For Quick Alerts
ALLOW NOTIFICATIONS  
For Daily Alerts

ಅಂದದ ಉಗುರಿನ ಆರೈಕೆಗೆ ಸರಳ ಮಾರ್ಗೋಪಾಯ

|

ನಮ್ಮ ದೇಹದ ಅಂಗಾಂಗಗಳಲ್ಲಿ ಉಗುರಿಗೆ ಕೂಡ ಪ್ರಮುಖ ಮಹತ್ವವಿದ್ದು ಇವುಗಳ ಕಾಳಜಿಯನ್ನು ದೇಹದ ಇತರ ಅಂಗಾಂಗಗಳ ರೀತಿಯಲ್ಲೇ ನಾವು ಮಾಡಬೇಕು. ಕೆಲವೊಮ್ಮೆ ದೇಹದಲ್ಲಿ ಉಂಟಾಗುವ ವೈಪರೀತ್ಯಗಳು ಕೂಡ ಉಗುರಿನ ಪೋಷಣೆಯಲ್ಲಿ ಕೊರತೆಯನ್ನುಂಟು ಮಾಡುತ್ತವೆ, ಉದಾಹರಣೆಗೆ ರಕ್ತದ ಕೊರತೆ, ಬಣ್ಣ ಹಳದಿಯಾಗುವಿಕೆ, ಪೋಷಕಾಂಶದ ಕೊರತೆ ಮೊದಲಾದ ಕೊರತೆಗಳನ್ನು ನಿಮ್ಮ ಉಗುರು ಎದುರಿಸಬಹುದು.

ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ವೈದ್ಯರು ಕಣ್ಣು, ನಾಲಿಗೆಯನ್ನು ಗಮನವಿಟ್ಟು ನೋಡಿದಂತೆಯೇ ಉಗುರುಗಳನ್ನೂ ಗಮನವಿಟ್ಟು ನೋಡಿ ದೇಹದಲ್ಲಿ ಯಾವ ಪೋಷಕಾಂಶ ಅಥವಾ ಖನಿಜ ಕಡಿಮೆಯಾಗಿದೆ ಎಂದು ಗುರುತಿಸಬಲ್ಲರು. ಹಾಗಾಗಿ ಉಗುರುಗಳು ದೇಹದ ಆರೋಗ್ಯವನ್ನು ತಿಳಿಸುವ ಮಾಪಕವೂ ಹೌದು. ಕಳೆಗುಂದಿದ ಉಗುರುಗಳು ದೇಹದಲ್ಲಿ ಪೋಷಕಾಂಶದ ಕೊರತೆ, ವಿಟಮಿನ್‌ಗಳ ಕೊರತೆ ಅಥವಾ ಏರುಪೇರು, ವಿವಿಧ ಚರ್ಮದ ವ್ಯಾಧಿಗಳು, ಮಾದಕ ದ್ರವ್ಯಗಳ ಪ್ರಭಾವ ಮೊದಲಾದ ಸೂಚನೆಗಳನ್ನು ನೀಡಬಲ್ಲವು. ಉಗುರು ಕತ್ತರಿಸುವುದು ಕೂಡ ಒಂದು ಕಲೆ!

ಸಾಮಾನ್ಯವಾಗಿ ಉಗುರುಗಳನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು ಹಾಗೂ ಪ್ರತಿ ವಿಧಕ್ಕೂ ಪ್ರತ್ಯೇಕವಾದ ಆರೈಕೆಯ ಅಗತ್ಯವಿದೆ.
*ಸಾಮಾನ್ಯವಾದ ಆರೋಗ್ಯವಂತ ಉಗುರು - ಹೆಚ್ಚಿನ ವಿಶೇಷ ಆರೈಕೆಯ ಅಗತ್ಯವಿಲ್ಲ.
*ಒಣ ಉಗುರು - ಇದಕ್ಕೆ ಆಲಿವ್ ಎಣ್ಣೆಯನ್ನು ಹಚ್ಚುವ ಅಗತ್ಯವಿದೆ. ನಿಮ್ಮ ಅಂದದ ಉಗುರಿಗೆ ಮನೆಮದ್ದಿನ ಆರೈಕೆ
*ಬಿರುಕುಬಿಟ್ಟ ಉಗುರು-ಹಲವು ಪೋಷಕಾಂಶಗಳ ಅಗತ್ಯವಿದೆ, ಇದಕ್ಕಾಗಿ ವೈದ್ಯಕೀಯ ಸಲಹೆ ಅಗತ್ಯ.
*ಅತಿ ಮೆದುವಾದ ಉಗುರು-ನೀರಿನ ಅಂಶ ಜಾಸ್ತಿಯಾಗಿರುವ ಕಾರಣ ಉಗುರಿಗೆ ನೀರು ತಾಗಿಸುವುದನ್ನು ಕಡಿಮೆ ಮಾಡಬೇಕು. ನಿಮ್ಮ ಉಗುರುಗಳು ಯಾವುದೇ ವಿಧದಲ್ಲಿರಲಿ, ನಿಮ್ಮ ಆಹಾರದಲ್ಲಿ ಬದಲಾವಣೆ ತರುವ ಮೂಲಕ ಉಗುರುಗಳ ಆರೈಕೆಯನ್ನು ಮಾಡಬಹುದು. ಉಗುರುಗಳು ಬೇಗನೆ ಮುರಿದು ಹೋಗುತ್ತದೆಯೇ?

ಆದರೆ ಆಹಾರದಲ್ಲಿ ಕಟ್ಟುಪಾಡು ಮುಖ್ಯ, ಜೊತೆಗೆ ಸ್ವಚ್ಛತೆಗೂ ಪ್ರಥಮ ಆದ್ಯತೆ ನೀಡಬೇಕು. ಉಗುರುಗಳ ಆರೈಕೆಗೆ ಹೆಚ್ಚಿನ ಕಾಳಜಿ, ಸಮತೋಲನದ ಆಹಾರ ಮತ್ತು ಪೂರಕ ಪ್ರಸಾಧನಗಳನ್ನು ಬಳಸಬಹುದು. ಆರೋಗ್ಯಕರ ಮತ್ತು ಉದ್ದವಾದ ಉಗುರುಗಳಿಗೆ ಆಹಾರ ಹಾಗೂ ಕಾಳಜಿಯ ಮೂಲಕವೇ ಅತ್ಯುತ್ತಮವಾದ ಪೋಷಣೆಯನ್ನು ನೀಡಬಹುದು. ಉಗುರುಗಳ ಕಾಳಜಿಯ ಜೊತೆಗೆ ಈ ಕೆಳಗಿನ ಆಹಾರಗಳನ್ನು ಸೇವಿಸುವ ಮೂಲಕ ಉಗುರುಗಳಿಗೆ ಅವುಗಳ ಬುಡದಿಂದ ಉತ್ತಮ ಆರೈಕೆ ನೀಡಿದಂತಾಗುತ್ತದೆ. ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ...

ಕಬ್ಬಿಣಾಂಶ ಇರುವ ಆಹಾರ ಸೇವಿಸಿ

ಕಬ್ಬಿಣಾಂಶ ಇರುವ ಆಹಾರ ಸೇವಿಸಿ

ಕಬ್ಬಿಣಾಂಶದ ಕೊರತೆಯಿಂದ ಬಹುತೇಕ ಉಗುರಿನ ಸಮಸ್ಯೆಗಳು ಉದ್ಭವಿಸುತ್ತವೆ. ಆ ಸಮಸ್ಯೆಗಳು ಉಗುರನ್ನು ಮತ್ತಷ್ಟು ನಾಜೂಕನ್ನಾಗಿಸುತ್ತವೆ. ಉಗುರುಗಳ ಆರೋಗ್ಯಕ್ಕೆ ಕಬ್ಬಿಣಾಂಶವು ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿರಬೇಕು. ಕೆಂಪು ಮಾಂಸ, ಕರುಳು, ಮೀನು, ಸೋಯಾ ಆಹಾರ, ಹುರುಳಿ, ಮಸೂರ ಅವರೆ, ಧಾನ್ಯಗಳು, ಹಸಿರು ಸೊಪ್ಪು, ತಾಜಾ ತರಕಾರಿಗಳು, ಕೋಳಿ ಮಾಂಸ, ಮೊಟ್ಟೆ, ಲೋಳೆ, ಖರ್ಜೂರ ಮತ್ತು ಅಪ್ರಿಕೋಟ್ಸ್ ನಂತಹ ಒಣ ಹಣ್ಣು ಇತ್ಯಾದಿಗಳನ್ನು ಸೇವಿಸಿದರೆ ಉತ್ತಮ.

ಅಡುಗೆ ಸೋಡ ಮತ್ತು ಲಿಂಬೆ ರಸ

ಅಡುಗೆ ಸೋಡ ಮತ್ತು ಲಿಂಬೆ ರಸ

ಉತ್ತಮ ಗುಣಮಟ್ಟದ ಅಡುಗೆ ಸೋಡ ಮತ್ತು ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ. ಇದನ್ನು ಉಗುರುಗಳಿಗೆ ಹಚ್ಚಿ. ಇದು ಸಂಪೂರ್ಣವಾಗಿ ಹಳದಿ ಉಗುರುಗಳನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.

ಬಸಲೆ, ಹರಿವೆಸೊಪ್ಪು, ಪಾಲಕ್‌ನಂತಹ ಆಹಾರ ಸೇವಿಸಿ

ಬಸಲೆ, ಹರಿವೆಸೊಪ್ಪು, ಪಾಲಕ್‌ನಂತಹ ಆಹಾರ ಸೇವಿಸಿ

ಉಗುರುಗಳ ಆರೈಕೆಗೆ ವಿಟಮಿನ್ ಎ, ಬಿ ಮತ್ತು ಸಿ ಗಳ ಅಗತ್ಯವಿದೆ. ಇವು ಗಾಢ ಹಸಿರು ಬಣ್ಣದ ಎಲೆಗಳಾದ ಬಸಲೆ, ಹರಿವೆಸೊಪ್ಪು, ಪಾಲಕ್ ಮೊದಲಾದ ಸೊಪ್ಪುಗಳಲ್ಲಿ ಹೇರಳವಾಗಿರುತ್ತವೆ. ಈ ಸೊಪ್ಪುಗಳನ್ನು ಬೇಯಿಸಿ ತಯಾರಿಸಿದ ಖಾದ್ಯವನ್ನು ಸೇವಿಸುವ ಮೂಲಕ ಉಗುರು ಮತ್ತು ಕೂದಲಿಗೆ ಉತ್ತಮ ಆರೈಕೆ ನೀಡಬಹುದು. ವಿಟಮಿನ್ ಸಿ ಸೇವನೆಯಿಂದ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಕಬ್ಬಿಣ ಉಗುರುಗಳ ಬುಡ ಮತ್ತು ತಲೆಗೂದಲ ಬುಡವನ್ನು ಸದೃಢಗೊಳಿಸುತ್ತದೆ.

ಬಾದಾಮಿಯನ್ನು ಸೇವಿಸಿ

ಬಾದಾಮಿಯನ್ನು ಸೇವಿಸಿ

ಒಣ ಬಾದಾಮಿಯಲ್ಲಿ ಪ್ರೋಟೀನ್ ಮತ್ತು ಮೆಗ್ನೀಶಿಯಂ ಅಂಶ ಹೆಚ್ಚಾಗಿದೆ. ಕೂದಲು ಮತ್ತು ಉಗುರುಗಳ ಆರೈಕೆಗಾಗಿ ಮೆಗ್ನೀಶಿಯಂ ಅಗತ್ಯವಿದೆ. ಉಗುರುಗಳಲ್ಲಿ ಒಂದು ವೇಳೆ ಬುಡದಿಂದ ತುದಿಯವರೆಗೆ ನೇರವಾದ ಗೆರೆಗಳು ಪಕ್ಕಪಕ್ಕದಲ್ಲಿ ಮೂಡಿದ್ದರೆ ಅದು ಮೆಗ್ನೀಶಿಯಂ ಕೊರತೆಯನ್ನು ಸೂಚಿಸುತ್ತದೆ. ಪ್ರತಿದಿನ ನಾಲ್ಕರಿಂದ ಐದು ಬಾದಾಮಿಯನ್ನು ಹಾಗೇ ಅಥವಾ ನೀರಿನಲ್ಲಿ ಸುಮಾರು ಒಂದು ಗಂಟೆ ಮುಳುಗಿಸಿಟ್ಟು ಬಳಿಕ ಸೇವಿಸುವುದರಿಂದ ಅಗತ್ಯವಾದ ಮೆಗ್ನೀಶಿಯಂ ಅನ್ನು ಪಡೆಯಬಹುದು. ಸೋಯಾ ಅವರೆ, ಹಸಿರು ಸೊಪ್ಪುಗಳಲ್ಲಿಯೂ ಹೆಚ್ಚಿನ ಮೆಗ್ನೀಶಿಯಂ ಇರುತ್ತದೆ. ಈ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಕೂದಲು ಮತ್ತು ಉಗುರುಗಳಿಗೆ ಉತ್ತಮ ಆರೈಕೆಯನ್ನು ಪಡೆಯಬಹುದು.

ವಿಟಮಿನ್ E

ವಿಟಮಿನ್ E

ನೀವು ಆರೋಗ್ಯಕರವಾದ ಉಗುರುಗಳನ್ನು ಪಡೆದುಕೊ೦ಡಿರುವುದನ್ನು ಖಾತರಿಪಡಿಸುವ ಮತ್ತೊ೦ದು ಮಾರ್ಗೋಪಾಯವೆ೦ದರೆ ಅದು ವಿಟಮಿನ್ E ಯನ್ನು ಬಳಸಿಕೊಳ್ಳುವುದು. ವಿಟಮಿನ್ E ಯು ಶರೀರದ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಹೀಗಾದಾಗ, ಉಗುರುಗಳ ಪದರಗಳಿಗೆ ರಕ್ತಸರಬರಾಜು ಹೆಚ್ಚುತ್ತದೆ. ರಾತ್ರಿ ಮಲಗುವುದಕ್ಕೆ ಮು೦ಚೆ ವಿಟಮಿನ್ E ಯನ್ನೊಳಗೊ೦ಡಿರುವ ತೈಲವನ್ನು ಉಗುರುಗಳಿಗೆ ಲೇಪಿಸಿಕೊಳ್ಳುವುದು ಈ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಿದೆ.

ಬೀಟ್‍ರೂಟ್‌ನ್ನು ಸೇವಿಸಿ

ಬೀಟ್‍ರೂಟ್‌ನ್ನು ಸೇವಿಸಿ

ಬೀಟ್‍ರೂಟ್‍ಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಇದು ಉಗುರಿನ ಬೆಳವಣಿಗೆಗೆ ಅತ್ಯಾವಶ್ಯಕ. ನಿಯಮಿತವಾಗಿ ದಿನ ಬಿಟ್ಟು ದಿನ ಬೀಟ್‍ರೂಟ್ ಸೇವಿಸುವುದರಿಂದಾಗಿ ನಿಮ್ಮ ಉಗುರುಗಳು ಆರೋಗ್ಯಕರವಾಗಿ ಮತ್ತು ಧೃಡವಾಗಿ ಬೆಳೆಯುತ್ತವೆ. ಇದರೊಂದಿಗೆ ದಿನಂಪ್ರತಿ ಹಾಲು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು ಸೇವಿಸುವುದರಿಂದಾಗಿ ನಿಮ್ಮ ಉಗುರಿಗೆ ಬೇಕಾದ ಅಂಶಗಳನ್ನು ಒದಗಿಸಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಉಗುರುಗಳ ಪಾಲಿಗಂತೂ ಆಲಿವ್ ಎಣ್ಣೆ ಆಪತ್ಬಾಂಧವನಾಗಿದೆ. ಆಲಿವ್ ಎಣ್ಣೆಯ ಆರ್ದ್ರತೆ ನೀಡುವ ಗುಣ ಉಗುರು ಮತ್ತು ಉಗುರಿನ ಹಿಂಭಾಗದ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಉಗುರ ಬುಡಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದು ಉಗುರಿನ ಹೊಳಪಿಗೆ ನೆರವಾಗುತ್ತದೆ. ಇದಕ್ಕಾಗಿ ಬೆರಳ ತುದಿಗಳಿಗೆ ಕೊಂಚ ಆಲಿವ್ ಎಣ್ಣೆ ಹಚ್ಚಿ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದೊಂದಾಗಿ ಎಲ್ಲಾ ಬೆರಳುಗಳಿಗೆ ಮಸಾಜ್ ಮಾಡಿ. ಇದಕ್ಕೆ ಪ್ರತ್ಯೇಕವಾದ ಸಮಯದ ಅಗತ್ಯವಿಲ್ಲ. ಆರಾಮವಾಗಿ ಕುಳಿತಿದ್ದಾಗ ಅಥವಾ ಟೀವಿ ನೋಡುತ್ತಿದ್ದಾಗಲೂ ಅನುಸರಿಸಬಹುದು. ನಿಯಮಿತವಾಗಿ ಮಾಡುವ ಮಸಾಜ್‌ನಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಮನಗಾಣುವಿರಿ.

English summary

Ways to Keep Your Nails Healthy

Most of us need some tips for healthy nails as we seldom give our nails enough attention. Nails reflect your health condition and they also enhance your look. Nails reflect our overall health, which is why proper nail care is so important. Here are such kinds of foods and tips for keeping your nails healthy:
Story first published: Friday, October 9, 2015, 14:57 [IST]
X
Desktop Bottom Promotion