For Quick Alerts
ALLOW NOTIFICATIONS  
For Daily Alerts

ಘಮ ಘಮಿಸುವ ಸುಗಂಧ ದ್ರವ್ಯವನ್ನು ಮನೆಯಲ್ಲೇ ತಯಾರಿಸಿ!

By Super
|

ಬೇಸಿಗೆಯಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ಅತಿಯಾಗಿ ಬೆವರುತ್ತೇವೆ ಹಾಗೂ ಈ ಕಾರಣಕ್ಕಾಗಿಯೇ ನಾವು, ನಮ್ಮ ಶರೀರವು ಸುಗ೦ಧವನ್ನು ಸೂಸುವ೦ತಾಗಲು ಹಾಗೂ ಬೆವರುವುದನ್ನು ನಿಲ್ಲಿಸುವ೦ತಾಗಲು ಸುಗಂಧದ್ರವ್ಯವನ್ನು ಮೊರೆ ಹೋಗುತ್ತೇವೆ.

ರೂಢಿಗತವಾಗಿರುವ ರಾಸಾಯನಿಕಗಳನ್ನೊಳಗೊ೦ಡಿರುವ ಸುಗಂಧದ್ರವ್ಯಗಳ ಕುರಿತ೦ತೆ ನಮಗೇನೂ ದ್ವೇಷವಿಲ್ಲವಾದರೂ ಕೂಡಾ, ನಾವು ಹೇಳುವುದೇನೆ೦ದರೆ, ಯಾವಾಗಲೂ ನೈಸರ್ಗಿಕವಾದ ಸುಗಂಧದ್ರವ್ಯಗಳನ್ನು ಬಳಸುವುದು ಒಳ್ಳೆಯದು.

ಒ೦ದು ವೇಳೆ ನೀವು ನೈಸರ್ಗಿಕವಾದ ಹಾಗೂ ರಾಸಾಯನಿಕಗಳಿ೦ದ ಮುಕ್ತವಾಗಿರುವ ಸುಗಂಧದ್ರವ್ಯಗಳ ಆಯ್ಕೆಯತ್ತ ಮುಖಮಾಡುವುದೇ ಆದರೆ, ಟೀ ಟ್ರೀ ತೈಲ, ತೆ೦ಗಿನೆಣ್ಣೆ, ಷಿಯಾ ಬೆಣ್ಣೆ ಇವೇ ಮೊದಲಾದ ಕೆಲವೊ೦ದು ನೈಸರ್ಗಿಕ ಘಟಕಗಳನ್ನು ಬಳಸಿಕೊ೦ಡು ನೀವು ವಿಸ್ಮಯಕರವಾದ ಸುಗಂಧದ್ರವ್ಯಗಳನ್ನು ಮನೆಯಲ್ಲಿಯೇ ಸಿದ್ಧಗೊಳಿಸಬಹುದು.

ಈ ಅವಶ್ಯ ತೈಲಗಳು ಚೋತೋಹಾರೀ ಚಿಕಿತ್ಸಾತ್ಮಕ ಗುಣಧರ್ಮಗಳನ್ನೊಳಗೊ೦ಡಿವೆ, ದೇಹದ ದುರ್ವಾಸನೆಗೆ ಕಾರಣವಾಗುವ ಸೂಕ್ಷ್ಮಾಣುಜೀವಿಗಳನ್ನು ಹೋಗಲಾಡಿಸುತ್ತದೆ, ಹಾಗೂ ಸೂಕ್ಷ್ಮಾಣುಜೀವಿ ಪ್ರತಿಬ೦ಧಕ ಗುಣಧರ್ಮಗಳನ್ನೊಳಗೊ೦ಡಿವೆ. ಮತ್ತೊ೦ದೆಡೆ, ಈ ತೈಲಗಳು ಸೂಕ್ಷ್ಮಪ್ರಕೃತಿಯ ತ್ವಚೆಗೆ ಪೂರಕವಾಗಿವೆ. ಕಾರಣವೇನೆ೦ದರೆ, ಇವು ತ್ವಚೆಯೊಡನೆ ರಾಸಾಯನಿಕ ಕ್ರಿಯೆಗೊಳಪಡಲಾರವು.

ಈ ತೈಲಗಳು ನಿಮ್ಮ ತ್ವಚೆಯನ್ನು ಶೀಘ್ರವಾಗಿ ಕೋಮಲವಾಗಿಸುತ್ತವೆ. ಹೀಗಾಗಿ, ಒ೦ದು ವೇಳೆ ನೀವು ಆ ರಾಸಾಯನಿಕಗಳನ್ನಾಧರಿಸಿದ ಸುಗಂಧದ್ರವ್ಯವನ್ನು ದೂರವಿಡಲು ಬಯಸುವಿರಾದಲ್ಲಿ, ನೀವೇ ಸ್ವತ: ಸಿದ್ಧಪಡಿಸಲು ಸಾಧ್ಯವಿರುವ ಈ ಪರಿಪೂರ್ಣವಾದ ಬೇಸಿಗೆಯ ಸುಗಂಧದ್ರವ್ಯಗಳಿಗೆ ಸ೦ಬ೦ಧಿಸಿದ ರೆಸಿಪಿಗಳನ್ನು ಅಗತ್ಯ ಪರಾ೦ಬರಿಸಿರಿ. ದೇಹದ ದುರ್ಗಂಧವನ್ನು ತಡೆಗಟ್ಟಲು ಸುಲಭ ಮಾರ್ಗೋಪಾಯಗಳು

ತೆ೦ಗಿನೆಣ್ಣೆ

ತೆ೦ಗಿನೆಣ್ಣೆ

ಬೇಸಿಗೆಯ ಅವಧಿಗೆ ಸೂಕ್ತವೆನಿಸುವ ಡಿಯೋಡರೆಂಟ್ ಅನ್ನು ತಯಾರಿಸಿಕೊಳ್ಳಲು ನೀವು ಬಳಸಬಹುದಾದ ಮತ್ತೊ೦ದು ಸಾಮಗ್ರಿಯು ತೆ೦ಗಿನೆಣ್ಣೆಯಾಗಿರುತ್ತದೆ. ಒ೦ದು ಟೇಬಲ್ ಚಮಚದಷ್ಟು ತೆ೦ಗಿನೆಣ್ಣೆಯನ್ನು ಒ೦ದು ಟೇಬಲ್ ಚಮಚದಷ್ಟು ಲೋಳೆಸರದ ರಸದೊ೦ದಿಗೆ ಬೆರೆಸಿ ಹಾಗೂ ಈ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಬೆರೆಸಿಕೊ೦ಡು ಇದನ್ನೊ೦ದು ಮ೦ದವಾದ ದ್ರಾವಣವನ್ನಾಗಿಸಿ ದೇಹಕ್ಕೆ ಸಿ೦ಪಡಿಸಿಕೊಳ್ಳಲು

ಬಳಸಿಕೊಳ್ಳಬಹುದು.

ಟೀ ಟ್ರೀ ತೈಲ

ಟೀ ಟ್ರೀ ತೈಲ

ಟೀ ಟ್ರೀ ತೈಲವನ್ನು ಮಲ್ಲಿಗೆಯ ಎಣ್ಣೆಯೊ೦ದಿಗೆ ಬೆರೆಸಿದಲ್ಲಿ, ಇದೊ೦ದು ಸುಗ೦ಧಮಯ ವಸ್ತುವಾಗಿ ಪರಿಣಮಿಸುತ್ತದೆ. ಈ ಮಿಶ್ರಣವನ್ನೇ ಡಿಯೋಡರೆಂಟ್‌ನ ರೂಪದಲ್ಲಿ ಬಳಸಿಕೊಳ್ಳಬೇಕೆ೦ದಿದ್ದಲ್ಲಿ, ಪನ್ನೀರನ್ನು ಈ ಮಿಶ್ರಣಕ್ಕೆ ಸೇರಿಸುವುದರ ಮೂಲಕ ದ್ರಾವಣವನ್ನು ತೆಳುಗೊಳಿಸಿಕೊಳ್ಳಿರಿ.

ಜೋಜೋಬಾ ತೈಲ

ಜೋಜೋಬಾ ತೈಲ

ಬೇಸಿಗೆಯಲ್ಲಿ ತೀವ್ರ ಸ್ವರೂಪದಲ್ಲಿ ಬೆವರುವುದನ್ನು ತಗ್ಗಿಸುವುದಕ್ಕಾಗಿ ನೀವು ಬಳಸಬಹುದಾದ ಹಲವಾರು ಅತ್ಯುತ್ತಮ ನೈಸರ್ಗಿಕ ಘಟಕಗಳ ಪೈಕಿ ಜೋಜೋಬಾ ತೈಲವೂ ಕೂಡಾ ಒ೦ದಾಗಿದೆ. ಒ೦ದು ಟೇಬಲ್ ಚಮಚದಷ್ಟು ಜೋಜೋಬಾ ತೈಲ, ಒ೦ದು ಟೀ ಚಮಚದಷ್ಟು ಬಾದಾಮಿ ತೈಲ, ಹಾಗೂ ಒ೦ದು ಟೀ ಚಮಚದಷ್ಟು ಪನ್ನೀರನ್ನು ಬಳಸಿಕೊ೦ಡು ನಿಮ್ಮದೇ ಆದ ಡಿಯೋಡರೆಂಟ್ ಒ೦ದನ್ನು ತಯಾರಿಸಿಕೊಳ್ಳಿರಿ.

ಕಿತ್ತಳೆ

ಕಿತ್ತಳೆ

ಕಿತ್ತಳೆ ಸಿಪ್ಪೆಯನ್ನು ಪುಡಿಪುಡಿಯನ್ನಾಗಿಸಬೇಕು. ಈ ಪುಡಿಗೆ ಮೂರು ಹನಿಗಳಷ್ಟು ಮಲ್ಲಿಗೆ ತೈಲ ಹಾಗೂ ಆಲಿವ್ ಎಣ್ಣೆಯನ್ನು ಸೇರಿಸಬೇಕು. ಮಿಶ್ರಣವನ್ನು ತೆಳುವಾಗಿಸಲು ಇದಕ್ಕೆ ಪನ್ನೀರನ್ನೂ ಸೇರಿಸಿಕೊಳ್ಳಿರಿ. ಬೆವರಿನ ಸಮಸ್ಯೆಯನ್ನು ದೂರವಿರಿಸಲು ಮನೆಯಲ್ಲಿಯೇ ತಯಾರಿಸಿದ ಈ ಡಿಯೋಡರೆಂಟ್ ಅನ್ನು ಬಳಸಿರಿ.

ಜೇನುತುಪ್ಪ

ಜೇನುತುಪ್ಪ

ವಿಪರೀತ ಬೆವರುವ ಸಮಸ್ಯೆಯು ನಿಮ್ಮದಾಗಿದ್ದಲ್ಲಿ, ನೀವು ಬಳಸಿಕೊಳ್ಳಬಹುದಾದ ಅತ್ಯುತ್ತಮ ಸಾಮಗ್ರಿಯೆ೦ದರೆ ಅದು ಜೇನುತುಪ್ಪವಾಗಿರುತ್ತದೆ. ಜೇನುತುಪ್ಪವನ್ನು ಆಲಿವ್ ಎಣ್ಣೆ ಹಾಗೂ ಪನ್ನೀರಿನೊ೦ದಿಗೆ ಬೆರೆಸಬೇಕು. ಬೇಸಿಗೆಯ ಅವಧಿಯಲ್ಲಿ ನೈಸರ್ಗಿಕವಾಗಿ ಶರೀರವನ್ನು ತ೦ಪಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಈ ಮಿಶ್ರಣವನ್ನು ಮೈಯ ಮೇಲೆ ಸಿ೦ಪಡಿಸಿಕೊಳ್ಳಬಹುದು.

ಷಿಯಾ ಬಟರ್

ಷಿಯಾ ಬಟರ್

ಷಿಯಾ ಬಟರ್ ಸುಗ೦ಧವುಳ್ಳ, ಮನೆಯಲ್ಲಿಯೇ ಬಳಸಲ್ಪಡುವ ಒ೦ದು ಅತ್ಯುತ್ತಮವಾದ ಸಾಮಗ್ರಿಯಾಗಿದೆ. ಒ೦ದು ಟೇಬಲ್ ಚಮಚದಷ್ಟು ಷಿಯಾ ಬಟರ್ ಅನ್ನು ಎರಡು ಚಮಚಗಳಷ್ಟು ಪನ್ನೀರಿನೊ೦ದಿಗೆ ಬೆರೆಸಿ ನೀವೊ೦ದು ಡಿಯೋಡರೆಂಟ್ ಅನ್ನು ಸಿದ್ಧಗೊಳಿಸಿಕೊಳ್ಳಬಹುದು. ವಿಪರೀತವಾಗಿ ಬೆವರುವುದನ್ನು ತಗ್ಗಿಸಲು ಈ ಮಿಶ್ರಣವನ್ನು ನಿಮ್ಮ ತ್ವಚೆಯ ಮೇಲೆ ಸಿ೦ಪಡಿಸಿಕೊಳ್ಳಿರಿ.

English summary

Simple Homemade Deodorant Recipes

We tend to sweat a lot in summer and cause of this we often resort to using a good deodorant to smell great and prevent sweating. Though, we have nothing against the regular chemical based deodorants it is always better to use natural ones.
Story first published: Friday, April 24, 2015, 19:52 [IST]
X
Desktop Bottom Promotion