For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಕೇವಲ ತ್ವಚೆಗೆ ಮಾತ್ರವಲ್ಲ, ಉಗುರುಗಳಿಗೂ ಅವಶ್ಯಕ ಕಣ್ರೀ..!

|

ನಮ್ಮ ಕೈಗಳು ಯಾವಾಗಲು ನಮ್ಮ ದೇಹದ ಅತ್ಯಂತ ಸುಂದರವಾದ ಮತ್ತು ಯಾವಾಗಲು ಎಲ್ಲರಿಗು ಕಾಣುವಂತಹ ಅಂಗವಾಗಿದೆ. ಹಾಗಾಗಿ ನಾವು ನಮ್ಮ ಉಗುರುಗಳಿಗೆ ಬಣ್ಣವನ್ನು ಲೇಪಿಸಿಕೊಂಡು, ಕೈಗಳಿಗೆ ಫ್ಯಾಷನೇಬಲ್ ಆದ ಬಳೆ, ವಾಚ್ ತೊಟ್ಟುಕೊಂಡು ಜನರ ಮುಂದೆ ಆಕರ್ಷಕವಾಗಿ ತೋರುತ್ತಿರುತ್ತೇವೆ. ಗಾಜಿನಂತೆ ಹೊಳೆಯುವ ಆ ಉಗುರುಗಳು ಯಾವಾಗಲು ಜನರನ್ನು ಆಕರ್ಷಿಸುತ್ತ ಇರುತ್ತವೆ. ನಿಮ್ಮ ಉಗುರುಗಳು ಬೇಗನೆ ಮುರಿದು ಹೋಗುತ್ತದೆಯೇ?

ಆದರೆ ಬಹುತೇಕ ಮಂದಿ ಆರೋಗ್ಯಕರವಾದ ಉಗುರುಗಳನ್ನು ಹೊಂದಿರುವುದೇ ಇಲ್ಲ. ಅದಕ್ಕಾಗಿ ನಾವು ಕೆಲವೊಂದು ಪರಿಹಾರಗಳನ್ನು ಕಂಡುಕೊಂಡು ಉಗುರುಗಳನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಇರಿಸಿಕೊಳ್ಳುವ ಅಗತ್ಯವಿದೆ. ಒಡೆಯುವುದು, ಸೀಳುವುದು ಮತ್ತು ಸುಲಿತ ಇವೆಲ್ಲವು ಅನಾರೋಗ್ಯಕರ ಉಗುರುಗಳ ಲಕ್ಷಣ. ಆದರೆ ಬಹುತೇಕ ಮಂದಿ ಇವುಗಳ ಕುರಿತು ಕಾಳಜಿವಹಿಸಲು ವಿಫಲರಾಗುತ್ತಾರೆ. ನೀವು ಎಷ್ಟು ಬೆಲೆಬಾಳುವ ನೆಕ್ಲೆಸ್ ಧರಿಸಿದ್ದೀರಿ ಎಂಬುದು ಮುಖ್ಯವಲ್ಲ. ಏಕೆಂದರೆ ಜನರು ನಿಮ್ಮ ಅನಾರೋಗ್ಯಕರವಾದ, ಅಥವಾ ಕೊಳಕಾದ ಉಗುರುಗಳನ್ನು ಸಹ ನೋಡುತ್ತಾರೆ ಎಂಬುದನ್ನು ಮರೆಯಬೇಡಿ. ಸುದೃಢ ಉಗುರುಗಳಿಗಾಗಿ 6 ಅತ್ಯುತ್ತಮ ಆಹಾರಗಳು

ದುಬಾರಿಯಾದ ನೇಲ್ ಪಾಲಿಶ್ ಹಚ್ಚುವುದರಿಂದ ಸಮಸ್ಯೆಯಿರುವ ಭಾಗವನ್ನು ಮರೆಮಾಚಬಹುದು ಅಷ್ಟೇ, ಆದರೆ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವುದರಿಂದ ಉಗುರುಗಳ ಈ ಸಮಸ್ಯೆಯನ್ನುನಿವಾರಿಸಿಕೊಳಬಹುದು. ಆ ಮನೆಮದ್ದುಗಳು ಯಾವುದು ಎಂಬ ಕುತೂಹಲವೇ, ಬನ್ನಿ ಮುಂದೆ ಓದಿ.....

ಬೆಚ್ಚಗಿನ ನೀರು

ಬೆಚ್ಚಗಿನ ನೀರು

ಸುಂದರವಾದ ಉಗುರುಗಳಿಗಾಗಿ ಅತ್ಯಂತ ಸುಲಭವಾದ ಮನೆಮದ್ದು ಎಂದರೆ, ಅದು ಬೆಚ್ಚಗಿನ ನೀರಿನಲ್ಲಿ ನಿಮ್ಮ ಉಗುರುಗಳನ್ನು ಸ್ವಲ್ಪ ಸಮಯ ಅದ್ದುವುದು. ಆಮೇಲೆ ನೋಡಿ ಅದರ ವ್ಯತ್ಯಾಸವನ್ನು. ಇಡೀ ದಿನ ಅವು ಸುಂದರವಾಗಿ ಮತ್ತು ಹೊಳಪಿನಿಂದ ಕೂಡಿರಲು, ಅವುಗಳಿಗು ಸಹ ಸ್ವಲ್ಪ ವಿಶ್ರಾಂತಿ ಬೇಕು.

ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗ

ಉಗುರುಗಳಿಗಾಗಿ ಇರುವ ಮನೆಮದ್ದುಗಳಲ್ಲಿ ಮೊಟ್ಟೆಯ ಬಿಳಿ ಭಾಗವು ಸಹ ಸೇರಿದೆ. ಇದರಲ್ಲಿ ಅವಶ್ಯಕ ಪ್ರೋಟೀನ್ ಮತ್ತು ವಿಟಮಿನ್‌ಗಳು ಇದ್ದು, ಅವು ನಿಮ್ಮ ಉಗುರಿನ ಆಗೋಗ್ಯಕ್ಕೆ ಸಹಾಯ ಮಾಡುತ್ತವೆ. ಇದನ್ನು ಸೇವಿಸಿ, ಇಲ್ಲವೆ ನಿಮ್ಮ ಉಗುರಿನ ಮೇಲೆ ಲೇಪಿಸಿ. ಇದರಿಂದ ನಿಮ್ಮ ಉಗುರು ಆರೋಗ್ಯಕರವಾಗುವುದು ನಿಶ್ಚಿತ.

 ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯು ಉಗುರುಗಳಿಗೆ ಅತ್ಯಂತ ಆರೋಗ್ಯಕರ. ಜೊತೆಗೆ ಇದು ಉಗುರಿಗೆ ಹೊರಗಿನಿಂದ ರಕ್ಷಣೆ ನೀಡುವ ಅತ್ಯುತ್ತಮ ಮನೆ ಮದ್ದು ಸಹ ಹೌದು. ಇದನ್ನು ರಸ ಮಾಡಿಕೊಳ್ಳಿ ಅಥವಾ ಜಜ್ಜಿ ಉಗುರಿನ ಮೇಲೆ ಲೇಪಿಸಿ. ಆಗ ನಿಮ್ಮ ಉಗುರುಗಳು ತನ್ನಷ್ಟಕ್ಕೆ ತಾನೆ ಹೊಳೆಯುವುದನ್ನು ನೀವೇ ನೋಡಬಹುದು.

ಬೆಣ್ಣೆ

ಬೆಣ್ಣೆ

ಬೆಣ್ಣೆಯ ಮಸಾಜ್ ನಿಮ್ಮ ಉಗುರುಗಳ ಮೇಲೆ ಗಣನೀಯ ಪರಿಣಾಮವನ್ನು ಬೀರುತ್ತದೆ. ಇದು ಉಗುರುಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಅವುಗಳಿಗೆ ಮೊಯಿಶ್ಚರೈಸಿಂಗ್ ಸಹ ಮಾಡುತ್ತವೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಉಗುರುಗಳಿಗೆ ಹೊಳಪು ನೀಡುವ ಮತ್ತೊಂದು ಮನೆ ಮದ್ದು ಬಾದಾಮಿ ಎಣ್ಣೆ. ಇದರಿಂದ ಉಗುರಿಗೆ ಮಸಾಜ್ ಮಾಡುವುದರಿಂದ ಉಗುರುಗಳಿಗೆ ಪೋಷಕಾಂಶಗಳು ದೊರೆತು, ಅವುಗಳು ಶೀಘ್ರವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತವೆ.

ನಿಂಬೆ

ನಿಂಬೆ

ಅನಾರೋಗ್ಯಕರವಾದ ಹಳದಿ ಉಗುರುಗಳನ್ನು ಬ್ಲೀಚ್ ಮಾಡಲು ನಿಂಬೆಯನ್ನು ಬಳಸಿ. ಇದು ತ್ವಚೆಯಲ್ಲಿರುವ ನಿರ್ಜೀವ ಕೋಶಗಳನ್ನು ತೆಗೆದು ಹಾಕುತ್ತದೆ. ಹಾಗು ಸ್ವಾಭಾವಿಕವಾಗಿ ಉಗುರುಗಳಿಗೆ ಹೊಳಪನ್ನು ಸಹ ನೀಡುತ್ತದೆ.

English summary

Home Made Remedies For Healthy And Beautiful Nails

Our hands are one of the best features of our body and are always visible. We often admire people with beautiful well-manicured hand. What makes hand the best features are those healthy glossy nails. Most of the people face problems when it comes to maintaining healthy nails.
X
Desktop Bottom Promotion