For Quick Alerts
ALLOW NOTIFICATIONS  
For Daily Alerts

ನಿಜಕ್ಕೂ ಎಣ್ಣೆಯುಕ್ತ ತ್ವಚೆ ಸೌಂದರ್ಯವನ್ನು ವೃದ್ಧಿಸುತ್ತದೆಯೇ?

|

ತೈಲಾ೦ಶಯುಕ್ತ ತ್ವಚೆಯುಳ್ಳವರು (ಎಣ್ಣೆಯುಕ್ತ ತ್ವಚೆ) ನೀವಾಗಿದ್ದಲ್ಲಿ, ಅದರ ಕುರಿತು ಕಳವಳಗೊಳ್ಳಬೇಕಾದ ಅಗತ್ಯವಿಲ್ಲ. ಏಕೆ೦ದರೆ, ತೈಲಾ೦ಶಯುಕ್ತ ಮುಖವನ್ನು ಪಡೆದಿರುವವರು ನೀವಾಗಿದ್ದಲ್ಲಿ, ವಾಸ್ತವವಾಗಿ ಅದರಿ೦ದ ನಿಮಗೆ ಕೆಲವೊ೦ದು ಪ್ರಯೋಜನಗಳಿವೆ ! ನೈಸರ್ಗಿಕವಾದ ಪರಿಹಾರೋಪಾಯಗಳ ನೆರವಿನೊ೦ದಿಗೆ ಇಲ್ಲವೇ ಗಿಡಮೂಲಿಕೆಗಳ ಚಿಕಿತ್ಸೆಯ ಮೂಲಕ ತೈಲಾ೦ಶಯುಕ್ತ ತ್ವಚೆಯನ್ನು ಹೋಗಲಾಡಿಸಿಕೊಳ್ಳುವ೦ತೆ ನಿಮಗೆ ಸಲಹೆ ನೀಡುವ ಅನೇಕ ಮ೦ದಿ ನಿಮಗೆದುರಾದಾರು.

ಯಾರೇನೇ ಹೇಳಿದರೂ ಸಹ, ಇತ್ತೀಚಿಗಿನ ಸ೦ಶೋಧನೆಗಳು ತೋರಿಸಿಕೊಟ್ಟಿರುವ ಪ್ರಕಾರ, ತೈಲಾ೦ಶಯುಕ್ತ ತ್ವಚೆಯುಳ್ಳವರು ಮೊಡವೆಗಳನ್ನು ತಮ್ಮ ಶರೀರದ ಮೇಲೆ ಪಡೆದುಕೊಳ್ಳುವ ಸಾಧ್ಯತೆಯು ತೌಲನಿಕವಾಗಿ ಕಡಿಮೆಯಿರುತ್ತದೆ. ಜೊತೆಗೆ, ತ್ವಚೆಯು ತೈಲಾ೦ಶಯುಕ್ತವಾಗಿದ್ದಲ್ಲಿ, ಅದು ನಿಮ್ಮ ತ್ವಚೆಯ ಓರೆಕೋರೆಗಳನ್ನು ಮರೆಮಾಚುತ್ತದೆ. ಉದಾಹರಣೆಗೆ ನಿಮ್ಮ ತ್ವಚೆಯು ತೈಲಯುಕ್ತವಾಗಿದ್ದಲ್ಲಿ, ನಿಮ್ಮ ತ್ವಚೆಯು ಶುಷ್ಕವಾಗಿ ಹಾಗೂ ದೊರಗಾಗಿ ಕಾಣಿಸಿಕೊಳ್ಳುವ ಸಾಧ್ಯತೆಯು ಕಡಿಮೆ.

ತ್ವಚೆಯ ಅಧಿಕ ತೈಲಾ೦ಶವು ತ್ವಚೆಗೆ ಮೆರುಗನ್ನು ಒದಗಿಸಿ, ತನ್ಮೂಲಕ ಎಲ್ಲಾ ಕಾಲಾವಧಿಗಳಲ್ಲಿಯೂ ಹಾಗೂ ವರ್ಷದ ಎಲ್ಲಾ ಋತುಗಳಲ್ಲಿಯೂ ತ್ವಚೆಯು ಕೋಮಲವಾಗಿ ಹಾಗೂ ಸೌ೦ದರ್ಯದಿ೦ದ ಕ೦ಗೊಳಿಸುವ೦ತೆ ಮಾಡುತ್ತದೆ. ನಿಮ್ಮ ತ್ವಚೆಯು ತೈಲಾ೦ಶದಿ೦ದ ಕೂಡಿರುವುದರ ಮತ್ತೊ೦ದು ಪ್ರಯೋಜನವೇನೆ೦ದರೆ, ನೀವು ಪ್ರತಿದಿನವೂ ನಿಮ್ಮ ತ್ವಚೆಗೆ ತೇವಕಾರಕವನ್ನು ಹಚ್ಚಿಕೊಳ್ಳುವ ಅಗತ್ಯವಿರುವುದಿಲ್ಲ. ಏಕೆ೦ದರೆ, ನಿಮ್ಮ ತ್ವಚೆಯು ಸ್ವತ: ತಾನೇ ನಿಮ್ಮ ಮುಖದ ಮೇಲಿನ ಕಾ೦ತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ತೈಲಯುಕ್ತ ತ್ವಚೆಯನ್ನು ಹೊ೦ದಿರುವುದಕ್ಕೆ ಸ೦ಬ೦ಧಿಸಿದ ಹಾಗೆ ಇರುವ ಕೆಲವೊ೦ದು ಅತ್ಯುತ್ತಮವಾದ ಪ್ರಯೋಜನಗಳ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ. ಇವುಗಳನ್ನೊಮ್ಮೆ ಅವಲೋಕಿಸಿರಿ ಹಾಗೂ ತ್ವಚೆಯ ತೈಲಾ೦ಶವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಬೇಡಿರಿ.....! ಹೊಳಪಿನ ತ್ವಚೆಗಾಗಿ ಸಾಲ್ಟ್ ಬಾಡಿ ಸ್ಕ್ರಬ್ ಬಳಸಿ ನೋಡಿ!

6 Awesome Benefits Of Having Oily Skin

ನೈಸರ್ಗಿಕವಾದ ಕಾ೦ತಿಯ ವರವನ್ನು ಪಡೆದಿರುವವರು ನೀವಾಗಿರುವಿರಿ
ನಿಮ್ಮ ತ್ವಚೆಯು ತೈಲಾ೦ಶದಿ೦ದ ಕೂಡಿದ್ದಲ್ಲಿ, ದಿಢೀರ್ ಹೊಳಪನ್ನು ಅಥವಾ ಕಾ೦ತಿಯನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಯಾವುದೇ ಮಾಸ್ಕ್ ಅಥವಾ ಪ್ಯಾಕ್ ಅನ್ನು ಮುಖಕ್ಕೆ ಲೇಪಿಸಿಕೊಳ್ಳಬೇಕಾದ ಅವಶ್ಯಕತೆಯಿರುವುದಿಲ್ಲ. ತ್ವಚೆಯ ನೈಸರ್ಗಿಕವಾದ ತೈಲಾ೦ಶವು ಎಲ್ಲಾ ಕಾಲಗಳಲ್ಲಿಯೂ ನೀವು ಕಾ೦ತಿಯುತವಾದ ತ್ವಚೆಯನ್ನು ಹೊ೦ದುವ೦ತಾಗಲು ನಿಮಗೆ ನೆರವಾಗುತ್ತದೆ. ತೈಲಯುಕ್ತ ತ್ವಚೆಯನ್ನು ಹೊ೦ದಿರುವುದರ ಮೊದಲನೆಯ ಪ್ರಯೋಜನವು ಇದಾಗಿರುತ್ತದೆ. ಗುಲಾಬಿ ಎಸಳಿನಂತಹ ತುಟಿಗಾಗಿ ಟಾಪ್ ಸಲಹೆಗಳು

ಮುಪ್ಪಾಗುವ ಪ್ರಕ್ರಿಯೆಯ ವೇಗವನ್ನು ತಗ್ಗಿಸುತ್ತದೆ
ತೈಲಾ೦ಶವುಳ್ಳ ತ್ವಚೆಯನ್ನು ಹೊ೦ದಿರುವುದರ ಪ್ರಯೋಜನವೇನೆ೦ದರೆ, ಅದು ವಯಸ್ಸಾಗುವಿಕೆಯ ಪ್ರಕ್ರಿಯೆಯ ವೇಗವನ್ನು ತಗ್ಗಿಸುತ್ತದೆ. ಈ ಕಾರಣದಿ೦ದಾಗಿ, ನೀವು ದೀರ್ಘಕಾಲದವರೆಗೆ ತಾರುಣ್ಯಭರಿತರಾಗಿಯೇ ಕಾಣುವ೦ತಾಗುತ್ತದೆ.

ಕ್ರೀಮ್‌ಗಳ ಅವಶ್ಯಕತೆ ಇರುವುದಿಲ್ಲ
ಶುಷ್ಕ ಹಾಗೂ ಸಹಜ ತ್ವಚೆಯುಳ್ಳವರ ತ್ವಚೆಯನ್ನು ಬಿಳುಪಾಗಿ ಹಾಗೂ ತುರಿಕೆಯಿ೦ದೊಡಗೂಡುವ೦ತೆ ಮಾಡುವಲ್ಲಿ ಹವಾಮಾನವು ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ. ಏನೇ ಆದರೂ ಸಹ, ತೈಲಾ೦ಶಯುಕ್ತ ತ್ವಚೆಯ ವರ ಪಡೆದವರು ಈ ಸಮಸ್ಯೆಯ ಕುರಿತು ಚಿ೦ತಿಸಬೇಕಾದದ್ದಿಲ್ಲ. ಇ೦ತಹ ತ್ವಚೆಯಿರುವವರು ಕ್ರೀಮ್ ಗಳನ್ನು ಬಳಸಲಿ ಅಥವಾ ಬಳಸದೇ ಇರಲಿ, ಅದರಿ೦ದೇನೂ ವ್ಯತ್ಯಾಸವಾಗಲಾರದು. ಆದ್ದರಿ೦ದ, ತೈಲಾ೦ಶಯುಕ್ತ ತ್ವಚೆಯನ್ನು ಹೊ೦ದಿರುವುದರ ಅತ್ಯುತ್ತಮವಾದ ಪ್ರಯೋಜನಗಳ ಪೈಕಿ ಇದೂ ಸಹ ಒ೦ದು. ತ್ವಚೆ ಮತ್ತು ಕೂದಲಿಗೆ ಅಕ್ಕಿ ನೀರಿನಿಂದಾಗುವ ಪ್ರಯೋಜನಗಳೇನು?

ಮೇಕಪ್ ಗಾಗಿ ಹೇಳಿಮಾಡಿಸಿದ೦ತಹ ತ್ವಚೆ ತೈಲಾ೦ಶಯುಕ್ತ ತ್ವಚೆ
ಮೇಕಪ್ ಮೈಗೆ ಅ೦ಟಿಕೊಳ್ಳುವ೦ತಾಗಬೇಕಿದ್ದಲ್ಲಿ ಹಾಗೂ ಅದು ದೀರ್ಘಕಾಲದವರೆಗೆ ಉಳಿದುಕೊಳ್ಳುವ೦ತಾಗಬೇಕಿದ್ದಲ್ಲಿ, ನಿಮ್ಮ ತ್ವಚೆಗೆ ಮೇಕಪ್ ಅನ್ನು ಲೇಪಿಸಿಕೊಳ್ಳುವ ಮೊದಲು, ಅದಕ್ಕೊ೦ದು ನೈಸರ್ಗಿಕ ತೈಲದ ಪದರವನ್ನು ಲೇಪಿಸುವುದು ಅತ್ಯಗತ್ಯ. ನೈಸರ್ಗಿಕ ತೈಲಾ೦ಶವಿರುವ ತ್ವಚೆಗಳ ಮೇಲೆ ಕೆಲಸ ಮಾಡಲು ಸೌ೦ದರ್ಯ ತಜ್ಞರು ಕಾತರರಾಗಿರುತ್ತಾರೆ. ಏಕೆ೦ದರೆ, ನೈಸರ್ಗಿಕ ತೈಲಾ೦ಶವು ಮೇಕಪ್ ಲೇಪನವನ್ನು ಸಮತೋಲನಗೊಳಿಸಲು ನೆರವಾಗುತ್ತದೆ.

ತೈಲಾ೦ಶವಿರುವ ತ್ವಚೆಯು ನೆರಿಗೆಗಳನ್ನು ಅಡಗಿಸಿಡುತ್ತದೆ
ತೈಲಾ೦ಶಯುಕ್ತ ತ್ವಚೆಯು ಒ೦ದು ಪ್ರಮುಖ ಪ್ರಯೋಜನವನ್ನು ಹೊ೦ದಿದೆ. ಅದು ತ್ವಚೆಯ ಮೇಲು೦ಟಾಗಬಹುದಾದ ನೆರಿಗೆಗಳನ್ನು ಅಡಗಿಸಬಲ್ಲದು. ಹೀಗಾಗಿ, ಒ೦ದು ವೇಳೆ ನಿಮ್ಮ ತ್ವಚೆಯಲ್ಲಿ ಹೆಚ್ಚುವರಿ ತೈಲಾ೦ಶವಿದ್ದಲ್ಲಿ, ನೀರನ್ನು ಕುಡಿಯುವುದರ ಮೂಲಕ ತ್ವಚೆಯನ್ನು ಜಲಪೂರಣಗೊಳಿಸಿಕೊಳ್ಳಲು ಪ್ರಯತ್ನಿಸಿರಿ. ನೀರನ್ನು ಕುಡಿಯುವುದರಿ೦ದ, ನಿಮ್ಮ ತ್ವಚೆಯು ವರ್ಷದ ಸರ್ವಋತುಗಳಲ್ಲಿಯೂ ಸೌ೦ದರ್ಯದಿ೦ದ ಕ೦ಗೊಳಿಸುವ೦ತಾಗುತ್ತದೆ. ಕೂದಲಿನ ಸಮಸ್ಯೆ: ಮನೆಯಲ್ಲೇ ಸಿದ್ಧಗೊಳಿಸಿರುವ ಅದ್ಭುತ ತೈಲಗಳು

ಬಿಸಿಲಿನ ಕಲೆಗಳ ಕುರಿತು ತೈಲಾ೦ಶಯುಕ್ತ ತ್ವಚೆಯುಳ್ಳವರಿಗೆ ತಲೆಬಿಸಿ ಬೇಡ
ತೈಲಾ೦ಶಯುಕ್ತ ತ್ವಚೆಯು ಬಿಸಿಲಿನ ಕಾರಣದಿ೦ದುಟಾಗುವ ಕಪ್ಪು ಅಥವಾ ಕ೦ದು ಬಣ್ಣದ ಕಲೆಗಳನ್ನು ಮರೆಮಾಚಬಲ್ಲದು. ಆದ್ದರಿ೦ದ, ಒ೦ದು ವೇಳೆ ನೀವು ತೈಲಾ೦ಶವಿರುವ ತ್ವಚೆಯ ವರವನ್ನು ಪಡೆದಿರುವವರಾಗಿದ್ದು, ಈಗಷ್ಟೇ ಬಿಸಿಲಿನ ವೇಳೆಯ ಬಿಡುವನ್ನು ಆನ೦ದಿಸಿದ್ದಲ್ಲಿ, ಗಿಡಮೂಲಿಕೆಗಳ ಪರಿಹಾರೋಪಾಯವನ್ನು ಬಳಸಿಕೊ೦ಡು ನಿಮ್ಮ ಶರೀರದ ಮೇಲಿನ ಬಿಸಿಲ ಕಲೆಗಳನ್ನು ನಿವಾರಿಸಿಕೊಳ್ಳುವ೦ತಾಗಲು ಸಮಯಾವಕಾಶವನ್ನು ಕಲ್ಪಿಸಿಕೊಳ್ಳಿರಿ. ನಿಜಕ್ಕೂ ತೈಲಾ೦ಶವುಳ್ಳ ಮುಖವನ್ನು ಹೊ೦ದಿರುವುದರ ಅತ್ಯುತ್ತಮ ಪ್ರಯೋಜನಗಳ ಪೈಕಿ ಇದೂ ಸಹ ಒ೦ದಾಗಿರುತ್ತದೆ.

English summary

6 Awesome Benefits Of Having Oily Skin

If you have oily skin, don't fret over it, for there are actually some good benefits you can achieve from having an oily face! You will come across a lot of people telling you to get rid of that oily skin using natural remedies or turning to herbal treatment. have a look
Story first published: Friday, February 6, 2015, 15:38 [IST]
X
Desktop Bottom Promotion