For Quick Alerts
ALLOW NOTIFICATIONS  
For Daily Alerts

ಮೈಮೇಲಿನ ಮಚ್ಚೆ ನಿವಾರಣೆಗೆ ನೈಸರ್ಗಿಕ ಮನೆಮದ್ದು

|

ಕಲೆಗಳು ಮತ್ತು ಮಚ್ಚೆಗಳು ಕೆಲವೊಮ್ಮೆ ಸಹಜ ಸೌಂದರ್ಯವನ್ನು ಕುಂದಿಸುತ್ತವೆ. ಅದರಲ್ಲೂ ತ್ವಚೆಯ ಮೇಲೆ ಅಥವಾ ಕುತ್ತಿಗೆ ಕೈಗಳ ಮೇಲೆ ಮೂಡುವ ಕಪ್ಪು ಚುಕ್ಕೆಗಳು ಅಂತೂ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಸಾಮಾನ್ಯವಾಗಿ ಇಂತಹ ಮಚ್ಚೆಗಳನ್ನು ನಿವಾರಿಸುವುದು ಅಷ್ಟು ಸುಲಭದ ಮಾತಲ್ಲ! ಏಕೆಂದರೆ ಕೆಂಪು ಬಣ್ಣದಿಂದ ಹಿಡಿದು ಗಾಢ ಕಪ್ಪು ಬಣ್ಣದವರೆಗೆ ಇರುವ ಜೀವಕೋಶಗಳು ಚರ್ಮದಡಿಯಲ್ಲಿ ಗುಂಪಾಗಿ ಸೇರಿಕೊಂಡು ನಿಧಾನವಾಗಿ ವಯಸ್ಸಿನೊಂದಿಗೆ ಬೆಳೆಯುತ್ತವೆ. ಈ ಜೀವಕೋಶಗಳನ್ನು melanocytes ಎಂದು ಕರೆಯುತ್ತಾರೆ.

ಬಹುತೇಕ ಮಚ್ಚೆಗಳು ನಿರಪಾಯಕವಾದರೂ ಎಲ್ಲೋ ಒಂದೆರಡು ತುಂಬಾ ಹೆಚ್ಚು ಬೆಳೆದು ಕ್ಯಾನ್ಸರ್‌ಗೂ ಕಾರಣವಾಗಬಹುದು! ಒಂದು ವೇಳೆ ಹೊಸದಾಗಿ ಒಂದು ಮಚ್ಚೆ ಹೊಸದಾಗಿ ಕಂಡುಬಂದು ದೇಹದ ಇತರ ಹುಟ್ಟುಮಚ್ಚೆಗಳಿಗಿಂತ ಭಿನ್ನವಾಗಿದ್ದರೆ, ಬಣ್ಣ ಹಾಗೂ ರೂಪದಲ್ಲಿ ವ್ಯತ್ಯಾಸ ಕಂಡುಬಂದರೆ ಇದನ್ನು ಚರ್ಮ ವೈದ್ಯರಲ್ಲಿ ತೋರಿಸಿ ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಒಂದು ವೇಳೆ ಮಚ್ಚೆಗಳಿಂದ ರಕ್ತ ಒಸರುತ್ತಿದ್ದರೆ, ಕೀವು ಬರುತ್ತಿದ್ದರೆ, ತುರಿಕೆ ಅಥವಾ ನೋವು ಉಂಟುಮಾಡುತ್ತಿದ್ದರೂ ಖಂಡಿತವಾಗಿ ಚರ್ಮ ವೈದ್ಯರನ್ನು ಕಾಣುವುದು ಅವಶ್ಯ. ಒಂದು ವೇಳೆ ಮಚ್ಚೆ ಚಿಕ್ಕದಾಗಿದ್ದು ಅಪಾಯಕರವಲ್ಲ ಎಂದು ಖಚಿತವಾದರೆ, ಮತ್ತು ಅದನ್ನು ನಿವಾರಿಸುವುದು ಅಗತ್ಯ ಎಂದು ನಿಮಗನಿಸಿದರೆ ಈ ಕೆಳಗಿನ ಸಲಹೆಗಳು ನಿಮಗೆ ಉಪಯುಕ್ತವಾಗಿವೆ. ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?

How To Get Rid Of Skin Moles

ಉಪಯೋಗಿಸುವ ವಿಧಾನ
ಮೊದಲು ಮಚ್ಚೆ ನಿರಪಾಯಕರವೆಂದು ಖಚಿತಪಡಿಸಿಕೊಳ್ಳಿ ರಾತ್ರಿ ಮಲಗುವ ಕೊಂಚ ಮುನ್ನ ಮಚ್ಚೆ ಇರುವ ಚರ್ಮವನ್ನು ಮೃದುವಾದ ಸಾಬೂನು ಮತ್ತು ಉಗುರುಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಂಡು ಒಣಗಲು ಬಿಡಿ. ಒಣಗಿದ ಬಳಿಕ ಒಂದು ಹಲ್ಲು ಸ್ವಚ್ಛಮಾಡುವ ಕಡ್ಡಿಯಿಂದ ಒತ್ತಡವಿಲ್ಲದೇ ಮಚ್ಚೆಯ ಮೇಲೆ ಗೀರುಗಳನ್ನು ಎಳೆಯಿರಿ. ರಕ್ತ ಬರದಂತೆ ಜಾಗ್ರತೆವಹಿಸಿ. ಇದರಿಂದ ಜೀವಕೋಶಗಳ ತುದಿಯವರೆಗೆ ರಕ್ತಒಸರಲು ಉತ್ತೇಜನ ನೀಡಿದಂತಾಗುತ್ತದೆ.

ದಾಳಿಂಬೆ ಹಣ್ಣಿಸ ಸಿಪ್ಪೆಯ ರಸ
ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಹಿಸುಕಿ ತೆಗೆದ ರಸವನ್ನು ಮಚ್ಚೆಯ ನಿವಾರಣೆಗೆ ಬಳಸಬಹುದು. ಆಂಟಿ ಆಕ್ಸೆಡೆಂಟುಗಳ ಪ್ರಮಾಣವನ್ನು ಪರಿಗಣಿಸಿದರೆ ದಾಳಿಂಬೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿವೆ. ಇದರಲ್ಲಿರುವ phenolics, flavonoids, proathocyanidins ಮತ್ತು ascorbic acid ಎಂಬ ರಾಸಾಯನಿಕಗಳು ಮಚ್ಚೆಗಳನ್ನು ನಿವಾರಿಸಲೂ ಉಪಯುಕ್ತವಾಗಿವೆ. ಆದರೆ ಇವುಗಳ ಪ್ರಭಾವ ಮಚ್ಚೆಗಳ ಮೇಲೆ ನಿಧಾನವಾಗಿ ಆಗುವುದರಿಂದ ಒಂದು ಚಮಚಕ್ಕೆ ಒಂದು ತೊಟ್ಟು ಲಿಂಬೆ ಹಣ್ಣಿನ ರಸವನ್ನು ಸೇರಿಸುವುದರಿಂದ ಉತ್ತಮ ಪರಿಣಾಮ ಕಂಡುಬರುತ್ತದೆ.

ಮೂಲಂಗಿ

ಮೂಲಂಗಿಯಲ್ಲಿಯೂ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು anthocyanin ಎಂಬ ಪೋಷಕಾಂಶಗಳಿವೆ. ಅಲ್ಲದೇ ಆಂಟಿ ಆಕ್ಸಿಡೆಂಟುಗಳು ಸಹಾ ಹೇರಳವಾದ ಪ್ರಮಾಣದಲ್ಲಿವೆ. ಅಲ್ಲದೇ isthiocyanate ಎಂಬ ಪೋಷಕಾಂಶವು ಕ್ಯಾನ್ಸರ್ ಉಂಟುಮಾಡಬಹುದಾದ ಜೀವಕೋಶಗಳನ್ನು ನಿವಾರಿಸಿ ಕ್ಯಾನ್ಸರ್‌ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದೇ ಪೋಷಕಾಂಶ ಮಚ್ಚೆಯ ಕಪ್ಪು ಜೀವಕೋಶಗಳನ್ನೂ ನಿವಾರಿಸಿ ಮಚ್ಚೆಯಾಗುವ ಸಾಧ್ಯತೆಯನ್ನೂ, ಆಗಿರುವ ಮಚ್ಚೆಗಳನ್ನೂ ದೂರವಾಗಿಸುತ್ತದೆ.

ಹರಳೆಣ್ಣೆ ಮತ್ತು ಅಡುಗೆ ಸೋಡಾ
ಹರಳೆಣ್ಣೆ ಒಂದು ಉತ್ತಮ ಕಲೆನಿವಾರಕವಾಗಿದೆ. ಚರ್ಮದಲ್ಲಿ ಆಗಿರುವ ಕಲೆಗಳು, ಸುಟ್ಟ ಗಾಯದ ಗುರುತುಗಳು, ಗಂಟುಗಳು, ಒರಟಾಗಿರುವ ಚರ್ಮ ಮೊದಲಾದವುಗಳನ್ನು ನಿವಾರಿಸಲು ಬಹಳ ಹಿಂದಿನಿಂದಲೂ ಹರಳೆಣ್ಣೆಯ ಬಳಕೆಯಾಗುತ್ತಾ ಬಂದಿದೆ.

ಅಡುಗೆ ಸೋಡಾವನ್ನು ಚಿಕ್ಕ ಪ್ರಮಾಣದಲ್ಲಿ ಮಿಶ್ರಣ ಮಾಡುವುದರಿಂದ ಇದರ ಕಾರ್ಯಕ್ಷಮತೆ ಕೊಂಚ ಹೆಚ್ಚುತ್ತದೆ. ಆದರೂ ಮಚ್ಚೆಯ ನಿವಾರಣೆಗೆ ಹೆಚ್ಚಿನ ದಿನಗಳನ್ನು ತೆಗೆದುಕೊಂಡರೂ ಮಾಗಿದ ಬಳಿಕ ಚರ್ಮದಲ್ಲಿ ಹಿಂದಿನ ಯಾವುದೇ ಕುರುಹು ಇಲ್ಲದಂತೆ ಮಾಡುವುದು ಹರಳೆಣ್ಣೆಯ ವಿಶೇಷತೆಯಾಗಿದೆ.

ಬೆಳ್ಳುಳ್ಳಿ ಉಪಯೋಗಿಸಿ

ನೈಸರ್ಗಿಕವಾಗಿ ಮಚ್ಚೆಗಳನ್ನು ನಿವಾರಿಸುವಲ್ಲಿ ಬೆಳ್ಳುಳ್ಳಿ ಅತ್ಯುತ್ತಮವಾಗಿದೆ. ಬೆಳ್ಳುಳ್ಳಿಯಲ್ಲಿರುವ ಕೆಲವು ಪೋಷಕಾಂಶಗಳು ಈ ಮೆಲನೋಸೈಟ್ಸ್ ಜೀವಕೋಶಗಳನ್ನು ಒಂದೆಡೆ ಬಂಧಿಸಿರುವ ಬಂಧನಗಳನ್ನು ಸಡಿಲಗೊಳಿಸಿ ಒಂದೊಂದಾಗಿ ರಕ್ತದೊಡನೆ ವಿಸರ್ಜಿಸಲು ನೆರವಾಗುತ್ತದೆ. ಕ್ರಮೇಣವಾಗಿ ಗಾಢಬಣ್ಣದ ಮಚ್ಚೆ ನಿಧಾನವಾಗಿ ಕರಗಿ ತಿಳಿಯಾಗುತ್ತಾ ಬಂದು ಬಳಿಕ ಚರ್ಮ ತನ್ನ ಸಹಜ ಬಣ್ಣವನ್ನು ಪಡೆಯುತ್ತದೆ.
English summary

How To Get Rid Of Skin Moles

Skin moles are caused by some defects in the skin. They are small black or brown colored spots which can appear anywhere on the skin. Moles can also be round, plain and slightly raised and some can even have hair sprouting out of them.
Story first published: Monday, August 17, 2015, 17:34 [IST]
X
Desktop Bottom Promotion