For Quick Alerts
ALLOW NOTIFICATIONS  
For Daily Alerts

ಕಾಂತಿಯುತ ತ್ಚಚೆಗೆ ಕಡೆಗಣಿಸಬೇಕಾದ ಅನಾರೋಗ್ಯಕರ ಆಹಾರಗಳು

By Hemanth P
|

ಚರ್ಮದ ಆರೋಗ್ಯವು ನಿಮ್ಮ ಸಂಪೂರ್ಣ ದೇಹದ ಆರೋಗ್ಯ ಪ್ರತಿನಿಧಿಸುತ್ತದೆ. ನೀವು ತಿನ್ನುವ ಆಹಾರವು ಚರ್ಮದ ಆರೋಗ್ಯಕ್ಕೆ ಕಾರಣವಾಗಿದೆ. ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶಗಳು, ವಿಟಮಿನ್ ಮತ್ತು ಪ್ರೋಟಿನ್ ಗಳನ್ನು ಹೊಂದಿರುವ ಆಹಾರ ತಿಂದರೆ ಅದು ಜೋತಾಡುವ ಚರ್ಮ ನಿವಾರಿಸಿ ಯೌವನದ ಕಾಂತಿ ನೀಡುತ್ತದೆ.

ಇನ್ನೊಂದು ಕಡೆ ನಿಮ್ಮ ನಾಲಿಗೆಗೆ ರುಚಿ ನೀಡುವಂತಹ ಕೆಲವೊಂದು ಆಹಾರಗಳು ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಿಂದಲೂ ನೆರವಾಗದೆ ನಕಾರಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಚರ್ಮದ ಆರೋಗ್ಯ ಮತ್ತು ಅದರ ಕಾಂತಿಗೆ ಹಾನಿ ಉಂಟುಮಾಡುವ ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸನ್‍ಟ್ಯಾನ್‍ ನಿವಾರಿಸಲು ಮನೆಯಲ್ಲಿಯೇ ಇದೆ ಮದ್ದುಗಳು

ಆಲ್ಕೋಹಾಲ್:

ಆಲ್ಕೋಹಾಲ್:

ಆಲ್ಕೋಹಾಲ್ ಬಾಟಲಿಯಲ್ಲಿ ಎಚ್ಚರಿಕೆ ನೇತಾಡುತ್ತಿರುತ್ತದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆಲ್ಕೋಹಾಲ್ ಅತಿಯಾಗಿ ಅಲ್ಲದಿದ್ದರೂ ಮಿತವಾಗಿ ಆಲ್ಕೋಹಾಲ್ ಸೇವನೆ ನಿಮ್ಮ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆಲ್ಕೋಹಾಲ್ ಮೂತ್ರವರ್ಧಕವಾಗಿರುವ ಕಾರಣ ಚರ್ಮವನ್ನು ನಿರ್ಜಲೀಕರಿಸಿ, ಅದು ತುಂಬಾ ಒರಟು ಹಾಗೂ ಒಣದಿಂದ ಕಾಣುವಂತೆ ಮಾಡುತ್ತದೆ. ಇದರಿಂದ ನೀವು ಅಕಾಲಿಕವಾಗಿ ವಯಸ್ಸಾದಂತೆ ಕಂಡುಬರಬಹುದು.

ಉಪ್ಪು:

ಉಪ್ಪು:

ಅತಿಯಾದ ಉಪ್ಪು ಸೇವನೆಯಿಂದ ನಿಮ್ಮ ಹೃದಯಕ್ಕೆ ಅಪಾಯವಿದೆ. ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನಿಂದಾಗಿ ನಿಮ್ಮ ಕಣ್ಣಿನ ಸುತ್ತ ಬೊಜ್ಜು ಮತ್ತು ಮುಖ ಉಬ್ಬಿದಂತಾಗಬಹುದು.

ಕಾಫಿ:

ಕಾಫಿ:

ನೀವು ದಿನದಲ್ಲಿ ಎರಡಕ್ಕಿಂತ ಹೆಚ್ಚಿನ ಕಪ್ ಕೆಫಿನ್ ಯುಕ್ತ ಪಾನೀಯವನ್ನು ಸೇವಿಸುತ್ತಿದ್ದರೆ ಆಗ ನಿಮ್ಮ ಚರ್ಮವು ಮಂಕು, ತೆಳುವಾದಂತೆ ಕಾಣಿಸಬಹುದು. ಕೆಫಿನ್ ಯುಕ್ತ ಪಾನೀಯಗಳನ್ನು ಮಿತಿಗಿಂತ ಹೆಚ್ಚಿಗೆ ಸೇವನೆ ಮಾಡುವುದರಿಂದ ಕೊರ್ಟಿಸೊಲ್ ಎನ್ನುವ ಒತ್ತಡದ ಹಾರ್ಮೋನು ಬಿಡುಗಡೆಯಾಗುತ್ತದೆ. ಇದು ಚರ್ಮವನ್ನು ತೆಳು, ವಯಸ್ಸಾಗುವಂತೆ ಮಾಡಿ ಚರ್ಮದ ಬಣ್ಣವನ್ನು ಮಂಕಾಗಿಸುತ್ತದೆ.

ಫಾಸ್ಟ್ ಫುಡ್:

ಫಾಸ್ಟ್ ಫುಡ್:

ಬೀದಿ ಬದಿಯ ಆಹಾರ, ಫ್ರೆಂಚ್ ಫ್ರೈಸ್ ಮತ್ತು ತುಂಬಾ ಕರಿದ ಆಹಾರಗಳು ನಿಮ್ಮ ಟೇಬಲ್ ಮೇಲೆ ಕೆಲವೇ ಕ್ಷಣಗಳಲ್ಲಿ ಬರಬಹುದು. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಹಾನಿ ಉಂಟುಮಾಡಬಹುದು. ಇದು ರಕ್ತ ಸಂಚಲನ ನಿಧಾನವಾಗಿಸಿ, ರಂಧ್ರಗಳನ್ನು ಮುಚ್ಚುವುದರಿಂದ ಚರ್ಮದಲ್ಲಿ ಬ್ಯಾಕ್ಟೀರಿಯಾ ರಚನೆಗೆ ನೆರವಾಗುತ್ತದೆ. ಇದು ನಿಮ್ಮ ಮುಖದಲ್ಲಿ ಮೊಡವೆ ಬೆಳೆಯಲು ಕಾರಣವಾಗುತ್ತದೆ.

ಸಕ್ಕರೆ:

ಸಕ್ಕರೆ:

ಕೊಬ್ಬಿಗೆ ಕೊಡುಗೆ ನೀಡುವಂತಹ ಸಿಹಿಯು ಪ್ರತಿರಕ್ಷಣಾ ವ್ಯವಸ್ಥೆಯ ದುರ್ಬಲಗೊಳಿಸಲು ಪರಿಣಾಮ ಬೀರುತ್ತದೆ ಮತ್ತು ತ್ವಚೆಯಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಒಳ್ಳೆಯ ಚರ್ಮ ಪಡೆಯಲು ನೀವು ಸಕ್ಕರೆ ಸೇವನೆ ಮಿತಿಯಲ್ಲಿಡಬೇಕು.

ಕೃತಕ ಪದಾರ್ಥಗಳು:

ಕೃತಕ ಪದಾರ್ಥಗಳು:

ಹೆಚ್ಚಿನ ಸಂಸ್ಕರಿತ ಆಹಾರಗಳಲ್ಲಿ ಕೃತಕ ಬಣ್ಣದ ಪದರ, ಕೃತಕ ಸಂರಕ್ಷಣೆ ಮತ್ತು ರುಚಿ ಹೊಂದಿರುತ್ತದ. ಇದರಲ್ಲಿ ಯಾವುದೇ ಪೌಷ್ಠಿಕಾಂಶದ ಮೌಲ್ಯವಾಗಲಿ ಅಥವಾ ಪ್ರೋಟಿನ್ ಗಳು ಇರುವುದಿಲ್ಲ. ಕೆಲವೊಂದು ಸಲ ಈ ಕೃತಕ ರುಚಿಯಿಂದ ನಿಮಗೆ ಹಿಸ್ಟಮಿನ್ ಪ್ರತಿಕ್ರಿಯೆ ಮತ್ತು ಉರಿಯ ಭಾವನೆಯಾಗಬಹುದು. ನಮ್ಮ ಅಂಗಾಂಶಗಳು ರಾಸಾಯನಿಕಗಳನ್ನು ಹಿಡಿದಿಟ್ಟುಕೊಳ್ಳುವ ಕಾರಣ ಇದು ಭವಿಷ್ಯದಲ್ಲಿ ಸಮಸ್ಯೆ ಉಂಟುಮಾಡಬಹುದು.

ಪಾಸ್ತಾ ಮತ್ತು ವೈಟ್ ಬ್ರೆಡ್:

ಪಾಸ್ತಾ ಮತ್ತು ವೈಟ್ ಬ್ರೆಡ್:

ವೈಟ್ ಬ್ರೆಡ್, ಕೇಕ್ಸ್, ಪ್ಯಾಸ್ಟ್ರಿ ಮತ್ತು ಪಾಸ್ತಾ ಗ್ಲಿಸೆಮಿನ್ ಆಹಾರದ ವಿಭಾಗಕ್ಕೆ ಬರುತ್ತದೆ. ಇದು ಚರ್ಮದಲ್ಲಿ ಮೊಡವೆ ಉಂಟುಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದ ಧಾನ್ಯಗಳಿಂದ ಮಾಡಿದಂತಹ ಉತ್ಪನ್ನಗಳನ್ನು ಸೇವಿಸುವುದರಿಂದ ಇದು ಆರೋಗ್ಯಕ್ಕೆ ಎಲ್ಲಾ ವಿಧಗಳಿಂದ ನೆರವಾಗುತ್ತದೆ.

ರಾತ್ರಿ ಮಲಗುವುದಕ್ಕಿಂತ ಮೊದಲು ನೀವು ಹೆಚ್ಚಿನ ಮಟ್ಟದ ಡೈರಿ ಉತ್ಪನ್ನಗಳನ್ನು ಸೇವಿಸಿದ್ದರೆ ಮರುದಿನ ನಿಮ್ಮ ಮುಖದಲ್ಲಿ ಮೊಡವೆಗಳು ಎದ್ದಿವೆಯಾ? ಡೈರಿ ಉತ್ಪನ್ನಗಳು ಬ್ಯಾಕ್ಟೀರಿಯಾ ಮತ್ತು ಉರಿಯೂತ ರಚನೆ ಮಾಡುತ್ತದೆ. ಇದು ಮೇದೋಗ್ರಂಥಿಗಳ ಸ್ರಾವ ಉಂಟುಮಾಡಿ, ಮೊಡವೆಯುಕ್ತ ಚರ್ಮಕ್ಕೆ ಕಾರಣವಾಗಬಹುದು.

English summary

Unhealthy foods to avoid for your glowing skin

Skin health represents the health of your entire body, the food you eat entails the skin look. When the food is combined with body required nutrients, vitamins and proteins it over comes the bad contributing for the dull skin and glitter with a youthful glow.
Story first published: Saturday, May 24, 2014, 16:20 [IST]
X
Desktop Bottom Promotion