For Quick Alerts
ALLOW NOTIFICATIONS  
For Daily Alerts

ಕಣ್ಣಿನ ಹುಬ್ಬುಗಳನ್ನು ಸುಂದರವಾಗಿರಿಸಲು ಸಲಹೆಗಳು

By Poornima Heggade
|

ಸೌಂದರ್ಯ ಎಲ್ಲರಿಗೂ ಬಹಳ ಮುಖ್ಯವಾದ ಅಂಶ. ನೋಡಲು ಅಂದವಾಗಿದ್ದರೆ ನಮ್ಮೆ ಮನಸ್ಥೈರ್ಯವೂ ಬಹಳ ಮೇಲಿರುತ್ತದೆ ಹಾಗೂ ನಾವು ಎಂತಹ ಸನ್ನಿವೇಶಗಳನ್ನು ಎದುರಿಸಲೂ ಸಿದ್ಧರಿರುತ್ತೇವೆ. ಹಾಗಾಗಿ ಇದು ನೋಡಲಷ್ಟೇ ಆಕರ್ಷಕವಾಗಿ ಇರುವ ಸಂಗತಿಯಲ್ಲ ಬದಲಾಗಿ ಮನಸ್ಸಿನ ಮೇಲೂ ಬಹಳ ಪರಿಣಾಮ ಬೀರುತ್ತದೆ. ಸೌಂದರ್ಯದ ಮಾತು ಬಂದಾಗ ದೇಹದ ಮೇಲಿನ ಕೂದಲು ತೆಗೆಯುವುದೂ ಒಂದು ಪ್ರಮುಖ ವಿಷಯ.

ಬೇಡವಾದ ದೇಹದ ಕೂದಲನ್ನು ತೆಗೆಯಲು ಟ್ವೀಜ಼ಿಂಗ್ ಒಂದು ಪ್ರಮುಖ ತಂತ್ರಜ್ಞಾನ. ಇದನ್ನು ಹುಬ್ಬು, ಗಲ್ಲ, ಮೇಲ್ತುಟಿ ಅಥವಾ ಕೆಳ ತುಟಿ ಹಾಗೂ ಗದ್ದದಿಂದ ಕೂದಲು ತೆಗೆಯಲು ಬಳಸಲಾಗುತ್ತದೆ. ಇದು ಕೂದಲನ್ನು ಬುಡದಿಂದ ತೆಗೆಯುತ್ತದೆ. ಇದು ಪ್ಲಕ್ಕಿಂಗ್ ವಿಧಾನದ ಕೂದಲು ನಿರ್ಮೂಲಕವಾಗಿದೆ.

Tweezing: Good or Bad?

ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಸ್ತನ ಗಾತ್ರವನ್ನು ಕಿರಿದುಗೊಳಿಸಲು ಸಲಹೆಗಳು!

ಇದರಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ಅಂಶಗಳು ಒಳಗೊಂಡಿವೆ. ಹಾಗಾದರೆ ಇದು ಒಳ್ಳೆಯದೇ? ಇದನ್ನು ಬಳಸಬಹುದೇ ಇದೊಂದು ದೊಡ್ಡ ಪ್ರಶ್ನೆಯಾಗಿಯೇ ಉಳಿಯುತ್ತದೆ. ಹಾಗಾಗಿ ಏನು ಒಳ್ಳೆಯ ಅಂಶಗಳಿವೆ ಹಾಗೂ ಯಾವ ರೀತಿಯ ಸಮಸ್ಯೆಗಳು ಬರಬಹುದು ಎಂದು ತಿಳಿದಿರುವುದು ಅಗತ್ಯವಾಗಿದೆ.

ಇಲ್ಲಿ ನಾವು ಕೆಲವು ಅನುಕೂಲ ಮತ್ತು ಅನಾನುಕೂಲಗಳನ್ನು ಪಟ್ಟಿ ಮಾಡಿದ್ದೇವೆ. ಟ್ವೀಜ಼ಿಂಗ್ ಅನ್ನು ಬಳಸುವ ಮೊದಲು ಇದನ್ನು ಒಮ್ಮೆ ಓದಿ ಬಳಸುವುದು ಉತ್ತಮ. ಆಗ ನಿಮ್ಮ ಮನಸ್ಸಿನಲ್ಲಿರುವ ತುಮುಲಗಳು ನಿವಾರಣೆಯಾಗುತ್ತವೆ.

ಅನುಕೂಲಗಳು:
ಸುಲಭ: ನಿಮಗೆ ತಾತ್ಕಾಲಿಕವಾದ ಕೂದಲು ತೆಗೆಯುವ ಸಾಧನ ಬೇಕೆಂದರೆ ಟ್ವೀಜ಼ಿಂಗ್ ಬಹಳ ಸುಲಭವಾದ ಸಾಧನವಾಗಿದೆ. ಇವುಗಳನ್ನು ಬಳಸುವುದು ಬಹಳವೇ ಸುಲಭ ಮತ್ತು ಅದಕ್ಕೆ ಹೆಚ್ಚಿನ ತರಬೇತಿಯ ಅಗತ್ಯವಿಲ್ಲ. ಹಾಗಾಗಿ ಇದು ಮಹಿಳೆಯರಲ್ಲಿ ಬಹಳ ಪ್ರಸಿದ್ಧವಾಗಿವೆ.

ದುಬಾರಿಯಲ್ಲ:
ಟ್ವೀಜ಼ರ್ಜ಼್ ಬಹಳವೇ ಅಗ್ಗದ ಕೇದಲು ನಿರ್ಮೂಲಕವಾಗಿವೆ. ಒಮ್ಮೆ ನೀವಿದನ್ನು ಬಳಸಲು ಆರಂಭಿಸಿದ ಮೇಲೆ ದುಬಾರಿ ಬ್ಯೂಟಿ ಪಾರ್ಲರ್ ಗಳಿಗೆ ವಿದಾಯ ಹೇಳಬಹುದು. ಮನೆಯಲ್ಲೇ ಇದ್ದು ಆರಾಮದಾಯಕ ಕೂದಲು ತೆಗೆಯುವ ಸಾಧನವೊಂದು ನಿಮ್ಮ ಕೈಗೆ ಬಂದಂತೆ ಆಗುತ್ತದೆ.

ಕಡಿಮೆ ನೋವು: ಟ್ವೀಜ಼ಿಂಗ್ ಒಳ್ಳೆಯದೇ ಅಲ್ಲವೇ ಎಂಬ ಸಂದೇಹ ನಿಮ್ಮ ಮನಸ್ಸಿನಲ್ಲಿರುವಾಗ ಅದರಲ್ಲಿ ನೋವಾಗುತ್ತದೆಯೇ ಇಲ್ಲವೇ ಎಂಬ ಸಂದೇಹವೂ ಇರಬಹುದು. ಥ್ರೆಡಿಂಗ್ ಗೆ ಹೋಲಿಸಿದರೆ ಇದರಲ್ಲಿ ನೋವು ಬಹಳ ಕಡಿಮೆಯಾಗಿರುತ್ತದೆ. ಇದನ್ನು ಬಳಸುವಾಗ ಒಂದು ಕೂದಲನ್ನಾದರೂ ತೆಗೆಯಿರಿ ಅಥವಾ ಎರಡು ಮೂರು ಕೂದಲನ್ನು ತೆಗೆಯಿರಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿ.

ಬಹಳ ಪರಿಣಿತಿಯ ಅಗತ್ಯವಿಲ್ಲ: ನೀವು ಇದನ್ನು ಬಳಸಲು ಪರಿಣಿತಿ ಪಡೆದವರಾಗಿರಬೇಕಾಗಿಲ್ಲ. ಈ ವಿಧಾನದೊಂದಿಗೆ ನೀವು ಹೊಂದಿಕೊಂಡ ಮೇಲೆ ನೀವು ಬಹಳ ಸರಿಯಾಗಿ ಇದನ್ನು ಉಪಯೋಗಿಸಬಲ್ಲಿರಿ. ಇದಕ್ಕಾಗಿ ಇದನ್ನು ಬಹಳ ಮಹಿಳೆಯರು ಮೆಚ್ಚುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ

ಅನಾನುಕೂಲಗಳು:
ಒಳಗಿನ ಕೂದಲು: ಕೂದಲಿನ ಕಿರುಚೀಲಗಳನ್ನು ಟ್ವೀಜ಼್ ಮಾಡುವುದು ಅಷ್ಟೇನೂ ಸರಿಯಾದ ಉಪಯೋಗವಲ್ಲ. ಇದರಿಂದಾಗಿ ಅಲ್ಲಿ ಮಾಂಸಖಂಡದ ಒಳಗೆ ಬೆಳೆಯುವ ಕೂದಲು ಬೆಳೆಯಬಹುದು ಹಾಗೂ ಆ ಭಾಗದಲ್ಲಿ ಕೆಂಪು ಕಲೆಗಳಾಗುವ ಸಾಧ್ಯೆತೆಗಳಿವೆ. ಇದು ಚರ್ಮದ ಮೇಲೂ ಅಡ್ಡ ಪರಿಣಾಮ ಬೀರುತ್ತದೆ.

ಚರ್ಮಕ್ಕೆ ಚಿವುಟಿದಂತೆ ಆಗುತ್ತದೆ: ಮುಖದಲ್ಲಿ ಇದನ್ನು ಬಳಸುವಾಗ ಇದರ ಮತ್ತೊಂದು ತೊಂದರೆ ಎಂದರೆ ಇದರಿಂದ ಮುಖದ ಮೇಲೆ ಚಿವುಟಿದ ಗಾಯಗಳಾಗುವ ಸಾಧ್ಯೆತೆ ಇದೆ. ಇದನ್ನು ಸತತವಾಗಿ ಬಳಸಿ ಪರಿಣತರಾದಿರೆಂದರೆ ಈ ಸಮಸ್ಯೆ ನಿಮ್ಮನ್ನು ಬಾಧಿಸದು.

ಸಮಯ: ಇತರ ಕೇದಲು ತೆಗೆಯುವ ಸಾಧನಗಳಿಗೆ ಹೋಲಿಸಿದರೆ ಟ್ವೀಜ಼ಿಂಗ್ ಬಹಳ ಸಮಯವನ್ನು ತೆಗೆದುಕೊಳ್ಳುವ ಸಾಧನವಾಗಿದೆ. ಇದು ನೀವ ಕೂದಲು ತೆಗೆಯಬೇಕಾದ ಜಾಗದ ಮೇಲೂ ಅವಲಂಬಿತವಾಗಿದೆ. ಇದು ತಾತ್ಕಾಲಿಕವಾದ ಸಾಧನವಾದ ಕಾರಣ ಇದನ್ನು ನೀವು ಮತ್ತೆ ಮತ್ತೆ ಬಳಸಬೇಕಾಗಬಹುದು.

ಬಳಲಿಕೆ: ಒಂದು ವೇಳೆ ಬಹಳಷ್ಟು ಜಾಗದ ಕೂದಲನ್ನು ತೆಗೆಯಬೇಕಾದರೆ ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ತ್ರಾಸದಾಯಕ ಕೂಡ. ಇದಕ್ಕೆ ಬಹಳ ತಾಳ್ಮೆಯ ಅಗತ್ಯವಿದೆ.

English summary

Tweezing: Good or Bad?

Tweezing is a technique that is used commonly for removing excess hair. It is generally used to remove hair from eyebrows, chin, upper lips or lower lips and cheeks.
X
Desktop Bottom Promotion