For Quick Alerts
ALLOW NOTIFICATIONS  
For Daily Alerts

ಅಜ್ಜಿಗೆ ಆಂಟಿಯಾಗೋ ಆಸೆ ಇದ್ರೆ ಏನು ಮಾಡ್ಬೇಕು?

By Su.Ra
|

ಯಾರೇ ಏನೇ ಮಾಡಿದ್ರು ವಯಸ್ಸು ನಿಲ್ಲೋದಿಲ್ಲ. ಕೆಲವು ಹಿಂದಿನ ಕಾಲದ ಹಿರೋಯಿನ್ಸ್‌ರನ್ನು ನೋಡಿ ನೀವು ಅಂದುಕೊಳ್ಳಬಹುದು. ವಾವ್ ಇವರೆಷ್ಟು ಚೆಂದ ಇದ್ದಾರೆ. ಇಷ್ಟು ವಯಸ್ಸಾದ್ರೂ ವಯಸ್ಸಾದಂತೆ ಕಾಣೋದೆ ಇಲ್ಲವಲ್ಲ ಅಂತ. ಹೌದು ವಯಸ್ಸು ನಿಂತ ನೀರಿನಂತಲ್ಲ. ಮುಂದೆ ಸಾಗುತ್ತಲೇ ಇರುತ್ತೆ. ವಯಸ್ಸಾದಂತೆ ಬ್ಯೂಟಿ ಮಾತ್ರ ಕಳೆಗುಂದತ್ತಲೇ ಸಾಗುತ್ತೆ. ಹಾಗಂತ ವಯಸ್ಸಾದವ್ರು ಬೇಸರದಲ್ಲಿ ಕೂರೂಕೆ ಆಗುತ್ತಾ? ಬ್ಯೂಟಿ ಅನ್ನೋದು ಕೇವಲ ಹುಡುಗಿಯರಿಗೆ ಮಾತ್ರವಲ್ಲವಲ್ಲ.

ವಯಸ್ಸಾದವ್ರಿಗೂ ತಾನು ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ ಇರೋದು ಮಾಮೂಲು. ಬಟ್ ವಯಸ್ಸಾದಂತೆ ಮುಖದ ಅಂದ ಸ್ವಲ್ಪ ಕಳೆಗುಂದುತ್ತೆ. ರಿಂಕಲ್ಸ್ ಆಗುತ್ತೆ. ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗಿರುತ್ತೆ. ಎಷ್ಟೇ ಮೈಂಟೇನ್ ಮಾಡಿದ್ರೂ ವಯಸ್ಸನ್ನು ಹೈಡ್ ಮಾಡೋಕೆ ಆಗೋದೇ ಇಲ್ಲ ಅನ್ನುವಂತ ಕೆಲವು ಬದಲಾವಣೆಗಳು ನಿಮ್ಮ ಸ್ಕಿನ್‌ನಲ್ಲಿ ಆಗಿರಬಹುದು. ಅದು ಸಾಮಾನ್ಯ ಕೂಡ ಹೌದು..

ವಯಸ್ಸು 50 ದಾಟಿದ್ರೂ, ಅಜ್ಜಿ ಅಂತ ಎಲ್ಲರ ಬಳಿ ಕರೆಸಿಕೊಳ್ತಾ ಇದ್ರೂ ನೀವು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಕೆಲವು ದಿನಗಳಲ್ಲಿ ಅಜ್ಜಿ ಅಂತ ಕರೀತಾ ಇದ್ದವರು ಆಂಟಿ ಅಂತ ಕರಿಯೋ ಹಾಗೆ ಮಾಡ್ಕೋಬಹುದು.ಅದಕ್ಕೆ ಬೇಕಾಗಿರೋದು ಸರಿಯಾದ ಮೇಕಪ್‌ ಅಷ್ಟೇ.. ಅಜ್ಜಿಯಂದಿರು ಹೇಗೆ ಮೇಕಪ್ ಮಾಡ್ಕೊಂಡ್ರೆ ಆಂಟಿಯಂತೆ ಕಾಣಬಹುದು ಅನ್ನೋದನ್ನು ನಾವು ತಿಳಿಸುತ್ತೇವೆ.

ಇನ್ನೇನು, ವಯಸ್ಸಾಯ್ತು ದೇವರ ಸ್ಮರಣೆ ಮಾಡ್ತಾ ಇರೋ ವಯಸ್ಸಿದು ಅನ್ನೋ ಭಾವನೆ ಕೆಲವು ಅಜ್ಜಿಯಂದಿರಲ್ಲಿ ಇರಬಹುದು. ಆದ್ರೀಗ ಕಾಲ ಹಾಗಿಲ್ವಲ್ಲ. ಅಜ್ಜಿಯೇ ಆದ್ರೂ ಫಂಕ್ಷನ್‌ಗೆ ಹೋಗುವಾಗ ಸ್ವಲ್ಪ ನೀಟ್‌ ಆಗಿ ಡ್ರೆಸ್ ಅಪ್ ಆದ್ರೆ ಆಗ ಆ ಫಂಕ್ಷನ್‌ನಲ್ಲಿ ಕ್ಯೂಟ್ ಅಜ್ಜಿಗೆ ಸಿಗೋ ಬೆಲೆನೇ ಬೇರೆ ಅಲ್ವಾ. ಹಾಗಾಗಿ ಅಜ್ಜಿಯಂದಿರೇ ನಿಮ್ಗೆ ಮೇಕಪ್ ಮಾಡ್ಕೊಳ್ಳೋದಕ್ಕೆ ಟ್ರಿಕ್ಸ್ ಹೇಳ್ತೀವಿ ಕೇಳಿ...

ಸ್ಕಿನ್ ಟೋನ್‌ಗೆ ತಕ್ಕಂತೆ ಇರಲಿ ಮೇಕಪ್

ಸ್ಕಿನ್ ಟೋನ್‌ಗೆ ತಕ್ಕಂತೆ ಇರಲಿ ಮೇಕಪ್

ಸಿಂಪಲ್ ಎಂಡ್ ಕ್ಯೂಟ್ ಮೇಕಪ್ ಮಾಡ್ಕೊಂಡ್ರೆ ನೀವು ನಿಮ್ಮ ಕಾನ್ಫಿಡೆನ್ಸ್ ಬಿಲ್ಡ್‌ಅಪ್ ಮಾಡ್ಕೊಬಹುದು. ಸೋ ಅಜ್ಜಿಯಂದಿರು ಮೊದಲು ಸ್ಕಿನ್ ಟೋನ್‌‌ಗೆ ತಕ್ಕಂತೆ ಮೇಕಪ್ ಮಾಡ್ಕೋಬೇಕು. ನಿಮ್ಮ ಚರ್ಮಕ್ಕೆ ತಕ್ಕಂತೆ ಮೇಕಪ್ ಮಾಡ್ಕೊಂಡಿಲ್ಲ ಅಂದ್ರೆ ಖಂಡಿತ ನೀವು ಚೆನ್ನಾಗಿ ಕಾಣೋಕೆ ಸಾಧ್ಯವಿಲ್ಲ. ನಿಮ್ಮದು ಯಾವ ಸ್ಕಿನ್ ಟೋನ್ ಅಂತ ಸಹಜವಾಗೇ ನಿಮಗೆ ಗೊತ್ತಿರುತ್ತೆ. ಅದಕ್ಕೆ ಸರಿಯಾದ ಕಾಸ್ಮೆಟಿಕ್‌ಗಳನ್ನು ಖರೀದಿಸಿ ಆರೈಕೆ ಮಾಡಿಕೊಳ್ಳಿ.

ನೆರಿಗೆಗಳನ್ನು ಮುಚ್ಚಿಕೊಳ್ಳೋದನ್ನು ಮರೀಬೇಡಿ

ನೆರಿಗೆಗಳನ್ನು ಮುಚ್ಚಿಕೊಳ್ಳೋದನ್ನು ಮರೀಬೇಡಿ

ರಿಂಕಲ್ಸ್ ಕವರ್ ಮಾಡ್ಕೋಬೇಕು. ಅದಕ್ಕಾಗಿ ಫೌಂಡೇಷನ್ ತುಂಬಾ ಇಂಪಾರ್ಟೆಂಟ್. ಎರಡು ಕೋಟಿಂಗ್‌ನಲ್ಲಿ ಫೌಂಡೇಷನ್ ಹಾಕೋದು ಒಳಿತು. ಅದ್ರಲ್ಲಿ ಡಾರ್ಕ್ ಸರ್ಕಲ್ ಕೂಡ ಕವರ್ ಮಾಡ್ಕೊಳ್ಳಿ. ಸ್ಪಾಂಜ್‌ನಲ್ಲಿ ನೀಟಾಗಿ ಫೌಂಡೇಷನ್ ಕ್ರೀಮ್ ಅಪ್ಲೈ ಮಾಡ್ಕೊಬೇಕು. ವಯಸ್ಸಾದ ಮೇಲೆ ರಿಂಕಲ್ಸ್‌ಗಳಿರೋದು ಮಾಮೂಲು.. ಆ ನೆರಿಗೆಗಳೇ ನಿಮ್ಮನ್ನು ಅಜ್ಜಿ ಅಂತ ಕರಿಯೋ ಹಾಗೆ ಮಾಡ್ತಾ ಇರೋದು. ಸೋ ನೀವು ಮಾಡ್ಬೇಕಾಗಿರೋದು ನಿಮ್ಮ ಮುಖದಲ್ಲಿರುವ ನೆರಿಗೆಗಳನ್ನು ಫೌಂಡೇಷನ್ ಕ್ರೀಮ್‌ನಿಂದ ಕವರ್ ಮಾಡ್ಕೊಳ್ಳಿ.ರಿಂಕಲ್ಸ್ ಕವರ್ ಮಾಡ್ಕೋಬೇಕು. ಅದಕ್ಕಾಗಿ ಫೌಂಡೇಷನ್ ತುಂಬಾ ಇಂಪಾರ್ಟೆಂಟ್. ಎರಡು ಕೋಟಿಂಗ್‌ನಲ್ಲಿ ಫೌಂಡೇಷನ್ ಹಾಕೋದು ಒಳಿತು. ಅದ್ರಲ್ಲಿ ಡಾರ್ಕ್ ಸರ್ಕಲ್ ಕೂಡ ಕವರ್ ಮಾಡ್ಕೊಳ್ಳಿ. ಸ್ಪಾಂಜ್‌ನಲ್ಲಿ ನೀಟಾಗಿ ಫೌಂಡೇಷನ್ ಕ್ರೀಮ್ ಅಪ್ಲೈ ಮಾಡ್ಕೊಬೇಕು. ವಯಸ್ಸಾದ ಮೇಲೆ ರಿಂಕಲ್ಸ್‌ಗಳಿರೋದು ಮಾಮೂಲು.. ಆ ನೆರಿಗೆಗಳೇ ನಿಮ್ಮನ್ನು ಅಜ್ಜಿ ಅಂತ ಕರಿಯೋ ಹಾಗೆ ಮಾಡ್ತಾ ಇರೋದು. ಸೋ ನೀವು ಮಾಡ್ಬೇಕಾಗಿರೋದು ನಿಮ್ಮ ಮುಖದಲ್ಲಿರುವ ನೆರಿಗೆಗಳನ್ನು ಫೌಂಡೇಷನ್ ಕ್ರೀಮ್‌ನಿಂದ ಕವರ್ ಮಾಡ್ಕೊಳ್ಳಿ.

ಮುಖಕ್ಕೆ ಮಾತ್ರ ಮೇಕಪ್ ಮಾಡಿದ್ರೆ ಸಾಕಾಗಲ್ಲ

ಮುಖಕ್ಕೆ ಮಾತ್ರ ಮೇಕಪ್ ಮಾಡಿದ್ರೆ ಸಾಕಾಗಲ್ಲ

ಮುಖ ಚೆನ್ನಾಗಿ ಕಾಣ್ಬೇಕು ಅಂತ ಕೇವಲ ಮುಖಕ್ಕೆ ಮಾತ್ರ ಮೇಕಪ್ ಮಾಡ್ಕೊಬೇಡಿ. ಬದಲಾಗಿ ಕುತ್ತಿಗೆಯ ಭಾಗಕ್ಕೂ ಮೇಕಪ್ ಇರಲಿ. ಕುತ್ತಿಗೆಯಲ್ಲಿರುವ ರಿಂಕಲ್ಸ್‌ಗಳನ್ನು ಕೂಡ ಕವರ್ ಮಾಡ್ಕೊಂಡಾಗ ಮೇಕಪ್ ಫರ್ಫೆಕ್ಟ್ ಅನ್ನಿಸುತ್ತೆ. ಹೆಚ್ಚಿನ ಅಜ್ಜಿಯಂದಿರುವ ಮಾಡುವ ಮಿಸ್ಟೇಕ್ ಇದು.. ಮುಖಕ್ಕೆ ಮಾತ್ರ ಮೇಕಪ್ ಮಾಡ್ಕೊಂಡಿರ್ತಾರೆ.. ಬಟ್ ನೀವು ಮುಖಕ್ಕೆ ಮಾತ್ರ ಮೇಕಪ್ ಮಾಡಿದಾಗ ಕುತ್ತಿಗೆಯ ಬಳಿ ಮೇಕಪ್ ಇಲ್ಲದೇ ನಿಮ್ಮ ವಯಸ್ಸು ಎಲ್ಲರಿಗೂ ಗೊತ್ತಾಗುವ ಹಾಗೆ ಆಗುತ್ತೆ ಅನ್ನೋದನ್ನು ಮರೀಬೇಡಿ..

ಕಣ್ಣು, ಮೂಗಿನ ಮೇಕಪ್‌ಗೆ ಇಂಪಾರ್ಟೆನ್ಸ್ ಕೊಡಿ

ಕಣ್ಣು, ಮೂಗಿನ ಮೇಕಪ್‌ಗೆ ಇಂಪಾರ್ಟೆನ್ಸ್ ಕೊಡಿ

ಫೌಂಡೇಷನ್ ಕ್ರೀಮ್ ಅಪ್ಲೈ ಆದ ನಂತ್ರ ನೀಟಾಗಿ ನೋಸ್ ಕಟ್ ಮಾಡ್ಕೊಳ್ಳಿ. ಆಗ ನಿಮ್ಮ ಮೂಗು ಸುಂದರವಾಗಿ ಕಾಣಲು ಇದು ಸಹಕಾರಿಯಾಗುತ್ತೆ. ಮೂಗಿಗೆಲ್ಲ ಎಂತಹ ಮೇಕಪ್ ಅಂತ ನಿಮ್ಗೆ ಅನ್ನಿಸ್ತಾ ಇರ್ಬಹುದು. ಆದ್ರೆ ನೋಸ್ ಕಟ್ ಮಾಡದೇ ಇದ್ರೆ ನಿಮ್ಮ ಮೇಕಪ್ ಪರ್ಫೆಕ್ಟ್ ಆಗಲ್ಲ ಅನ್ನೋದು ನೆನಪಿರಲಿ.. ಇನ್ನು ಕಣ್ಣಿನ ಮೇಕಪ್.. ಸ್ವಲ್ಪ ಐ ಶಾಡೋ ಹಾಕಿ. ಮೇಕಪ್ ಲೈಟಾಗಿರಲಿ ಬಟ್ ರಿಚ್ ಆಗಿರಲಿ.. ನಂತ್ರ ಐ ಲೈನರ್‌ನಿಂದ ಕಣ್ಣಿನ ಸೌಂದರ್ಯ ಹೆಚ್ಚಿಸಿಕೊಳ್ಳಿ. ಕಣ್ಣಿನ ಬಳಿ ಹೆಚ್ಚು ರಿಂಕಲ್ಸ್ ಇರೋದು ಕಾಮನ್. ಬಟ್ ಐ ಮೇಕಪ್ ಚೆನ್ನಾಗಿ ಮಾಡ್ಕೊಂಡ್ರೆ ಗ್ರ್ಯಾನಿ ಲುಕ್ ಹೊರಟು ಹೋಗಿ, ಆಂಟಿ ಲುಕ್ ಬರೋದ್ರಲ್ಲಿ ಡೌಟೇ ಇಲ್ಲ. ನಂತ್ರ ಕಣ್ಣಿಗೆ ಸ್ವಲ್ಪ ಕಾಡಿಗೆ ಹಚ್ಚಿ. ರೆಪ್ಪೆಗಳಿಗೆ ಮಸ್ಕರ ಹಚ್ಚಿದ್ರೇನೇ ಐ ಮೇಕಪ್ ಕಂಪ್ಲೀಟ್ ಅನ್ನಿಸಿಕೊಳ್ಳೋದು. ಅದು ಗ್ರಾನಿಗಾದ್ರೂ ಸೈ, ಆಂಟಿಗಾದ್ರೂ ಸೈ ಇಲ್ಲ ಎಂಗ್‌ಸ್ಟರ್ಸ್‌ಗಾದ್ರೂ ಅಷ್ಟೇ.. ಐ ಮೇಕಪ್ಪೇ ಮೇಕಪ್ಪಿನ ಹೈಲೆಟ್ ಅನ್ನಿಸಿಕೊಳ್ಳೋದು. ಸುಂದರವಾದ ಐ ಮೇಕಪ್ , ಅಜ್ಜಿಗೊಂದು ಕಳೆ ನೀಡುತ್ತೆ.

ತುಟಿಯ ರಂಗು ಹೆಚ್ಚಿಸಿಕೊಳ್ಳಿ

ತುಟಿಯ ರಂಗು ಹೆಚ್ಚಿಸಿಕೊಳ್ಳಿ

ನಿಮ್ಗೆ ಸ್ಯೂಟೇಬಲ್ ಅನ್ನಿಸುವ ಲಿಪ್‌ಸ್ಟಿಕ್ ಫಾಲೋ ಮಾಡಿ, ಲಿಪ್‌ಲೈನರ್ ಹಚ್ಚಿ. ಲಿಪ್‌ಸ್ಟಿಕ್ ಮತ್ತು ಲಿಪ್‌ಗ್ಲಾಸ್ ಹಚ್ಕೊಳ್ಳಿ. ನಂತ್ರ ಚಿನ್‌ಕಟ್, ಬ್ಲಷರ್ ಹಚ್ಚಿಕೊಳ್ಳಬೇಕು. ಚಿನ್ ಕಟ್ ಮಾಡ್ಕೊಂಡ್ರೆ ರಿಂಕಲ್ಸ್ ನಿಂದ ಜೋತಂತೆ ಕಾಣುವ ಚರ್ಮ ಅವೈಡ್ ಆಗಿ ಮುಖದ ಶೇಪ್ ಬ್ಯೂಟಿಫುಲ್ ಅನ್ನಿಸುತ್ತೆ.

ಸರಿಯಾದ ಹೇರ್‌ಸ್ಟೈಲ್ ಮಾಡ್ಕೊಳ್ಳಲೇ ಬೇಕು

ಸರಿಯಾದ ಹೇರ್‌ಸ್ಟೈಲ್ ಮಾಡ್ಕೊಳ್ಳಲೇ ಬೇಕು

ಇಷ್ಟೆಲ್ಲ ಮಾಡ್ಕೊಂಡ್ರೆ ಮೇಲೆ ಸ್ಯೂಟೇಬಲ್ ಹೇರ್‌ಸ್ಟೈಲ್ ಇಲ್ಲದೇ ಇದ್ರೆ ಹೇಗೆ ಹೇಳಿ. ವಯಸ್ಸಾಗ್ತಾ ಆಗ್ತಾ ಕೂದಲು ಕಡಿಮೆಯಾಗಿರುತ್ತೆ. ಹೇಗೆ ಹೇರ್ ಸ್ಟೈಲ್ ಮಾಡ್ಕೊಂಡ್ರೂ ಸ್ಯೂಟ್ ಆಗಲ್ವೇನೋ ಅಂತ ಅನ್ನಿಸ್ತಾ ಇರುತ್ತೆ. ಹಿಂದಿನವ್ರೆಲ್ಲ ಒಂದು ಗಂಟು ಹಾಕಿಕೊಂಡು ಬಿಡ್ತಿದ್ರು. ಬಟ್ ಈಗಿನ ಕಾಲ ಅದಲ್ವಲ್ಲ. ಕೂದಲಿಗೊಂದು ಸ್ಟೈಲಿಶ್ ಲುಕ್ ಕೊಟ್ರೆ ಗ್ರ್ಯಾನಿ ಮೇಕಪ್ ಬೆಸ್ಟ್ ಅನ್ನಿಸುತ್ತೆ. ಅದಕ್ಕಾಗಿ ಕೂದಲಿಗೆ ಸ್ವಲ್ಪ ಸ್ಟೈಲಿಶ್ ಲುಕ್ ನೀಡಬೇಕು. ಪಫ್ ಹೇರ್‌ಸ್ಟೈಲ್ ಮಾಡಿ, ಹೇರ್ ಟೈ ಮಾಡದೆ, ಪಿನ್‌ಗಳಿಂದ ಬ್ಯಾಕ್‌ಫ್ರೀ ಹೇರ್ ಸ್ಟೈಲ್‌ ಈಗಿನ ಗ್ರಾನೀಸ್‌ಗೆ ಫರ್ಫೆಕ್ಟ್ ಮ್ಯಾಚ್ ಆಗುತ್ತೆ. ಸ್ಟೈಲೂ ಸೂಪರ್ ಅನ್ನಿಸುತ್ತೆ. ನಿಮ್ಮ ಕೂದಲು ತೆಳುವಾಗಿದ್ರೆ, ಮಾರ್ಕೆಟ್‌ನಲ್ಲಿ ನಿಮ್ಮ ಕೂದಲಿಗೆ ಸರಿಹೊಂದುವ ಹಲವು ಹೇರ್ ಎಕ್ಸ್ಟೆಷನ್‌ಗಳು ಲಭ್ಯವಿದೆ. ಅವುಗಳನ್ನು ಖರೀದಿ ಮಾಡ್ಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರಿಯಾದ ಹೇರ್‌ಸ್ಟೈಲ್ ಮಾಡ್ಕೊಳ್ಳಲೇ ಬೇಕು

ಸರಿಯಾದ ಹೇರ್‌ಸ್ಟೈಲ್ ಮಾಡ್ಕೊಳ್ಳಲೇ ಬೇಕು

ಒಟ್ಟಿನಲ್ಲಿ ವಯಸ್ಸಾದ್ರೂ ಅಜ್ಜಿ ಅನ್ನಿಸಿಕೊಳ್ಳಬಾರದು ಅನ್ನೋ ಆಸೆ ನಿಮಗಿದ್ರೆ, ಅಥ್ವಾ, ವಯಸ್ಸಾದ್ರೂ ಸ್ವಲ್ಪ ಕಾನ್ಫೆಂಡೆಟ್ ಆಗಿರಬೇಕು ಅನ್ನೋ ಬಯಕೆ ನಿಮ್ಮಲ್ಲಿದ್ರೆ, ಖಂಡಿತ ಕ್ಯೂಟ್ ಮೇಕಪ್ ನಿಮ್ಗೆ ಸಹಾಯವಾಗಲಿದೆ. ನೀವು ಮೇಕಪ್ ಮಾಡ್ಕೊಂಡು ಸುಂದರವಾಗಿ ಕಂಡ್ರೆ , ವಾವ್, ನಮ್ಮ ಅಜ್ಜಿ ಎಷ್ಟು ಬ್ಯೂಟಿಫುಲ್ ಅಂತ ಮೊಮ್ಮಕ್ಕಳೂ ಕೂಡ ಖುಷಿ ಪಡ್ತಾರೆ. ನೆನಪಿರಲಿ.

English summary

Natural Beauty Tips for Women Over 50 in kannada

A few fine lines, a hint of gray. The normal changes of aging are inevitable. But with skin rejuvenation products, facial treatments that don't involve surgery, and hair care products, there are plenty of options for women over 50 who want to enhance their natural beauty. Something similar happens to cells that give your hair its color. Hair pigment cells become less efficient at renewing themselves, which makes hair gray.
X
Desktop Bottom Promotion