For Quick Alerts
ALLOW NOTIFICATIONS  
For Daily Alerts

ಮೂಗಿನ ಕೂದಲನ್ನು ಟ್ರಿಮ್ ಮಾಡಲು ಟಿಪ್ಸ್ (ಪುರುಷರಿಗೆ)

By Poornima Heggade
|

ವಿಚಿತ್ರವಾದ ಸಾಮಾಜಿಕ ಸನ್ನಿವೇಶಗಳನ್ನು ಸೃಷ್ಟಿಸುವ, ಮತ್ತು ಮುಜುಗರವನ್ನುಂಟುಮಾಡುವ ನಿಮ್ಮ ಮೂಗಿನ ಹೊಳ್ಳೆಯಲ್ಲಿನ ಕೂದಲು, ನಿಮಗೆ ಸಾಕಷ್ಟು ಇರಿಸುಮುರುಸನ್ನುಂಟುಮಾಡುತ್ತಿರಬಹುದು. ಮೂಗಿನ ಹೊಳ್ಳೆಯಲ್ಲಿ ಬೆಳೆಯುವ ಕೂದಲನ್ನು ತೆಗೆಯುವುದು ಸುಲಭ. ಆದರೆ ಅದನ್ನು ಕ್ರಮಬದ್ಧವಾಗಿ ಯಾವುದೇ ತೊಂದರೆಯಾಗದಂತೆ ಸರಿಯಾದ ರೀತಿಯಲ್ಲಿ ಟ್ರಿಮ್ ಮಾಡುವುದು ಹೇಗೆ ಎಂದು ತಿಳಿಯುವುದು ಅತ್ಯಂತ ಮುಖ್ಯ. ಅನೇಕ ಜನರು ಸಂಪೂರ್ಣವಾಗಿ ಮೂಗಿನ ಕೂದಲು ತೆಗೆದರೆ ಮೂಗಿನಲ್ಲಿರುವ ಕೂದಲು ಧೂಳು ಮತ್ತು ಕೊಳೆ ಮೂಗಿನೊಳಗೆ ಪ್ರವೇಶಿಸದಂತೆ ತಡೆಯುತ್ತದೆ ಎಂದೇ ಭಾವಿಸುತ್ತಾರೆ. ಆದರೆ ವಾಸ್ತವ ಸತ್ಯ ಬೇರೆಯೇ! ಮೂಗಿನ ಕೂದಲು ಇಲ್ಲದಿದ್ದರೆ, ಪರಿಸರದ ಕೊಳೆ ನಿಮ್ಮ ಮೂಗಿನ ಕುಳಿಗಳಿಗೆ ಕಿರಿಕಿರಿ ಅಥವಾ ನಿಮ್ಮ ಶ್ವಾಸಕೋಶಕ್ಕೆ ತೊಂದರೆಯನ್ನುಂಟು ಮಾಡಿ ನಿಮ್ಮ ಆರೋಗ್ಯದ ಮೇಲೆ ಉಂಟಾಗುವ ಗಮನಾರ್ಹ ಸಮಸ್ಯೆಗಳಿಗೆ ಕಾರಣವಾಗುತ್ತವೆ .

ಜೊತೆಗೆ, ನೀವು ಮೂಗಿನ ಎಲ್ಲಾ ಕೂದಲುಗಳನ್ನು ತೆಗೆದು ಹಾಕಲು ಮೂಗಿನ ಕುಳಿಯ ಒಳಗೆ ಚೂಪಾದ ವಸ್ತುಗಳನ್ನು ಅಥವಾ ಮೂಗಿನ ಒಳಗಿನವರೆಗೆ ಕತ್ತರಿಯನ್ನು ಬಳಸುವುದು ಅಪಾಯಕಾರಿ. ಆದ್ದರಿಂದ, ಇದು ನಿಮ್ಮ ಮೂಗಿನ ಕೂದಲನ್ನು ಸಂಪೂರ್ಣವಾಗಿ ತೆಗೆಯುವುದರ ಬದಲಿಗೆ ಟ್ರಿಮ್ ಮಾಡುವುದು ಒಳ್ಳೆಯದು. ಮೂಗಿನ ಕೂದಲನ್ನು ಟ್ರಿಮ್ ಮಾಡುವ ಉತ್ತಮ ವಿಧಾನವೆಂದರೆ ನಿಮ್ಮ ತಲೆ ಹಿಂದಕ್ಕೆ ಬಾಗಿದಾಗ ಮಾತ್ರ ಗೋಚರಿಸುವ ಕೂದಲಿನ ಭಾಗವನ್ನು ಮಾತ್ರ ತೆಗೆದುಹಾಕುವುದು. ಇದರಿಂದ ಜನರಿಗೆ ನಿಮ್ಮ ಮೂಗಿನ ಕೂದಲು ಕಾಣುವುದಿಲ್ಲ, ಜೊತೆಗೆ ನಿಮ್ಮ ಆರೋಗ್ಯದ ಸಮಸ್ಯೆಗಳೂ ಉಂಟಾಗುವುದಿಲ್ಲ. ಯಾವುದೇ ಕಾರಣಕ್ಕೂ ಮೂಗಿನ ಕೂದಲನ್ನು ತೆಗೆಯುವಾಗ ಸಾಧನಗಳನ್ನು ಬಳಸಿ ಎಳೆಯಬೇಡಿ (pluck) ಇದು ನಿಮಗೆ ಸಾಕಷ್ಟು ನೋವನ್ನುಂಟುಮಾಡಬಹುದು.

Tips For Trimming Nose Hair (Men)

ವಾಸ್ತವವಾಗಿ ನಿಮ್ಮ ಮೂಗಿನ ಕೂದಲನ್ನು ತೆಗೆಯುವ ಮೊದಲು, ನೀವು ಸಂಪೂರ್ಣವಾಗಿ ಎಚ್ಚರವಾಗಿರಬೇಕು. ಮೂಗು ಸೂಕ್ಷ್ಮವಾದ ಭಾಗವಾಗಿರುವುದರಿಂದ ನೀವು ಪೂರ್ಣ ಏಕಾಗ್ರತೆ ವಹಿಸದೆ, ಅಥವಾ ಯಾರಬಳಿಯಲ್ಲಾದರೂ ಮಾತನಾಡುತ್ತಾ ತೆಗೆಯಲು ಹೋದರೆ ಗಾಯಗಳಾಗಬಹುದು. ಆದ್ದರಿಂದ ಈ ಬಗೆಗೆ ಹೆಚ್ಚಿನ ಗಮನವಹಿಸಿ. ಸ್ನಾನವನ್ನು ಮಾಡುತ್ತ ಮೂಗಿನ ಕೂದಲನ್ನು ತೆಗೆದರೆ ಉತ್ತಮ. ಏಕೆಂದರೆ ಇದರಿಂದ ನೀವು ಏಕಾಗ್ರತೆಯನ್ನೊಂದೆ ಅಲ್ಲದೆ ಮೂಗಿನ ಕೂದಲೂ ಸಹ ಮೃದುವಾಗಿದ್ದು ಕತ್ತರಿಸಲು ಸುಲಭವಾಗುತ್ತದೆ.

1. ಸುರಕ್ಷತೆ
ನಿಮ್ಮ ಮೂಗು ಮತ್ತು ಕಿವಿಯ ಕೂದಲನ್ನು ತೆಗೆಯುವಾಗ ನೀವು ಮೊದಲು ನೆನಪಿಡಬೇಕಾದ ಅಂಶ ಸುರಕ್ಷತೆ ಮತ್ತು ಮುಂಜಾಗ್ರತೆ. ಹೀಗೆ ಮೂಗಿನ ಕೂದಲನ್ನು ಟ್ರಿಮ್ ಮಾಡುವಾಗ ನಿಮ್ಮ ಮುಂದೆ ಕನ್ನಡಿಯನ್ನಿಟ್ಟುಕೊಂಡು ಸರಿಯಾಗಿ ಮೂಗಿನ ಹೊಳ್ಳೆ ಕಾಣುವಂತೆ ಗಮನವಹಿಸಿ. ಮೂಗಿನ ಕೂದಲನ್ನು ಕತ್ತರಿಸಲು ಕತ್ತರಿಯನ್ನು ಬಳಸುವಾಗ ಅತ್ಯಂತ ಗಮನವಹಿಸಿ. ಕತ್ತರಿಯನ್ನು ನೇರವಾಗಿ ಮೂಗಿನ ಒಳಗಡೆಯೇ ಹಾಕಿ ಕೂದಲು ಕತ್ತರಿಸುವುದು ಅಪಾಯಕಾರಿ. ಆದ್ದರಿಂದ ಸಣ್ಣ ಸಣ್ಣ ಕೂದಲನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಕತ್ತರಿಸಿ.

2. ಏಕಾಗ್ರತೆ
ನಿಮ್ಮ ಮೂಗಿನ ಕೂದಲನ್ನು ಕತ್ತರಿಸುವಾಗ ನಿದ್ದೆಯ ಮಂಪರಿನಲ್ಲಿರದೇ ಸಂಪೂರ್ಣವಾಗಿ ಎಚ್ಚರಗೊಳ್ಳಿ. ಈಗ ತಾನೆ ಎದ್ದಿದ್ದರೆ ಅಥವಾ ಹಾಸಿಗೆಯ ಮಗ್ಗಲಿನಲ್ಲಿಯೇ ಕುಳಿತು ಮೂಗಿನ ಕೂದಲನ್ನು ಕತ್ತರಿಸಬೇಡಿ. ನಿಮಗೆ ಏಕಾಗ್ರತೆಯಿಲ್ಲದಿದ್ದರೆ ಖಂಡಿಯವಾಗಿಯೂ ಗಾಯಗಳಾಗಬಹುದು. ಸ್ನಾನ ಮಾಡುತ್ತಿರುವಾಗಲೇ ಮೂಗಿನ ಕೂದಲನ್ನು ತೆಗೆಯುವುದು ಉತ್ತಮ. ಕೇವಲ ಏಕಾಗ್ರತೆಯ ದೃಷ್ಟಿಯಿಂದ ಮಾತ್ರವಲ್ಲದೆ, ಮೂಗಿನ ಕೂದಲು ಸ್ನಾನವಾದ ನಂತರ ಸ್ವಚ್ಛ ಹಾಗೂ ಮೃದುವಾಗಿರುತ್ತದೆ. ಇದರಿಂದ ಸುಲಭವಾಗಿ ಮೂಗಿನ ಕೂದಲನ್ನು ಕತ್ತರಿಸಬಹುದು.

3. ಎಷ್ಟು ಟ್ರಿಮ್ ಮಾಡಬೇಕು?
ಮೂಗಿನ ಕೂದಲು ಟ್ರಿಮ್ ಮಾಡುವಾಗ ಎಲ್ಲಾ ಕೂದಲನ್ನೂ ಕತ್ತರಿಸುವ ಬದಲು ನೀವು ತಲೆ ಎತ್ತಿದಾಗ ಕಾಣಿಸುವ ಕೂದಲನ್ನು ಮಾತ್ರ ಕತ್ತರಿಸಿ. ಇದರಿಂದ ಪರರೂ ಮೂಗಿನ ಕೂದಲನ್ನು ಕಾಣಲು ಸಾಧ್ಯವಿಲ್ಲ. ಮತ್ತು ನೀವು ಆರೋಗ್ಯಕರವಾಗಿಯೂ ಇರಬಹುದು.

4. ಹೆಚ್ಚು ಕತ್ತರಿಸಬೇಡಿ
ಮೂಗಿನ ಕೂದಲನ್ನು ಕೀಳುವ/ಎಳೆಯುವ ಪ್ಲಕ್ಕರ್ ಬಳಸಿ ಕೂದಲನ್ನು ತೆಗೆಯಬೇಡಿ. ಏಕೆಮ್ದರೆ ಇದರಿಂದ ಸಾಕಷ್ಟು ನೋವನ್ನನುಭವಿಸಬೇಕಾಗುತ್ತದೆ. ಜೊತೆಗೆ ಇದು ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೂ ಕಾರಣವಾಗಬಹುದು. ತುಂಬಾ ಆಳವಾಗಿ ಕೂದಲನ್ನು ಕತ್ತರಿಸುವುದರಿಂದ ಮೂಗಿನಲ್ಲಿ ಗಾಯಗಳು, ಗುಳ್ಳೆಗಳೂ ಕೂಡ ಕಾಣಿಸಿಕೊಳ್ಳಬಹುದು. ಹೀಗೆ ಹಾನಿಗೊಳಗಾದ ಮೂಗಿನ ಹೊಳ್ಳೆಯಲ್ಲಿ ಬ್ಯಾಕ್ಟೀರಿಯಾಗಳು ಸೋಂಕುಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

5. ಶಾರ್ಪ್ ಮತ್ತು ಕ್ಲೀನ್ (ಸ್ವಚ್ಛಗೊಳಿಸುವುದು)
ನಿಮ್ಮ ಟ್ರಿಮ್ಮರ್ ನ್ನು ಯಾರೊಂದಿಗೂ (ನಿಮ್ಮ ಸಂಗಾತಿಯೊಂದಿಗೂ) ಹಂಚಿಕೊಳ್ಳಬೇಡಿ. ಏಕೆಂದರೆ ಇದು ಸೋಂಕನ್ನು ಉಂಟುಮಾಡಬಹುದು. ನಿಮ್ಮ ಟ್ರಿಮ್ಮರ್ ಸಾಕಷ್ಟು ಹರಿತವಾಗಿದೆಯೇ ಎಂದು ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಹರಿತವಾಗಿಲ್ಲದಿದ್ದರೆ ಮೂಗಿನಲ್ಲಿ ಗಾಯಗಳು ಉಂಟಾಗಬಹುದು. ಯಾಗೆಯೇ ಟ್ರಿಮ್ಮರ್ ಸಾಧನ ಶುಚಿಯಾಗಿರದಿದ್ದರೂ ಅಲರ್ಜಿ, ಸೋಂಕುಗಳಿಗೆ ಕಾರಣವಾಗಬಹುದು.

ಆದ್ದರಿಂದ ಎಚ್ಚರಿಕೆಯಿಂದ ಮೂಗಿನ ಕಾಗೂ ಕಿವಿಯ ಕೂದಲನ್ನು ಕತ್ತರಿಸಬೇಕು.

English summary

Tips For Trimming Nose Hair (Men)

There is nothing cool about flaunting your nostril hair, which can be embarrassing and cause self-consciousness, making for awkward social situations. It's important to know how to trim it in a proper manner.
Story first published: Wednesday, January 8, 2014, 18:37 [IST]
X
Desktop Bottom Promotion