For Quick Alerts
ALLOW NOTIFICATIONS  
For Daily Alerts

ಅಪ್ಸರೆಯಂತಹ ತ್ವಚೆಗೆ ಹೇಳಿ ಮಾಡಿಸಿದ ಗಿಡಗಳಿವು ಕಣ್ರೀ!

By Deepak
|

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹಲವರು ತಮ್ಮ ಆರೋಗ್ಯ ಮತ್ತು ತ್ವಚೆಯ ಸಮಸ್ಯೆಗಳಿಗಾಗಿ ಗಿಡಮೂಲಿಕೆಗಳತ್ತ ವಾಲುತ್ತಿದ್ದಾರೆ. ಬೇವು, ಅಲೋವೆರಾ ಮುಂತಾದ ಗಿಡಗಳು ಕೇವಲ ದೇಹದ ಅಂಗಗಳಿಗೆ ಅಷ್ಟೇ ಅಲ್ಲದೆ, ತ್ವಚೆಗು ಸಹ ಉಪಯೋಗಕಾರಿಯಾಗಿರುವುದು ಗೊತ್ತಿರುವ ವಿಚಾರವೇ ಆಗಿದೆ.

ಈಗಿಡಗಳಲ್ಲಿರುವ ಅಂಶಗಳು ನಿಮ್ಮ ತ್ವಚೆಗೆ ವರ್ಷದ ಎಲ್ಲಾ ಕಾಲದಲ್ಲಿ ಸಹ ಉಪಯೋಗಕಾರಿಯಾಗಿರುತ್ತವೆ. ನಿಮ್ಮ ತ್ವಚೆಯನ್ನು ಸುಂದರ ಮಾಡಿಕೊಳ್ಳಲು ಈ ಗಿಡಗಳ ಉಪಯೋಗವನ್ನು ಪಡೆಯಿರಿ.

ಬನ್ನಿ ಇಂದು ನಿಮ್ಮ ತ್ವಚೆಗೆ ಸಹಾಯ ಮಾಡುವ ಗಿಡಗಳ ಕುರಿತು ತಿಳಿದುಕೊಳ್ಳೋಣ. ಇದರಲ್ಲಿರುವ ಮತ್ತೊಂದು ಪ್ರಯೋಜನವೆಂದರೆ, ಇದರಿಂದ ಯಾವುದೇ ಅಡ್ಡ ಪರಿಣಾಮಗಳು ನಿಮ್ಮನ್ನು ಕಾಡುವುದಿಲ್ಲ. ಆದ್ದರಿಂದ ಇವುಗಳ ಬಗ್ಗೆ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬನ್ನಿ ಅಂತಹ ಪ್ರಯೋಜನಕಾರಿಯಾದ ಗಿಡಗಳ ಕುರಿತು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಅಲೋವೆರಾ

ಅಲೋವೆರಾ

ಲೋಳೆ ಅಥವಾ ಅಲೋವೆರಾವು ತ್ವಚೆಗೆ ಹೇಳಿ ಮಾಡಿಸಿದ ಗಿಡವಾಗಿರುತ್ತದೆ. ಅಲೋವಿರಾದ ಜೆಲ್ ಅನ್ನು ಮೊಡವೆಗಳಿಂದ ಮುಕ್ತಿ ಪಡೆಯಲು ಬಳಸಲಾಗುತ್ತದೆ. ಇದೊಂದು ಔಷಧೀಯ ಅಂಶವಾಗಿರುವ ಗಿಡಮೂಲಿಕೆಯಾಗಿದ್ದು, ಇದು ಸನ್ ಬರ್ನ್ ಅನ್ನು ನಿವಾರಿಸುವುದರ ಜೊತೆಗೆ ಇದರಲ್ಲಿರುವ ತಂಪುಕಾರಿ ಗುಣಗಳು ಬೇಸಿಗೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಲ್ಯಾವೆಂಡರ್

ಲ್ಯಾವೆಂಡರ್

ಈ ಮಧುರವಾದ ಸುವಾಸನೆ ಬೀರುವ ಗಿಡವು ನಿಮ್ಮ ತ್ವಚೆಗೆ ಪ್ರಯೋಜನಕಾರಿಯಾಗಿರುತ್ತದೆ. ಲ್ಯಾವೆಂಡರ್ ನಿಮ್ಮ ತ್ವಚೆಯಲ್ಲಿರುವ ಟಾಕ್ಸಿನ್‍ಗಳನ್ನು ಹೊರಹಾಕುತ್ತದೆ. ಇದರಲ್ಲಿರುವ ಸುಗಂಧವು ನಿಮಗೆ ಅಪ್ಯಾಯಮಾನವಾಗಿರುವುದರ ಜೊತೆಗೆ, ನಿಮ್ಮ ತ್ವಚೆಯನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ.

ಗುಲಾಬಿ

ಗುಲಾಬಿ

ನಿಮಗೆ ಎಂದಾದರೂ ಬಿಡುವು ದೊರೆತರೆ ಗುಲಾಬಿ ಹೂಗಳತ್ತ ಹೋಗಿ. ಅದರ ಫಕಳೆಗಳನ್ನು ಕಿತ್ತುಕೊಳ್ಳಿ. ಇದಕ್ಕೆ ಈ ಮಧುರವಾದ ಸುವಾಸನೆಯು ಬರಲು ಕಾರಣ, ಅದರಲ್ಲಿರುವ ಅಧಿಕ ನೀರಿನಂಶ. ಈ ಹೂವಿನ ರಸವನ್ನು ಹಿಂಡಿಕೊಂಡು ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ನಂತರ ತೊಳೆಯಿರಿ.

ಟೀ ಟ್ರೀ

ಟೀ ಟ್ರೀ

ಈ ಗಿಡವು ನಿಮ್ಮ ತ್ವಚೆಯಲ್ಲಿ ಕಂಡುಬರುವ ಮೊಡವೆ ಮತ್ತು ರ‍್ಯಾಷಸ್ ಗಳನ್ನು ಗುಣ ಮುಖ ಮಾಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಇದರ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ತ್ವಚೆಯಲ್ಲಿ ಸಮಸ್ಯೆಯಿರುವ ಭಾಗಕ್ಕೆ ಲೇಪಿಸಬೇಕು. ಒಣಗಿದ ಮೇಲೆ ಇದನ್ನು ತೊಳೆಯಿರಿ, ಸಾಕು

ಬೇವು

ಬೇವು

ಬೇವಿನಲ್ಲಿ ಅದ್ಭುತವಾದ ಆಂಟಿಆಕ್ಸಿಡೆಂಟ್‍ಗಳು ಇರುತ್ತವೆ. ಇದು ತ್ವಚೆಗೆ ಒಳ್ಳೆಯದು. ಬೇವಿನಲ್ಲಿರುವ ಎಣ್ಣೆಯು,ನಿಮ್ಮ ತ್ವಚೆಯನ್ನು ಯೌವನದಿಂದ ಕಂಗೊಳಿಸುವಂತೆ ಮಾಡುತ್ತದೆ. ಜೊತೆಗೆ ತ್ವಚೆಯ ಬಣ್ಣವನ್ನು ಸಹ ಸುಧಾರಿಸುತ್ತದೆ.

English summary

Plants That Are Good For Your Skin

These days there are a lot of people who are turning to medicinal plants for proper skin care and health benefits. Plants like neem and aloe vera are not only good for your body and organs, but they are also good for your skin.
X
Desktop Bottom Promotion