For Quick Alerts
ALLOW NOTIFICATIONS  
For Daily Alerts

ಸೌಂದರ್ಯದ ಬಗ್ಗೆ ಇರುವ ಹತ್ತು ಮುಖ್ಯ ಮಿಥ್ಯಾ ಕಲ್ಪನೆಗಳು

By Vishwanath
|

ಒಂದು ಅಧ್ಯಯನದ ಪ್ರಕಾರ ಹತ್ತು ಮಹಿಳೆಯರಲ್ಲಿ ಒಂಬತ್ತು ಮಹಿಳೆಯರು ಸೌದರ್ಯದ ಬಗ್ಗೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅವುಗಳಲ್ಲಿ ಕೆಲವು ಯಾವುದೆಂದರೆ ತಲೆಕೂದಲು ಹೆಚ್ಚು ಹೆಚ್ಚು ಬೆಳೆಯುತ್ತದೆಯೆಂದು ದಿನ ನಿತ್ಯವೂ ತೊಳೆದುಕೊಳ್ಳುವುದು ಅಥವಾ ಕನ್ನಡಿಯಮುಂದೆ ನಿಂತು ಒಳ್ಳೆಯ ಆಕಾರಪಡೆಯಲು ಹುಬ್ಬಿನ ಕೂದಲುಗಳನ್ನು ಎಳೆದು ಕಿತ್ತುಕೊಳ್ಳುವುದು.

ಸಾಧಾರಣವಾಗಿ ನಾವೆಲ್ಲರೂ ತಲೆಕೂದಲು ಮತ್ತು ಸೌಂದರ್ಯಗಳ ಬಗ್ಗೆ ಕೆಲವು ತಪ್ಪುಮಾಡುತ್ತೇವೆ. ಆದರೂ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರಿಂದ ನಮಗೆ ಸಮಯ ಮತ್ತು ಹಣ ಉಳಿತಾಯವಾಗಬಹುದು.
ಇಂತಹದೇ ಆದ ತಲೆಕೂದಲು ಮತ್ತು ಸೌಂದರ್ಯದ ಬಗ್ಗೆ ನಾವು ಮಾಡುವ 1೦ ತಪ್ಪುಗಳು.

ಸುಂದರವಾಗಿ ಕಾಣಲು ಇಲ್ಲಿದೆ ಸುಲಭ ಮಾರ್ಗಗಳು

ತಲೆಕೂದಲನ್ನು ಅತೀ ಹೆಚ್ಚಾಗಿ ತೊಳೆಯುವುದು

ತಲೆಕೂದಲನ್ನು ಅತೀ ಹೆಚ್ಚಾಗಿ ತೊಳೆಯುವುದು

ನೀವು ಪ್ರತಿದಿನವೂ ನಿಮ್ಮ ಕೂದಲನ್ನು ತೊಳೆಯುತ್ತಿದ್ದರೆ ಅದು ಸ್ವಚ್ಚವಾದ ಮತ್ತು ಉನ್ನತ ಸ್ಥಿತಿಯಲ್ಲಿರುತ್ತದೆಯೆಂದು ಅಂದುಕೊಂಡಿರುತ್ತೀರಿ. ಆದರೆ ಅದು ನೀವು ಮಾಡುವ ಮೊದಲನೇ ತಪ್ಪು. ತಲೆಕೂದಲನ್ನು ಅಗಾಗ್ಗೆ ಹೆಚ್ಚು ತೊಳೆಯುತ್ತಿದ್ದರೆ ಕೂದಲನ್ನಿರುವ ನೈಸರ್ಗಿಕ ತೈಲಗಳ ನಾಶವಾಗಿ ವಾಸ್ತವವಾಗಿ ಹೆಚ್ಚು ಹಾನಿ ಮಾಡುತ್ತಿದ್ದೀರಿ.

ಅತೀ ಹೆಚ್ಚಿನ ಹೇರ್ ಕಂಡೀಶನರ್ ಉಪಯೋಗಿಸುವುದು

ಅತೀ ಹೆಚ್ಚಿನ ಹೇರ್ ಕಂಡೀಶನರ್ ಉಪಯೋಗಿಸುವುದು

ಸಾಮಾನ್ಯವಾಗಿ ನೀವು ಹೇರ್ ಕಂಡೀಶನರನ್ನು ತಲೆತುಂಬಾ ಧಾರಾಳವಾಗಿ ಉಪಯೋಗಿಸುತ್ತೀರಿ. ಹಾಗೆ ಮಾಡಬಾರದು. ನಿಮ್ಮ ತಲೆಯಲ್ಲಿ ಹುಟ್ಟುವ ಎಳೆ ಕೂದಲು ಆರೊಗ್ಯಕರವಾಗಿದ್ದು ಅದರ ಮೇಲೆ ಉಪಯೋಗಿಸದೆ ಗಮನವಿಟ್ಟು ಕೂದಲ ತುದಿಭಾಗಗಳಿಗೆ ಮಾತ್ರ ಹಚ್ಚಬೇಕು.

ಹೇರ್ ಡ್ರೈಯರಿನ ಶಾಖದಿಂದ ರಕ್ಷಿಸುವುದು

ಹೇರ್ ಡ್ರೈಯರಿನ ಶಾಖದಿಂದ ರಕ್ಷಿಸುವುದು

ಹೇರ್ ಡೈಯರ್ ಮತ್ತು ಕೂದಲನ್ನು ನೇರಗೊಳಿಸುವ ಉಪಕರಣ (ಸ್ಟ್ರೈಟನರ್) ಇವುಗಳನ್ನು ಉಪಯೋಗಿಸುವಾಗ ಅದರಿಂದ ಬಹಳಷ್ಟು ಶಾಖ ಬರುತ್ತದೆ. ಆ ಶಾಖವನ್ನು ನಿಯಂತ್ರಿಸದೆ ಬಳಸಿದಾಗ ನಿಮ್ಮ ಕೂದಲು ಹೆಚ್ಚು ಒಣಗಿ ಕಳಪೆಸ್ಥಿತಿಯಲ್ಲಿರುತ್ತದೆ.

ನಿಮ್ಮ ಪೋನಿಟೈಲನ್ನು ಒಂದೇ ಸ್ಥಳದಲ್ಲಿ ಕಟ್ಟುವುದು

ನಿಮ್ಮ ಪೋನಿಟೈಲನ್ನು ಒಂದೇ ಸ್ಥಳದಲ್ಲಿ ಕಟ್ಟುವುದು

ನೀವು ಯಾವಾಗಲೂ ಪೋನಿಟೈಲ್ ಕಟ್ಟುವ ಅಭ್ಯಾಸವಿಟ್ಟುಕೊಂಡಿದ್ದರೆ ಅದನ್ನು ಒಂದೇಭಾಗದಲ್ಲಿ ದಿನವೂ ಕಟ್ಟಬೇಡಿ. ಹಾಗೆ ಮಾಡಿದಾಗ ಆ ಭಾಗದಲ್ಲಿ ಒತ್ತಡಕ್ಕೆ ಕಾರಣವಾಗಿ ಕಾಲಾನಂತರದಲ್ಲಿ ದುರ್ಬಲಗೊಳ್ಳುತ್ತದೆ.

ಮೇಕಪ್ ಬ್ರಶ್‌ಗಳನ್ನು ಉಪಯೋಗಿಸಿದನಂತರ ತೊಳೆದಿಟ್ಟುಕೊಳ್ಳಲು ಮರೆಯುವುದು

ಮೇಕಪ್ ಬ್ರಶ್‌ಗಳನ್ನು ಉಪಯೋಗಿಸಿದನಂತರ ತೊಳೆದಿಟ್ಟುಕೊಳ್ಳಲು ಮರೆಯುವುದು

ಇದೊಂದು ಮುಖ್ಯ ಕೆಲಸವಾಗಿದ್ದು ಉಪಯೋಗಿಸಿದ ಬ್ರಶ್‌ಗಳನ್ನು ತೊಳೆದಿಟ್ಟುಕೊಳ್ಳಲು ಮರೆತುಬಿಡುತ್ತೀರಿ ಅಥವಾ ಅದರ ಬಗ್ಗೆ ಚಿಂತೆಯನ್ನು ಮಾಡುವುದಿಲ್ಲ. ನೀವು ಹೀಗೆ ಮಾಡಿದರೆ ಪ್ರತಿಸಲವೂ ನೀವು ಉಪಯೋಗಿಸಿದ ಬಣ್ಣಗಳ ಉಳಿಕೆಗಳಿಂದ ಬ್ಯಾಕ್ಟೀರಿಯ ಬೆಳೆಯಲು ಅವಕಾಶಮಾಡುತ್ತೀರಿ. ಆದುದರಿಂದ ಬ್ರಶ್ ಗಳನ್ನು ಉಪಯೋಗಿಸಿದನಂತರ ಪ್ರತಿಸಲವೂ ಚೆನ್ನಾಗಿ ತೊಳೆದಿಟ್ಟುಕೊಳ್ಳಿ.

ನಿಮ್ಮ ಕುತ್ತಿಗೆ ಭಾಗವನ್ನು ನಿರ್ಲಕ್ಷ್ಯಮಾಡುವುದು

ನಿಮ್ಮ ಕುತ್ತಿಗೆ ಭಾಗವನ್ನು ನಿರ್ಲಕ್ಷ್ಯಮಾಡುವುದು

ನೀವು ಪ್ರತಿದಿನವೂ ನಿಮ್ಮ ಚರ್ಮವನ್ನು ಶುದ್ಧೀಕರಿಸಿ ಅದರ ತೇವಾಂಶವನ್ನು ಕಾಪಾಡಿಕೊಳ್ಳುವಾಗ ನಿಮ್ಮ ಕತ್ತಿನ ಹಿಂಭಾಗವನ್ನು ಮರೆಯುತ್ತೀರಾ? ಇಲ್ಲದೇ ಇರಬಹುದು. ಅದರೂ ನಿಮ್ಮ ಗಲ್ಲವನ್ನೇ ಮಾತ್ರ ಅಲ್ಲ, ನಿಮ್ಮ ಕುತ್ತಿಗೆಯ ಎಲ್ಲಾ ತೆಳುವಾದ ಭಾಗವನ್ನೂ ಗಮನವಿಟ್ಟು ಅರೈಕೆಮಾಡಿ. ನಿಜವಾಗಿಯೂ ಈ ಭಾಗ ಸೂಕ್ಷ್ಮತೆಯಿಂದ ಕೂಡಿದ್ದು ಅದನ್ನು ಕಾಪಾಡುವುದು ಅತಿ ಮುಖ್ಯ.

ಮುಖದ ಮೇಲಿನ ಕರಿ ಚುಕ್ಕೆಗಳಿಗೆ ಹೆಚ್ಚಾಗಿ ಕ್ರೀಮ್ ಬಳೆಯುವುದು

ಮುಖದ ಮೇಲಿನ ಕರಿ ಚುಕ್ಕೆಗಳಿಗೆ ಹೆಚ್ಚಾಗಿ ಕ್ರೀಮ್ ಬಳೆಯುವುದು

ನಿಮ್ಮ ಮುಖದಮೇಲೆ ಚುಕ್ಕೆ ಅಥವ ಸಣ್ಣ ಮೊಡವೆ ಕಾಣಿಸಿದೊಡನೆ ನೀವು ಅದಕ್ಕೆ ಕ್ರೀಮ್ ಹಚ್ಚುವುದು ಬಹಳ ಸುಲಭ. ಆದರೆ ಹಾಗೆ ಮಾಡಬೇಡಿ. ಹಚ್ಚುವಮುನ್ನ ಕ್ರೀಮ್ ಪ್ಯಾಕ್ ಮೇಲೆ ಕೊಟ್ಟಿರುವ ನಿರ್ದೇಶನಗಳನ್ನು ಗಮನವಿಟ್ಟು ಓದಿ ಖಚಿತಪಡಿಸಿಕೊಂಡನಂತರವೇ ಅದನ್ನು ಉಪಯೋಗಿಸಿ. ಹಾಗೆಯೇ ಚುಕ್ಕೆಗಳಮೇಲೆ ಅತಿಹೆಚ್ಚು ಕ್ರೀಮ್ ಹಾಕಿ ಒಣಗಲು ಬಿಡಬೇಡಿ. ಹಾಗೆ ಒಣಗಿದಾಗ ಕ್ರೀಮ್ ಮತ್ತು ಚುಕ್ಕೆಗಳಮಧ್ಯೆ ಗಾಳಿ ಓಡಾಡಲು ಸಾಧ್ಯವಿಲ್ಲ. ನಿಮ್ಮ ಚರ್ಮಕ್ಕೆ ಗಾಳಿಯು ಅತಿ ಮುಖ್ಯ.

ಮುಖಕ್ಕೆ ಅಡಿಪಾಯ (ಫೌಂಡೇಶನ್) ಹಚ್ಚುವ ಮುನ್ನ ಮಾಯಿಸ್ಚರೈಸರ್ ಒಣಗಿರಬೇಕು

ಮುಖಕ್ಕೆ ಅಡಿಪಾಯ (ಫೌಂಡೇಶನ್) ಹಚ್ಚುವ ಮುನ್ನ ಮಾಯಿಸ್ಚರೈಸರ್ ಒಣಗಿರಬೇಕು

ಮಾಯಿಸ್ಚರೈಸರ್ ಹಚ್ಚಿದಮೇಲೆ ಅದು ಒಣಗಿದನಂತರವೇ ನಿಮ್ಮ ಅಡಿಪಾಯದ ಕ್ರೀಮ್ ಹಚ್ಚಿ. ಮಾಯಿಸ್ಚರೈಸರಿನಲ್ಲಿರುವ ತೇವಾಂಶ ಅಡಿಪಾಯದ ಕ್ರೀಮನ್ನು ಸಡಿಲಗೊಳಿಸುವ ಸಾಧ್ಯತೆಯಿರುವುದರಿಂದ ಅದನ್ನು ತಕ್ಷಣ ಅಥವಾ ಒಣಗುವುವ ಮುಂಚೆಯೇ ಹಚ್ಚಿದರೆ ನಿಮ್ಮ ಮುಖವು ಗೀರುಗಳಿಂದ ಕೂಡಿರುತ್ತದೆ.

ಕನ್ನಡಿಗೆ ತೀರಾ ಹತ್ತಿರ ನಿಂತು ಹುಬ್ಬುಗಳ ಕೂದಲನ್ನು ಎಳೆದು ಕೀಳುವುದು

ಕನ್ನಡಿಗೆ ತೀರಾ ಹತ್ತಿರ ನಿಂತು ಹುಬ್ಬುಗಳ ಕೂದಲನ್ನು ಎಳೆದು ಕೀಳುವುದು

ನೀವು ಹುಬ್ಬಿನ ಕೂದಲನ್ನು ಕೀಳಲು ಕನ್ನಡಿಗೆ ತೀರ ಹತ್ತಿರ ನಿಂತಿದ್ದರೆ ಕೀಳುವ ಕೂದಲಿನಮೇಲೆ ಗಮನಹೋಗಿ ನಿಮ್ಮ ಹುಬ್ಬುಗಳ ಒಟ್ಟಾರೆ ಆಕಾರನೋಡಿಕೊಳ್ಳಲು ಆಗುವುದಿಲ್ಲ. ಹೀಗೆ ಮಾಡಿದಾಗ ನಿಮಗೆ ತೆಳುವಾದ ಅಥವಾ ಅಸಮಕೂದಲಿರುವ ಹುಬ್ಬು ಆಗಿಹೋಗಿಬಿಡುತ್ತದೆ. ಹೀಗೆ ಮಾಡುವ ಬದಲು, ಒಂದು ದೊಡ್ಡ ಕನ್ನಡಿಗೆ ಕೆಲವು ಹೆಜ್ಜೆ ಹಿಂದೆ ನಿಂತು ನಿಮ್ಮ ಹುಬ್ಬೊಂದೇ ಅಲ್ಲದೆ ನಿಮ್ಮ ಇಡೀ ಮುಖವನ್ನು ನೋಡಿಕೊಳ್ಳಬಹುದು.

ಉಗುರುಗಳು ಹಳದೀಯಾಗುವುದು

ಉಗುರುಗಳು ಹಳದೀಯಾಗುವುದು

ನಿಮ್ಮ ಉಗುರುಗಳು ಚೆನ್ನಾಗಿರಬೇಕಿದ್ದರೆ ಮನೆಯಿಂದ ಹೊರಗೆ ಹೋಗುವ ಮುನ್ನ ನಿಮ್ಮ ಕೈ ಕಾಲುಗಳ ಉಗುರುಗಳ ಮೇಲೆ ಒಳ್ಳೆಯ ಕಲೆಇರುವ ಅಥವ ಹೊಸ ವಿನ್ಯಾಸವಿರುವ ಬಣ್ಣ ಹಚ್ಚಿಕೊಳ್ಳಿ. ಇಲ್ಲದ್ದಿದ್ದರೆ ಉಗುರುಗಳು ಹಳದಿಬಣ್ಣಕ್ಕೆ ತಿರುಗಿಬಿಟ್ಟಾವು.

English summary

Top ten beauty myths

We all make hair and beauty mistakes but the good news is they can easily be put right and by doing so, may even save you time and money,Here are the 10 most common hair and beauty mistakes:
Story first published: Saturday, June 28, 2014, 16:45 [IST]
X
Desktop Bottom Promotion