For Quick Alerts
ALLOW NOTIFICATIONS  
For Daily Alerts

ವಿಪರೀತ ಬೆವರುವ ಸಮಸ್ಯೆಯೇ? ಇಲ್ಲಿದೆ ನೈಸರ್ಗಿಕ ಬಾಡಿ ಸ್ಪ್ರೇಗಳು!

|

ಇನ್ನೇನು ಬೇಸಿಗೆ ಬಂದೇ ಬಿಟ್ಟಿತು. ನಿಮ್ಮ ದೇಹದ ಬಗ್ಗೆ ಸ್ವಲ್ಪ ಕಾಳಜಿ ನೀಡಿ ಸ್ವಾಮಿ. ಈ ಬೇಸಿಗೆಯಲ್ಲಿ ನಿಮ್ಮ ತ್ವಚೆಯು ಒಣಗುತ್ತದೆ ಮತ್ತು ವಾತಾವರಣದ ದೆಸೆಯಿಂದ ಸ್ವಲ್ಪ ಹೆಚ್ಚಾಗಿ ಬೆವರುತ್ತದೆ. ಈ ಅವಧಿಯಲ್ಲಿ ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ತ್ವಚೆಯನ್ನು ಕ್ಷೇಮವಾಗಿ ಕಾಪಾಡಿಕೊಳ್ಳಬಹುದು. ಜೂತೆಗೆ ಹಣ್ಣುಗಳನ್ನು ಸೇವಿಸುವುದರಿಂದ ಸಹ ಅದಕ್ಕೆ ಒಳ್ಳೆಯ ಆರೈಕೆ ದೊರೆಯುತ್ತದೆ. ಆದರೂ ಸಹ ನಿಮ್ಮ ದೇಹಕ್ಕೆ ಈ ಅವಧಿಯಲ್ಲಿ ಕೆಲವೊಂದು ಬಾಡಿ ಸ್ಪ್ರೇಗಳು ಬೇಕಾಗುತ್ತವೆ.

ನಾವೀಗ ನಿಮಗೆ ಸ್ವಾಭಾವಿಕವಾದ ಪದಾರ್ಥಗಳಿಂದ ತಯಾರಿಸಲಾದ ಬಾಡಿ ಸ್ಪ್ರೇಗಳನ್ನು ತಿಳಿಸುತ್ತಿದ್ದೇವೆ. ಇವುಗಳನ್ನು ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಜೊತೆಗೆ ಇವುಗಳ ತಯಾರಿಕಾ ವೆಚ್ಚ ಮತ್ತು ಸಮಯ ಸಹ ಕಡಿಮೆ. ಅಲ್ಲದೆ ಇವು ನಿಮ್ಮ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಬನ್ನಿ ಆ ಸ್ಪ್ರೇಗಳು ಯಾವುವು? ಎಂಬುದನ್ನು ಒಮ್ಮೆ ನೋಡಿಕೊಂಡು ಬರೋಣ.

5 Awesome Summer Body Sprays

ರೆಸಿಪಿ 1- ನಿಂಬೆ ಹಣ್ಣು: ಎರಡು ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ಹಿಂಡಿಕೊಳ್ಳಿ. ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು ಮಿನರಲ್ ವಾಟರ್ ಬೆರೆಸಿ. ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಿಮಗೆ ಅಗತ್ಯವಿದ್ದರೆ ಇದಕ್ಕೆ ವಿಟಮಿನ್ ಇ ಸೇರಿಸಲು ಬಾದಾಮಿ ಎಣ್ಣೆಯನ್ನು ಬೆರೆಸಿ. ಈ ಪದಾರ್ಥಗಳನ್ನು ತಣ್ಣಗಿನ ಸ್ಥಳದಲ್ಲಿ ಇಡಿ. ಒಂದು ವಾರದ ನಂತರ ಈ ಬಾಡಿ ಸ್ಪ್ರೇಯನ್ನು ಬಳಸಲು ಆರಂಭಿಸಿ. ಬೆನ್ನಿನಲ್ಲಿ ಕಂಡುಬರುವ ಅಸಹ್ಯಕರ ಕೂದಲಿನ ಸಮಸ್ಯೆಗೆ ಪರಿಹಾರವೇನು?

ರೆಸಿಪಿ -2 - ಆಪಲ್ ಸಿಡೆರ್ ವಿನಿಗರ್: ಇದನ್ನು ಸಹ ನೀವು ಬೇಸಿಗೆಯಲ್ಲಿ ಬಾಡಿ ಸ್ಪ್ರೇಯಾಗಿ ಬಳಸಬಹುದು. ಆದರೂ ಸಹ ಇದನ್ನು ಸ್ವಲ್ಪ ಮಾತ್ರ ಬೆರೆಸಿಕೊಳ್ಳಿ. ಏಕೆಂದರೆ ಸೂಕ್ಷ್ಮ ತ್ವಚೆಗೆ ಈ ವಿನಿಗರ್ ಒಳ್ಳೆಯದಲ್ಲ. ಆದಷ್ಟು ಇದನ್ನು ಮೆದು ಮಾಡಿಕೊಂಡು ಬಳಸಿ.

ರೆಸಿಪಿ-3- ರೋಸ್ ವಾಟರ್: ಇದನ್ನು ಸಹ ನೀವು ಬಾಡಿ ಸ್ಪ್ರೇ ಆಗಿ ಬಳಸಬಹುದು. ಗುಲಾಬಿ ಹೂಗಳ ದಳಗಳ ಜೊತೆಗೆ ರೋಸ್ ವಾಟರ್ ಬೆರೆಸಿಕೊಳ್ಳಿ. ಇದರ ಜೊತೆಗೆ ಕೆಲವು ಹನಿ, ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಈ ಎಲ್ಲಾ ಪದಾರ್ಥಗಳನ್ನು ಕಡಿಮೆ ಉರಿಯಲ್ಲಿ, ಕಾಯಿಸಿಕೊಳ್ಳಿ ಮತ್ತು ನಂತರ ತಣ್ಣಗಾಗಲು ಬಿಡಿ. ತಾಜಾ ಮತ್ತು ಆಹ್ಲಾದಕಾರಿಯಾದ ಈ ಬಾಡಿ ಸ್ಪ್ರೇಯು ನಿಮಗೆ ಈ ಬೇಸಿಗೆಯಲ್ಲಿ ಮುದ ನೀಡುವುದು ನಿಶ್ಚಿತ. ಬೇಸಿಗೆಯ ಕಾವು ಹೆಚ್ಚಿರುವಾಗ ತ್ವಚೆ ರಕ್ಷಣೆಗೆ ಟಿಪ್ಸ್

ರೆಸಿಪಿ-4 ವೆನಿಲಾ: ಒಂದು ಹಿಡಿ ವೆನಿಲಾ ಕಡ್ಡಿಗಳನ್ನು ತೆಗೆದುಕೊಂಡು ಅರ್ಧ ಕಪ್ ಹಾಲಿನಲ್ಲಿ ಬೆರೆಸಿಕೊಳ್ಳಿ. ಈ ಹಾಲನ್ನು ಬಾಡಿ ಸ್ಪ್ರೇ ಆಗಿ ಬಳಸಿ. ಒಂದು ವೇಳೆ ಹಾಲು ಗಟ್ಟಿಯಾಗಿ ಕಂಡು ಬಂದಲ್ಲಿ, ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿಕೊಳ್ಳಿ. ಮನೆಯಲ್ಲಿ ತಯಾರಿಸಿದ ಈ ಬಾಡಿ ಸ್ಪ್ರೇಯನ್ನು ತುಂಬಾ ದಿನಗಳ ಕಾಲ ಬಳಸಬಹುದು. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

ರೆಸಿಪಿ-5- ಸಿಟ್ರಸ್ ಹಣ್ಣುಗಳು: ಬೇಸಿಗೆಯಲ್ಲಿ ನೀವು ಬಳಸಬಹುದಾದ ಹಣ್ಣುಗಳಲ್ಲಿ ಇವಕ್ಕೆ ಅಗ್ರಸ್ಥಾನ ನೀಡಿ. ಅದರಲ್ಲೂ ಬಾಡಿ ಸ್ಪ್ರೇಗೆ ಈ ಹಣ್ಣುಗಳು ಹೇಳಿ ಮಾಡಿಸಿದ ಹಣ್ಣುಗಳಾಗಿವೆ. ಬಾಡಿ ಸ್ಪ್ರೇ ತಯಾರಿಸಲು ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಬಳಸಿ. ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ, ಇವನ್ನು ಸ್ವಲ್ಪ ದಿನ ಸಂಗ್ರಹಿಸಿಟ್ಟು, ನಂತರ ಕೆಲವು ದಿನ ಬಿಟ್ಟು ಬಳಸಿ.

English summary

5 Awesome Summer Body Sprays

It is that time of the year to indulge ourselves into a little more body care. During summer the skin becomes dry and humid due to the weather. There are also a couple of sprays which you can use on oily skin. Take a look at some of these summer body sprays to use.
Story first published: Tuesday, March 3, 2015, 9:46 [IST]
X
Desktop Bottom Promotion