For Quick Alerts
ALLOW NOTIFICATIONS  
For Daily Alerts

ಸುಂದರವಾಗಿ ಕಾಣಲು ಇಲ್ಲಿದೆ ಸುಲಭ ಮಾರ್ಗಗಳು

By Poornima Hegde
|

ದಿನದಿಂದ ದಿನಕ್ಕೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಬಯಸುತ್ತೀರಾ? ಇದಕ್ಕಾಗಿ, ನೀವು ಹೆಚ್ಚು ಸಮಯ ಮತ್ತು ಅಧಿಕ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಕೆಲವು ನೈಸರ್ಗಿಕ ಮನೆಮದ್ದುಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ತಾಜಾ ಗಾಳಿಯಲ್ಲಿ ಉಸಿರಾಡಿ. ನಿಮ್ಮ ಪ್ರತಿಬಿಂಬವನ್ನು ನೋಡಿ ಕಿರುನಗೆ ಬೀರಿ, ಯೋಗ ಭಂಗಿಯನ್ನು ತಿಳಿಯಿರಿ. ಸುಂದರವಾಗಿ ಕಾಣುವುದು ಕೇವಲ ಮೇಕಪ್ ನಿಂದ ಮಾತ್ರವಲ್ಲ ಎಂಬುದನ್ನು ನೀವೇ ತಿಳಿಯಿರಿ.

ಕಾಲ್ಬೆರಳುಗಳ ಉಗುರಿನ ಫಂಗಸ್ ನಿವಾರಿಸಲು 8 ಮನೆ ಮದ್ದುಗಳು

ನೀವು ಉತ್ತಮವಾಗಿ ಕಾಣಲು ದುಬಾರಿ ಫೇಶಿಯಲ್ ಗಳು ಅಥವಾ ಸೌಂದರ್ಯವರ್ಧಕಗಳನು ಬಳಸುವ ಅಗತ್ಯವಿಲ್ಲ. ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ದಿನವಿಡೀ ಕನ್ನಡಿಯ ಮುಂದೆ ನಿಲ್ಲುವ ಅಗತ್ಯವಿಲ್ಲ. ತ್ವರಿತವಾಗಿ ವಯಸ್ಸಾದ ಲಕ್ಷಣಗಳನ್ನು ಹೋಗಲಾಡಿಸಲು, ಬಹಳ ಸರಳ ರೀತಿಯಲ್ಲಿ ಹಲವಾರು ನೈಸರ್ಗಿಕ ಮಾರ್ಗವನ್ನು ಅನುಸರಿಸಬಹುದು. ನೈಸರ್ಗಿಕ ಸೌಂದರ್ಯ ಟಿಪ್ಸ್ ಬಗೆಗೆ ಗಮನ ಹರಿಸೋಣ:

ನೃತ್ಯ ಭಂಗಿ

ನೃತ್ಯ ಭಂಗಿ

ನೀವು ಎಲ್ಲಿಯೇ ಇರಿ, ಇದ್ದಕ್ಕಿದ್ದಂತೆ ನಿಮ್ಮ ಕಣ್ಣುಗಳು, ಪಾದಗಳು ಮತ್ತು ಕೈ ನೃತ್ಯ ಚಲನೆಯನ್ನು ಮಾಡುತ್ತವೆ. ನರ್ತಕಿ ಗೀತಾ ಚಂದ್ರನ್ ಹೇಳುವ ಪ್ರಕಾರ "ಒಂದು ವೇಳೆ ನಿಮ್ಮ ಕಣ್ಣುಗಳು ಚಲಿಸುವಂತೆ, ಅಥವಾ ಶಾಸ್ತ್ರೀಯ ನೃತ್ಯ ಭಂಗಿಯಂತೆ ನಿಮ್ಮ ಕೈಗಳನ್ನು ತಿರುಗಿಸಿದರೆ, ನಿಮ್ಮ ಮನಸ್ಸು ನಿಮ್ಮ ಸ್ವಂತ ದೇಹದ ಚಲನೆಗಳನ್ನು ಪ್ರಶಂಸಿಸುತ್ತದೆ". ಮುಂಬೈ ಮೂಲದ ಬೆಲ್ಲಿ ನರ್ತಕಿ ವೆರೋನಿಕಾ ಸಿಮಾಸ್ ಡಿಸೋಜಾ ಅವರ ಅಭಿಪ್ರಾಯದಂತೆ, "ನೀವು ನೃತ್ಯ ಚಲನೆಗೆ ಒಳಗಾದ ದಿನ, ಬಹಳ ಅತೀಂದ್ರಿಯ ರೀತಿಯಲ್ಲಿ ನಿಮ್ಮ ದೇಹ ಪ್ರಜ್ಞೆಯನ್ನು ಪಡೆದು ತ್ವಚೆಯ ಸೌಂದರ್ಯದ ಮೇಲೆ ಪರಿಣಾಮ ಬೀರುವುದನ್ನು ಗಮನಿಸಬಹುದು.

ನೇರವಾಗಿ ನಡೆಯಿರಿ, ಎತ್ತರವಾಗಿ (ನೇರವಾಗಿ) ಕುಳಿತುಕೊಳ್ಳಿ

ನೇರವಾಗಿ ನಡೆಯಿರಿ, ಎತ್ತರವಾಗಿ (ನೇರವಾಗಿ) ಕುಳಿತುಕೊಳ್ಳಿ

ನೀವು ಬಾಗಿ ಕುಳಿತಿದ್ದರೆ, ನೀವು ಬೇಸರ/ಖಿನ್ನತೆಗೆ ಒಳಗಾಗಿದ್ದೀರಿ ಎಂದರ್ಥ. ಸೋಶಿಯಲ್ ಸೈಕಾಲಜಿ ಯುರೋಪಿಯನ್ ಜರ್ನಲ್ ಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ನೇರವಾಗಿ ತಮ್ಮ ಕುರ್ಚಿಗಳಲ್ಲಿ ಕುಳಿತು ಕೊಳ್ಳುವವರು ಉಳಿದವರಿಗಿಂತ ಎಲ್ಲಾ ವಿಷಯಗಳಲ್ಲಿಯೂ ಹೆಚ್ಚು ಭರವಸೆಯನ್ನು ಹೊಂದಿರುತ್ತಾರೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ, ಕೆಲ್ಲಿ ಮ್ಯಾಕ್ ಗೋನಿಗಲ್ "ನಿಮ್ಮ ನಿಲುವು ನೇರವಾಗಿದ್ದರೆ, ಅದು ನೀಡುವ ಸಂದೇಶ : ನನ್ನ ಬಗ್ಗೆ ನನಗೆ ಉತ್ತಮ ಅಭಿಪ್ರಾಯಯವಿದೆ" ಎಂಬುದು ಅವರ ಅಭಿಪ್ರಾಯ.

ಒಂದ್ ಕಾಲಿನಲ್ಲಿ ನಿಂತುಕೊಳ್ಳಿ

ಒಂದ್ ಕಾಲಿನಲ್ಲಿ ನಿಂತುಕೊಳ್ಳಿ

ಯೋಗವನ್ನು ದೈನಂದಿನ ಜೀವನದಲ್ಲಿ ಆರಂಭಿಸಿದರೆ ನಿಮ್ಮ ದೇಹದಲ್ಲಿ ಅರಿವು ಮೂಡಿಸಲು ಮತ್ತು ನಿಮ್ಮ ದೇಹದ ಮತ್ತು ಮನಸ್ಸಿನ ಸಮತೋಲನ ಕಾಪಾಡಲು ಸಹಾಯವಾಗುತ್ತದೆ. ಯೋಗ ತಜ್ಞ, ಶಿವ ರಿಯ ಅವರ ಪ್ರಕಾರ "ಯೋಗ ಹೊಸ ಸೃಜನಶೀಲ ಶಕ್ತಿಯನು ನೀಡುತ್ತದೆ. ನೀವು ನಿಮ್ಮ ದೇಹದ ಮತ್ತು ಮನಸ್ಸಿನ ಒಳಗೆ ಸೌಂದರ್ಯದ ಒಂದು ಹೊಸ ಆನಂದವನ್ನು ಪಡೆಯುತ್ತೀರಿ. ನಿಮ್ಮ ಚರ್ಮ, ಕೂದಲು ಮತ್ತು ಉಗುರುಗಳು ಜೀವನದ ಹೊಸ ಆರಂಭವನ್ನು ಪಡೆಯುತ್ತವೆ, ಮತ್ತು ತ್ವಚೆಯ ಹೊಳವು ಬಹುತೇಕ ಶಾಶ್ವತವಾಗುತ್ತದೆ. ಇದು ಮಹಾನ್ ನಮ್ಯತೆಯೊಂದಿಗೆ ವಯಸ್ಸಾದ ಕಳೆಯನ್ನು ಹಿಮ್ಮುಖವಾಗಿಸುತ್ತದೆ. "

ನಿಮ್ಮ ನೆಚ್ಚಿನ ರಾಗವನ್ನು ಗುನುಗುನಿಸಿ

ನಿಮ್ಮ ನೆಚ್ಚಿನ ರಾಗವನ್ನು ಗುನುಗುನಿಸಿ

ನೀವು ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ನಿಮ್ಮ ಕೆಲಸವನ್ನು ಕುಳಿತು ಮಾಡುತ್ತಿದ್ದರೆ, ತಕ್ಷಣವೇ ಹೊರಗೆ ಹೆಜ್ಜೆಯಿಡಿ. ಸ್ಪಲ್ವ ದೂರ ನಿಮ್ಮ ನೆಚ್ಚಿನ ರಾಗವನ್ನು ಗುನುಗುನಿಸುತ್ತಾ ನಡೆಯಿರಿ. ಮತ್ತು ವ್ಯತ್ಯಾಸವನ್ನು ನೀವೇ ಮನಗಾಣುವಿರಿ. ಗಾಯಕಿ ರಾಜೇಶ್ವರಿ ಯವರ ಪ್ರಕಾರ, " ಲವಲವಿಕೆಯ ಹಾಡನ್ನು ಹೇಳುವುದರಲ್ಲಿ ಅದೇನೋ ಮಹಾನ್ ಶಕ್ತಿ ಅಡಗಿದೆ. ನಿಮ್ಮ ಧ್ವನಿಯನ್ನೇ ಕೇಳುತ್ತ ನೀವು ಸ್ತ್ರೀ ಸಹಜ ಅಭಿಪ್ರಾಯವನ್ನು ನೀಡುತ್ತದೆ. ನಿಮ್ಮ ಭಾವನೆಯನ್ನು ಉತ್ತಮಗೊಳಿಸುತ್ತದೆ".

ಕನ್ನಡಿಯ ಮುಂದೆ ಕಿರುನಗೆ

ಕನ್ನಡಿಯ ಮುಂದೆ ಕಿರುನಗೆ

ಕನ್ನಡಿಯ ಮುಂದೆ ನಿಂತು ನಗುವುದು ಉತ್ತಮ ವಿಧಾನ. ನಿಮ್ಮ ತುಟಿಗಳು ವಿಸ್ತರಿಸುವುದನ್ನು ವೀಕ್ಷಿಸುವುದು ನಿಮ್ಮಲ್ಲಿ ಸಂತೋಷದ ಭಾವನೆಗಳನ್ನು ಹುಟ್ಟುಹಾಕಿ, ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒಂದು ಮುಗುಳ್ನಗೆ, ನಿಮ್ಮ ಚಿತ್ತವನ್ನು ಸಂತೋಷಗೊಳಿಸುವ, ಎಂಡೋರ್ಫಿನ್ ಬಿಡುಗಡೆ ಮಾಡಿ, ನಿಮ್ಮ ಮನಸ್ಸು ಮತ್ತು ದೇಹದ ಒಳಗೆ ರಾಸಾಯನಿಕ ಮತ್ತು ಭೌತಿಕ ಪ್ರತಿಕ್ರಿಯೆಗಳನ್ನು ಸುಲಭ ಪಡಿಸುತ್ತದೆ. ನೃತ್ಯ ತಜ್ಞ, ಸರೈನಾ ಜೈನ್ "ಒಂದು ನಗು ಆಂತರಿಕ ಉಷ್ಣತೆ ಮತ್ತು ಹೊಳಪನ್ನು ಅನುಭವಿಸಲು ಅತ್ಯುತ್ತಮ ಮಾರ್ಗವಾಗಿದೆ" ಎಂದು ಹೇಳುತ್ತಾರೆ" ಆದ್ದರಿಂದ ಸದಾ ನಗುತ್ತಿರಿ .... ನಗಿಸುತ್ತಿರಿ ..

English summary

Simple ways to look gorgeous

Want to be gorgeous day by day?. No need to spent much time and money. some natural ways will work. Though beauty these days is all about stopping the clock and quickly fixing signs of aging, there are far simpler ways to look gorgeous and feel great.
Story first published: Tuesday, June 17, 2014, 14:20 [IST]
X
Desktop Bottom Promotion