For Quick Alerts
ALLOW NOTIFICATIONS  
For Daily Alerts

ಸೌಂದರ್ಯವನ್ನು ವೃದ್ಧಿಸುವ ಅದ್ಭುತ ಗುಣ ಲಿಂಬೆ ಹಣ್ಣಿನಲ್ಲಿದೆ!

|

ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಸೌಂದರ್ಯವನ್ನು ವೃದ್ಧಿಸುವಲ್ಲಿಯೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ.

ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ.

ಸೌಂದರ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸುಲಭದಲ್ಲಿ ಸಿಗುವ ನಿಂಬೆ ಹಣ್ಣನ್ನು ಬಿಟ್ಟು ಕೆಮಿಕಲ್ ಇರುವ ಬ್ಯೂಟಿ ಪ್ರಾಡಕ್ಟ್ ಮೇಲೆ ದುಡ್ಡು ಸುರಿಯುತ್ತೇವೆ. ನಿಂಬೆ ಹಣ್ಣಿನಲ್ಲಿ 10 ಕ್ಕಿಂತ ಹೆಚ್ಚಿನ ಸೌಂದರ್ಯವರ್ಧಕ ಗುಣಗಳಿವೆ, ಅಂದ ಮೇಲೆ ನಿಮ್ಮ ಸಾಕಷ್ಟು ಸೌಂದರ್ಯ ಸಮಸ್ಯೆಗೆ ಪರಿಹಾರ ಇದರಲ್ಲಿಯೇ ಇದೆ ಎಂದಾಯುತ್ತಲ್ಲವೇ? ನಿಂಬೆ ಹಣ್ಣನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಬಹುದು ಎಂದು ನೋಡೋಣ ಬನ್ನಿ:

ತ್ವಚೆಯ ಎಣ್ಣೆ ಅಂಶವನ್ನು ಹೋಗಲಾಡಿಸಲು

Top Benefits of lemon for skin and hair

ಎಣ್ಣೆ ತ್ವಚೆ ಹೋಗಲಾಡಿಸಲು ಮುಖದಲ್ಲಿರುವ ಎಣ್ಣೆಯಂಶವಿರುವವರಿಗೆ ಯಾವ ಮೇಕಪ್ ತುಂಬಾ ಹೊತ್ತು ನಿಲ್ಲುವುದಿಲ್ಲ. ಆದ್ದರಿಂದ ಎಣ್ಣೆ ತ್ವಚೆಯವರು ಮೇಕಪ್‪ಗೆ ಮುಂಚೆ ನಿಂಬೆ ರಸ ಹಚ್ಚಿ 5 ನಿಮಿಷ ಬಿಟ್ಟು ಮುಖ ತೊಳೆದು ನಂತರ ಮೇಕಪ್ ಮಾಡಿದರೆ ಮೇಕಪ್ ತುಂಬಾ ಹೊತ್ತಿನವರೆಗೆ ಇರುತ್ತದೆ.

ಕೂದಲು ಸುವಾಸನೆಯಿಂದ ಕೂಡಿರುತ್ತದೆ


ಕೂದಲು ಬೆವರಿದರೆ ಅಥವಾ ಸರಿಯಾಗಿ ಒಣಗಿದ್ದರೆ ಕೆಟ್ಟ ವಾಸನೆ ಬೀರುತ್ತದೆ. ನಿಂಬೆ ರಸ ಕೂದಲು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ. ಲಿಂಬೆ ಹಣ್ಣಿನ 16 ಅದ್ಭುತ ಆರೋಗ್ಯ ಸೂತ್ರಗಳು

ಮೊಡವೆ


ಮೊಡವೆ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಪ್ರತೀ ದಿನ ನಿಂಬೆ ರಸ ಹಚ್ಚಿ 5 ನಿಮಿಷ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.

ಮೃದುವಾದ ಕೂದಲಿಗಾಗಿ


ಕೂದಲು ತುಂಬಾ ಒರಟಾಗಿದ್ದು, ಮೃದು ಕೂದಲು ಬೇಕೆಂದು ಬಯಸುವುದಾದರೆ ನಿಂಬೆ ರಸವನ್ನು ಶ್ಯಾಂಪೂ ಜೊತೆ ಮಿಶ್ರಣ ಮಾಡಿ ತಲೆ ತೊಳೆಯಿರಿ. ಈ ರೀತಿ ಮಾಡಿದರೆ ಕೂದಲು ಮೃದುವಾಗುವುದು.

ಉಗುರಿನ ಅಂದ ಹೆಚ್ಚಿಸಲು


ಉಗುರು ಬೆಳ್ಳಗಿದ್ದರೆ ಕೈ, ಕಾಲುಗಳು ತುಂಬಾ ಆಕರ್ಷಕವಾಗಿ ಕಾಣುತ್ತದೆ. ನಿಂಬೆ ಹಣ್ಣಿನಿಂದ ಉಗುರನ್ನು ತಿಕ್ಕಿದರೆ ಉಗುರು ಬೆಳ್ಳಗಾಗುತ್ತದೆ.
English summary

Top Benefits of lemon for skin and hair

The beauty benefits of lemon are numerous and very potent. One of the main beauty benefits of lemon is that it works as natural bleach. So, lemon lightens skin and hair naturally.
X
Desktop Bottom Promotion