For Quick Alerts
ALLOW NOTIFICATIONS  
For Daily Alerts

ಗಾಯದ ಸಮಸ್ಯೆಗೆ ಸರಳ ಪರಿಹಾರಗಳು

By Poornima Heggade
|

ಚರ್ಮದ ಸಮಸ್ಯೆಗಳು ನಮ್ಮಲ್ಲಿ ಹೆಚ್ಚಿನವರನ್ನು ಬಾಧಿಸುವುದು ಸುಳ್ಳಲ್ಲ. ಇದರಿಂದಾಗಿ ನೀವು ಮಾನಸಿಕವಾಗಿ ಕುಗ್ಗುತ್ತೀರಿ. ಇದು ಒಂದು ಮಾನಸಿಕ ಸಮಸ್ಯೆಯೇ. ನೀವು ನಿಮ್ಮ ಮುಖದ ಮೇಲೆ ಒಂದು ಹುಣ್ಣನ್ನು ನೋಡಿದರೆ ಹೊರಗೆ ಹೋಗಲು, ಜನರ ಜೊತೆಗೆ ಬೆರೆಯಲು ಹೇಗೆ ತಾನೇ ಮನಸ್ಸು ಬರುತ್ತದೆ ಹೇಳಿ. ಇಂದಿನ ಯುಗದಲ್ಲಿ ಈ ವಿಷಯದ ಬಗ್ಗೆ ಗಂಡು ಹೆಣ್ಣು ಎಂಬ ಭೇದವಿಲ್ಲ. ಇಬ್ಬರಿಗೂ ಇದೊಂದು ದೊಡ್ಡ ಸಮಸ್ಯೆಯೇ ಹಾಗೂ ಇಬ್ಬರೂ ಇದರಿಂದ ಕಷ್ಟಪಡಬೇಕಾದ ಸನ್ನಿವೇಶಗಳು ಬರುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಡವೆ ಮುಕ್ತ ತ್ವಚೆಗಾಗಿ ಸರಳ ಪರಿಹಾರಗಳು

ಇದೊಂದು ಸಣ್ಣ ಗಾಯದ ಹಾಗೆ ಆರಂಭವಾಗಿ ಮುಂದೆ ಹೋಗಿ ಅದರಲ್ಲಿ ಕೀವು ತುಂಬುವ ತನಕ ಮುಂದುವರಯುತ್ತದೆ. ಹುಣ್ಣುಗಳು ಸಾಮಾನ್ಯವಾಗಿ ಬಾಕ್ಟೀರಿಯಾಗಳ ಅಡ್ಡ ಪರಿಣಾಮದಿಂದಾಗಿ ಆಗುತ್ತದೆ. ಇದು ಭಾರಿ ನೋವು ತರುತ್ತದೆ ಹಾಗೂ ನಿರ್ಜಲೀಕರಣದ ಕಾರಣದಿಂದಲು ಇದು ಸಂಭವಿಸಬಹುದು.

ಇಲ್ಲಿ ಇದನ್ನು ಗುಣಪಡಿಸಲು ಎಲ್ಲಾ ರೀತಿಯಲ್ಲೂ ಸ್ವಾಭಾವಿಕವಾದ ಮತ್ತು ಯಾವುದೇ ಅಡ್ಡ ಪರಿಣಾಮಗಳಿರದ ಕೆಲವು ಮನೆಮದ್ದುಗಳಿವೆ. ಉಗುರಿಂದ ಚುಚ್ಚಿ ಆ ಹುಣ್ಣನ್ನು ಒಡೆಯಲು ಪ್ರಯತ್ನಿಸದಿರಿ ಇದು ಶಾಶ್ವತ ಗುರುತನ್ನು ನಿಮ್ಮ ಮುಖದ ಮೇಲೆ ಬಿಟ್ಟು ಹೋಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ

ಬೇವು:

ಬೇವು:

ಹುಣ್ಣಿನ ಸಮಸ್ಯೆಗೆ ಬೇವು ಸರಿಯಾದ ಔಷಧ. ಇದರಲ್ಲಿರುವ ಬಾಕ್ಟೀರಿಯಾ ವಿರೋಧಿ ಅಂಶಗಳು ಹುಣ್ಣಿನ ಸಮಸ್ಯೆಯನ್ನು ಗುಣಮಾಡುತ್ತದೆ. ಕೇವಲ ಇದಕ್ಕೆ ಮಾತ್ರವಲ್ಲದೇ ಬೇವು ಬೇರೆಲ್ಲಾ ಚರ್ಮ ಸಂಬಂಧೀ ವಿಷಯಗಳಿಗೂ ಒಳ್ಳೆಯ ಔಷಧ. ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ ಈ ಪೇಸ್ಟ್ ಅನ್ನು ಚರ್ಮದ ಸಮಸ್ಯೆ ಇರುವ ಜಾಗದಲ್ಲಿ ಹಚ್ಚಿಕೊಳ್ಳಿ. ಬೇವಿನ ಎಲೆಗಳನ್ನು ಬೇಯಿಸಿ ಅದರಿಂದ ಪೇಸ್ಟ್ ಮಾಡುವ ಉಪಾಯವೂ ಇದೆ. ಹಚ್ಚಿದ ಪೇಸ್ಟ್ ಸ್ವಲ್ಪ ಹೊತ್ತು ಹಾಗೆಯೇ ಇರಲಿ ಹಾಗೂ ನಂತರ ನೀರಿನಿಂದ ತೊಳೆದುಕೊಳ್ಳಿ.

ಬ್ರೆಡ್ ಕುದಿಹಿಟ್ಟು ಚಿಕಿತ್ಸೆ:

ಬ್ರೆಡ್ ಕುದಿಹಿಟ್ಟು ಚಿಕಿತ್ಸೆ:

ಬ್ರೆಡ್ ಕುದಿಹಿಟ್ಟಿನಿಂದ ನೀವು ಹುಣ್ಣಿನ ಸಮಸ್ಯೆಯನ್ನು ಗುಣಮಾಡಬಹುದು ಎಂದು ನಿಮಗೆ ಗೊತ್ತಿತ್ತೇ? ಇದು ಬಹಳ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ. ಒಂದು ತುಂಡು ಬ್ರೆಡ್ ಅನ್ನು ಬಿಸಿ ನೀರು ಅಥವಾ ಬಿಸಿಯಾದ ಹಾಲಿನೊಂದಿಗೆ ಅದ್ದಿ. ಇದನ್ನು ನಿಮ್ಮ ಚರ್ಮದ ಸಮಸ್ಯೆ ಇರುವ ಕಡೆಗೆ ಹಚ್ಚಿಕೊಳ್ಳಿ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಕೆಲವೇ ಹೊತ್ತಿನಲ್ಲಿ ಗಾಯವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಇದನ್ನು ದಿನಕ್ಕೆರಡು ಬಾರಿ ಮಾಡಿದರೆ ಬಹಳ ಒಳ್ಳೆಯದು.

ಕಪ್ಪು ಬೀಜ ಚಿಕಿತ್ಸೆ:

ಕಪ್ಪು ಬೀಜ ಚಿಕಿತ್ಸೆ:

ಕಪ್ಪು ಬೀಜಗಳು ಹಲವು ಚರ್ಮ ಸಂಬಂಧೀ ಅನಾರೋಗ್ಯಗಳನ್ನು ಸರಿ ಮಾಡಲು ನೆರವಾಗುತ್ತವೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ಇದು ಬಹಳ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ಬೀಜಗಳ ಪೇಸ್ಟ್ ಕೂಡ ಮಾಡಬಹುದು. ಜೊತೆಗೆ ಇದರ ಎಣ್ಣೆಯೂ ಅಷ್ಟೇ ಪರಿಣಾಮಕಾರಿ. ಇದನ್ನು ಬೇರೆ ಯಾವುದಾದರೂ ಪಾನೀಯದ ಜೊತೆಗೆ ಸೇರಿಸಿ ಕುಡಿಯಬಹುದು ಕೂಡ. ದಿನಕ್ಕೆರಡು ಬಾರಿ ಸೇವಿಸಿದರೆ ಆರೋಗ್ಯದ ಮೇಕೆ ಬಹಳ ಉತ್ತಮ ಪರಿಣಾಮ ಬೀರುವುದು ಸುಳ್ಳಲ್ಲ.

ಚಹಾ ಎಣ್ಣೆ ಚಿಕಿತ್ಸೆ:

ಚಹಾ ಎಣ್ಣೆ ಚಿಕಿತ್ಸೆ:

ಮೈಕ್ರೋಬಯಲ್ ಹಾಗೂ ಬಾಕ್ಟೀರಿಯಾಗಳ ಜೊತೆ ಹೋರಾಡುವ ಅತೀ ಹೆಚ್ಚಿನ ಶಕ್ತಿ ಉಳ್ಳ ಎಣ್ಣೆಗಳು ನಮ್ಮ ಚರ್ಮಕ್ಕೆ ಬಹಳ ಉಪಕಾರಿ. ಚಹಾ ಎಲೆಯ ಎಣ್ಣೆ ಕೇವಲ ಈಗಿರುವ ಹುಣ್ಣುಗಳನ್ನು ಕಡಿಮೆ ಮಾಡುವುದಲ್ಲ ಮುಂದೆ ಹುಣ್ಣುಗಳು ಆಗದೇ ಇರುವಂತೆಯೂ ಬಹಳ ಸಹಾಯ ಮಾಡುತ್ತದೆ. ಹತ್ತಿಯಲ್ಲಿ ಈ ಎಣ್ಣೆಯನ್ನು ಅದ್ದಿ ಮುಖದ ಹುಣ್ಣಿರುವ ಜಾಗಕ್ಕೆ ಹಚ್ಚಿಕೊಳ್ಳಿ ಹಾಗೂ ಹುಣ್ಣು ಮಾಯವಾಗುತ್ತದೆ. ಆದರೆ ಕಪ್ಪು ಬೀಜಗಳ ಹಾಗೆ ಚಹಾದ ಎಲೆಗಳ ಎಣ್ಣೆಯನ್ನು ಸೇವಿಸಲಾಗದು.

ಅರಸಿನ:

ಅರಸಿನ:

ರಕ್ತವನ್ನು ಶುದ್ಧ ಮಾಡುವ ಗುಣ ಇರುವ ಉರಿಯೂತ ವಿರೋಧಿ ಅರಸಿನ ಹುಣ್ಣಿಗೆ ಬಹಳ ಪ್ರಸಿದ್ಧ ಚಿಕಿತ್ಸೆ. ಇದನ್ನು ಬಿಸಿ ನೀರಿನಲಿ ಸೇರಿಸಿ ಕುಡಿಯಬಹುದು. ಅರಸಿನದ ಪೇಸ್ಟ್ ತಯಾರಿಸಿ ಹುಣ್ಣಿನ ಜಾಗದಲ್ಲಿ ಹಚ್ಚಬಹುದು. ಬಟ್ಟೆಯ ಸಹಾಯದಿಂದ ಈ ಪೇಸ್ಟ್ ಅನ್ನು ಹುಣ್ಣಿನ ಜಾಗಕ್ಕೆ ಹಚ್ಚಿದರೆ ಅದರ ಪರಿಣಾಮ ಬೇಗನೆ ಗೊತ್ತಾಗುತ್ತದೆ. ಸ್ವಲ್ಪ ದಿನಗಳ ವರೆಗೆ ಹೀಗೆ ಮಾಡಿದರೆ ನಿಮ್ಮ ಹುಣ್ಣಿನ ಸಮಸ್ಯೆ ಹೇಳ ಹೆಸರಿಲ್ಲದೆ ಹೋಗುತ್ತದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿಯಲ್ಲಿ ಸೋಂಕು ನಿವಾರಕ ಗುಣ ಇದ್ದು ಇದು ಬಹಳ ಹುಣ್ಣಿಗೆ ಬಹಳ ಉತ್ತಮ ಚಿಕಿತ್ಸೆ. ಒಂದು ತುಂಡು ಈರುಳ್ಳಿಯನ್ನು ಹುಣ್ಣಿನ ಮೇಲಿಟ್ಟು ಬಟ್ಟೆಯಿಂದ ಮುಚ್ಚಿ. ಆಗ ಅಲ್ಲಿ ಉತ್ಪತ್ತಿಯಾಗುವ ಉಷ್ಣತೆ ಹುಣ್ಣನ್ನು ಗುಣಪಡಿಸುತ್ತದೆ.

English summary

Natural remedies to treat boils

Skin problems can pull you down majorly. It’s actually psychological but, in reality when you see a boil pouting out of your face, you feel scared of venturing out. In today’s time and age, there’s no gender bias to this issue.
Story first published: Saturday, February 1, 2014, 12:48 [IST]
X
Desktop Bottom Promotion