For Quick Alerts
ALLOW NOTIFICATIONS  
For Daily Alerts

ಕೈಕಾಲುಗಳನ್ನು ತ್ವರಿತವಾಗಿ ಬೆಳ್ಳಗಾಗಿಸಲು ಸೂಕ್ತ ಸಲಹೆಗಳು

By Super
|

ಭಾರತೀಯರಲ್ಲಿ ಮೈಬಣ್ಣ ಒಂದೇ ತೆರನಾಗಿಲ್ಲ. ಉತ್ತರ ಭಾರತದವರು ಹೆಚ್ಚಾಗಿ ಬೆಳ್ಳಗಿದ್ದರೆ ದಕ್ಷಿಣ ಮತ್ತು ಕರಾವಳಿ ಜನತೆ ಗೋಧಿಬಣ್ಣ ಮತ್ತು ಗಾಢವರ್ಣ ಪಡೆದಿರುತ್ತಾರೆ. ಬಿಸಿಲಿನ ಝಳ ಮತ್ತು ಉಪ್ಪಿನಂಶ ಹೆಚ್ಚಾಗಿರುವ ತೀರದ ಊರುಗಳಲ್ಲಿನ ಜನತೆ ಗೋಧಿಬಣ್ಣ ಹೊಂದಿದ್ದರೂ ಬಿಸಿಲಿಗೆ ಒಡ್ಡಿರುವ ಚರ್ಮದ ಭಾಗ ಗಾಢವರ್ಣ ಪಡೆದಿರುತ್ತದೆ. ಸೂರ್ಯನ ಕಿರಣಗಳಲ್ಲಿರುವ ಅಲ್ಟ್ರಾವಯೋಲೆಟ್ ಪ್ರಭಾವಳಿ ಇದಕ್ಕೆ ನೇರಕಾರಣವಾದರೆ ಆ ಪ್ರದೇಶದ ವಾತಾವರಣ ಹಾಗೂ ಗಾಳಿಯಲ್ಲಿರುವ ಉಪ್ಪಿನಂಶ ಇನ್ನೊಂದು ಕಾರಣ. ಹೀಗೆ ಅನೈಚ್ಛಿಕವಾಗಿ ಕೈಕಾಲುಗಳ ಚರ್ಮ ಕಪ್ಪುಗೊಂಡವರು ತಮ್ಮ ನೈಸರ್ಗಿಕ ಬಣ್ಣವನ್ನು ಪಡೆಯಲು ಹಲವು ಚಿಕಿತ್ಸೆಗಳನ್ನು ಮಾಡುತ್ತಾರೆ.

ಲಿಂಬೆಹಣ್ಣಿನ ರಸ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಲಿಂಬೆರಸ ಚರ್ಮದ ಬಣ್ಣವನ್ನು ಸ್ವಸ್ಥಿತಿಗೆ ತರಲು ನೆರವಾಗುವ ಜೊತೆಗೇ ಚರ್ಮದ ತೊಂದರೆಗಳಾದ ಮೊಡವೆ, ಕುರು ಮೊದಲಾದವುಗಳನ್ನೂ ನಿಗ್ರಹಿಸುತ್ತದೆ. ಆಲುಗಡ್ಡೆ ಸಹಾ ಚರ್ಮದ ಬಣ್ಣವನ್ನು ಸ್ವಸ್ಥಿತಿಗೆ ತರಲು ಉತ್ತಮವಾಗಿದೆ. ಆದರೆ ಅತಿಸಂವೇದಿ ಚರ್ಮ ಹೊಂದಿದವರು ಯಾವುದೇ ಚಿಕಿತ್ಸೆಯನ್ನು ಪೂರ್ಣವಾಗಿ ಅಳವಡಿಸುವ ಮುನ್ನ ಒಂದು ಚಿಕ್ಕ ಭಾಗಕ್ಕೆ ಮೊದಲು ಹಚ್ಚಿ ಯಾವುದೇ ರೀತಿಯ ಅಲರ್ಜಿ ಅಥವಾ ಅಡ್ಡಪರಿಣಾಮವಿಲ್ಲವೆಂದು ಖಚಿತಪಡಿಸಿಕೊಳ್ಳಬೇಕು. (ಹೇರ್ ಡೈ ಅಥವಾ ಟ್ಯಾಟೂ ಹಚ್ಚುವ ಮುನ್ನ ಈ ಪರೀಕ್ಷೆ ಮಾಡಿಳ್ಳುವುದು ಅತ್ಯಂತ ಅಗತ್ಯವಾಗಿದೆ). ಮೆಹೆಂದಿ ಸಮಾರಂಭ: ನಿಮ್ಮ ದಿರಿಸಿನ ಆಯ್ಕೆ ಹೇಗಿದ್ದರೆ ಚೆಂದ?

ಸುಲಭವಾಗಿ, ನೈಸರ್ಗಿಕವಾಗಿ ಮತ್ತು ತ್ವರಿತವಾಗಿ ಕೈ ಮತ್ತು ಕಾಲುಗಳ ಬಣ್ಣವನ್ನು ಹಿಂದಿನ ಬಣ್ಣಕ್ಕೆ ತಿರುಗುವಂತೆ ಮಾಡಲು ಕೆಲವು ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಪ್ರತಿ ವ್ಯಕ್ತಿಗೂ ಈ ಚಿಕಿತ್ಸೆ ಫಲಕಾರಿಯಾಗುವ ಸಮಯ ಕೊಂಚ ಏರುಪೇರಾಗಬಹುದು. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಇವನ್ನು ಪ್ರಯೋಗಿಸಬೇಕು.

ಜೇನು ಮತ್ತು ಸೌತೆಕಾಯಿ

ಜೇನು ಮತ್ತು ಸೌತೆಕಾಯಿ

ಎಳೆಯ ಸೌತೆ (ಸಿಪ್ಪೆ ಸಹಿತ) ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಅರೆದು ದಪ್ಪನೆಯ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೈ ಮತ್ತು ಕಾಲಿಗೆ ದಿನಕ್ಕೆರಡು ಬಾರಿ ಹಚ್ಚಿಕೊಳ್ಳುವುದರಿಂದ ಉತ್ತಮ ಫಲ ದೊರಕುತ್ತದೆ. ಪ್ರತಿಬಾರಿಯೂ ಹೊಸತಾಗಿಯೇ ಅರೆಯಬೇಕು. ಹಿಂದಿನ ದಿನ ಅರೆದಿಟ್ಟಿರುವ ಮಿಶ್ರಣ ಫಲಕಾರಿಯಲ್ಲ.

ಆಲಿವ್ ಎಣ್ಣೆಯ ಮಸಾಜ್

ಆಲಿವ್ ಎಣ್ಣೆಯ ಮಸಾಜ್

ಆಲಿವ್ ಎಣ್ಣೆಯನ್ನು ಸ್ವಲ್ಪವೇ ಬಿಸಿ ಮಾಡಿಕೊಂಡು ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಹೆಚ್ಚಿನ ಫಲಕ್ಕೆ ಎಣ್ಣೆ ಬಿಸಿಮಾಡುವಾಗ ನಾಲ್ಕೈದು ಕೇಸರಿಯ ದಳಗಳನ್ನು ಸೇರಿಸುವ ಮೂಲಕ ಇನ್ನೂ ಉತ್ತಮ ಪರಿಣಾಮ ದೊರಕುತ್ತದೆ.

ಎಳನೀರು

ಎಳನೀರು

ಈಗತಾನೇ ಚಿಪ್ಪಿನಿಂದ ಹೊರತೆಗೆದ ಎಳನೀರು ಚರ್ಮದ ಬಣ್ಣವನ್ನು ಬೆಳ್ಳಗಾಗಿಸಲು ನೆರವಾಗುತ್ತದೆ. ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಎಳನೀರನ್ನು ಅದ್ದಿ ಕೈಕಾಲುಗಳ ಮೇಲೆ ಒರೆಸಿಕೊಂಡು ಒಣಗಿದ ಬಳಿಕ ಮತ್ತೆ ಒರೆಸಿ, ಇದನ್ನು ನಾಲ್ಕೈದು ಬಾರಿ ಪುನರಾವರ್ತಿಸಬೇಕು. ಸುಮಾರು ಒಂದು ಘಂಟೆ ಕಳೆದ ಬಳಿಕ ಸ್ವಚ್ಛನೀರಿನಿಂದ ತೊಳೆದುಕೊಳ್ಳಬೇಕು. ವಾರಕ್ಕೆರಡು ಬಾರಿ ಈ ಚಿಕಿತ್ಸೆ ನಡೆಸುವುದರಿಂದ ಚರ್ಮ ಬೆಳ್ಳಗಾಗುವ ಜೊತೆಗೇ ಹಳೆಯ ಕಲೆಗಳೂ ಕರಗತೊಡಗುತ್ತವೆ.

ಲಿಂಬೆಹಣ್ಣಿನ ರಸ ಮತ್ತು ಸೌತೆಕಾಯಿ

ಲಿಂಬೆಹಣ್ಣಿನ ರಸ ಮತ್ತು ಸೌತೆಕಾಯಿ

ಎಳೆಯ ಸೌತೆಕಾಯಿ (ಸಿಪ್ಪೆಸಹಿತ) ಮತ್ತು ಲಿಂಬೆಹಣ್ಣಿನ ರಸವನ್ನು (ಮೂರು + ಒಂದು ಭಾಗದ ಅನುಪಾತದಲ್ಲಿ) ಸೇರಿಸಿ ಅರೆಯಿರಿ. ಈ ಮಿಶ್ರಣವನ್ನು ಕೈ ಮತ್ತು ಕಾಲುಗಳಿಗೆ ಹಚ್ಚಿಕೊಂಡು ಸುಮಾರು ಒಂದು ಘಂಟೆಯ ಬಳಿಕ ಸ್ವಚ್ಛನೀರಿನಲ್ಲಿ ತೊಳೆದುಕೊಳ್ಳುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

ಮೊಸರು

ಮೊಸರು

ಮೊಸರಿನಲ್ಲಿ ಉತ್ತಮ ಪ್ರಮಾಣದ ಸತು, ಲ್ಯಾಕ್ಟಿಕ್ ಆಮ್ಲಗಳಿರುವುದರಿಂದ ಮೊಸರಿನ ಲೇಪನ ಶೀಘ್ರದಲ್ಲಿಯೇ ಚರ್ಮವನ್ನು ಮೊದಲ ವರ್ಣಕ್ಕೆ ತರಲು ಸಹಕಾರಿಯಾಗಿದೆ.

ಟೊಮೇಟೊ ಹಣ್ಣು

ಟೊಮೇಟೊ ಹಣ್ಣು

ಚೆನ್ನಾಗಿ ಹಣ್ಣಾದ ಕೆಂಪು ಟೊಮೇಟೊ ಬೀಜಗಳನ್ನು ಮತ್ತು ಸಿಪ್ಪೆಯನ್ನು ಬೇರ್ಪಡಿಸಿ ಕೇವಲ ತಿರುಳನ್ನು ಅರೆದು ನುಣುಪಾದ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ದಿನಕ್ಕೆರಡು ಬಾರಿ ಕೈ ಮತ್ತು ಕಾಲುಗಳಿಗೆ ಹಚ್ಚಿಕೊಳ್ಳುವುದರಿಂದ ಶೀಘ್ರವೇ ಉತ್ತಮ ಪರಿಣಾಮವನ್ನು ನೋಡಬಹುದು.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಒಂದು ವೇಳೆ ನಿಮ್ಮ ಚರ್ಮದಲ್ಲಿ ಎಣ್ಣೆಯ ಅಂಶ ಹೆಚ್ಚಾಗಿದ್ದರೆ ಕೋಳಿಮೊಟ್ಟೆಯ ಬಿಳಿಭಾಗ ಅತ್ಯಂತ ಸೂಕ್ತವಾಗಿದೆ. ವಾರಕ್ಕೆರಡು ಬಾರಿ ಕೈ ಕಾಲುಗಳಿಗೆ ಮೊಟ್ಟೆಯ ಬಿಳಿಭಾಗವನ್ನು ಹಚ್ಚಿ ಹಾಗೇ ಬಿಡಿ ಸುಮಾರು ಒಂದು ಘಂಟೆಯ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಈ ಚಿಕಿತ್ಸೆಯನ್ನು ವಾರಕ್ಕೆರಡು ಬಾರಿ ಮಾತ್ರ ನಡೆಸಿದರೆ ಸಾಕು.

ಓಟ್ಸ್, ಟೊಮೇಟೊ ಮತ್ತು ಮೊಸರು

ಓಟ್ಸ್, ಟೊಮೇಟೊ ಮತ್ತು ಮೊಸರು

ಸಮಪ್ರಮಾಣದ ಓಟ್ಸ್, ಟೊಮಾಟೋ (ಬೀಜ ಮತ್ತು ಸಿಪ್ಪೆರಹಿತವಾಗಿಸಿ) ಮತ್ತು ಮೊಸರನ್ನು ಅರೆದು ನುಣುಪಾದ ಲೇಪನ ತಯಾರಿಸಿಕೊಳ್ಳಿ. ಇದನ್ನು ಕೈ ಕಾಲುಗಳಿಗೆ ಹಚ್ಚಿ ಒಂದು ಘಂಟೆಯ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಈ ಲೇಪನವನ್ನು ದೇಹದ ಇತರ ಭಾಗಗಳಿಗೂ ಹಚ್ಚಬಹುದು. ಇದರಿಂದ ಚರ್ಮದ ಮೇಲ್ಮೈಯಲ್ಲಿ ಸತ್ತ ಜೀವಕೋಶಗಳಿದ್ದರೆ ಅದನ್ನು ನಿವಾರಿಸಲು ನೆರವಾಗುತ್ತದೆ. ಈ ಚಿಕಿತ್ಸೆಯನ್ನೂ ವಾರಕ್ಕೆರಡು ಬಾರಿ ನಡೆಸಬೇಕು.

ಹಾಲು, ಜೇನು ಮತ್ತು ಪೊಪ್ಪಾಯಿ

ಹಾಲು, ಜೇನು ಮತ್ತು ಪೊಪ್ಪಾಯಿ

ಚೆನ್ನಾಗಿ ಹಣ್ಣಾದ ಪೊಪ್ಪಾಯಿ (ಬೀಜ ಮತ್ತು ಸಿಪ್ಪೆ ರಹಿತವಾಗಿಸಿ), ಜೇನು ಮತ್ತು ಹಾಲಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ನುಣುಪಾದ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ದಿನಕ್ಕೆರಡು ಬಾರಿ ನಡೆಸಿದರೆ ಉತ್ತಮ ಪರಿಣಾಮ ದೊರಕುತ್ತದೆ.

ಹಸಿಹಾಲು

ಹಸಿಹಾಲು

ಇನ್ನೂ ಬೇಯಿಸಿರದ ಹಸಿ ಹಾಲು ಚರ್ಮವನ್ನು ಬೆಳ್ಳಗಾಗಿಸಲು ಉತ್ತಮವಾಗಿದೆ. ಚರ್ಮದ ವಿಷಯದಲ್ಲಿ ಕತ್ತೆಯ ಹಾಲು ಅತ್ಯುತ್ತಮವಾಗಿದ್ದರೂ ಸುಲಭವಾಗಿ ಲಭ್ಯವಾಗದ ಕಾರಣ ಹಸುವಿನ ಹಾಲನ್ನು ಬಳಸಬಹುದು (ಪುರಾತನ ಈಜಿಪ್ಟ್ ನ ರಾಣಿ ಕ್ಲಿಯೋಪಾತ್ರ ಕತ್ತೆಹಾಲಿನಿಂದ ಸ್ನಾನ ಮಾಡಿಕೊಳ್ಳುತ್ತಿದ್ದಳೆಂದು ಇತಿಹಾಸ ವಿವರಿಸುತ್ತದೆ). ಈ ಚಿಕಿತ್ಸೆಯನ್ನು ದಿನಕ್ಕೆರಡು ಬಾರಿ ನಡೆಸುವುದರಿಂದ ಹಳೆಯ ಕಲೆಗಳೂ ನಿಧಾನವಾಗಿ ಮಾಯವಾಗುತ್ತವೆ.

ನೆನೆಸಿದ ಬಾದಾಮಿ

ನೆನೆಸಿದ ಬಾದಾಮಿ

ರಾತ್ರಿಯಿಡೀ ಬಾದಾಮಿಗಳನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿಟ್ಟು ಬೆಳಿಗ್ಗೆ ನುಣ್ಣಗೆ ಅರೆದು ಲೇಪನ ತಯಾರಿಸಿಕೊಳ್ಳಿ. (ಕಲ್ಲಿನ ಮೇಲೆ ತೇದಿ ತಯಾರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ). ಈ ಲೇಫನವನ್ನು ದಿನಕ್ಕೆರಡು ಬಾರಿ ಕೈಕಾಲುಗಳಿಗೆ ಹಚ್ಚುವುದರಿಂದ ನೈಸರ್ಗಿಕ ವರ್ಣವನ್ನು ಶೀಘ್ರವಾಗಿ ಪಡೆಯಬಹುದು.

ಶ್ರೀಗಂಧ ಮತ್ತು ಮುಲ್ತಾನಿ ಮಿಟ್ಟಿಯ ಲೇಪನ

ಶ್ರೀಗಂಧ ಮತ್ತು ಮುಲ್ತಾನಿ ಮಿಟ್ಟಿಯ ಲೇಪನ

ಶ್ರೀಗಂಧದ ಕೊರಡನ್ನು ಕಲ್ಲಿನ ಮೇಲೆ ತೇದಿ ನಯವಾದ ಲೇಪನವನ್ನು ತಯಾರಿಸಿ. ಇದಕ್ಕೆ ಸಮಪ್ರಮಾಣದಲ್ಲಿ ಜೇಡಿಮಣ್ಣು (ಮುಲ್ತಾನಿ ಮಿಟ್ಟಿ) ಯನ್ನು ಸೇರಿಸಿ ಕೈಕಾಲುಗಳಿಗೆ ಹಚ್ಚಿಕೊಳ್ಳಿ. ಒಂದು ಘಂಟೆಯ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಈ ಲೇಪನವನ್ನು ಮುಖಕ್ಕೂ ಹಚ್ಚಿಕೊಳ್ಳಬಹುದು. (ಫೇಸ್ ಪ್ಯಾಕ್ ತರಹ)

ಜೀರಿಗೆ ಕಾಳುಗಳು

ಜೀರಿಗೆ ಕಾಳುಗಳು

ಕೆಲವು ಜೀರಿಗೆ ಕಾಳುಗಳನ್ನು (ನಾಲ್ಕು ಲೋಟಕ್ಕೆ ಒಂದು ಚಿಕ್ಕ ಚಮಚದಷ್ಟು) ಕುಡಿಯುವ ನೀರಿನಲ್ಲಿ ಸುಮಾರು ನಾಲ್ಕರಿಂದ ಐದು ನಿಮಿಷಗಳ ವರೆಗೆ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ನೀರಿನಿಂದ ಜೀರಿಗೆ ಕಾಳುಗಳನ್ನು ತೆಗೆದುಬಿಡಿ. ಈ ನೀರು ತಣ್ಣಗಾದ ಬಳಿಕ (ಉಗುರು ಬೆಚ್ಚನಿದ್ದರೆ ಒಳ್ಳೆಯದು) ಕೈಗಳನ್ನು ಮತ್ತು ಕಾಲುಗಳನ್ನು ಪದೇ ಪದೇ ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ಚಿಕಿತ್ಸೆಯನ್ನು ನಡೆಸುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ಮಸ್ಸೂರಿ ಬೇಳೆ

ಮಸ್ಸೂರಿ ಬೇಳೆ

ಕೇಸರಿ ಬಣ್ಣದ ಬೇಳೆಯಾದ ಮಸ್ಸೂರಿ (ಅಥವಾ ಮಸೂರ್ ದಾಲ್) ಬೇಳೆಯನ್ನು ಬೇಯಿಸಿ ನೀರನ್ನು ಸೋಸಿ. ಇದನ್ನು ಸಮಪ್ರಮಾಣದಲ್ಲಿ ಹಾಲು ಅಥವಾ ಮೊಸರಿನಲ್ಲಿ ಸೇರಿಸಿ ಕೈಕಾಲುಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಲ್ಲಿ ಚರ್ಮದ ಬಣ್ಣ ಬೆಳ್ಳಗಾಗಿ ಕಾಂತಿಯುಕ್ತವಾಗುತ್ತದೆ.

ಕಿತ್ತಳೆಯ ಸಿಪ್ಪೆ

ಕಿತ್ತಳೆಯ ಸಿಪ್ಪೆ

ಈಗತಾನೇ ಸುಲಿದ ಕಿತ್ತಳೆಯ ಸಿಪ್ಪೆಯನ್ನು ಅರೆದು ಸಮಪ್ರಮಾಣದಲ್ಲಿ ಹಾಲು ಅಥವಾ ಮೊಸರಿನೊಂದಿಗೆ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ ಸುಮಾರು ಒಂದು ಘಂಟೆಯ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.

ಲಿಂಬೆಹಣ್ಣಿನ ರಸ

ಲಿಂಬೆಹಣ್ಣಿನ ರಸ

ಈಗ ತಾನೇ ಕೊಯ್ದ ಲಿಂಬೆಹಣ್ಣಿನ ರಸವನ್ನು ಹಾಗೆಯೇ ಕೈ ಮತ್ತು ಕಾಲುಗಳಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದು ನಿಮಿಷದ ಬಳಿಕ (ಇದಕ್ಕೂ ಮೊದಲು ಉರಿಯುತ್ತಿದೆ ಎನಿಸಿದರೆ ಆ ಕೂಡಲೇ) ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಶೀಘ್ರವಾಗಿ ಚರ್ಮ ನೈಸರ್ಗಿಕ ಬಣ್ಣ ಪಡೆಯಲು ಈ ವಿಧಾನ ಸಹಕಾರಿಯಾಗಿದೆ.

ಆಲುಗಡ್ಡೆ

ಆಲುಗಡ್ಡೆ

ಆಲುಗಡ್ಡೆಯ ಸಿಪ್ಪೆಸುಲಿದು ನುಣ್ಣಗೆ ಅರೆಯಿರಿ. ಈ ಮಿಶ್ರಣವನ್ನು ತೆಳುವಾದ ಬಟ್ಟೆಯಲ್ಲಿ ಕಿವುಚಿ ರಸವನ್ನು ಹಿಂಡಿಕೊಳ್ಳಿ. ಈ ರಸವನ್ನು ಕೂಡಲೇ ಚರ್ಮಕ್ಕೆ ಹಚ್ಚಿ ಒಣಗಲು ಬಿಡಿ. ಸುಮಾರು ಒಂದು ಘಂಟೆಯ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.

ದಾಲ್ಚಿನ್ನಿ ಮತ್ತು ಜೇನು

ದಾಲ್ಚಿನ್ನಿ ಮತ್ತು ಜೇನು

ಅರ್ಧ ಚಮಚ ದಾಲ್ಚಿನ್ನಿಯನ್ನು ಚೆನ್ನಾಗಿ ಪುಡಿಮಾಡಿ ಅರ್ಧ ಚಮಚ ಜೇನಿನೊಂದಿಗೆ ಬೆರೆಸಿರಿ. ಈ ಲೇಪನವನ್ನು ಕೈಕಾಲುಗಳಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಒಂದು ಗಂಟೆಯ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.

English summary

Quick Remedies To Make Hands & Feet Fair

Some Indian men and women desire to get fair hands and legs. Apart from creams and ointments, Indians make use of home remedies to get fair hands and feet naturally. Bleaching agents are the best when it comes to making your skin fair naturally. Lemon is one such ingredient.
X
Desktop Bottom Promotion