For Quick Alerts
ALLOW NOTIFICATIONS  
For Daily Alerts

ದೇಹದ ದುರ್ಗಂಧವನ್ನು ತಡೆಗಟ್ಟಲು ಸುಲಭ ಮಾರ್ಗೋಪಾಯಗಳು

By Super
|

ಸೂಕ್ತ ರಕ್ಷಣೆ ಮಾಡಿಕೊಳ್ಳದಿದ್ದರೆ ದೇಹದ ವಾಸನೆ ನಿಮ್ಮ ವ್ಯಕ್ತಿತ್ವಕ್ಕೆ ನಿಜವಾಗಿ ತೊಂದರೆಯನ್ನುಂಟುಮಾಡಬಹುದು. ಆದ್ದರಿಂದ ದೇಹ ದುರ್ಗಂಧದಿಂದ ಹೊರಗುಳಿಯುವುದು ಹೇಗೆ ಎನ್ನುವುದಕ್ಕೆ ಕೆಲವು ಮಾರ್ಗೋಪಾಯಗಳು ಇಲ್ಲಿವೆ.

ಕೆಲವೊಮ್ಮೆ ನೀವು ಎಷ್ಟೇ ಡಿಯೋಡರೆಂಟ್ (ಸುಗಂಧ ದ್ರವ್ಯ) ವನ್ನು ಬಳಸಿದರೂ ದೇಹದ ದುರ್ಗಂಧ ದೂರವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಈ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ನೀವು ಚಿಂತಿಸುತ್ತಿದ್ದೀರೆ? ಹಾಗಾದರೆ ಇಲ್ಲಿದೆ, ದೇಹದ ದುರ್ಗಂಧವನ್ನು ಹೋಗಲಾಡಿಸುವ ಸುಲಭವಾದ ನಾಲ್ಕು ಮಾರ್ಗಗಳು.

ನೀವು ಅನುಸರಿಸಬೇಕಾದ ಕೆಲವು ವಿಷಯಗಳನ್ನು ಇಲ್ಲಿ ಹೇಳಲಾಗಿದೆ. ಇದಕ್ಕಾಗಿ ನೀವು ಹೆಚ್ಚಿನದೆನನ್ನೂ ಮಾಡಬೇಕಾಗಿಲ್ಲ. ಮಾಡಬೇಕಾದದ್ದು ಇಷ್ಟೇ, ಈರುಳ್ಳಿ, ಬೆಳ್ಳುಳ್ಳಿ ಹೆಚ್ಚಾಗಿ ತಿನ್ನುವುದನ್ನು ನಿಲ್ಲಿಸಿ. ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಬೆವರಿನ ಮೂಲಕ ವಾಸನೆ ಬರಲು ಆರಂಭವಾಗುತ್ತದೆ. ಈರುಳ್ಳಿಯನ್ನು ಮಸಾಲೆಯೊಂದಿಗೆ ಬೆರೆಸುವುದು ಸಾಮಾನ್ಯವಾಗಿದ್ದರೂ ನೀವು ಆದಷ್ಟು ಅದರಿಂದ ದೂರವುಳಿಯುವುದು ಅತ್ಯಂತ ಅಗತ್ಯ. ತೊಡೆ ಸಂದಿಯಲ್ಲಿ ಕಂಡುಬರುವ ನೋವಿಗೆ ಪರಿಹಾರ

How To Keep Body Odour At Bay

ದೇಹದ ಸ್ವಚ್ಛತೆ ದೇಹದ ದುರ್ಗಂಧವನ್ನು ಹೋಗಲಾಡಿಸಲು ಇರುವ ಮುಖ್ಯ ಅಂಶ. ಆದ್ದರಿಂದ ಬೇಸಿಗೆ ಕಾಲದಲ್ಲಿ ದಿನಕ್ಕೆ ಎರಡು ಭಾರಿಯಾದರೂ ಸ್ನಾನ ಮಾಡುವುದು ಅತ್ಯಂತ ಒಳ್ಳೆಯದು. ಇದರಿಂದ ದೇಹದ ಹಲವು ಸಮಸ್ಯೆಗಳು ದೂರವಾಗಬಹುದು.

*ಟಾಲ್ಕಂ ಪೌಡರ್ ಬಳಸಿ
ಇದನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿನ ವ್ಯತ್ಯಾಸವನ್ನು ನೀವೇ ಕಂಡುಕೊಳ್ಳಬಹುದು. ಇದು ನಿಮಗೆ ಕೇವಲ ತಾಜಾ ಸುವಾಸನೆಯ ಅನುಭವ ನೀಡುವುದು ಮಾತ್ರವಲ್ಲ, ಜೊತೆಗೆ ವಿಶೇಷವಾಗಿ ಬೇಸಿಗೆ ಸಮಯದಲ್ಲಿ, ದೇಹದ ವಾಸನೆಯನ್ನು ತಗ್ಗಿಸುವಲ್ಲಿ ಸಹಾಯ ಮಾಡುತ್ತದೆ.

*ಸ್ನಾನ ಮಾಡುವ ನೀರಿಗೆ ಸ್ವಲ್ಪ ಜೇನು ಬೆರೆಸಿ
ಸ್ನಾನ ಮಾಡಿದ ನಂತರ ಕೊನೆಗೆ ಬಕೆಟ್‌ನಲ್ಲಿ ಎರಡು ಮಗ್ ನಷ್ಟು ನೀರು ಇರುವಾಗ 1 ಚಮಚ ಜೇನು ಬೆರೆಸಿ ಆ ನೀರನ್ನು ಮೈಗೆ ಹಾಕಿಕೊಳ್ಳಿ. ಹೀಗೆ ಮಾಡಿದರೆ ದೇಹ ದುರ್ಗಂಧ ಬೀರುವುದನ್ನು ತಡೆಯಬಹುದು.

*ಉತ್ತಮ ಗುಣಮಟ್ಟದ ಡಿಯೋಡರೆಂಟ್‌ನ್ನೇ ಬಳಸಿ
ಇದು ನಿಮ್ಮಲ್ಲಿ ತಾಜಾತನವನ್ನು ಮಾತ್ರವಲ್ಲ, ನೀವು ಅತಿಯಾಗಿ ಬೆವರುವುದನ್ನೂ ತಪ್ಪಿಸುತ್ತದೆ. ಬೇಸಿಗೆಯಲ್ಲಿ ದೇಹ ಹೆಚ್ಚಾಗಿ ಬೆವರುವುದರಿಂದ ದೇಹದಿಂದ ವಾಸನೆ ಬರುವುದು ಸಹಜ. ಆದ್ದರಿಂದ ಸರಿಯಾದ ಸ್ವಚ್ಛತೆ ಹಾಗೂ ಸುಗಂಧ ದ್ರವ್ಯಗಳನ್ನು ಬಳಸುವುದು ಖಂಡಿತವಾಗಿಯೂ ನಿಮ್ಮ ಈ ಸಮಸ್ಯೆಯಿಂದ ದೂರವಿಡುತ್ತದೆ.

*ಶುದ್ಧವಾದ ಬಟ್ಟೆ ಧರಿಸಿ
ಕೆಲವರು ಒಮ್ಮೆ ಧರಿಸಿದ ಬಟ್ಟೆಯನ್ನು ಒಗೆಯದೆ ಮತ್ತೊಮ್ಮೆ ಧರಿಸುತ್ತಾರೆ. ಹೀಗೆ ಮಾಡಿದರೆ ಬೆವರಿನ ದುರ್ಗಂಧ ಹೆಚ್ಚುವುದು. ಶುಭ್ರವಾದ ಬಟ್ಟೆ ಮಾತ್ರ ಧರಿಸಿ, ಅದರಲ್ಲೂ ಬೇಸಿಗೆಯಲ್ಲಿ ಹತ್ತಿಯ ಬಟ್ಟೆ ಒಳ್ಳೆಯದು.

*ನಿಂಬೆ ಗಿಡದ ಎಲೆ
ನಿಂಬೆ ಗಿಡದ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿದರೆ ದೇಹದಲ್ಲಿ ಬೆವರಿನ ವಾಸನೆ ತಡೆಯುವುದಷ್ಟೇ ಅಲ್ಲ ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

*ಅಡುಗೆ ಸೋಡಾ ಮತ್ತು ನಿಂಬೆ ರಸ
1 ಚಮಚ ಅಡುಗೆ ಸೋಡಾಕ್ಕೆ 1 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಬೆವರಿನ ಕೆಟ್ಟ ವಾಸನೆ ಇರುವುದಿಲ್ಲ. ಬೇಸಿಗೆಯಲ್ಲಿ ಈ ರೀತಿ ಮಾಡುವುದು ಅತ್ಯುತ್ತಮವಾದ ಪರಿಣಾಮವನ್ನು ಕಾಣಬಹುದು. ಸಾಕಷ್ಟು ನೀರು ಕುಡಿಯುವ ಅಭ್ಯಾಸ ಒಳ್ಳೆಯದು.

English summary

How To Keep Body Odour At Bay

Body odour can become a real dampener to your personality if proper care is not taken. Here's how to keep body odour at bay
X
Desktop Bottom Promotion