For Quick Alerts
ALLOW NOTIFICATIONS  
For Daily Alerts

ಗುಲಾಬಿ ಎಸಳಿನಂತಹ ತುಟಿಗಾಗಿ ಟಾಪ್ ಸಲಹೆಗಳು

|

ಚಳಿಗಾಲದಲ್ಲಿ ಸಾಮಾನ್ಯವಾಗಿ ತುಟಿಗಳು ಒಣಗಿ ಒಡೆಯಲು ಆರಂಭಿಸುತ್ತವೆ. ಅವುಗಳನ್ನು ನೀವು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಲಿಲ್ಲವಾದಲ್ಲಿ ಅದರಿಂದ ರಕ್ತವು ಸಹ ಬರಬಹುದು. ಇವುಗಳಿಗೆ ಅಗತ್ಯವಾದ ನೀರಿನಂಶವನ್ನು ನೀಡಲು ಕೆಲವೊಂದು ಸಲಹೆಗಳು ಇವೆ. ಬೋಲ್ಡ್‌ಸ್ಕೈ ಅವುಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.

ಇದನ್ನು ಪಾಲಿಸಿದರೆ ವರ್ಷಪೂರ್ತಿ ನಿಮ್ಮ ತುಟಿಗಳು ಮೃದುವಾಗಿ ನಳನಳಿಸುವುದರಲ್ಲಿ ಸಂಶಯವಿಲ್ಲ. ನಿಮ್ಮ ತುಟಿಗಳಿಗೆ ನೀರಿನಂಶವನ್ನು ಒದಗಿಸಲು ಸ್ವಾಭಾವಿಕವಾದ ಪದಾರ್ಥಗಳನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ಕಂಡು ಬರುವುದಿಲ್ಲ. ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ದೊರೆಯುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಈ ಪದಾರ್ಥಗಳನ್ನು ಬಳಸಲು ತುಂಬಾ ಸುರಕ್ಷಿತ ಎಂಬ ಅಂಶವನ್ನು ನಾವು ಮರೆಯಬಾರದು. ಇವುಗಳನ್ನು ಬಳಸುವಾಗ ನಿಮ್ಮ ತುಟಿಯೇನಾದರು ಈಗಾಗಲೇ ಕಪ್ಪಾಗಿದ್ದಲ್ಲಿ ಕಾಸ್ಮೆಟಿಕ್ಸ್ ಅನ್ನು ಸಹ ಬಳಸಬಹುದು. ಸುಂದರವಾದ ತುಟಿಗಳ ಕುರಿತು ತಿಳಿದುಕೊಳ್ಳಲು ಬಯಸುವಿರಾ?

ಈ ಸೂಚನೆಗಳನ್ನು ಗಮನಿಸಿ: ಮೊದಲಿಗೆ ಒಂದು ವೇಳೆ ನೀವು ಧೂಮಪಾನ ಮಾಡುತ್ತಿದ್ದಲ್ಲಿ, ಈ ನೈಸರ್ಗಿಕ ಪದಾರ್ಥಗಳನ್ನು ಬಳಸುವ ಮೊದಲು ಒಮ್ಮೆ ಪರೀಕ್ಷಿಸುವುದು ಉತ್ತಮ. ಎರಡನೆಯದಾಗಿ ನಿಮ್ಮ ತುಟಿ ಒಣಗಿದೆ ಎಂದು ನಾಲಿಗೆಯಿಂದ ಅದನ್ನು ತೇವ ಮಾಡಲು ಹೋಗಬೇಡಿ. ಹೀಗೆ ಪ್ರತಿ ಬಾರಿ ಮಾಡಿದಾಗಲು ತುಟಿಯ ಮೇಲೆ ಇರುವ ತೇವಾಂಶದ ಪದರವನ್ನು ನೀವು ಹಾಳು ಮಾಡುತ್ತೀರಿ. ಮಾಮೂಲಿ ಲಿಪ್ ಬಾಮ್‍ಗಳಲ್ಲಿ ಕೇವಲ ಮೇಣ ಮಾತ್ರ ಇರುತ್ತದೆ. ಇವುಗಳು ನಿಮ್ಮ ತುಟಿಗೆ ತೇವಾಂಶವನ್ನು ಒದಗಿಸುವುದಿಲ್ಲ. ಬನ್ನಿ ಇನ್ನು ತಡ ಮಾಡದೆ ನಿಮ್ಮ ತುಟಿಗಳಿಗೆ ತೇವಾಂಶವನ್ನು ಒದಗಿಸುವ ಪದಾರ್ಥಗಳ ಕುರಿತು ತಿಳಿದುಕೊಳ್ಳೋಣ:

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯನ್ನು ಅರ್ಧ ಭಾಗವಾಗಿ ಕತ್ತರಿಸಿ. ಸೌತೆಕಾಯಿಯ ಸಿಪ್ಪೆಯನ್ನು ತೆಗೆದು, ಅದನ್ನು ತಣ್ಣೀರಿನಲ್ಲಿ ಇಡಿ. 15 ನಿಮಿಷದ ನಂತರ ಇದನ್ನು ತೆಗೆದುಕೊಂಡು ಒಡೆದ ತುಟಿಗಳ ಮೇಲೆ ಮಸಾಜ್ ಮಾಡಿ. ಇದು ತುಟಿಗಳಿಗೆ ತೇವಾಂಶವನ್ನು ಒದಗಿಸಲು ಇರುವ ಅತ್ಯಂತ ಶೀಘ್ರ ಪರಿಹಾರವಾಗಿದೆ.

ಬೆಣ್ಣೆ

ಬೆಣ್ಣೆ

ಬೆಣ್ಣೆಯು ಒಡೆದ ತುಟಿಗಳಿಗೆ ಚಿಕಿತ್ಸೆ ನೀಡುವ ಅತ್ಯುತ್ತಮ ಮನೆಮದ್ದಾಗಿದೆ. ಬೆಣ್ಣೆಯಲ್ಲಿರುವ ಪ್ರೋಟಿನ್‌ಗಳು ನಿಮ್ಮ ತುಟಿಗಳಿಗೆ ತೇವಾಂಶವನ್ನು ನೀಡುತ್ತವೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಅಧಿಕವಾಗಿರುತ್ತದೆ. ಇದು ಸಹ ಒಡೆದ ತುಟಿಗಳಿಗೆ ಒಂದು ಒಳ್ಳೆಯ ಮನೆಮದ್ದಾಗಿದೆ. ಬಾದಾಮಿ ಎಣ್ಣೆಯನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಅದನ್ನು ಮೇಣದ ಬತ್ತಿಯಲ್ಲಿ ಕಾಯಿಸಿ. ನಂತರ ಈ ಬಿಸಿ ಎಣ್ಣೆಯಿಂದ ತುಟಿಗೆ ಮಸಾಜ್ ಮಾಡಿ.

ಸಕ್ಕರೆ ಮತ್ತು ಜೇನುತುಪ್ಪ

ಸಕ್ಕರೆ ಮತ್ತು ಜೇನುತುಪ್ಪ

ಸಕ್ಕರೆ ಮತ್ತು ಜೇನು ತುಪ್ಪದ ಮಿಶ್ರಣವನ್ನು ಮಾಡಿಕೊಳ್ಳಿ. ಸಕ್ಕರೆಯು ನಿರ್ಜೀವ ತ್ವಚೆಯನ್ನು ತೆಗೆಯಲು ಸಹಾಯ ಮಾಡಿದರೆ, ಜೇನು ತುಪ್ಪವು ನಿಮ್ಮ ತುಟಿಗೆ ತೇವಾಂಶವನ್ನು ಒದಗಿಸುತ್ತದೆ.

ಜ್ಯೂಸ್ ಲಿಪ್ ಮಾಸ್ಕ್ ಪ್ರಯತ್ನಿಸಿ

ಜ್ಯೂಸ್ ಲಿಪ್ ಮಾಸ್ಕ್ ಪ್ರಯತ್ನಿಸಿ

ನೀವು ಎಂದಾದರು ಒಡೆದ ತುಟಿಗೆ ಜ್ಯೂಸ್ ಮಾಸ್ಕ್ ಪ್ರಯತ್ನಿಸಿ ನೋಡಿದ್ದೀರಾ. ನಿಮಗೆ ಇಷ್ಟವಾದ ಹಣ್ಣ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ತುಟಿ ಯಾವಾಗ ಒಣಗುತ್ತದೋ, ಆಗ ಅದರ ಮೇಲೆ ಲೇಪಿಸಿ. ಹಣ್ಣಿನಲ್ಲಿರುವ ವಿಟಮಿನ್‌ಗಳು ನಿಮ್ಮ ತುಟಿಗಳನ್ನು ಮೃದುಗೊಳಿಸಲು ಸಹಾಯ ಮಾಡುತ್ತವೆ.

ಅಲೋವೆರಾ

ಅಲೋವೆರಾ

ಅಲೋವೆರಾ ಅಥವಾ ಲೋಳೆಯನ್ನು ಸಹ ಒಡೆದ ತುಟಿಗಳಿಗೆ ಮನೆ ಮದ್ದಾಗಿ ಬಳಸಬಹುದು. ಇದಕ್ಕಾಗಿ ಲೋಳೆಯನ್ನು ಕತ್ತರಿಸಿ, ಅದರ ರಸದಿಂದ ಲಿಪ್ ಬಾಮ್ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ತುಟಿಯು ಗುಣಮುಖವಾಗುತ್ತದೆ.

ಸಿಟ್ರಸ್ ಪೀಲ್ ಮಾಸ್ಕ್

ಸಿಟ್ರಸ್ ಪೀಲ್ ಮಾಸ್ಕ್

ನಿಂಬೆ, ಕಿತ್ತಳೆ, ಮೂಸಂಬಿಯಂತಹ ಸಿಟ್ರಸ್ ಹಣ್ಣುಗಳು ಸಹ ನಿಮ್ಮ ಒಡೆದ ತುಟಿಗಳನ್ನು ಗುಣಪಡಿಸುತ್ತವೆ. ಇವುಗಳ ಸಿಪ್ಪೆಗಳಿಂದ ಬರುವ ರಸವನ್ನು ನಿಮ್ಮ ತುಟಿಗಳಿಗೆ ಲೇಪಿಸಿ. ಒಡೆದ ತುಟಿಗಳು ಗುಣ ಮುಖವಾಗುತ್ತವೆ.

English summary

Quick Ways To Naturally Hydrate Dry Lips

Usually in Winter the lips get chapped and dry. They also begin to bleed if you do not look after them in time. To hydrate your lips there are certain tips you need to follow. Boldsky shares with you a list of easy tips to hydrate your lips so that they are soft and supple the whole year round.
X
Desktop Bottom Promotion