For Quick Alerts
ALLOW NOTIFICATIONS  
For Daily Alerts

ಖರ್ಜೂರ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು

By Super
|

ಹಲವಾರು ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿರುವ ಖರ್ಜೂರ ಉತ್ತಮ ಸೌಂದರ್ಯವರ್ಧಕವೂ ಹೌದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಚರ್ಮ ಮತ್ತು ಕೂದಲಿಗೂ ಉತ್ತಮವಾಗಿವೆ. ಚರ್ಮ ಮತ್ತು ಕೂದಲಿಗೆ ಖರ್ಜೂರ ನೀಡುವ ಪೋಷಣೆಯಂತೂ ಒಂದು ಪವಾಡದಂತಿದೆ.

ಇದರಲ್ಲಿರುವ ವಿಟಮಿನ್, ಎ,ಬಿ,ಕೆ ಮತ್ತು ಫೋಲಿಕ್ ಆಮ್ಲ, ಮೆಗ್ನೇಶಿಯಂ, ಮ್ಯಾಂಗನೀಸ್, ಸತು, ಪ್ರೋಟೀನುಗಳು, ಇವೆಲ್ಲವೂ ಆರೋಗ್ಯಕರ ಚರ್ಮಕ್ಕೆ ಅಗತ್ಯವಿರುವಷ್ಟು ಸಂತುಲಿತ ಪ್ರಮಾಣದಲ್ಲಿವೆ. ನಿಯಮಿತವಾಗಿ ಖರ್ಜೂರವನ್ನು ಸೇವಿಸುತ್ತಾ ಬರುವ ಮೂಲಕ ಚರ್ಮಕ್ಕೆ ಅಗತ್ಯ ಪ್ರಮಾಣದ ವಿಟಮಿನ್ ಸಿ ಸಹಾ ಲಭ್ಯವಾಗಿ ಒಳಗಿನಿಂದ ಉತ್ತಮ ಪೋಷಣೆ ಪಡೆಯುತ್ತದೆ. ಆರೋಗ್ಯದ ಆಗರ ಖರ್ಜೂರದ ಔಷಧೀಯ ಗುಣಗಳೇನು?

ಖರ್ಜೂರದಲ್ಲಿರುವ ಪ್ರೋಟೀನುಗಳು ಹೊಸ ಜೀವಕೋಶಗಳ ಹುಟ್ಟಿಗೆ ಸಹಕರಿಸುವ ಮೂಲಕ ದೇಹ ದಷ್ಟಪುಷ್ಟವಾಗಲು ಸಾಧ್ಯವಾಗುತ್ತದೆ. ಅಲ್ಲದೇ ದೇಹದಲ್ಲಿ ಕೊಲ್ಯಾಜೆನ್ ಎಂಬ ಕಿಣ್ವವನ್ನು ತಯಾರಿಸಲು ಹೆಚ್ಚಿನ ಪ್ರಚೋದನೆ ನೀಡುವ ಮೂಲಕ ಘಾಸಿಗೊಂಡಿದ್ದ, ಸವೆದ ಚರ್ಮವನ್ನು ಮರುತುಂಬಿಸಲು ನೆರವಾಗುತ್ತದೆ. ಇದರಲ್ಲಿರುವ ಖನಿಜಗಳು ಚರ್ಮವನ್ನು ಕೋಮಲ, ಕಾಂತಿಯುಕ್ತ ಹಾಗೂ ನಿಷ್ಕಳಂಕವಾಗಿಸಲು ನೆರವಾಗುತ್ತವೆ.

ಇದರಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಮಲಬದ್ದತೆ ತಡೆಯುವಲ್ಲಿ ಹಾಗೂ ದೇಹದಲ್ಲಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಖರ್ಜೂರವನ್ನು ನಿಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಲು ಇನ್ನೂ ಹಲವು ಕಾರಣಗಳನ್ನು ಇಂದು ಬೋಲ್ಡ್ ಸ್ಕೈ ತಂಡ ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸುತ್ತಿದೆ ಮುಂದೆ ಓದಿ..

ಕೂದಲ ಬುಡವನ್ನು ದೃಢಗೊಳಿಸುತ್ತದೆ

ಕೂದಲ ಬುಡವನ್ನು ದೃಢಗೊಳಿಸುತ್ತದೆ

ಖರ್ಜೂರದಿಂದ ಹಿಂಡಿ ತೆಗೆದ ತೈಲದಲ್ಲಿ ಕೂದಲ ಬುಡವನ್ನು ದೃಢಗೊಳಿಸುವ ಹಲವಾರು ಪೋಷಕಾಂಶಗಳಿವೆ. ಇದು ತಲೆಯ ಚರ್ಮ ಒಣದಾಗುವುದನ್ನು ಕಡಿಮೆಗೊಳಿಸಿ ದೃಢಗೊಂಡ ಕೂದಲ ಬುಡದಿಂದ ಆರೋಗ್ಯಕರ ಕೂದಲು ಉದ್ದವಾಗಿ ಬೆಳೆಯಲು ನೆರವಾಗುತ್ತದೆ. ಪ್ರತಿದಿನ ಕೆಲವಾರು ಖರ್ಜೂರಗಳನ್ನು ತಿನ್ನುವುದು ಒಟ್ಟಾರೆ ಆರೋಗ್ಯದೊಂದಿಗೆ ಕೂದಲು ಮತ್ತು ಚರ್ಮಕ್ಕೂ ಉತ್ತಮವಾಗಿದೆ.

ಚರ್ಮದ ಸೆಳೆತ ಹೆಚ್ಚಿಸುತ್ತದೆ

ಚರ್ಮದ ಸೆಳೆತ ಹೆಚ್ಚಿಸುತ್ತದೆ

ಚರ್ಮದ ಸೆಳೆತ ಹೆಚ್ಚಿಸಲು ವಿಟಮಿನ್ ಸಿ ಅಗತ್ಯವಾಗಿದೆ. ಖರ್ಜೂರದಲ್ಲಿರುವ ವಿಟಮಿನ್ ಸಿ ಈ ಅಗತ್ಯತೆಯನ್ನು ಪೂರೈಸುವ ಮೂಲಕ ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿಯುಕ್ತವಾಗಿಸುತ್ತವೆ. ಅಲ್ಲದೇ ಚರ್ಮಕ್ಕೆ ಒಳಗಿನಿಂದ ಆರ್ದ್ರತೆಯನ್ನು ಒದಗಿಸುವ ಮೂಲಕ ಕೋಮಲತೆ ನೀಡುತ್ತದೆ ಹಾಗೂ ನೆರಿಗೆಮುಕ್ತವಾಗಿಸುತ್ತದೆ.

ವೃದ್ಧಾಪ್ಯವನ್ನು ದೂರವಾಗಿಸುತ್ತದೆ

ವೃದ್ಧಾಪ್ಯವನ್ನು ದೂರವಾಗಿಸುತ್ತದೆ

ಖರ್ಜೂರದಲ್ಲಿರುವ ವಿಟಮಿನ್ ಸಿ ಚರ್ಮದ ಜೀವಕೋಶಗಳು ಉತ್ಕರ್ಷಣ (oxidation) ಕ್ರಿಯೆಗೆ ಒಳಗಾಗುವುದನ್ನು ತಡೆಯೊಡ್ಡಿ ಇದರ ಪರಿಣಾಮವಾದ ನೆರಿಗೆ ಮೂಡುವುದರಿಂದ ರಕ್ಷಿಸುತ್ತದೆ. ನೆರಿಗೆ ಮತ್ತು ಸೂಕ್ಷ್ಮವಾದ ಗೆರೆಗಳು ವೃದ್ಧಾಪ್ಯದ ಸಂಕೇತವಾಗಿದ್ದು ಇವು ಬರುವುದನ್ನು ತಡವಾಗಿಸುವ ಮೂಲಕ ತಾರುಣ್ಯವನ್ನು ಬಹುಕಾಲದವರೆಗೆ ಕಾಪಾಡಿಕೊಳ್ಳಬಹುದು.

ಕೂದಲುದುರುವುದನ್ನು ನಿಲ್ಲಿಸುತ್ತದೆ

ಕೂದಲುದುರುವುದನ್ನು ನಿಲ್ಲಿಸುತ್ತದೆ

ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಂಖ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರವಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿಸುತ್ತದೆ.

ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ

ಹೆರಿಗೆಯ ರೇಖೆಗಳನ್ನು ನಿವಾರಿಸುತ್ತದೆ

ಖರ್ಜೂರದಲ್ಲಿರುವ ವಿಟಮಿನ್ ಬಿ ಚರ್ಮದ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ವಿಟಮಿನ್ ಬಿ ಕೊರತೆಯಾದರೆ ಕೆಳಹೊಟ್ಟೆಯಲ್ಲಿ ಸೆಳೆತದ ಗುರುತುಗಳು ಬೀಳುತ್ತವೆ. ನಿಯಮಿತವಾಗಿ ಖರ್ಜೂರವನ್ನು ತಿನ್ನುತ್ತಾ ಬರುವ ಮೂಲಕ ಈ ಸಂಭವವನ್ನು ಸಾಕಷ್ಟು ಕಡಿಮೆಗೊಳಿಸಬಹುದು.

English summary

Amazing Beauty Benefits Of Dates in kannada

Dates are packed with nutrients that offer numerous beauty benefits. They are rich in vitamins and minerals that are beneficial not only for health but also for beauty. They miraculously work wonders for your skin and hair. The presence of vitamin A, B, K folic acid, magnesium, manganese, sulphur, protein, vitamins, fibre and iron make them the perfect solution for healthy skin.
Story first published: Thursday, November 12, 2015, 14:41 [IST]
X
Desktop Bottom Promotion