For Quick Alerts
ALLOW NOTIFICATIONS  
For Daily Alerts

ನಿಮ್ಮನ್ನು ನಿಬ್ಬೆರಗಾಗಿಸುವ ಜೇನು ತುಪ್ಪದ ಸೌಂದರ್ಯ ಚಿಕಿತ್ಸೆ!

By Super
|

ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ.

ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ. ಪುರಾಣಗಳಲ್ಲಿ ಜೇನಿನ ಆರೋಗ್ಯಕರ ಗುಣಗಳ ಬಗ್ಗೆ ಉಲ್ಲೇಖವಿದೆ. ವಿಶ್ವದಾದ್ಯಂತ ಜೇನನ್ನು ಕೃಷಿ ಮಾಡಲಾಗುತ್ತದೆ. ಜೇನುಸಾಕಣೆಯ ಇತಿಹಾಸ ಸುಮಾರು ಕ್ರಿಸ್ತಪೂರ್ವ ಏಳುನೂರಕ್ಕೂ ಹಿಂದಿನದು ಎಂದು ತಿಳಿದುಬರುತ್ತದೆ. ಬನ್ನಿ ಇದರ ಸೌಂದರ್ಯ ರಹಸ್ಯವನ್ನು ತಿಳಿಯೋಣ..

ಲಿಪ್ ಸ್ಕ್ರಬ್

ಲಿಪ್ ಸ್ಕ್ರಬ್

ತೆಂಗಿನಕಾಯಿ ಎಣ್ಣೆ ಮತ್ತು ಜೇನು ತುಪ್ಪದ ಮಿಶ್ರಣವನ್ನು ಲಿಪ್ ಸ್ಕ್ರಬ್ ಆಗಿ ಬಳಸಬಹುದು. ಇದರಲ್ಲಿರುವ ಸಕ್ಕರೆ ಅಂಶವು ತುಟಿಯ ಹೊರ ಚರ್ಮದ ಮೇಲೆ ಎಕ್ಸ್‌ಫೋಲಿಯೇಷನ್ ಆಗಿ ಕೆಲಸ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಸ್ವಲ್ಪ ಪುದಿನಾದಂತಹ ಸುವಾಸನೆಯು ನಿಮ್ಮ ತುಟಿಗಳಿಗೆ ತಾಜಾತನವನ್ನು ನೀಡುತ್ತದೆ.

ಕಾಫಿ ಜೇನು ಸಕ್ಕರೆಯ ಸ್ಕ್ರಬ್

ಕಾಫಿ ಜೇನು ಸಕ್ಕರೆಯ ಸ್ಕ್ರಬ್

ವಾಸ್ತವವೇನೆಂದರೆ ಈ ಸ್ಕ್ರಬ್ ಅನ್ನು ಕಾಫಿಯ ಗಸಿಯಿಂದ ತಯಾರಿಸಲಾಗುತ್ತದೆ. ಕಾಫಿ ಮಾಡಿದ ನಂತರ ತಳದಲ್ಲಿ ಉಳಿಯುವ ಗಸಿಗೆ ಜೇನು ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಸ್ಕ್ರಬ್ ಮಾಡಿಕೊಳ್ಳಿ. ಇದು ಎಕ್ಸ್‌ಫೋಲಿಯೇಷನ್ ನೀಡುತ್ತದೆ. ಉರಿಯೂತ ನಿರೋಧಕ ಮತ್ತು ಬ್ಯಾಕ್ಟೀರಿಯಾಗಳನ್ನು ಸಹ ಹೊಡೆದೋಡಿಸುವ ಅಂಶಗಳನ್ನು ಹೊಂದಿರುತ್ತದೆ.

ಚಕ್ಕೆ ಮತ್ತು ಜೇನು ತುಪ್ಪ ಬ್ಲಾಕ್ ಹೆಡ್ ಚಿಕಿತ್ಸೆ

ಚಕ್ಕೆ ಮತ್ತು ಜೇನು ತುಪ್ಪ ಬ್ಲಾಕ್ ಹೆಡ್ ಚಿಕಿತ್ಸೆ

ಮುಖದ ಮೇಲೆ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ ಅಥವಾ ಕಪ್ಪು ತಲೆಗಳನ್ನು ನಿವಾರಿಸಲು ಚಕ್ಕೆ ಮತ್ತು ಜೇನು ತುಪ್ಪದ ಮಾಸ್ಕ್ ತಯಾರಿಸಿಕೊಳ್ಳಬಹುದು. ಈ ಎರಡರ ಸಮ್ಮಿಶ್ರಣವು ಕಪ್ಪು ತಲೆಗಳನ್ನು ನಿವಾರಿಸುವುದರ ಜೊತೆಗೆ ಮುಖದಲ್ಲಿನ ಬ್ಯಾಕ್ಟೀರಿಯಾಗಳನ್ನು ಹೊರದಬ್ಬಿ, ತ್ವಚೆಯ ರಕ್ಷಣೆಯನ್ನು ಸಹ ಮಾಡುತ್ತವೆ.

ಫೇಸ್ ಮಾಸ್ಕ್‌ಗೆ ಹೊಳಪನ್ನು ಮತ್ತು ಬಿಗಿತವನ್ನು ನೀಡುತ್ತದೆ

ಫೇಸ್ ಮಾಸ್ಕ್‌ಗೆ ಹೊಳಪನ್ನು ಮತ್ತು ಬಿಗಿತವನ್ನು ನೀಡುತ್ತದೆ

ಜೇನು ತುಪ್ಪವನ್ನು ಬೆರೆಸಿದ ಮಾಸ್ಕ್ ತ್ವಚೆಗೆ ಹೊಳಪನ್ನು ನೀಡುತ್ತದೆ ಮತ್ತು ಮಾಸ್ಕ್‌ಗೆ ಬಿಗಿತವನ್ನು ಸಹ ನೀಡುತ್ತದೆ. ಮಾಸ್ಕ್ ಒಣಗಿದ ಮೇಲೆ ಸ್ಪಷ್ಟವಾಗಿ ಅದು ಒಡೆಯಲು ಸಹ ಜೇನು ತುಪ್ಪ ಸಹಾಯ ಮಾಡುತ್ತದೆ. ಇದರ ಜೊತೆಗೆ ನಿಂಬೆ ಹಣ್ಣನ್ನು ಬಳಸುವುದಿದ್ದರೆ, ಅದು ಸ್ವಲ್ಪ ಉರಿಯನ್ನು ನೀಡಬಹುದು. ಅದಕ್ಕಾಗಿ ಈ ಮಾಸ್ಕ್‌ಗಳನ್ನು ಮುಖದ ಮೇಲೆ ನೇರವಾಗಿ ಬಳಸುವ ಮೊದಲು ಕೈ ಮೇಲೆ ಎಲ್ಲಾದರು ಒಂದು ಪ್ಯಾಚ್ ಟೆಸ್ಟ್ ಮಾಡಿ, ನಂತರ ಮುಖದ ಮೇಲೆ ಪ್ರಯೋಗಿಸಿ.

English summary

Ways to Add Honey to Your Beauty Routine

Who doesn’t love honey? Maybe the most multi-talented edible we’ve come across, this sweetness can be put to use in more ways than we ever (ever) thought possible. It’s good for everything from cocktails to pumpkin seeds. here are 15 more ways to include honey in your day to day — this time in the form of DIY (Do It Yourself) beauty treatments.
X
Desktop Bottom Promotion