For Quick Alerts
ALLOW NOTIFICATIONS  
For Daily Alerts

ಕಣ್ಣಂಚಿನ ಕಪ್ಪುಕಲೆ, ಗುಳಿಬಿದ್ದ ಕಣ್ಣಿನ ಸಮಸ್ಯೆಗೆ ಸೂಕ್ತ ಮನೆಮದ್ದು

By Super
|

ಗುಳಿಬಿದ್ದ ಕಣ್ಣುಗಳು ಮುಖದ ದುರ್ಬಲ ಮತ್ತು ಹೆಚ್ಚು ವಯಸ್ಸಿನ ನೋಟವನ್ನು ಪ್ರತಿನಿಧಿಸುತ್ತದೆ. ನೀವು ಅನಾರೋಗ್ಯದಿಂದ ಬಳಲುತ್ತಿಲ್ಲವಾದರೂ ಅಥವಾ ಯಾವುದೇ ಕಾಯಿಲೆ ಇಲ್ಲವಾದರೂ ಗುಳಿಬಿದ್ದ ಕಣ್ಣುಗಳಿದ್ದರೆ ನೀವು ಹಾಗೆ ಕಾಣಿಸುತ್ತೀರಿ.ಈ ರೀತಿ ಇರುವಾಗ ನಿಮ್ಮ ಕಣ್ಣುಗಳು ಗುಡ್ಡೆಗಳ ಒಳಗೆ ಹೋಗಿರುವಂತೆ ಕಾಣುತ್ತವೆ.

ಕಪ್ಪುಕಲೆ ಮತ್ತು ಗುಳಿಬಿದ್ದ ಕಣ್ಣುಗಳಿಗೆ ಕಾರಣಗಳು ವಯಸ್ಸಾಗಿರುವುದು, ಒತ್ತಡ, ಕಾಯಿಲೆ, ನಿದ್ರಾಹೀನತೆ ಮತ್ತು ಕಳಪೆ ಆಹಾರ ಸೇವನೆಯಿಂದ.ಅತಿ ಹೆಚ್ಚು ಕೆಫೀನ್ ಸೇವನೆ, ಧೂಮಪಾನ, ಮಧ್ಯಪಾನ ಸೇವನೆ, ಫಾಸ್ಟ್ ಫುಡ್, ಹೊಟ್ಟೆ ಸಮಸ್ಯೆಗಳು, ಅಜೀರ್ಣ ಇತ್ಯಾದಿ ಸಮಸ್ಯೆಗಳಿಂದ ಕಂಡುಬರುತ್ತದೆ. ನಿಮ್ಮ ಕಣ್ಣುಗಳು ಗುಳಿಬಿದ್ದಿರುವುದಾದರೆ ನೀವು ಮೊದಲು ಈ ಪರಿಸ್ಥಿತಿಗಳಿಗೆ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ.

Home Remedies For Sunken Eyes

ನಿಮ್ಮ ಒಳಗಿನ ದೌರ್ಬಲ್ಯ ಮತ್ತು ಕಾಯಿಲೆಗಳಿಗೆ ಚಿಕಿತ್ಸೆ ನೀಡಿದರೆ ಗುಳಿಬಿದ್ದ ಕಣ್ಣುಗಳು ಸಹ ಗುಣವಾಗಬಹುದು. ಧೂಮಪಾನ ಮತ್ತು ಮದ್ಯಪಾನ ಸೇವಯನ್ನು ತಪ್ಪಿಸಿ. ಇಂಗಾಲಯುಕ್ತ ಪಾನೀಯ, ಅಂದರೆ ಕೋಲ ಅಥವ ಫಾಂಟ ಪಾನೀಯಗಳು ಮತ್ತು ಕಾಫಿ ಕುಡಿಯುವುದನ್ನು ನಿಯಂತ್ರಿಸಿ. ಬಳಲಿದ ಕಣ್ಣುಗಳಿಗೆ ಆರೈಕೆ ಹೀಗಿರಲಿ

ಕಣ್ಣಿನ ಸುತ್ತ ಕಪ್ಪುಕಲೆ ಕಟ್ಟಿದ್ದರೆ ಗುಳಿಬಿದ್ದ ಸ್ಥಿತಿಯನ್ನು ಉಲ್ಬಣಗೊಳಿಸುತ್ತದೆ ಮತ್ತು ನಿಮ್ಮ ಕಣ್ಣುಗಳು ಮತ್ತೂ ಒಳಗೆಹೋಗಿರುವ ಹಾಗೆ ಕಾಣುತ್ತದೆ. ಕಪ್ಪುಕಲೆಗಳು ಕ್ರಮೇಣ ಕಡಿಮೆಯಾದರೆ ಗುಳಿಬಿದ್ದ ಕಣ್ಣುಗಳಲ್ಲಿ ಸುಧಾರಣೆ ಕಾಣಬಹುದು. ಗುಳಿಬಿದ್ದ ಕಣ್ಣುಗಳಿಗೆ ಹಾಗೂ ಕಪ್ಪು ಕಲೆಗಳಿಗೆ ಕೆಲವು ಮನೆ ಮದ್ದುಗಳಿವೆ ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ಶ್ರೀಗಂಧದ ಪುಡಿ ಮತ್ತು ಜೇನುತುಪ್ಪ


ಒಂದು ಟೀ ಚಮಚ ಶ್ರೀಗಂಧದ ಪುಡಿಗೆ ಒಂದು ಟೀ ಚಮಚ ಜೇನುತುಪ್ಪವನ್ನು ಚೆನ್ನಾಗಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಅಂಗಾತ ಮಲಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ತಲೆ ಕೆಳಗೆ ತಲೆ ಸ್ವಲ್ಪ ಮೇಲೆ ಬರುವ ಹಾಗೆ ಒಂದು ತೆಳ್ಳನೆಯ ದಿಂಬು ಹಾಕಿಕೊಂಡು ತಲೆಯನ್ನು ಮೇಲೆತ್ತಿ. ಶ್ರೀಗಂಧದ ಪುಡಿ ಮತ್ತು ಜೇನುತುಪ್ಪದ ಮಿಶ್ರಣವನ್ನು ಕಣ್ಣುಗಳ ಕೆಳಭಾಗದಲ್ಲಿ ಲೇಪಿಸಿ. ಹತ್ತು ನಿಮಿಷಗಳ ಕಾಲದ ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಅವುಗಳ ಮೇಲೆ ಆಲೂಗಡ್ಡೆಯ ಹೋಳನ್ನು (ಸ್ಲೈಸ್) ಐದು ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತರ ಎಲ್ಲವನ್ನೂ ತೆಗೆದು ನೀರಿನಲ್ಲಿ ತೊಳೆದುಕೊಳ್ಳಿ.

ಆಲಿವ್ ಮತ್ತು ಬಾದಾಮಿ ಎಣ್ಣೆ


ಒಂದೊಂದು ಟೀ ಚಮಚ ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ ಮಿಶ್ರಣಮಾಡಿ. ಮಲಗುವ ಸಮಯದಲ್ಲಿ ಕಣ್ಣುಗಳ ಕೆಳಗೆ ಇದನ್ನು ನಿಧಾನವಾಗಿ ಮಸಾಜ್ ಮಾಡಿ. ಇದರ ಪರಿಣಾಮ ಹೊಂದಲು ಒಂದು ತಿಂಗಳು ಈ ರೀತಿ ಮಾಡಿ. ದಣಿದ ಹಾಗೂ ಗುಳಿಬಿದ್ದ ಕಣ್ಣುಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳಲ್ಲಿ ಇದೂ ಒಂದು.

ಜೇನು ತುಪ್ಪ ಮತ್ತು ಲಿಂಬೆ ರಸ


ಒಂದು ಟೀ ಚಮಚ ಜೇನುತುಪ್ಪಕ್ಕೆ ನಿಂಬೆ ಹಣ್ಣಿನ ಕೆಲವೇ ಹನಿಗಳನ್ನು ಸೇರಿಸಿ ಮಿಶ್ರಣದ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಕಣ್ಣುಗಳ ಕೆಳಭಾಗ ಮತ್ತು ಕಣ್ಣುಗಳ ಮೇಲ್ಭಾಗಕ್ಕೆ ಹಚ್ಚಿ. ಹಾಗೆಯೇ ಹತ್ತು ನಿಮಿಷಗಳು ಕಳೆದ ನಂತರ ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ.

ತಣ್ಣಗಿರುವ ಟೀ ಪುಡಿಯ ಚೀಲಗಳು


ಗುಳಿಬಿದ್ದಿರುವ ಕಣ್ಣುಗಳ ಮತ್ತು ಕಪ್ಪು ಕಲೆಗಳ ಚಿಕಿತ್ಸೆಗೆ ಬಳಸಲಾದ ಟೀ ಪುಡಿಯಿರುವ ಚೀಲಗಳನ್ನು ಉಪಯೋಗಿಸಿ. ಟೀ ಮಾಡಿ ಬಳಸಲಾದ ಚೀಲಗಳನ್ನು ರೆಫ್ರಿಜರೇಟರ್ ಒಳಗೆ ಕೆಲವು ಸಮಯವಿಟ್ಟ ನಂತರ ಅದನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಗುಳಿಬಿದ್ದ ಕಣ್ಣುಗಳು ಮತ್ತು ಕಪ್ಪು ಕಲೆಗಳನ್ನು ತೆಗೆದುಹಾಕಲು ಇದು ಬಹಳ ಪರಿಣಾಮಕಾರಿ. ಟೀ ಪುಡಿಯಲ್ಲಿರುವ ಟ್ಯಾನ್ನಿನ್ ಅಂಶ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ತಂಪಾಗಿ ಮಾಡಿ ವಿಶ್ರಾಂತಿ ಕೊಡುತ್ತದೆ.

ಕಾಡ್ ಲಿವರ್ ಎಣ್ಣೆ


ಗುಳಿಬಿದ್ದ ಕಣ್ಣುಗಳ ಚಿಕಿತ್ಸೆಗೆ ಮನೆಯ ಮದ್ದುಗಳಲ್ಲಿ ಕಾಡ್ ಲಿವರ್ ಎಣ್ಣೆಯೂ ಒಂದಾಗಿದೆ. ಅದರಲ್ಲಿ ವಿಟಮಿನ್ ಎ ಅತ್ಯಧಿಕವಾಗಿದೆ. ಅದರಿಂದ ನಿಮ್ಮ ಕಣ್ಣುಗಳನ್ನು ಪೋಷಿಸಿ ಅವುಗಳನ್ನು ಪ್ರಮುಖವಾಗಿ ಕಾಣುವ ಹಾಗೆ ಮಾಡುತ್ತದೆ ಮತ್ತು ಆರೋಗ್ಯಕರ ಕಣ್ಣುಗಳನ್ನಾಗಿಯೂ ಮಾಡುತ್ತದೆ. ನೀವು ಮಲಗುವ ವೇಳೆಯಲ್ಲಿ ಕಾಡ್ ಲಿವರ್ ಎಣ್ಣೆಯನ್ನು ಮೆಲ್ಲಗೆ 10 ರಿಂದ 15 ನಿಮಿಷಗಳವರೆಗೆ ಮಸಾಜ್ ಮಾಡಿ. ಬೆಳಗ್ಗೆ ಎದ್ದನಂತರ ತೊಳೆದುಕೊಳ್ಳಿ.
English summary

Home Remedies For Sunken Eyes

Sunken eyes represent a weak and aged look of face. Even thought you are not aged or sick but having sunken eyes makes you look so. In this condition, the eyes seem to have gone deep inside the face. There are some effective home remedies to treat sunken eyes and dark circles as well. Have a look at some of the natural remedies
X
Desktop Bottom Promotion