For Quick Alerts
ALLOW NOTIFICATIONS  
For Daily Alerts

ಸ್ತನಕ್ಕೆ ಹೊಂದುವಂತಹ ಬ್ರಾ ಗಾತ್ರವನ್ನು ತಿಳಿದುಕೊಳ್ಳುವುದು ಹೇಗೆ?

|

ಸೂಕ್ತವಾದ ಬ್ರಾ ಗಾತ್ರವನ್ನು ಆಯ್ಕೆಮಾಡುವ ಸಾಮರ್ಥ್ಯ ಪ್ರತಿಯೊಂದು ಹೆಣ್ಣಿಗಿದೆ ಇದರಿಂದ ಧರಿಸುವವರ ಸ್ತನಕ್ಕೆ ಸೂಕ್ತ ಬೆಂಬಲ ದೊರಕುತ್ತದೆ. ಮುಖ್ಯವಾಗಿ ಬ್ರಾ ಖರೀದಿಸುವಾಗ ಆರಾಮ ಮತ್ತು ಬೆಂಬಲವನ್ನು ನಾವು ಗಮನಿಸುವುದು ಮುಖ್ಯವಾಗಿರುತ್ತದೆ.

ನಿಮ್ಮ ಸ್ತನಕ್ಕೆ ಹೊಂದುವಂತಹ ಬ್ರಾ ಗಾತ್ರವನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳುವ ಪ್ರಮುಖ ವಿಧಾನವನ್ನು ಇಲ್ಲಿ ನೀಡುತ್ತಿದ್ದೇವೆ. ನೀವು ಬ್ರಾವನ್ನು ಖರೀದಿಸುವ ಮುನ್ನ ಸರಿಯಾದ ಆಯ್ಕೆಯನ್ನು ಆರಿಸಿದ್ದೀರಿ ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ. ನೀವು ಸರಿಯಾದ ಬ್ರಾ ಗಾತ್ರವನ್ನು ಧರಿಸುತ್ತಿಲ್ಲದಿದ್ದಲ್ಲಿ ಕೆಲವೊಂದು ದೈಹಿಕ ಲೋಪಗಳು ಕಂಡುಬರುವ ಸಾಧ್ಯತೆ ಕೂಡ ಇರುತ್ತದೆ.

ನಿಮ್ಮ ಬ್ರಾದ ಹಿಂದಿನ ಬೆಲ್ಟ್ ತುಂಬಾ ಲೂಸಾಗಿದ್ದಲ್ಲಿ ಮುಂಭಾಗ ಕೆಳಬರುತ್ತದೆ ಮತ್ತು ಇದರಿಂದಾಗಿ ನಿಮಗೆ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಬ್ರಾದ ಹೆಚ್ಚಿನ ಬಿಗಿತ ಕೂಡ ರಕ್ತಸಂಚಾರಕ್ಕೆ ತಡೆಯನ್ನು ಉಂಟುಮಾಡುತ್ತದೆ.

How To Know Your Correct Bra Size?

ಹಾಗಿದ್ದರೆ ಸೂಕ್ತವಾದ ಬ್ರಾ ಗಾತ್ರವನ್ನು ಆರಿಸುವುದು ಹೇಗೆಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಈ ಲೇಖನ ಖಂಡಿತ ನಿಮಗೆ ನೆರವನ್ನು ನೀಡುತ್ತದೆ. ನಾವು ಕೆಳಗೆ ನೀಡಿರುವ ಕೆಲವೊಂದು ಸಲಹೆಗಳನ್ನು ನೀವುಗಳು ಪಾಲಿಸಿದರೆ ಈ ಸಮಸ್ಯೆ ದೂರಾಗುವುದು ಖಂಡಿತ.

ಬಿಗಿಯಾದ ಬ್ರಾದಿಂದ ಆರೋಗ್ಯಕ್ಕೆ ಕುತ್ತು

ಕಪ್ ಸೈಜ್
ಕಂಪೆನಿ ಮತ್ತು ಬ್ರಾದ ಬ್ರ್ಯಾಂಡ್ ನೀಡುವಂತಹ ನಿಮ್ಮ ಸ್ತನದ ಗಾತ್ರವನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಇದು ನಿಮ್ಮ ಸ್ತನವನ್ನು ಸರಿಯಾಗಿ ಮುಚ್ಚುತ್ತದೆ ಎಂಬುದನ್ನು ಖಾತ್ರಿಗೊಳಿಸುವುದು ಅತ್ಯವಶ್ಯಕವಾಗಿದೆ. ನೀವು ಸಣ್ಣ ಗಾತ್ರದ ಸ್ತನವನ್ನು ಹೊಂದಿದ್ದರೆ ನಿಮಗೆ ಎ ಗಾತ್ರದ ಕಪ್ ಸೈಜ್ ಎಂಬುದು ಅರ್ಥವಲ್ಲ. ಅದೇ ರೀತಿ ಕಪ್ ಸೈಜ್ ಡಿ ಯು ಎಲ್ಲಾ ಬ್ರ್ಯಾಂಡ್‌ಗಳಲ್ಲಿ ಸಮನಾಗಿರುವುದಿಲ್ಲ. ಹಾಗಿದ್ದರೆ ನಿಮ್ಮ ಸ್ತನಕ್ಕೆ ಯಾವುದು ಸೂಕ್ತವಾಗುತ್ತದೆ ಎಂಬುದನ್ನು ಮೊದಲು ನೀವು ಅರಿತುಕೊಳ್ಳಬೇಕು.

ನೋಟ ಮತ್ತು ಅನುಭವವನ್ನು ಅರ್ಥಮಾಡಿಕೊಳ್ಳುವುದು
ಸ್ನಗ್ ಬ್ಯಾಂಡ್ ನಡುವೆ ನಿಮ್ಮ 2 ಬೆರಳುಗಳು ಕೂರುವಂತಹ ಜಾಗವಾಗಿದೆ. ಬ್ರಾವು ನಿಮ್ಮ ಸ್ತನದ ಇಕ್ಕೆಲಗಳನ್ನು ಮುಚ್ಚುವುದು ಅತ್ಯವಶ್ಯಕವಾಗಿದೆ. ಮೃದುವಾದ ಕರ್ವ್ ಇರುವುದು ಕೂಡ ಆವಶ್ಯಕವಾಗಿದೆ. ಬ್ರಾ ನಿಮಗೆ ಹೆಚ್ಚಿನ ಬಿಗಿತವನ್ನು ಉಂಟುಮಾಡಬಾರದು ಹೀಗೆ ಸರಿಯಾದ ಬ್ರಾ ಗಾತ್ರವನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ.

ವಿವಿಧ ಸ್ತನ ಗಾತ್ರಗಳು
ನೀವು ಬ್ರಾದ ಸರಿಯಾದ ಸ್ತನ ಗಾತ್ರವನ್ನು ಅರ್ಥಮಾಡಿಕೊಳ್ಳುವಾಗ ಬೇರೆ ಬೇರೆ ಸ್ತನ ಗಾತ್ರಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ಪ್ರಮುಖ ಅಂಶವಾಗಿದೆ. ಬ್ರಾದ ಸರಿಯಾದ ಕಟ್ ಅನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಅಳತೆ ಮಾಡುವುದು ಹೇಗೆ?
ಬ್ಯಾಂಡ್‌ಗಳ ಅಳತೆಗಳನ್ನು ಕುರಿತು ತಿಳಿದುಕೊಳ್ಳಲು, ನಿಮ್ಮ ಸ್ತನದ ಅಳತೆಯನ್ನು ನೀವು ಮಾಡಬೇಕಾಗುತ್ತದೆ. ನಿಮ್ಮ ದೇಹದ ತೂಕಕ್ಕನುಗುಣವಾಗಿ ಇದು ಬದಲಾಗಬಹುದು ಎಂಬುದನ್ನು ಗಮನಿಸಿಕೊಳ್ಳಿ. ನಿಮ್ಮ ಮೊಲೆತಟ್ಟುಗಳಿಗೆ ನೇರವಾಗಿ ಸ್ತನದ ಮಧ್ಯಭಾಗದಲ್ಲಿ ಟೇಪ್ ಅನ್ನು ಇರಿಸುವುದು ಹೀಗೆ ಅಳತೆ ಮಾಡಿ.

ತಪ್ಪಾದ ಸೈಜ್ ನ ಬ್ರಾ ಬ್ಯೂಟಿ ಮತ್ತು ಹೆಲ್ತ್ ಗೆ ಆಪತ್ತು!

ವಿವಿಧ ಫಿಟ್ಟಿಂಗ್ ಸ್ಟೈಲ್
ನಿಮ್ಮ ಬ್ರಾ ಗಾತ್ರವನ್ನು ನೀವು ಪಡೆದುಕೊಳ್ಳಲು ಹೊರಟಾಗ, ತಯಾರಿಕೆ ಮತ್ತು ನಿಮ್ಮ ಸ್ತನಕ್ಕೆ ಹೊಂದಿಕೆಯಾಗುವ ಬ್ರಾವನ್ನು ಖರೀದಿಸುವುದು ಅತ್ಯವಶ್ಯಕವಾಗಿದೆ. ವಿವಿಧ ಗಾತ್ರ ಮತ್ತು ಕಪ್ ಗಾತ್ರವಿರುವ ಬ್ರಾ ಖರೀದಿಸುವಾಗ ನೀವು ಇದನ್ನು ಮನದಲ್ಲಿಟ್ಟುಕೊಳ್ಳಬೇಕು.

Story first published: Wednesday, July 2, 2014, 14:31 [IST]
X
Desktop Bottom Promotion