For Quick Alerts
ALLOW NOTIFICATIONS  
For Daily Alerts

ಗಾಯದ ಕಲೆಯಿಂದ ಮುಜುಗರವೇ? ಇಲ್ಲಿದೆ ಪರಿಹಾರ

By Poornima Hegde
|

ಗಾಯ ಬಹಳ ಬೇಗ ಮಾಸಬಹುದು ಆದರೆ ಗಾಯದ ಗುರುತು ಬಹಳ ಮಂದಿಯನ್ನು ಕಾಡುವುದು ಸುಳ್ಳಲ್ಲ. ಆದರೆ ಈ ಕಥೆಯನ್ನು ಹೇಳಲು ಎಲ್ಲರಿಗೂ ಇಷ್ಟವಿರುವುದಿಲ್ಲ. ತನಗೆ ಹಾಗಾಯಿತು ಹೀಗಾಯಿತು ಎಂದು ಹೇಳಿಕೊಳ್ಳುವುದರಲ್ಲಿ ಅದೇನು ಮಜಾ ಇದೆ ಹೇಳಿ. ಹಾಗಾಗಿ ಗಾಯದ ಗುರುತು ಮಾಸಿ ಹೋದರೆ ಇಂತಹ ಪ್ರಶ್ನೆಗಳೇ ನಮ್ಮಿಂದ ದೂರವಾದಂತೆ. ಹಾಗಾಗಿ ಗಾಯ ಗುಣವಾದ ವೇಗದಲ್ಲೇ ಗಾಯದ ಗುರುತು ಕೂಡ ಮಾಸಿ ಹೋಗಬೇಕು ಎನ್ನುವುದು ಎಲ್ಲರ ಆಸೆ.

ತ್ವಚೆಯ ಸುಟ್ಟ ಗಾಯ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ!

ಸಾಮಾನ್ಯವಾಗಿ ಈ ಗುರುತುಗಳು ಅಪಘಾತದ ಗಾಯಗಳು, ಸೋಂಕುಗಳು, ಶಸ್ತ್ರಚಿಕಿತ್ಸೆ ಅಥವಾ ಇನ್ಯಾವುದೇ ಗಾಯಗಳಿಂದ ಉಂಟಾಗುತ್ತವೆ. ಇವುಗಳು ನಮ್ಮ ಸೌಂದರ್ಯಕ್ಕೆ ಅಡ್ಡಿ ತರುವ ಗುರುತುಗಳಾಗಿದ್ದು ಎಲ್ಲರೂ ಇವನ್ನು ಆದಷ್ಟು ಬೇಗನೆ ಕಡಿಮೆ ಮಾಡಿಕೊಳ್ಳಬೇಕು ಎಂದು ಕಾತುರರಾಗಿರುತ್ತಾರೆ.

ಇವುಗಳಿಂದ ನಮ್ಮ ಚರ್ಮ ಬಹಳವೇ ಒರಟು ಮತ್ತು ವಿಕಾರವಾಗಿ ಕಾಣುತ್ತದೆ. ಚರ್ಮದ ಮೇಲ್ಮೈ ಕೂಡ ಒಂದೇ ಸಮನೆ ಇರುವುದಿಲ್ಲ. ಇದು ನಿಮ್ಮ ಆತ್ಮ ವಿಶ್ವಾಸದ ಮೇಲೆ ಕೂಡ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದು ನೀವು ಜನರ ನಡುವೆ ಬೆರೆಯುವುದನ್ನು ತಪ್ಪಿಸುತ್ತದೆ.

ಇಲ್ಲಿ ನಿಮಗೆ ಇಂತಹ ಗಾಯಗಳಾದಾಗ ಗುರುತುಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ನೀಡುತ್ತೇವೆ. ಲೇಸರ್ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಗಳಂತಹ ಹಲವಾರು ವೈದ್ಯಕೀಯ ವಿಧಾನಗಳು ಲಭ್ಯವಿವೆ. ಅದೇ ರೀತಿ ಹಲವು ಸ್ವಾಭಾವಿಕ ವಿಧಾನಗಳ ಮೂಲಕವೂ ನೀವು ಆಷ್ಟೇ ಪರಿಣಾಮಕಾರಿಯಾದ ಪ್ರಭಾವವನ್ನು ಕಾಣುವಿರಿ.

ಈ ಎಲ್ಲಾ ಉಪಾಯಗಳು ನಿಮ್ಮ ಗಾಯದ ತೀವ್ರತೆ ಹಾಗೂ ಅದರ ಕಾರಣದ ಮೇಲೆ ಅವಲಂಬಿತವಾಗಿದೆ. ಬೆಂಕಿ ಅಥವಾ ಅತಿಯಾದ ಉಷ್ಣತೆಯಿಂದ ಉಂಟಾದ ಗಾಯಗಳು ಬಹಳ ಹೆಚ್ಚಿನ ಕಾಳಜಿಯನ್ನು ಬಯಸುತ್ತವೆ. ಆದರೆ ಚೂರಿಯಿಂದ ಕೈ ಕಡಿತವಾದರೆ ಸ್ವಲ್ಪ ಕಡಿಮೆ ಗಮನ ಕೊಟ್ಟರೂ ಗಾಯ ಬೇಗನೆ ಗುಣವಾಗುತ್ತದೆ.

ಇಲ್ಲಿ ಅಂತಹ ಕೆಲವು ಗಾಯಗಳ ಗುರುತು ನಿವಾರಕಗಳ ಪರಿಚಯ ಮಾಡಲಿದ್ದೇವೆ

ಈ ರೀತಿಯ ಗಾಯ ತುಂಬಾ ಅಪಾಯಕಾರಿ!

ಸ್ವಾಭಾವಿಕ ಬ್ಲೀಚಿಂಗ್ ರಾಸಾಯನಿಕ:

ಸ್ವಾಭಾವಿಕ ಬ್ಲೀಚಿಂಗ್ ರಾಸಾಯನಿಕ:

ಅತ್ಯಂತ ಪ್ರಭಾವಿ ಬ್ಲೀಚಿಂಗ್ ರಾಸಾಯನಿಕಗಳಲ್ಲಿ ಲಿಂಬೆ ಹಣ್ಣು ಅತಿ ಪ್ರಮುಖವಾದುದು. ಇದರಲ್ಲಿ ಹಲವು ಉಪಯೋಗಗಳಿವೆ. ಇದು ಗಾಯದ ಗುರುತನ್ನು ತೆಗೆಯಲು ಬಹಳ ಉಪಕಾರಿ. ಲಿಂಬೆ ಹಣ್ಣನ್ನು ಬಳಸುವುದು ಬಹಳ ಸುರಕ್ಷಿತ ವಿಧಾನವೂ ಆಗಿದೆ. ಇದು ಹೊಸ ಚರ್ಮದ ಬೆಳವಣಿಗೆಯಲ್ಲೂ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಲಿಂಬೆ ಹಣ್ಣನ್ನು ಬಳಸುವಾಗ ಹತ್ತಿಯನ್ನು ಬಳಸಿ ಅದರಲ್ಲಿ ಲಿಂಬೆ ಹಣ್ಣನ್ನು ಹಿಂಡಿ ಗಾಯದ ಕಲೆಯ ಮೇಲೆ ಬಳಸಿ. ಗಾಯದ ಕಲೆ ಇರುವ ಎಲ್ಲಾ ಸ್ಥಳಗಳ ಮೇಲೂ ಸರಿಯಾಗಿ ಈ ಹತ್ತಿ ಬಟ್ಟೆಯಿಂದ ಉಜ್ಜಿ ಗಾಯವನ್ನು ಹೋಗಲಾಡಿಸಿ. ಈ ಚಟುವಟಿಕೆಯನ್ನು ಪ್ರತಿನಿತ್ಯ ಮಾಡಿ ಹಾಗೂ ನಿಯಮಿತವಾಗಿ ಪಾಲಿಸಿ. ಇದರೊಂದಿಗೆ ಟೊಮೆಟೊ ಮತ್ತು ಆಲೂಗಡ್ಡೆ ಕೂಡ ಬಹಳ ಸಹಕಾರಿಯಾದ ಬ್ಲೀಚಿಂಗ್ ಸತ್ವಗಳಾಗಿವೆ.

ಜೇನುತುಪ್ಪ:

ಜೇನುತುಪ್ಪ:

ಜೇನುತುಪ್ಪ ಗಾಯಗಳನ್ನು ಕಡಿಮೆ ಮಾಡುವ ಮತ್ತೊಂದು ಗೃಹಬಳಕೆಯ ಸಾಧನವಾಗಿದೆ. ಇದು ತೇವಾಂಶವನ್ನು ಹೆಚ್ಚು ಮಾಡುವ ವಿಧಾನವಾಗಿದ್ದು ಇದರಿಂದಾಗಿ ಹೊಸ ಚರ್ಮದ ಬೆಳವಣಿಗೆ ಬಹಳ ಬೇಗನೆ ಆಗುತ್ತದೆ. ಗಾಯದ ಮೇಲೆ ಕಲೆಗಳಾಗಿ ಉಳಿದಿರುವುದು ನಿಜವಾಗಿಯೂ ಸತ್ತ ಚರ್ಮದ ಭಾಗಗಳೇ ಆಗಿವೆ. ಕೆಲವು ಹನಿ ಜೇನುತುಪ್ಪವನ್ನು ಬಳಸಿ ಹಾಗೂ ಅವನ್ನು ಗಾಯದ ಮೇಲೆ ಲೇಪಿಸಿ. ಈ ಚಟುವಟಿಕೆಯನ್ನು ಪ್ರತಿ ಬಾರಿ ಪಾಲಿಸಿ. ನೀವು ಜೇನುತುಪ್ಪ ಮತ್ತು ಲಿಂಬೆಯನ್ನೂ ಬಳಸಬಹುದಾಗಿದೆ. ಈ ಎರಡೂ ಒಟ್ಟಾದರೆ ಬಹಳ ಉತ್ತಮ ಪರಿಣಾಮವನ್ನು ನೀಡುತ್ತವೆ.

ಹಸಿರು ಆಲೋವೆರಾ:

ಹಸಿರು ಆಲೋವೆರಾ:

ಆಲೋವೆರಾ ದಲ್ಲಿ ಆರೋಗ್ಯಕ್ಕೆ ಸಹಾಯಕ ಅನೇಕ ಸತ್ವಗಳಿವೆ. ಇದನ್ನು ನೇರವಾಗಿ ಒಂದು ರೀತಿಯ ಜೆಲ್ ನಂತೆ ಬಳಸಬಹುದು. ಇದರಲ್ಲಿ ಆಂಟಿ ಇನ್ಫ್ಲೇಮೇಟರಿ ಅಂಶಗಳಿದ್ದು ಇದು ನಮ್ಮ ಚರ್ಮಕ್ಕೆ ಬಹಳ ಉಪಯೋಗ ನೀಡುತ್ತದೆ. ಇದರಿಂದಾಗಿ ನಮ್ಮ ಸತ್ತ ಚರ್ಮ ಬಹಳ ಬೇಗನೆ ನಾಶವಾಗಿ ಹೊಸ ಚರ್ಮದ ಹುಟ್ಟು ಬಹಳ ಬೇಗನೆ ಆಗುತ್ತದೆ. ಆಲೋ ವೆರಾ ಕ್ರೀಮ್ ಅನ್ನು ಗಾಯದ ಗುರುತಿನ ಮೇಲೆ ಸರಿಯಾಗಿ ಲೇಪಿಸಿ ಗುರುತುಗಳನ್ನು ಕಡಿಮೆ ಮಾಡಿಕೊಳ್ಳಿ.

ಮುಳ್ಳುಸೌತೆ:

ಮುಳ್ಳುಸೌತೆ:

ಇದು ಬಹಳ ಅಗ್ಗಕ್ಕೆ ಸಿಗುವ ಗಾಯದ ಗುರುತಿನ ನಿವಾರಕವಾಗಿದೆ. ಇದರಲ್ಲಿ ಅನೇಕ ಆರೋಗ್ಯವರ್ಧಕ ಗುಣಗಳಿವೆ. ಇದು ಚರ್ಮವನ್ನು ಬಹಳ ಮೃದು ಹಾಗೂ ತೇವಾಂಶಪೂರಿತವಾಗಿಡಲು ಸಹಾಯಕ. ಮುಳ್ಳುಸೌತೆಯ ಕ್ರೀಮ್ ನ ಹಾಗೆ ತಯಾರು ಮಾಡಿ ಅದನ್ನು ಗಾಯದ ಮೇಲೆ ಲೇಪಿಸಿ ಬಹಳ ಬೇಗನೆ ಪರಿಣಾಮವನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಇಂತಹ ಕ್ರೀಮ್ ಗಳು ಲಭ್ಯವಿವೆ. ಇದು ಗಾಯದ ಗುರುತನ್ನು ನಿವಾರಿಸುವ ಜೊತೆಗೆ ಗಾಯವನ್ನು ಕಡಿಮೆ ಮಾಡುವುದರಲ್ಲೂ ಬಹಳ ಸಹಾಯಕ.

English summary

Tips to reduce scars

Every scar has a story behind it – but nobody really wants to unfold that story. Scars are caused by accidents, infections, surgical marks or any injury. The following are a few ways that will help you to get rid of scars at home using natural products. 
X
Desktop Bottom Promotion