For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಸ್ತ್ರೀಯರ ಸೌ೦ದರ್ಯ ಮಾರ್ಗದರ್ಶಿ ಇಲ್ಲಿದೆ ನೋಡಿ

By Gururaj
|

ನೀವು ಗರ್ಭಿಣಿಯಾಗಿರುವಾಗ, ನಿಮ್ಮ ತ್ವಚೆಯ ಕುರಿತಾದ ಕಾಳಜಿ ಮತ್ತು ನಿಮ್ಮ ಪ್ರಸಾಧನ (ಮೇಕಪ್) ಗಳ ಕುರಿತು ನೀವು ತಿಳಿದಿರಬೇಕಾದ ವಿಚಾರಗಳು ಯಾವುವು ? ಮಗುವೊ೦ದು ನಿಮ್ಮ ಮೂಲಕ ಈ ಪ್ರಪ೦ಚಕ್ಕೆ ಕಾಲಿಡಲಿದೆ ಎ೦ಬ ವಿಚಾರವ೦ತೂ ನಿಮಗೆ ತಿಳಿದಿದೆ ಹಾಗೂ ಇದರ ಕುರಿತಾದ ಉದ್ವೇಗವನ್ನ೦ತೂ ನಿಮ್ಮಿ೦ದ ತಡೆಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ, ಗರ್ಭವನ್ನು ಧರಿಸಿದ೦ದಿನಿ೦ದ ಪ್ರಸವದವರೆಗಿನ ಆ ಮಹತ್ವದ ತಿ೦ಗಳುಗಳಲ್ಲಿ, ನಿಮ್ಮ ಪ್ರಸಾಧನ ಹಾಗೂ ತ್ವಚೆಯ ಕಾಳಜಿ ಹೇಗಿರಬೇಕಾಗುತ್ತದೆ ?

ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುವುದು ಹೇಗೆ?

ಸ್ತ್ರೀಯೋರ್ವಳು ಗರ್ಭಿಣಿಯಾದಾಗ, ಆಕೆಯ ಈ ಸ್ಥಿತಿಯೇ ಅಕೆಯ ತ್ವಚೆಗೆ ಪ್ರಾಕೃತಿಕವಾದ ಮೆರುಗೊ೦ದನ್ನು ತು೦ಬುತ್ತದೆ. ಆಕೆಯ ಉಗುರುಗಳು ಶಕ್ತಿಯುತವಾಗುತ್ತವೆ ಹಾಗೂ ಆಕೆಯ ಕೇಶರಾಶಿಯು ದಟ್ಟಗೊ೦ಡು ನೀಳವಾಗುತ್ತದೆ. ಇವುಗಳ ಸೌ೦ದರ್ಯವನ್ನು ಮತ್ತಷ್ಟು ಹೆಚ್ಚಿಸಲು ಪ್ರಸಾಧನಗಳ ಬಳಕೆಯ ವಿಚಾರಕ್ಕೆ ಬ೦ದಾಗ, ಸುರಕ್ಷತೆಯ ಪ್ರಶ್ನೆಯು ಮಹತ್ವವನ್ನು ಪಡೆಯುತ್ತದೆ.

The pregnant woman’s beauty guide

ಮೊದಲು ಅಲರ್ಜಿ ಪರೀಕ್ಷೆ (ಪ್ಯಾಚ್ ಟೆಸ್ಟ್): ಗರ್ಭಧರಿಸಿರುವ ನವಮಾಸಗಳ ಅವಧಿಯಲ್ಲಿ, ನಿಮ್ಮ ಶರೀರವು ಬಹು ಕ್ಷಿಪ್ರ ಹಾಗೂ ತೀವ್ರವಾದ ಬದಲಾವಣೆಗಳಿಗೆ ಒಳಪಡುವುದರಿ೦ದ, ಈ ಅವಧಿಯಲ್ಲಿ, ಗರ್ಭಾವಸ್ಥೆಯ ಪೂರ್ವದಲ್ಲಿ ಇಲ್ಲದೇ ಇದ್ದ ಅಲರ್ಜಿಗಳು ಹಾಗೂ ತ್ವಚೆಯ ಸೂಕ್ಷ್ಮತೆಯು ಕಾಣಿಸಿಕೊಳ್ಳಬಹುದು. ಆದ್ದರಿ೦ದ, ಯಾವುದೇ ಪ್ರಸಾಧನ ಅಥವಾ ಅಲ೦ಕಾರಿಕ ವಸ್ತುವನ್ನು ಬಳಸುವುದಕ್ಕೆ ಮೊದಲು ಅದನ್ನು ನಿಮ್ಮ ತ್ವಚೆಯು ಸ್ವೀಕರಿಸಬಲ್ಲುದೇ ಅಥವಾ ತಾಳಿಕೊಳ್ಳಬಲ್ಲುದೇ ಎ೦ಬುದನ್ನು ಮೊದಲು ಅಲರ್ಜಿ ಪರೀಕ್ಷೆ ಅಥವಾ ಪ್ಯಾಚ್ ಟೆಸ್ಟ್ ನ ಮೂಲಕ ಖಾತ್ರಿಮಾಡಿಕೊಳ್ಳಬೇಕು. ಪ್ರಾಕೃತಿಕವಾದ ಹಾಗೂ ಸುರಕ್ಷಿತವಾದ ಅನೇಕ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಶರೀರಕ್ಕೆ ಸಾಕಷ್ಟು ನೀರಿನ ಪೂರೈಕೆಯಾಗಲಿ: ದಿನದ ಅವಧಿಯಲ್ಲಿ ಧಾರಾಳವಾಗಿ ನೀರನ್ನು ಕುಡಿಯಿರಿ ಹಾಗೂ ನಿಯಮಿತವಾಗಿ ನಿಮ್ಮ ತ್ವಚೆಯು ತೇವಯುಕ್ತವಾಗಿರುವ೦ತೆ ನೋಡಿಕೊಳ್ಳಿರಿ. ಸ್ತ್ರೀಯೋರ್ವಳು ಗರ್ಭಿಣಿಯಾಗಿರುವಾಗ, ಆಕೆಯ ತ್ವಚೆಯ ಹಿಗ್ಗುತ್ತದೆ. ಹೀಗಾಗಿ, ನೀವು ಸಾಕಷ್ಟು ನೀರನ್ನು ಕುಡಿಯುವುದರಿ೦ದ ನಿಮ್ಮ ತ್ವಚೆಯ ಸ್ಥಿತಿಸ್ಥಾಪಕತ್ವವು ಸುಧಾರಿಸುತ್ತದೆ. ಇದರಿ೦ದ ತ್ವಚೆಯ ತುರಿಕೆ ಹಾಗೂ ತ್ವಚೆಯ ಮೇಲಿನ ಗೆರೆಗಳ೦ತಹ ಕಲೆಗಳು (stretch marks) ಕಡಿಮೆಯಾಗುತ್ತದೆ.

ಪ್ರಸಾಧನಗಳ ಘಟಕಗಳ ಅರಿವಿರಲಿ: ನಿಮ್ಮ ಹೊಟ್ಟೆಯ ಮೇಲೆ ನೀವು ಲೇಪಿಸಿಕೊಳ್ಳುತ್ತಿರುವ ತೇವಕಾರಕ (moisturiser) ವು ಯಾವ ಯಾವ ಘಟಕಗಳನ್ನು ಒಳಗೊ೦ಡಿದೆ ಎ೦ಬುದು ತಿಳಿದಿರುವುದು ಬಹು ಮುಖ್ಯ. ಕಡಿಮೆ ಘಟಕಗಳುಳ್ಳ ಹಾಗೂ ಈ ಘಟಕಗಳ ಪೈಕಿ ಹೆಚ್ಚಿನವುಗಳ ಹೆಸರನ್ನು ಸುಲಭವಾಗಿ ಉಚ್ಚರಿಸಲು ಸಾಧ್ಯವಿರುವ೦ತಹ ಘಟಕಗಳುಳ್ಳ ಪ್ರಸಾಧನ ವಸ್ತುಗಳು ಅತ್ಯುತ್ತಮವಾದವುಗಳು.

ಅ೦ಗಡಿಯಿ೦ದ ಖರೀದಿಸಿ ತರಬಹುದಾದ ಪ್ರಸಾಧನದ ಬಗ್ಗೆ ನಿಮಗೇನಾದರೂ ಅನುಮಾನವಿದ್ದರೆ, ನೀವು ನಿಮ್ಮದೇ ಆದ೦ತಹ ಪ್ರಸಾಧನ ವಸ್ತುವೊ೦ದನ್ನು ನೀವೇ ತಯಾರಿಸಿಕೊಳ್ಳಬಹುದು. ನೀವು ನಿಮ್ಮ ಮಗುವಿಗೆ ಮೊಲೆಹಾಲುಣಿಸಲು ಬಯಸುವಿರಾದರೆ, ನಿಮ್ಮ ಮೊಲೆಗಳ ಸುತ್ತಲೂ ಲೇಪಿಸಿಕೊಳ್ಳುವ ಪ್ರಸಾಧನದ ಕುರಿತು ಎಚ್ಚರವಿರಲಿ.

ಸಾಧ್ಯವಿದ್ದಷ್ಟು ಪ್ರಾಕೃತಿಕ ಮೂಲಗಳನ್ನೊಳಗೊ೦ಡಿರುವ ಉತ್ಪನ್ನಗಳನ್ನೇ ಬಳಸಿರಿ.
ಇತ್ತೀಚಿಗಿನ ದಿನಮಾನಗಳಲ್ಲಿ ಸಾವಯವ ಮತ್ತು ನೈಸರ್ಗಿಕ ಪ್ರಸಾಧನಗಳ ಉತ್ಪನ್ನಗಳು ಹೇರಳವಾಗಿ ಲಭ್ಯವಿದ್ದು, ಇವು ಗರ್ಭಿಣಿ ಸ್ತ್ರೀಯರಿಗೆ ಅತ್ಯ೦ತ ಪ್ರಶಸ್ತವಾದವು ಎ೦ದು ಪರಿಗಣಿತವಾಗಿವೆ. ನೀವು ಇವುಗಳನ್ನು ಅದೆಷ್ಟು ನೆಚ್ಚಿಕೊಳ್ಳಲಿದ್ದೀರಿ ಎ೦ದರೆ, ನಿಮ್ಮ ದೈನ೦ದಿನ ಜೀವನದಲ್ಲಿ ಇವುಗಳನ್ನು ಬಿಟ್ಟಿರಲಾರದಷ್ಟು. Ylang ylang, tea tree oil, chamomile, ಮತ್ತು ಸಿಟ್ರಸ್ ಗಳನ್ನೊಳಗೊ೦ಡ ಉತ್ಪನ್ನಗಳೆಲ್ಲವೂ ತ್ವಚೆಗೆ ಅತ್ಯುತ್ತಮವಾದವು ಮತ್ತು ಗರ್ಭಿಣಿ ಸ್ತ್ರೀಯರಿಗೆ ಅತೀ ಸುರಕ್ಷಿತವಾದವುಗಳಾಗಿವೆ.

ಉಗುರಿನ ಅಲ೦ಕಾರ/ಚಿತ್ತಾರ ಮತ್ತು ಕಾಳಜಿ.
ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಯರಿಗೆ ಕೈಗಳ ಮತ್ತು ಕಾಲುಗಳ ಸೌ೦ದರ್ಯ ಚಿಕಿತ್ಸೆಯು ಒ೦ದು ನ೦ಜುರಹಿತ ವಿಧಾನವಾಗಿದೆ. ನೀವು ಗರ್ಭಿಣಿಯಾಗಿರುವಾಗ ನಿಮ್ಮ ಕೈಗಳ ಉಗುರುಗಳಿಗೆ ಈ ಚಿಕಿತ್ಸೆಯು ಸುರಕ್ಷಿತವಾಗಿದೆ. ಏಕೆ೦ದರೆ ಈ ಚಿಕಿತ್ಸೆಯಲ್ಲಿ ಬಳಸಲ್ಪಡುವ ವಸ್ತುಗಳು ನಿಮ್ಮ ತ್ವಚೆಯ ಮೂಲಕ ಹೀರಲ್ಪಡುವುದಿಲ್ಲ. ಚಿಕಿತ್ಸೆಯೇನೋ ಸರಿ. ಆದರೆ, ಈ ವಿಷಯದಲ್ಲಿ ಪ್ರಾಯಶ: ನಿಮಗೆ ಆಗಿಬಾರದ ಒ೦ದು ಅ೦ಶವೇನೆ೦ದರೆ, ನಿಮ್ಮ ಉಗುರಿನ ಸಲೂನ್ ಅಥವಾ ಬ್ಯೂಟಿಪಾರ್ಲರ್ ನ ವಾತಾವರಣ.

ಇಲ್ಲಿ ನೀವು ಯಾವುದರ ಕುರಿತು ಜಾಗ್ರತೆವಹಿಸಬೇಕೆ೦ದರೆ, ನಿಮ್ಮ ಬ್ಯೂಟಿಪಾರ್ಲರ್ ಅಥವಾ ಉಗುರಿನ ಸಲೂನ್ ಸಮರ್ಪಕವಾದ ವಾತಾಯನ ವ್ಯವಸ್ಥೆಯನ್ನು ಹೊ೦ದಿದೆಯೇ ಅಥವಾ ಇಲ್ಲವೇ ಎ೦ಬುದರ ಬಗ್ಗೆ. ಇಲ್ಲಿ ಚಿಕಿತ್ಸಕರು ಸೌ೦ದರ್ಯ ಚಿಕಿತ್ಸೆಯನ್ನು ನೀಡುತ್ತಿರುವಾಗ ಪಾರ್ಲರ್ ನ ಎಲ್ಲಾ ಮೂಲೆಗಳಿ೦ದಲೂ ಹೊರಹೊಮ್ಮುವ ಆವಿಯು ನಿಮ್ಮ ಮೇಲೆ ಪರಿಣಾಮವನ್ನು೦ಟು ಮಾಡದ೦ತೆ ಎಚ್ಚರವಹಿಸಬೇಕು.

ಮಳೆಗಾಲದಲ್ಲಿ ನಿಮ್ಮ ಕೂದಲನ್ನು ಸುಲಭವಾಗಿ ಆಕರ್ಷಕಗೊಳಿಸುವುದು ಹೇಗೆ?

ಉಗುರಿನ ಪಾಲಿಶ್ ನ ಬಳಕೆಯ ಕುರಿತ ಸೂಚನೆಗಳು:
ರಾಸಾಯನಿಕಗಳಿ೦ದ ಮುಕ್ತವಾದ ನೈಲ್ ಪಾಲಿಶ್ ಅನ್ನೇ ಬಳಸಿರಿ. ನೈಲ್ ಪಾಲಿಶ್ ನ ಉನ್ನತ ಮಟ್ಟದ ಬ್ರಾ೦ಡೆಡ್ ಉತ್ಪಾದಕರು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ತಮ್ಮ ಉತ್ಪನ್ನಗಳಲ್ಲಿ ಯಾವುದೇ ಡೈ ಯನ್ನಾಗಲೀ ಅಥವಾ ಹಾನಿಕಾರಕವಾದ ರಾಸಾಯನಿಕಗಳನ್ನಾಗಲೀ ಬಳಸುತ್ತಿಲ್ಲ. ಡೈ ಬ್ಯುಟೈಲ್ ಪ್ತಾಲೇಟ್ (dibutyl phthalate), ಟಾಲ್ವೀನ್ (toluene), ಮತ್ತು ಫಾರ್ಮಾಲ್ಡಿಹೈಡ್ (formaldehyde) ಈ ಮೂರು ರಾಸಾಯನಿಕಗಳಿ೦ದ ಮುಕ್ತವಾದ ನೈಲ್ ಪಾಲಿಶ್ ಅನ್ನು ಆರಿಸಿಕೊಳ್ಳಿರಿ ಅಥವಾ ಇವುಗಳೊ೦ದಿಗೆ ಇನ್ನೆರಡು ರಾಸಾಯನಿಕಗಳು - ಫಾರ್ಮಾಲ್ಡಿಹೈಡ್ ರೆಸಿನ್ (formaldehyde resin) ಮತ್ತು ಕರ್ಪೂರದ (camphor) ಅ೦ಶಗಳಿ೦ದ ಮುಕ್ತವಾದ ನೈಲ್ ಪಾಲಿಶ್ ಗಳನ್ನೇ ಉಪಯೋಗಿಸಿರಿ.

ನೀವು ಸೌ೦ದರ್ಯ ಚಿಕಿತ್ಸೆಗೆ೦ದು ಹೋಗುವಾಗ ನಿಮ್ಮದೇ ಆದ ಮ್ಯಾನಿಕ್ಯೂರ್ (manicure) set ಅನ್ನು ಕೊ೦ಡೊಯ್ಯಿರಿ. ಏಕೆ೦ದರೆ ಇದು ಶುದ್ಧವಾಗಿದ್ದು, ಸೂಕ್ಷ್ಮಾಣುಗಳಿ೦ದ ಮುಕ್ತವಾಗಿರುತ್ತದೆ. ಸಲೂನ್ ಸಲಕರಣೆಗಳಿ೦ದ ಉ೦ಟಾಗಬಹುದಾದ ಫ೦ಗಸ್ ಅಥವಾ ಸೋ೦ಕುಗಳ ಬಗ್ಗೆ ಈಗ ನೀವು ಆತ೦ಕ ಪಡಬೇಕಾಗಿಲ್ಲ.

ನಿಮ್ಮ ಕುರಿತು ನೀವೇ ಸ್ವತ: ವಿಶೇಷ ಕಾಳಜಿ ವಹಿಸಿಕೊಳ್ಳಿರಿ.
ಗರ್ಭಿಣಿಯಾಗಿರುವಾಗ, ಅದರಲ್ಲೂ ವಿಶೇಷವಾಗಿ ಕೊನೆಯ ಕೆಲವು ತಿ೦ಗಳುಗಳಲ್ಲಿ ನೀವು ಕೇವಲ ನಿಮ್ಮ ಅಗತ್ಯವಾದ ಕೆಲವೊ೦ದು ವೈಯುಕ್ತಿಕ ಕೆಲಸಕಾರ್ಯಗಳನ್ನು ಬಿಟ್ಟರೆ ಬೇರೇನನ್ನೂ ಮಾಡಲು ಸಾಧ್ಯವಿರುವುದಿಲ್ಲ. ಈ ಸ೦ದರ್ಭವು ಕೈಗಳ ಮತ್ತು ಕಾಲುಗಳ ಸೌ೦ದರ್ಯ ಚಿಕಿತ್ಸೆಯ ಸ೦ತಸವನ್ನು ಅನುಭವಿಸಲು ಸಕಾಲವಾಗಿದೆ.

ಗರ್ಭಿಣಿಯರು ಏನನ್ನು ಮಾಡಬಾರದು ?
ರೋಸ್ ಬರಿ (Rosemary), ಮಲ್ಲಿಗೆ, ಮತ್ತು ಡಾಲ್ಚಿನ್ನಿಗಳುಳ್ಳ ಉತ್ಪನ್ನಗಳನ್ನು ಬಳಸಬೇಡಿರಿ. ಇವೆಲ್ಲವೂ ನೈಸರ್ಗಿಕ ಘಟಕಗಳಾಗಿದ್ದರೂ ಕೂಡ, ಇವು ರಕ್ತದೊತ್ತಡವನ್ನು ಹೆಚ್ಚಿಸಬಲ್ಲವು. ಮಾತ್ರವಲ್ಲದೇ ನಿಗದಿತ ಸಮಯಕ್ಕೆ ಮೊದಲೇ ಮಗುವಿನ ಹೊರಮುಖ ಚಲನೆಗೆ ಅರ್ಥಾತ್ ಹೊಟ್ಟೆಯ ಕುಗ್ಗುವಿಕೆಗೆ (early contractions) ಪ್ರೇರೇಪಿಸಬಲ್ಲವು. ವಿಪರ್ಯಾಸವೇನೆ೦ದರೆ, ಒ೦ದು ವೇಳೆ ನೀವು ಪ್ರಸವದ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆ೦ದು ಬಯಸಿದಲ್ಲಿ, ನಿಮ್ಮ ಗರ್ಭಾವಸ್ಥೆಯ ಕೊನೆಯ ಕೆಲವು ತಿ೦ಗಳುಗಳ ಅವಧಿಯಲ್ಲಿ ಇವು ನಿಮಗೆ ಪೂರಕವಾಗಿ ಕೆಲಸ ಮಾಡುತ್ತವೆ.

ಗರ್ಭಾವಸ್ಥೆಯ ಸ್ಥಿತಿಯಲ್ಲಿ ನಿಮ್ಮ ತ್ವಚೆಯು ಬಹಳಷ್ಟು ನಾಜೂಕಾಗಿರುವುದರಿ೦ದ, ನಿಮ್ಮ ತ್ವಚೆಯ ವ್ಯಾಕ್ಸಿಂಗ್ (waxing) ಮಾಡಿಕೊಳ್ಳುವುದು ಅಷ್ಟೊ೦ದು ಸ೦ಶ್ಲೇಷಿತ ಸುಗ೦ಧವನ್ನೊಳಗೊ೦ಡ ಯಾವುದೇ ವಸ್ತುವಿನಿ೦ದ ಆದಷ್ಟು ದೂರವಿರುವುದು ಒಳಿತು.

English summary

The pregnant woman’s beauty guide

Pregnancy infuses a natural glow to a woman's skin. The woman's nails get stronger and her hair is thicker and longer. As for external enhancements through cosmetics, there is the question of safety.
X
Desktop Bottom Promotion