For Quick Alerts
ALLOW NOTIFICATIONS  
For Daily Alerts

ಪಾಲಕ್ ಸೊಪ್ಪು: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

By Arshad
|

ಸಾಮಾನ್ಯವಾಗಿ ರಕ್ತಹೀನತೆ ಸಮಸ್ಯೆಯಿದ್ದರೆ ಇದ್ದರೆ ದಪ್ಪನೆಯ ಹಸಿರು ಸೊಪ್ಪುಗಳನ್ನು ಸೇವಿಸಲು ವೈದ್ಯರು ಸಲಹೆ ಮಾಡುತ್ತಾರೆ. ತಮ್ಮಲ್ಲಿರುವ ಕಬ್ಬಿಣದ ಅಂಶದ ಕಾರಣದಿಂದ ಬಸಲೆ ಮತ್ತು ಪಾಲಕ್ ಸೊಪ್ಪುಗಳು ಈ ಕೊರತೆಯನ್ನು ಸಮರ್ಥವಾಗಿ ತುಂಬಬಲ್ಲವು. ಈ ಸೊಪ್ಪುಗಳು ದೇಹದ ಒಳಗಿನಿಂದ ಇತರ ಭಾಗಗಳಿಗೆ ಹೇಗೆ ಪೋಷಣೆ ನೀಡುತ್ತವೆಯೋ ಅಂತೆಯೇ ಚರ್ಮಕ್ಕೂ ಒಳಗಿನಿಂದ ಅಪಾರವಾದ ಆರೈಕೆಯನ್ನು ನೀಡುತ್ತವೆ. ಇದರಲ್ಲಿ ಪ್ರಮುಖವಾದುದು ಚರ್ಮ ಸಡಿಲವಾಗುವುದನ್ನು ತಪ್ಪಿಸಿ ವೃದ್ಧಾಪ್ಯವನ್ನು ದೂರಮಾಡುವುದು. ಆರೋಗ್ಯಕ್ಕೆ ಹಿತಕರವಾಗಿರುವ ಪಾಲಕ್ ಸೊಪ್ಪಿನ ಪ್ರಯೋಜನಗಳೇನು?

ಪಾಲಕ್‌ನಲ್ಲಿ ವಿಟಮಿನ್ ಎ, ಸಿ ನಂತಹ ಆಂಟಿ ಆಕ್ಸಿಡೆಂಟುಗಳೂ, ಮೆಗ್ನೀಶಿಯಂ, ಕಬ್ಬಿಣ, ಪೊಟ್ಯಾಶಿಯಂ ನಂತಹ ಖನಿಜಗಳೂ ಮತ್ತು ಮುಖ್ಯವಾಗಿ ಚರ್ಮದ ಆರೈಕೆಗೆ ಪೂರಕವಾದ ಆಕ್ಸಿಲಿಕ್ ಆಮ್ಲ (oxilic acid) ಉತ್ತಮ ಪ್ರಮಾಣದಲ್ಲಿದ್ದು ತ್ವಚೆ ಮತ್ತು ಕೂದಲಿಗೆ ಅಗತ್ಯವಾದ ಪೋಷಣೆ ನೀಡಲು ನೆರವಾಗುತ್ತದೆ.

ಇದರಲ್ಲಿರುವ ಪೋಷಕಾಂಶಗಳು ಹಲವು ಚರ್ಮವ್ಯಾಧಿಗಳಾದ ಸೋರಿಯಾಸಿಸ್ (psoriasis), ತುರಿಕೆ (eczema) ಮತ್ತು ಒಣಚರ್ಮವಾಗುವುದರಿಂದ ರಕ್ಷಿಸುತ್ತದೆ. ಇಂದು ಪಾಲಕ್ ಸೊಪ್ಪಿನ ನಿಯಮಿತ ಸೇವನೆಯಿಂದ ನಮ್ಮ ಚರ್ಮಕ್ಕೆ ಆಗುವ ಲಾಭಗಳನ್ನು ನೋಡೋಣ.

ಕೂದಲ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ

ಕೂದಲ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ

ಪಾಲಕ್ ನಲ್ಲಿ ವಿಟಮಿನ್ ಬಿ, ಸಿ. ಇ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು ಕೂದಲ ಬೆಳವಣಿಗೆಗೆ ಪೂರಕವಾಗುವೆ. ಅದರಲ್ಲೂ ಪಾಲಕ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ಕೆಂಪುರಕ್ತಕಣಗಳನ್ನು ಬಲಪಡಿಸಿ ಆಮ್ಲಜನಕವನ್ನು ಪ್ರತಿ ಕೂದಲ ಬುಡಕ್ಕೆ ತಲುಪಿಸಲು ನೆರವಾಗುತ್ತದೆ. ಇದು ದೃಢ ಕೂದಲ ಬುಡ ಮತ್ತು ಆರೋಗ್ಯಕರವಾದ ಕೂದಲು ಉದ್ದವಾಗಿ ಬೆಳೆಯಲು ನೆರವಾಗುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲ ಬುಡ ಸಡಿಲವಾಗಲು ಕಬ್ಬಿಣದ ಕೊರತೆ ಪ್ರಮುಖ ಕಾರಣವಾಗಿದೆ. ಪಾಲಕ್ ಮತ್ತು ಬಸಲೆ ಸೊಪ್ಪುಗಳಲ್ಲಿರುವ ಕಬ್ಬಿಣದ ಅಂಶ ಇದನ್ನು ಪೂರೈಸುವ ಕಾರಣ ಕೂದಲ ಉದುರುವಿಕೆಯನ್ನು ಸಮರ್ಥವಾಗಿ ತಡೆಯಬಹುದು. ಒಂದರ್ಥದಲ್ಲಿ ಕೂದಲ ಉದುರುವಿಕೆಗೆ ಇವು ಸೂಪರ್ ಆಹಾರಗಳಾಗಿವೆ. ಕೂದಲು ಬಹಳವಾಗಿ ಉದುರುವ ಸಮಸ್ಯೆ ಇರುವವರು ದಿನಕ್ಕೊಂದು ಲೋಟ ಪಾಲಕ್ ಸೊಪ್ಪಿನ ಜ್ಯೂಸ್ ಮಾಡಿಕೊಂಡು ನೇರವಾಗಿ ಕುಡಿದರೆ ಉತ್ತಮ ಪರಿಣಾಮವನ್ನು ಕೆಲವೇ ದಿನಗಳಲ್ಲಿ ಕಾಣಬಹುದು. ಈ ಜ್ಯೂಸ್ ನಿಮ್ಮ ಬೆಳಗ್ಗಿನ ಪ್ರಥಮ ಆಹಾರವಾಗಿದ್ದರೆ ಉತ್ತಮ.

ತ್ವಚೆಯ ಕಾಂತಿ ಹೆಚ್ಚಿಸುತ್ತದೆ

ತ್ವಚೆಯ ಕಾಂತಿ ಹೆಚ್ಚಿಸುತ್ತದೆ

ಪಾಲಕ್ ನಲ್ಲಿ ವಿಟಮಿ ಎ ಮತ್ತು ಸಿ ಉತ್ತಮ ಪ್ರಮಾಣದಲ್ಲಿವೆ. ವಿಟಮಿನ್ ಎ ಚರ್ಮದ ಸೆಳೆತ ಮತ್ತು ಕಾಂತಿ ಹೆಚ್ಚಲು ನೆರವಾದರೆ ವಿಟಮಿಸ್ ಸಿ ಹೊಸ ಜೀವಕೋಶಗಳ ಹುಟ್ಟಿಗೆ ನೆರವಾಗುತ್ತದೆ. ಅಲ್ಲದೇ ವಿವಿಧ ಕಾರಣಗಳಿಂದ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳು ರಿಪೇರಿಗೊಳ್ಳುವ ಮೂಲಕ ಚರ್ಮ ತನ್ನ ಸಹಜ ರೂಪ ಪಡೆಯಲು ನೆರವಾಗುತ್ತದೆ. ಅಲ್ಲದೇ ಹಳೆಯ ಕಲೆಗಳಿಂದ ದಟ್ಟವಾಗಿದ್ದ ಭಾಗವೂ ತಿಳಿಯಾಗತೊಡಗುತ್ತದೆ.

 ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ

ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ

ಬಿಸಿಲು ಮತ್ತಿತರ ಕಾರಣಗಳಿಂದ ದಟ್ಟವಾಗಿದ್ದ ಚರ್ಮ ತನ್ನ ಸಹಜವರ್ಣವನ್ನು ಪಡೆಯಲು ಪಾಲಕ್ ಸೊಪ್ಪು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಕೆ ಎಲ್ಲೆಲ್ಲಿ ಮೆಲನಿಸ್ ವರ್ಣದ್ರವ್ಯದ ಪ್ರಭಾವ ಹೆಚ್ಚಾಗಿ ಚರ್ಮ ದಟ್ಟವಾಗಿದೆಯೋ ಅಲ್ಲೆಲ್ಲಾ ಚರ್ಮ ಹಿಂದಿನ ಹೊಳಪನ್ನು ಮತ್ತು ಬಣ್ಣವನ್ನು ಪಡೆಯಲು ನೆರವಾಗುತ್ತದೆ. ವಿಶೇಷವಾಗಿ ಕಣ್ಣುಗಳ ಕಳಭಾಗ ಮತ್ತು ಸುತ್ತಲ ಭಾಗ ಕಪ್ಪಗಾಗಿದ್ದನ್ನು ತಿಳಿಗೊಳಿಸುತ್ತದೆ.

ವೃದ್ಧಾಪ್ಯವನ್ನು ದೂರಗೊಳಿಸುತ್ತದೆ

ವೃದ್ಧಾಪ್ಯವನ್ನು ದೂರಗೊಳಿಸುತ್ತದೆ

ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಹಲವು ವಿಧದಿಂದ ದೇಹಕ್ಕೆ ಹಾನಿಕಾರಕವಾಗಿವೆ. ಇವು ಕ್ಯಾನ್ಸರ್ ರೋಗಕ್ಕೆ ಪ್ರಚೋದನೆ ನೀಡುವುದು ಮಾತ್ರವಲ್ಲ, ಚರ್ಮದ ಸೂಕ್ಷ್ಮ ಹೊರಪದರದ ಸೆಳೆತವನ್ನು ಕಡಿಮೆಗೊಳಿಸಿ ನೆರಿಗೆ ಮೂಡುವಂತೆ ಮಾಡುತ್ತದೆ. ಪಾಲಕ್ ನಲ್ಲಿ ಈ ಕಣಗಳನ್ನು ಹೊಡೆದೋಡಿಸುವ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದು ಚರ್ಮ ಬೇಗನೇ ನೆರಿಗೆಗೆ ಒಳಗಾಗದಂತೆ ತಡೆದು ವೃದ್ದಾಪ್ಯವನ್ನು ದೂರಾಗಿಸುತ್ತದೆ. ಕಣ್ಣುಗಳ ಕೆಳಗಿನ ಭಾಗದಲ್ಲಿ ಊದಿಕೊಂಡು ಚಿಕ್ಕ ಚೀಲದಂತಾಗುವ ಸ್ಥಿತಿಯನ್ನೂ ನಿವಾರಿಸುತ್ತದೆ. ಇವೆಲ್ಲವೂ ಒಟ್ಟಾರೆಯಾಗಿ ಯೌವನ ಬಹುಕಾಲ ಬಾಳುವಂತೆ ಮಾಡುತ್ತವೆ.

 ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ

ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ

ಪಾಲಕ್ ನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಿಸುತ್ತದೆ. ಈ ಕಿರಣಗಳು ಚರ್ಮವನ್ನು ಸುಟ್ಟಂತೆ ಮಾಡುವ, ಕ್ಯಾನ್ಸರ್ ಮತ್ತು ವೃದ್ಧಾಪ್ಯದ ಕುರುಹುಗಳು ಬೇಗನೇ ಬರುವಂತೆ ಮಾಡುತ್ತವೆ. ಆದರೆ ಪಾಲಕ್‌ನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಈ ಕಿರಣಗಳಿಗೆ ನೈಸರ್ಗಿಕವಾಗ ಪದರದಂತೆ ವರ್ತಿಸಿ ಇದರ ಪರಿಣಾಮಗಳಿಂದ ಚರ್ಮ ಮತ್ತು ಆರೋಗ್ಯವನ್ನು ರಕ್ಷಿಸುತ್ತವೆ.

ಮೊಡವೆಗಳಿಂದ ಮುಕ್ತಿ ನೀಡುತ್ತದೆ

ಮೊಡವೆಗಳಿಂದ ಮುಕ್ತಿ ನೀಡುತ್ತದೆ

ಹದಿಹರೆಯದವರಿಗೆ ನಿತ್ಯವೂ ಕಾಡುವ ಮೊಡವೆಗಳಿಗೂ ಪಾಲಕ್ ನ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವಿದೆ. ಚರ್ಮವನ್ನು ರಿಪೇರಿಗೊಳಿಸುವ ಗುಣ ಮೊಡವೆಗಳನ್ನೂ ಗುಣಪಡಿಸಲು ಸಕ್ಷಮವಾಗಿದೆ. ವಿಷಕಾರಿ ವಸ್ತುಗಳು ಚರ್ಮದ ಕೆಳಭಾಗದಲ್ಲಿ ಸಂಗ್ರಹಗೊಂಡು ಮೊಡವೆಗೆ ಕಾರಣವಾಗುತ್ತವೆ. ಈ ವಿಷಕಾರಿ ವಸ್ತುಗಳನ್ನು ಒಳಗಿನಿಂದಲೇ ರಕ್ತದ ಮೂಲಕ ನಿವಾರಿಸಲು ಪಾಲಕ್‌ನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಪರಿಣಾಮವಾಗಿ ಹೊರಚರ್ಮಕ್ಕೆ ಘಾಸಿ ನೀಡದೇ ಮೊಡವೆಗಳು ಒಳಗಿನಿಂದಲೇ ಬತ್ತಿ ಹೋಗುತ್ತವೆ. ಪರಿಣಾಮವಾಗಿ ಈ ಮೂಲಕ ಮೂಡಬಹುದಾಗಿದ್ದ ಕಪ್ಪು ಕಲೆ ಇಲ್ಲವಾಗುತ್ತದೆ.

English summary

Hidden Beauty Benefits Of Spinach

Spinach is a green leafy vegetable that is blessed with an array of beauty benefits. Consuming it on a daily basis results in a flawless and beautiful skin. It battles against the ageing process and helps to retain the youthful look. Spinach is loaded with antioxidants like vitamin A, C, magnesium, iron, potassium and oxilic acid which are crucial for healthy hair and skin. Read on and do include spinach in your daily diet if you are convinced with these points.
X
Desktop Bottom Promotion