For Quick Alerts
ALLOW NOTIFICATIONS  
For Daily Alerts

ಸನ್‍ಟ್ಯಾನ್‍ ನಿವಾರಿಸಲು ಮನೆಯಲ್ಲಿಯೇ ಇದೆ ಮದ್ದುಗಳು

By Super
|

ಸನ್‍ಟ್ಯಾನ್ ಅಥವಾ ಬಿಸಿಲಿನಿಂದ ತ್ವಚೆ ಕಂದು ಬಣ್ಣಕ್ಕೆ ತಿರುಗುವ ಸಮಸ್ಯೆಯು ಬೇಸಿಗೆ ಕಾಲದ ಸಾಮಾನ್ಯ ಸಮಸ್ಯೆಗಳ ಪೈಕಿ ಒಂದಾಗಿದೆ. ಹಾಗೆಂದು ಇದು ಕೇವಲ ಬೇಸಿಗೆಯಲ್ಲಿ ಮಾತ್ರ ಕಾಡುತ್ತದೆಯೆಂದು ಭಾವಿಸಬೇಡಿ, ಮಳೆಗಾಲದಲ್ಲಿಯು ಸಹ ಇದು ನಿಮ್ಮನ್ನು ಕಾಡುವ ಸಮಸ್ಯೆ ಇದೆ.

ಟೊಮೇಟೊ ರಸದಿಂದ ಚರ್ಮ ರಕ್ಷಣೆ

ಈ ಸಮಸ್ಯೆ ನಮ್ಮನ್ನು ಕಾಡಿದಾಗ ನಾವು ಮಾಡುವ ಮೊದಲ ಕೆಲಸ ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಯುಕ್ತ ಸನ್‍ಸ್ಕ್ರೀನ್ ಲೋಷನ್ ಖರೀದಿ ಮಾಡುವುದು. ಇದು ರಾಸಾಯನಿಕಗಳಿಂದ ಕೂಡಿರುವುದರ ಜೊತೆಗೆ ಬೆಲೆಯು ಸಹ ದುಬಾರಿಯಾಗಿರುತ್ತದೆ.

ಸನ್‍ಟ್ಯಾನ್ ನಿವಾರಿಸಲು ಈ ರಾಸಾಯನಿಕ ಯುಕ್ತ ಸೌಂದರ್ಯವರ್ಧಕಗಳನ್ನು ಖರೀದಿಸುವ ಬದಲು ನೀವೇಕೆ ಮನೆಯಲ್ಲಿಯೇ ದೊರೆಯುವ ಮದ್ದುಗಳನ್ನು ಒಮ್ಮೆ ಪ್ರಯತ್ನಿಸಬಾರದು? ಈ ಮದ್ದುಗಳು ಬಳಸಲು ಸುಲಭ ಜೊತೆಗೆ ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲವೆಂಬ ಭರವಸೆಯನ್ನು ನಾವು ನಿಮಗೆ ನೀಡುತ್ತೇವೆ. ಸೂರ್ಯನ ಬೆಳಕಿನಿಂದ ಉಂಟಾಗುವ ದುಷ್ಪರಿಣಾಮಗಳ ವಿರುದ್ಧ ಹೋರಾಡಲು ಈ ಸಲಹೆಗಳನ್ನು ಪಾಲಿಸಿ.

ಚಾಲಕಿಯರಿಗೆ ಸೌಂದರ್ಯದ ಕೆಲ ಟಿಪ್ಸ್

ನಿಂಬೆ ರಸ:

ನಿಂಬೆ ರಸ:

ರೋಸ್ ವಾಟರ್ ಮತ್ತು ಸೌತೆಕಾಯಿಯ ರಸವನ್ನು ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಲೇಪಿಸಿ. ಇದರಲ್ಲಿ ನಿಂಬೆರಸವು ನಿಮ್ಮ ಟ್ಯಾನ್ ಅನ್ನು ನಿವಾರಿಸುವ ಕೆಲಸ ಮಾಡಿದರೆ, ಸೌತೆಕಾಯಿ ರಸ ಮತ್ತು ರೋಸ್ ವಾಟರ್ ನಿಮ್ಮ ತ್ವಚೆಗೆ ತಂಪನ್ನು ಒದಗಿಸುವ ಕೆಲಸವನ್ನು ಮಾಡುತ್ತವೆ. ಕಚ್ಛಾ ಹಾಲು, ಅರಿಶಿಣ ಮತ್ತು ಸ್ವಲ್ಪ ನಿಂಬೆರಸವನ್ನು ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಲೇಪಿಸಿ. ಜೊತೆಗೆ ಎಲ್ಲೆಲ್ಲಿ ಸನ್‍ಟ್ಯಾನ್ ಆಗಿದೆಯೋ ಅಲ್ಲಿಯು ಸಹ ಲೇಪಿಸಿ, ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.

ಓಟ್ಸ್ ಮತ್ತು ಮಜ್ಜಿಗೆಯ ಮಿಶ್ರಣ:

ಓಟ್ಸ್ ಮತ್ತು ಮಜ್ಜಿಗೆಯ ಮಿಶ್ರಣ:

ಓಟ್ಸ್ ಮತ್ತು ಮಜ್ಜಿಗೆಯನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಎಕ್ಸ್‌ಫೋಲಿಯೇಷನ್ ಮಾಡಲು ಬಳಸಿ. ಇದು ಒಣಗಿದ ಮೇಲೆ ಹಾಗೆಯೇ ಮುಖದಿಂದ ಇದರ ಪದರವನ್ನು ಬೇರ್ಪಡಿಸುವಾಗ ಸನ್‍ಟ್ಯಾನ್ ಆದ ಭಾಗವು ಕಾಂತಿಯಿಂದ ಹೊಳೆಯುತ್ತದೆ.

ಕಡಲೆ ಹಿಟ್ಟು ಮತ್ತು ನಿಂಬೆರಸ:

ಕಡಲೆ ಹಿಟ್ಟು ಮತ್ತು ನಿಂಬೆರಸ:

ಸ್ವಲ್ಪ ಮೊಸರಿನ ಜೊತೆಗೆ ಕಡಲೆ ಹಿಟ್ಟು ಮತ್ತು ನಿಂಬೆರಸವನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ತ್ವಚೆಯಲ್ಲಿ ಎಲ್ಲಿ ಸನ್‍ಟ್ಯಾನ್ ಆಗಿದೆಯೋ ಅಲ್ಲಿ ಲೇಪಿಸಿ. ಆಗ ಅದರ ಪರಿಣಾಮವನ್ನು ನೀವೇ ಗಮನಿಸುವಿರಿ.

ಎಳನೀರು:

ಎಳನೀರು:

ಸ್ವಲ್ಪ ತಾಜಾ ನಿಂಬೆರಸವನ್ನು ತೆಗೆದುಕೊಂಡು ನಿಮ್ಮ ಭುಜ, ಮೊಣಕಾಲು, ಮೊಣಕೈ ಅಥವಾ ಎಲ್ಲೆಲ್ಲಿ ಸನ್‍ಟ್ಯಾನ್ ಆಗಿದೆಯೋ ಅಲ್ಲಲ್ಲಿ ಲೇಪಿಸಿ. ನಂತರ ಕನಿಷ್ಟ 15 ನಿಮಿಷ ಹಾಗೆಯೆ ಬಿಡಿ. ಇದರ ಜೊತೆಗೆ ಮುಖ ಮತ್ತು ಕೈಗಳನ್ನು ತೊಳೆಯಲು ಪ್ರತಿನಿತ್ಯ ತಾಜಾ ಎಳನೀರನ್ನು ಬಳಸುವುದರಿಂದಲೂ ಸಹ ಟ್ಯಾನ್ ಅನ್ನು ನಿವಾರಿಸಿಕೊಳ್ಳಬಹುದು. ಇದರ ಜೊತೆಗೆ ತ್ವಚೆಯು ಮತ್ತಷ್ಟು ಮೃದುವಾಗಿ, ಕಾಂತಿ ಮತ್ತು ಆರೋಗ್ಯದಿಂದ ನಳ ನಳಿಸುತ್ತದೆ.

ಅರಿಶಿಣ ಮತ್ತು ನಿಂಬೆರಸ:

ಅರಿಶಿಣ ಮತ್ತು ನಿಂಬೆರಸ:

ನಿಮ್ಮ ತ್ವಚೆಗೆ ವಾರದಲ್ಲಿ ಮೂರು ಬಾರಿ ಅರಿಶಿಣ ಮತ್ತು ನಿಂಬೆರಸದ ಮಿಶ್ರಣದ ಪೇಸ್ಟನ್ನು ಲೇಪಿಸಿ. ಇದು ನಿಮ್ಮ ತ್ವಚೆಯ ಬಣ್ಣವನ್ನು ಸುಧಾರಿಸುವುದರ ಜೊತೆಗೆ ಟ್ಯಾನ್ ಅನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಬಾದಾಮಿ ಬೀಜಗಳು:

ಬಾದಾಮಿ ಬೀಜಗಳು:

ಬಾದಾಮಿ ಬೀಜಗಳನ್ನು ತೆಗೆದುಕೊಳ್ಳಿ, ರಾತ್ರಿ ಪೂರಾ ನೆನೆಸಿ. ಬೆಳಗ್ಗೆ ಅದನ್ನು ತೆಗೆದುಕೊಂಡು ತೆಳುವಾದ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಇದಕ್ಕೆ ಸಮ ಪ್ರಮಾಣದ ಹಾಲನ್ನು ಬೆರೆಸಿ, ನಂತರ ಎಲ್ಲೆಲ್ಲಿ ಸನ್‍ಟ್ಯಾನ್ ಆಗಿದೆಯೋ ಅಲ್ಲಲ್ಲಿ ಇದನ್ನು ಲೇಪಿಸಿ.

ಯೋಗರ್ಟ್:

ಯೋಗರ್ಟ್:

ಓಟ್‍ಮೀಲ್, ಯೋಗರ್ಟ್, ಒಂದಿಷ್ಟು ಹನಿ ನಿಂಬೆರಸ ಮತ್ತು ಟೊಮಾಟೊ ರಸವನ್ನು ಪೇಸ್ಟ್ ಆಗಿ ತಯಾರಿಸಿಕೊಳ್ಳಿ. ಇದನ್ನು ಸನ್‍ಟ್ಯಾನ್ ಆಗಿರುವ ಭಾಗಗಳಿಗೆ ಲೇಪಿಸಿ, ಅರ್ಧ ಗಂಟೆಯ ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ. ಕಾಂತಿಯಿಂದ ಕೂಡಿರುವ ತ್ವಚೆ ಈಗ ನಿಮ್ಮದಾಗಿರುವುದನ್ನು ನೀವೇ ಗಮನಿಸುವಿರಿ.

ಪರಂಗಿ ಹಣ್ಣು:

ಪರಂಗಿ ಹಣ್ಣು:

ಸ್ವಲ್ಪ ಪರಂಗಿ ಹಣ್ಣನ್ನು ತೆಗೆದುಕೊಂಡು ರುಬ್ಬಿ ಪಲ್ಪ್ ತರಹ ಮಾಡಿಕೊಳ್ಳಿ. ಇದನ್ನು ಸನ್‍ಟ್ಯಾನ್ ಆಗಿರುವ ಭಾಗಕ್ಕೆ ಲೇಪಿಸಿ ಮಸಾಜ್ ಮಾಡಿ. ಪರಂಗಿ ಹಣ್ಣು ತ್ವಚೆಯ ಕಾಂತಿಯನ್ನು ಹೆಚ್ಚಿಸುವುದರ ತನ್ನಲ್ಲಿರುವ ಸತ್ವಾಂಶಗಳ ಕಾರಣದಿಂದ ನಿಮ್ಮ ತ್ವಚೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.

ಮುಲ್ತಾನಿ ಮಿಟ್ಟಿ:

ಮುಲ್ತಾನಿ ಮಿಟ್ಟಿ:

ಮುಲ್ತಾನಿ ಮಿಟ್ಟಿಯನ್ನು ನಿಮ್ಮ ತ್ವಚೆಗೆ ಲೇಪಿಸುವುದರಿಂದಲೂ ಸಹ ಸನ್‍ಟ್ಯಾನ್‍ ಅನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು.

English summary

How to get rid of a suntan at home

Suntan is a common problem especially during summer season. Don't think summer only give you suntan. Even if it is raining, chances of suntan is not less.
Story first published: Tuesday, May 13, 2014, 15:21 [IST]
X
Desktop Bottom Promotion