಂಬೆ ರಸಕ್ಕೆ ನೀರು ಬೆರಸಿಯೇ ಬಳಸಿ. ಇಲ್ಲದಿದ್ದರೆ ಅದರಲ್ಲಿರುವ ಪ್ರಬಲಶಕ್ತಿಯ ಆಮ್ಲವು ಹಲ್ಲುಗಳ ಮೆಲಿನ ದಂತಕವಚ ಮತ್ತು ಹಲ್ಲಿನ ಭಾಗವಾದ ಕ್ಯಾಲ್ಸಿಯುಮ್ಮಿಗೆ ಹಾನಿಯುಂಟುಮಾಡಬಹುದು. ನಿಮ್ಮ ದಂತ ಕವಚದ ಮೆರಗು ಉಳಿಸಿಕೊಳ್ಳಬೇಕಾದಲ್ಲಿ ಲಿಂಬೆಹಣ್ಣಿನ ರಸವನ್ನು ವಾರದಲ್ಲಿ ಎರಡುಬಾರಿಗಿಂತಾ ಹೆಚ್ಚು ಬಳಸಬೇಡಿ.

ಕಹಿ ಬೇವು

ಕಹಿ ಬೇವು

ಕಹಿ ಬೇವು ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ನಿಮ್ಮ ಹಳದಿ ದ೦ತಪ೦ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

English summary

Ways to Naturally Whiten Your Teeth

Your teeth are one of the first things people notice. They are a sign of health as well as confidence. When making a first impression, having teeth that look like you don’t brush them can send a signal that you don’t really care about yourself. Who doesn’t want to have a beautiful smile with white sparkling teeth? The good news is I have 6 ways to naturally whiten teeth and some tips on How to Whiten yellow discolored teeth.
X
Desktop Bottom Promotion