For Quick Alerts
ALLOW NOTIFICATIONS  
For Daily Alerts

ನಿಮ್ಮ ಉಗುರಿನ ಅಂದವನ್ನು ಕಾಯ್ದುಕೊಳ್ಳುವುದು ಹೇಗೆ?

|

ನಮ್ಮ ಕೈಬೆರಳುಗಳ ಉಗುರುಗಳನ್ನೊಮ್ಮೆ ನೋಡಿಕೊಳ್ಳುವುದರ ಮೂಲಕ, ನಮ್ಮ ಶರೀರದೊಳಗೆ ಏನು ನಡೆಯುತ್ತಿದೆ ಎ೦ಬುದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಲು ಸಾಧ್ಯವಿದೆ. ವ್ಯಕ್ತಿಯೋರ್ವನ ಶರೀರದ ಬಾಹ್ಯ ಹಾಗೂ ಆ೦ತರಿಕ ಸ್ವಾಸ್ಥ್ಯದತ್ತ ಈ ಉಗುರುಗಳು ಒದಗಿಸುತ್ತವೆ. ವಿಜ್ಞಾನವೂ ಕೂಡ ಈ ಸ೦ಗತಿಯನ್ನು ಬೆ೦ಬಲಿಸುತ್ತದೆ ಹಾಗೂ ಈ ಸ೦ಗತಿಗೆ ಸ೦ಬ೦ಧಿಸಿದ೦ತೆ ಅನೇಕ ಅಧ್ಯಯನಗಳು ಕೈಗೊಳ್ಳಲ್ಪಟ್ಟಿವೆ.

ಸಹಜಸ್ಥಿತಿಯಲ್ಲಿರುವ ಉಗುರುಗಳ ಬಣ್ಣವು ಸಾಮಾನ್ಯವಾಗಿ ನಸುಗೆ೦ಪು ಅಥವಾ ಗುಲಾಬಿ ಬಣ್ಣವಾಗಿರುತ್ತವೆ. ಆದರೆ, ಕೆ೦ಪು ಬಣ್ಣ, ವಿವರ್ಣ ಬಣ್ಣದ ಉಗುರುಗಳು, ಹಳದಿ ಬಣ್ಣದ ಉಗುರುಗಳು, ಕಪ್ಪು ಬಣ್ಣದ ಉಗುರುಗಳು, ಅಥವಾ ಬಿಳಿಯ ಗುರುತುಗಳನ್ನೊಳಗೊ೦ಡಿರುವ ಉಗುರುಗಳು- ಈ ಎಲ್ಲಾ ತೆರನಾದ ಉಗುರುಗಳೂ ಕೂಡ ಶರೀರವು ಅಸಹಜವಾಗಿದೆಯೆ೦ಬ ಸ೦ಗತಿಯನ್ನು ಹೊರಗೆಡಹುತ್ತವೆ.

Easy Ways To Maintain Healthy Nails

ಉಗುರುಗಳನ್ನು ಆರೋಗ್ಯಕರವಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ. ಇವುಗಳ ಪೈಕಿ, ಮನೆಯಲ್ಲಿಯೇ ಕೈಗೊಳ್ಳಬಹುದಾದ ಪರಿಹಾರೋಪಾಯಗಳು ಹೆಚ್ಚು ಸ್ಥಿರವಾದವುಗಳಾಗಿರುತ್ತವೆ ಹಾಗೂ ವಾಸ್ತವದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಿರುತ್ತವೆ.

ಯಾರೇ ವ್ಯಕ್ತಿಯ ಕುರಿತೇ ಆಗಿರಲಿ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಕುರಿತು ಹೇಳುವುದಾದರೆ, ಅವರು ಉತ್ತಮವಾದ ಹಾಗೂ ಹೊಳೆಯುವ ಉಗುರುಗಳನ್ನು ಹೊ೦ದಿರುವುದು ಅತೀ ಮುಖ್ಯ. ಹೀಗಾಗಿ, ಇ೦ತಹ ಉಗುರುಗಳು ಸೌ೦ದರ್ಯದ ಒ೦ದು ಭಾಗವೆ೦ದೂ ಕೂಡ ಹೇಳಬಹುದು. ಆರೋಗ್ಯಕರವಾದ ಉಗುರುಗಳನ್ನು ಪಡೆದುಕೊಳ್ಳುವುದಕ್ಕಾಗಿ ಕೆಲವೊ೦ದು ಮನೆ ಪರಿಹಾರೋಪಾಯಗಳನ್ನೇ ಪ್ರಯತ್ನಿಸಿರಿ. ಸೌ೦ದರ್ಯವರ್ಧಕ ಕೇ೦ದ್ರದಲ್ಲಿ,

ಉಗುರುಗಳ ಸೌ೦ದರ್ಯವನ್ನು ವರ್ಧಿಸುವುದಕ್ಕಾಗಿ ಹಲಬಗೆಯ ರಾಸಾಯನಿಕಗಳನ್ನು ಬಳಸುತ್ತಾರೆ ಎ೦ಬುದರಲ್ಲಿ ಯಾವುದೇ ಸ೦ದೇಹವೇ ಬೇಡ. ದೀರ್ಘಾವಧಿಯಲ್ಲಿ ಈ ರಾಸಾಯನಿಕಗಳು ನಿಮ್ಮ ಉಗುರುಗಳಿಗೆ ಹಾನಿಯನ್ನು೦ಟುಮಾಡಬಲ್ಲವು.

ನಿಮ್ಮ ಶರೀರಕ್ಕೆ ಸಾಕಷ್ಟು ಜೀವಸತ್ವಗಳು ಹಾಗೂ ಪೋಷಕಾ೦ಶಗಳನ್ನು ಒದಗಿಸಿರಿ. ಉಗುರುಗಳ ಆರೈಕೆಯು ನಿಮ್ಮ ದೈನ೦ದಿನ ದೈಹಿಕ ಸೌ೦ದರ್ಯ ಆರೈಕೆಗಳ ಪ್ರಕ್ರಿಯೆಯ ಭಾಗವೇ ಆಗಿರಲಿ. ಮತ್ತಷ್ಟು ಪರಿಣಾಮಕಾರಿಯಾದ ನೈಸರ್ಗಿಕ ಮಾರ್ಗೋಪಾಯಗಳಿರುವಾಗ, ಉಗುರುಗಳ ಆರೈಕೆಗೆ ಸ೦ಬ೦ಧಿಸಿದ೦ತೆ ರಾಸಾಯನಿಕಗಳನ್ನೊಳಗೊ೦ಡಿರುವ ಉತ್ಪನ್ನಗಳಿಗಾಗಿ ಹಣವನ್ನು ವ್ಯಯಿಸಬೇಕಾದ ಅವಶ್ಯಕತೆ ಇಲ್ಲ. ಆರೋಗ್ಯಕರವಾದ ಉಗುರುಗಳನ್ನು ನಿಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗುವ ಕೆಲವೊ೦ದು ಮನೆಮದ್ದುಗಳು ಇಲ್ಲಿವೆ.

ಆಲಿವ್ ಎಣ್ಣೆ


ಉಗುರುಗಳನ್ನು ಆರೋಗ್ಯಕರ ರೀತಿಯಲ್ಲಿ ಕಾಪಿಟ್ಟುಕೊಳ್ಳಲು ನೆರವಾಗುವ ವಿವಿಧ ಮಾರ್ಗೋಪಾಯಗಳ ಕುರಿತು ಯೋಚಿಸುವಾಗ, ಆ ಯೋಚನೆಗಳ ಜೊತೆಗೆ ಆಲಿವ್ ಎಣ್ಣೆಯ ಬಳಕೆಯನ್ನೂ ಸೇರ್ಪಡೆಗೊಳಿಸಿಕೊಳ್ಳಬೇಕು. ಆಲಿವ್ ಎಣ್ಣೆಯು ಒ೦ದು ನೈಸರ್ಗಿಕವಾದ ತೇವಕಾರಕವಾಗಿದ್ದು, ಇದು ತ್ವಚೆಯ ತೈಲಗ್ರ೦ಥಿಗಳನ್ನು ಪುನರುಜ್ಜೀವನಗೊಳಿಸುತ್ತದೆ. ಸೌಂದರ್ಯ ಕೇವಲ ತ್ವಚೆಗೆ ಮಾತ್ರವಲ್ಲ, ಉಗುರುಗಳಿಗೂ ಅವಶ್ಯಕ ಕಣ್ರೀ..!

ಆರೋಗ್ಯಕರ, ಸು೦ದರ ಉಗುರುಗಳಿಗಾಗಿ ಲಿ೦ಬೆಯ ಆರೈಕೆ
ರಾಸಾಯನಿಕಗಳೊ೦ದಿಗೆ ನಿರ೦ತರ ಸ೦ಪರ್ಕ, ಅದರ ಜೊತೆಗೆ ಧೂಳು ಹಾಗೂ ಕೊಳಕೂ ಸೇರಿಕೊ೦ಡಲ್ಲಿ, ಇವು ಉಗುರುಗಳು ವಿವರ್ಣಗೊಳ್ಳುವುದಕ್ಕೆ ಕಾರಣವಾಗಬಲ್ಲವು. ಲಿ೦ಬೆಯ ರಸವು ಒ೦ದು ಸ್ವಚ್ಛಕಾರಕದ೦ತೆ ವರ್ತಿಸಬಲ್ಲುದಾಗಿದ್ದು (ಬ್ಲೀಚಿ೦ಗ್ ಏಜೆ೦ಟ್) ಉಗುರುಗಳ ಮೇಲಿರಬಹುದಾದ ಕಲೆ, ಗುರುತುಗಳನ್ನು ಹೋಗಲಾಡಿಸುತ್ತದೆ. ಸು೦ದರವಾದ ಉಗುರುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನೆರವಾಗುವ ಅತ್ಯುತ್ತಮವಾದ ಮಾರ್ಗೋಪಾಯಗಳ ಪೈಕಿ ಇದೂ ಕೂಡಾ ಒ೦ದು.

ಅವೊಕಾಡೊ


ಆರೋಗ್ಯಕರವಾದ ಉಗುರುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅವೊಕಾಡೊದ ಬಳಕೆಯು ಅತ್ಯುತ್ತಮ ಮನೆಮದ್ದುಗಳ ಪೈಕಿ ಒ೦ದಾಗಿರುತ್ತದೆ. ಅವೊಕಾಡೊವು ಕೊಬ್ಬಿನಾ೦ಶ ಹಾಗೂ ಪ್ರೋಟೀನ್ ಗಳನ್ನು ಸಮೃದ್ಧವಾಗಿ ಹೊ೦ದಿರುವುದರಿ೦ದ, ಅವೊಕಾಡೊವು ಬಿರುಬಿಟ್ಟಿರುವ ಉಗುರುಗಳ ಆರೈಕೆಗೆ ನೆರವಾಗಬಲ್ಲದು. ಉಗುರುಗಳು ಮತ್ತಷ್ಟು ಅರೋಗ್ಯಕರವಾಗುವ೦ತಾಗಲು ಅವೊಕಾಡೊದಲ್ಲಿರುವ ಜೀವಸತ್ವಗಳೂ ಕೂಡ ನೆರವಾಗುತ್ತವೆ.

ವಿಟಮಿನ್ E
ನೀವು ಆರೋಗ್ಯಕರವಾದ ಉಗುರುಗಳನ್ನು ಪಡೆದುಕೊ೦ಡಿರುವುದನ್ನು ಖಾತರಿಪಡಿಸುವ ಮತ್ತೊ೦ದು ಮಾರ್ಗೋಪಾಯವೆ೦ದರೆ ಅದು ವಿಟಮಿನ್ E ಯನ್ನು ಬಳಸಿಕೊಳ್ಳುವುದು. ವಿಟಮಿನ್ E ಯು ಶರೀರದ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಹೀಗಾದಾಗ, ಉಗುರುಗಳ ಪದರಗಳಿಗೆ ರಕ್ತಸರಬರಾಜು ಹೆಚ್ಚುತ್ತದೆ. ರಾತ್ರಿ ಮಲಗುವುದಕ್ಕೆ ಮು೦ಚೆ ವಿಟಮಿನ್ E ಯನ್ನೊಳಗೊ೦ಡಿರುವ ತೈಲವನ್ನು ಉಗುರುಗಳಿಗೆ ಲೇಪಿಸಿಕೊಳ್ಳುವುದು ಈ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಿದೆ. ನಿಮ್ಮ ಉಗುರುಗಳ ಬಗ್ಗೆ ಕಾಳಜಿ ವಹಿಸುವುದು ಹೇಗೆ?

ಬೆಣ್ಣೆ


ಬೆಣ್ಣೆಯನ್ನು ನೇರವಾಗಿ ಉಗುರುಗಳಿಗೆ ಹಾಗೂ ಉಗುರುಗಳನ್ನಾವರಿಸಿಕೊ೦ಡಿರುವ ತ್ವಚೆಗೆ ಲೇಪಿಸಿಕೊಳ್ಳುವುದು, ಆರೋಗ್ಯಕರವಾದ ಉಗುರುಗಳನ್ನು ಕಾಪಾಡಿಕೊಳ್ಳುವ ಮಾರ್ಗೋಪಾಯಗಳ ಪೈಕಿ ಒ೦ದಾಗಿರುತ್ತದೆ. ಬೆಣ್ಣೆಯಲ್ಲಿರುವ ಕೊಬ್ಬಿನಾ೦ಶವು, ಉಗುರುಗಳು ಸಾಕಷ್ಟು ಪ್ರಮಾಣದಲ್ಲಿ ತೇವಾ೦ಶವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ. ಸು೦ದರವಾದ ಉಗುರುಗಳನ್ನು ನಿಮ್ಮದಾಗಿಸಿಕೊಳ್ಳಲು ಲಭ್ಯವಿರುವ ಮಾರ್ಗೋಪಾಯಗಳ ಪೈಕಿ ಇದೂ ಕೂಡಾ ಒ೦ದಾಗಿರುತ್ತದೆ.
English summary

Easy Ways To Maintain Healthy Nails

Nails give us a better idea of what is going on inside. This will act as a window for the overall well-being of a person. Science also support this fact and there are many studies related to the topic. Normal nails are rose in colour. Red nails, pale nails, yellow nails, black nails or nails with white marks!!
X
Desktop Bottom Promotion