For Quick Alerts
ALLOW NOTIFICATIONS  
For Daily Alerts

ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

By Manu
|

ಮಹಿಳೆಯರ ಸೌಂದರ್ಯ ಮತ್ತು ಸ್ವಚ್ಛತಾಪ್ರಜ್ಞೆಯನ್ನು ಅವರ ಉಗುರುಗಳನ್ನು ನೋಡುವ ಮೂಲಕ ಕೂಡಲೇ ಅರಿತುಕೊಳ್ಳಬಹುದು, ಎಂದು ಒಂದು ಸುಭಾಷಿತ ಹೇಳುತ್ತದೆ. ಹೌದು, ನಮ್ಮ ದೇಹದ ಅಂಗಾಂಗಗಳಲ್ಲಿ ಉಗುರಿಗೆ ಕೂಡ ಪ್ರಮುಖ ಮಹತ್ವವಿದ್ದು ಇವುಗಳ ಕಾಳಜಿಯನ್ನು ದೇಹದ ಇತರ ಅಂಗಾಂಗಗಳ ರೀತಿಯಲ್ಲೇ ನಾವು ಮಾಡಬೇಕು. ನಮ್ಮ ದೇಹದಲ್ಲಿ ಉಂಟಾಗುವ ವೈಪರೀತ್ಯಗಳು ಉಗುರಿನ ಪೋಷಣೆಯಲ್ಲಿ ಕೊರತೆಯನ್ನುಂಟು ಮಾಡುತ್ತವೆ, ಉದಾಹರಣೆಗೆ ರಕ್ತದ ಕೊರತೆ, ಬಣ್ಣ ಹಳದಿಯಾಗುವಿಕೆ, ಪೋಷಕಾಂಶದ ಕೊರತೆ ಮೊದಲಾದ ಕೊರತೆಗಳನ್ನು ನಿಮ್ಮ ಉಗುರು ಎದುರಿಸಬಹುದು. ಉಗುರು ತುಂಡಾಗುವಿಕೆಯನ್ನು ತಡೆಯಲು ಏಳು ಸಲಹೆಗಳು

ನಮ್ಮಲ್ಲಿ ಬಹುತೇಕ ಮಂದಿಗೆ ಪರಿಸರ ಮಾಲಿನ್ಯವು ತ್ವಚೆ ಮತ್ತು ಕೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿರುತ್ತದೆ. ಆದರೆ ಅಂತಹವರು ಸಹ ಉಗುರುಗಳ ಆರೋಗ್ಯವನ್ನು ಉದಾಸೀನ ಮಾಡಿರುತ್ತಾರೆ. ಉಗುರುಗಳು ಯಾವಾಗಲು ಸ್ವಚ್ಛವಾಗಿ ಇಟ್ಟಿರಬೇಕು ಮತ್ತು ಅದನ್ನು ನೇಲ್ ಕಟ್ಟರ್ ಮೂಲಕ ಜಾಗರೂಕತೆಯಿಂದ ಕತ್ತರಿಸಿರಬೇಕು. ಉಗುರುಗಳನ್ನು ಆರೋಗ್ಯಕರವಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಹಲವಾರು ಮಾರ್ಗೋಪಾಯಗಳಿವೆ.

ಇವುಗಳ ಪೈಕಿ, ಮನೆಯಲ್ಲಿಯೇ ಕೈಗೊಳ್ಳಬಹುದಾದ ಪರಿಹಾರೋಪಾಯಗಳು ಹೆಚ್ಚು ಸ್ಥಿರವಾದವುಗಳಾಗಿರುತ್ತವೆ ಹಾಗೂ ವಾಸ್ತವದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಿರುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಉಗುರಿನ ಕಾಳಜಿಯನ್ನು ಹೇಗೆ ಮಾಡಬೇಕು ಹಾಗೂ ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ನಾವು ವಿವರವಾಗಿ ತಿಳಿಸಲಿರುವೆವು, ಮುಂದೆ ಓದಿ..

ಉಗುರಿನ ಸದೃಢತೆಗಾಗಿ ಲಿಂಬೆ ರಸ

ಉಗುರಿನ ಸದೃಢತೆಗಾಗಿ ಲಿಂಬೆ ರಸ

ಸೂಕ್ಷ್ಮವಾದ, ಏನಾದರು ತಾಗಿದರೆ ಮುರಿದು ಹೋಗುವ ಮತ್ತು ಹಳದಿಯಾಗಿರುವ ಉಗುರುಗಳಿಂದ ಬೇಸತ್ತಿದ್ದೀರಾ? ಚಿಂತೆ ಮಾಡಬೇಡಿ. ನಿಮ್ಮ ಬಳಿ ಲಿಂಬೆಹಣ್ಣು ಇದ್ದರೆ ಸಾಕು, ಇದಕ್ಕೆ ಪರಿಹಾರ ಸಿಕ್ಕಂತೆಯೇ!.ಲಿಂಬೆ ರಸದಲ್ಲಿ ಸ್ವಲ್ಪ ಹೊತ್ತು ನಿಮ್ಮ ಉಗುರುಗಳನ್ನು ನೆನೆಸಿ ಅವುಗಳನ್ನು ಸದೃಢಗೊಳಿಸಿ. ಇದು ನಿಮ್ಮ ಉಗುರಿನಲ್ಲಿರುವ ಜಡತ್ವವನ್ನು ಮತ್ತು ಹಳದಿ ಅಂಶವನ್ನು ತೆಗೆದು ಹಾಕುತ್ತದೆ.

ಉಗುರಿನ ಬಣ್ಣ ಹಳದಿಯಾಗಿದ್ದರೆ

ಉಗುರಿನ ಬಣ್ಣ ಹಳದಿಯಾಗಿದ್ದರೆ

ಉತ್ತಮ ಗುಣಮಟ್ಟದ ಅಡುಗೆ ಸೋಡ ಮತ್ತು ಲಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ ಕೊಂಡು, ದಿನನಿತ್ಯ ಉಗುರುಗಳಿಗೆ ಹಚ್ಚಿ. ಇದು ಸಂಪೂರ್ಣವಾಗಿ ಹಳದಿ ಉಗುರುಗಳನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆಯ ಆರ್ದ್ರತೆ ನೀಡುವ ಗುಣ ಉಗುರು ಮತ್ತು ಉಗುರಿನ ಹಿಂಭಾಗದ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಉಗುರ ಬುಡಕ್ಕೆ ಉತ್ತಮ ಪೋಷಣೆ ನೀಡುವುದರ ಜೊತೆಗೆ, ಉಗುರಿನ ಹೊಳಪಿಗೆ ನೆರವಾಗುತ್ತದೆ. ಇದಕ್ಕಾಗಿ ಬೆರಳ ತುದಿಗಳಿಗೆ ಕೊಂಚ ಆಲಿವ್ ಎಣ್ಣೆ ಹಚ್ಚಿ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಒಂದೊಂದಾಗಿ ಎಲ್ಲಾ ಬೆರಳುಗಳಿಗೆ ಮಸಾಜ್ ಮಾಡಿ. ಇದಕ್ಕೆ ಪ್ರತ್ಯೇಕವಾದ ಸಮಯದ ಅಗತ್ಯವಿಲ್ಲ. ಆರಾಮವಾಗಿ ಕುಳಿತಿದ್ದಾಗ ಅಥವಾ ಟೀವಿ ನೋಡುತ್ತಿದ್ದಾಗಲೂ ಅನುಸರಿಸಬಹುದು. ನಿಯಮಿತವಾಗಿ ಮಾಡುವ ಮಸಾಜ್‌ನಿಂದ ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಮನಗಾಣುವಿರಿ.

ಉಗುರಿಗೆ ಬೆಣ್ಣೆ ಮಸಾಜ್

ಉಗುರಿಗೆ ಬೆಣ್ಣೆ ಮಸಾಜ್

ಮನೆಯಲ್ಲಿಯೇ ಕಡೆದ ಬೆಣ್ಣೆ ಇದ್ದರೆ ಇದನ್ನೂ ಕೊಂಚಪ್ರಮಾಣದಲ್ಲಿ ಬೆರಳುಗಳಿಂದ ಮಸಾಜ್ ಮಾಡಬಹುದು. ಸುಮಾರು ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ಪ್ರತಿದಿನದ ಮಸಾಜ್ ಉತ್ತಮ ಪರಿಣಾಮ ನೀಡುತ್ತದೆ.

ಹಸಿರು ಬಣ್ಣದ ಎಲೆಗಳನ್ನು ಹೆಚ್ಚು ಸೇವಿಸಿ

ಹಸಿರು ಬಣ್ಣದ ಎಲೆಗಳನ್ನು ಹೆಚ್ಚು ಸೇವಿಸಿ

ಉಗುರುಗಳ ಆರೈಕೆಗೆ ವಿಟಮಿನ್ ಎ, ಬಿ ಮತ್ತು ಸಿ ಗಳ ಅಗತ್ಯವಿದೆ. ಇವು ಗಾಢ ಹಸಿರು ಬಣ್ಣದ ಎಲೆಗಳಾದ ಬಸಲೆ, ಹರಿವೆಸೊಪ್ಪು, ಪಾಲಕ್ ಮೊದಲಾದ ಸೊಪ್ಪುಗಳಲ್ಲಿ ಹೇರಳವಾಗಿರುತ್ತವೆ. ಈ ಸೊಪ್ಪುಗಳನ್ನು ಬೇಯಿಸಿ ತಯಾರಿಸಿದ ಖಾದ್ಯವನ್ನು ಸೇವಿಸುವ ಮೂಲಕ ಉಗುರು ಮತ್ತು ಕೂದಲಿಗೆ ಉತ್ತಮ ಆರೈಕೆ ನೀಡಬಹುದು. ವಿಟಮಿನ್ ಸಿ ಸೇವನೆಯಿಂದ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಕಬ್ಬಿಣ ಉಗುರುಗಳ ಬುಡ ಮತ್ತು ತಲೆಗೂದಲ ಬುಡವನ್ನು ಸದೃಢಗೊಳಿಸುತ್ತದೆ.

ಉಗುರಿನ ಕೊಳೆ ತೆಗೆಯುವ ಮುನ್ನ

ಉಗುರಿನ ಕೊಳೆ ತೆಗೆಯುವ ಮುನ್ನ

ಉಗುರುಗಳ ಕೆಳಭಾಗದ ಕೊಳೆಯನ್ನು ತೆಗೆಯುವ ಮುನ್ನ ಬೆರಳುಗಳನ್ನು ಲಿಂಬೆ ಹಣ್ಣಿನ ರಸ ಸೇರಿಸಿದ ನೀರಿನಲ್ಲಿ ಅಥವಾ ಉಗುರುಬೆಚ್ಚನೆಯ ನೀರಿನಲ್ಲಿ, ಕೊಂಚಕಾಲ ಮುಳುಗಿಸಿ, ಬಳಿಕ ನಿಧಾನವಾಗಿ ತೆಗೆಯಿರಿ. ಈ ಕಾರ್ಯಕ್ಕೆ ಸೂಕ್ತವಾದ ಸಾಧನ ಬಳಸಿ, ಟೂಥ್ ಪಿಕ್ ಬೇಡ.

English summary

Beauty Tips for Pretty and Healthy Nails in kannada

Nail care is an essential part of personal grooming. Usually women are conscious about their makeup, dress and overall beauty of their face and body. But often they are careless about their nails and do not pay much attention to grooming healthy and strong nails.
Story first published: Friday, November 20, 2015, 18:48 [IST]
X
Desktop Bottom Promotion