For Quick Alerts
ALLOW NOTIFICATIONS  
For Daily Alerts

ಕಣ್ಣಿನ ತುರಿಕೆಗೆ ಕೆಲವು ಮನೆಮದ್ದುಗಳು

By Hemanth P
|

ನಮ್ಮಲ್ಲಿ ಹೆಚ್ಚಿನವರು ಕಣ್ಣಿನ ತುರಿಕೆಯ ಸಮಸ್ಯೆಗೆ ಸಿಲುಕುತ್ತಾರೆ. ಇದು ಸಾಮಾನ್ಯ ಸಮಸ್ಯೆಯಾಗಿದ್ದರೂ ಕಲುಷಿತ ವಾತಾವರಣ, ಧೂಳು ಹಾಗೂ ಮಣ್ಣಿನ ದಾಳಿ, ಕಣ್ಣಿನ ಸೋಂಕು ಮತ್ತು ಅಲರ್ಜಿ ಈ ಸಮಸ್ಯೆಯನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತದೆ.

ಕಣ್ಣಿನ ಒಳಗೆ ಹಾಗೂ ಸುತ್ತಲು ಇರುವ ಕಣ್ಣಿನ ತುರಿಕೆ ಮತ್ತೆ ಮತ್ತೆ ನಾವು ಕಣ್ಣನ್ನು ತುರಿಸುವಂತೆ ಮಾಡುತ್ತದೆ. ನಾವು ಕಣ್ಣನ್ನು ಉಜ್ಜುತ್ತಾ ಇದ್ದರೆ ಆಗ ಅದು ಮತ್ತೆ ಮತ್ತೆ ನಮ್ಮನ್ನು ಕಾಡುತ್ತದೆ. ಕಣ್ಣಿನ ತುರಿಕೆಯಿಂದ ಸ್ವಲ್ಪ ಮಟ್ಟಿನ ಆರಾಮ ಪಡೆಯಲು ಕೆಲವೊಂದು ಮನೆಮದ್ದುಗಳಿವೆ. ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವ್ಯಾಕ್ಸ್ ನಂತರ ಅನುಸರಿಸಬೇಕಾದ ಸುರಕ್ಷತಾ ಸಲಹೆ

ತಂಪು ಶಾಖ

ತಂಪು ಶಾಖ

ಕಣ್ಣಿನ ತುರಿಕೆಗೆ ತಂಪು ಶಾಖ ಕೊಟ್ಟರೆ ಆಗ ಸ್ವಲ್ಪ ಮಟ್ಟಿನ ಆರಾಮ ಸಿಗುತ್ತದೆ. ನೀರಿಗೆ ಕೆಲವು ತುಂಡು ಐಸ್ ಹಾಕಿ ಮತ್ತು ಅದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ ತೆಗೆಯಿರಿ. ಅದನ್ನು ಕಣ್ಣಿನ ಮೇಲೆ ಮತ್ತು ಅದರ ಸುತ್ತಲು ಹೆಚ್ಚು ಒತ್ತಡ ಹಾಕದೆ ಒತ್ತಿ ಹಿಡಿಯಿರಿ.

ಕ್ಯಾಮೊಮೈಲ್ ಟೀ ಬ್ಯಾಗ್ ನ್ನು ಇದೇ ರೀತಿ ಬಳಸಿ ಕಣ್ಣಿನ ತುರಿಕೆಯಿಂದ ಆರಾಮ ಪಡೆಯಬಹುದು. ಕ್ಯಾಮೊಮೈಲ್ ಟೀ ಬ್ಯಾಗ್ ನ್ನು ತಂದು ಫ್ರಿಡ್ಜ್ ನಲ್ಲಿಡಿ. ಅರ್ಧ ಅಥವಾ ಒಂದು ಗಂಟೆ ಬಳಿಕ ಅದನ್ನು ತೆಗೆದು ಸುಮಾರು ಐದು ಅಥವಾ ಹತ್ತು ನಿಮಿಷಗಳ ಕಾಲ ಕಣ್ಣಿನ ಮೇಲಿಡಿ. ದಿನದಲ್ಲಿ ಮೂರರಿಂದ ನಾಲ್ಕು ಸಲ ಹೀಗೆ ಮಾಡಿದರೆ ಕಣ್ಣಿನ ತುರಿಕೆಯಿಂದ ಬೇಗನೆ ಆರಾಮ ಪಡೆಯಬಹುದು.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯಲ್ಲಿ ನೈಸರ್ಗಿಕವಾಗಿ ತಂಪುಗೊಳಿಸುವ ಗುಣಗಳಿವೆ. ಇದರಲ್ಲಿರುವ ಉಪದ್ರವ ನಿವಾರಕ ಗುಣಗಳು ಕಣ್ಣಿನ ಕಿರಕಿರಿ ನಿವಾರಿಸುತ್ತದೆ. ಕಣ್ಣಿನ ತುರಿಕೆಗೆ ಕಾರಣವಾಗುವಂತಹ ಕಣ್ಣಿನ ಮುಖದಲ್ಲಿ ಬೊಜ್ಜು, ಕೆಂಪು, ಊತ ಮತ್ತು ಉರಿಯನ್ನು ಇದು ನಿವಾರಿಸುತ್ತದೆ. ಒಂದು ಸೌತೆಕಾಯಿ ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆಯಿರಿ. ಬಳಿಕ ಅದನ್ನು ತುಂಡು ಮಾಡಿ 10ರಿಂದ 15 ನಿಮಷಗಳ ಕಾಲ ಪ್ರಿಡ್ಜ್ ನಲ್ಲಿಡಿ. ಇದರ ಬಳಿಕ ಕಣ್ಣಿನ ಮೇಲಿಡಿ. ಒಳ್ಳೆಯ ಫಲಿತಾಂಶಕ್ಕೆ ದಿನದಲ್ಲಿ ನಾಲ್ಕರಿಂದ ಐದು ಸಲ ಹೀಗೆ ಮಾಡಿ.

ರೋಸ್ ವಾಟರ್

ರೋಸ್ ವಾಟರ್

ರೋಸ್ ವಾಟರ್ ಕೇವಲ ನಿಮ್ಮ ಸೌಂದರ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಕಣ್ಣಿನ ತುರಿಕೆಯಿಂದ ನಿಮಗೆ ಆರಾಮ ನೀಡುತ್ತದೆ. ದಿನದಲ್ಲಿ ಕನಿಷ್ಠ ಎರಡು ಸಲ ರೋಸ್ ವಾಟರ್ ನಿಂದ ಕಣ್ಣು ತೊಳೆಯಿರಿ ಅಥವಾ ತಕ್ಷಣ ಪರಿಹಾರಕ್ಕೆ ಒಂದು ಹನಿ ರೋಸ್ ವಾಟರ್ ನ್ನು ಸೋಂಕಿಂತ ಕಣ್ಣಿನೊಳಗೆ ಹಾಕಿ.

ತಣ್ಣಗಿನ ಹಾಲು

ತಣ್ಣಗಿನ ಹಾಲು

ಅಡುಗೆ ಮನೆಯಲ್ಲಿ ಸಿಗುವ ತಂಪಾದ ಹಾಲನ್ನು ಬಳಸುವುದರಿಂದ ಕಣ್ಣಿನ ತುರಿಕೆಗೆ ಚಿಕಿತ್ಸೆ ಮಾಡಬಹುದು. ತಣ್ಣಗಿನ ಹಾಲಿನಲ್ಲಿ ಹತ್ತಿಯ ಒಂದು ಉಂಟೆಯನ್ನು ಮುಳುಗಿಸಿ ಮತ್ತು ಭಾದಿತ ಕಣ್ಣಿನ ಸುತ್ತ ಉಜ್ಜಿ. ಹತ್ತಿಯ ಉಂಡೆಯನ್ನು ಕಣ್ಣಿನ ಮೇಲಿಟ್ಟರೆ ಅದು ತಂಪು ಶಾಖದಂತೆ ಕೆಲಸ ಮಾಡುತ್ತದೆ. ದಿನದಲ್ಲಿ ಎರಡು ಸಲ, ಬೆಳಿಗ್ಗೆ ಮತ್ತು ಸಂಜೆ ಹೀಗೆ ಮಾಡಿ.

ತರಕಾರಿ ಜ್ಯೂಸ್

ತರಕಾರಿ ಜ್ಯೂಸ್

ಕಣ್ಣಿನ ತುರಿಕೆಗೆ ಅತ್ಯಂತ ಸುಲಭದ ಮನೆಮದ್ದೆಂದರೆ ಅದು ಹಸಿ ತರಕಾರಿ ಜ್ಯೂಸ್. ಕ್ಯಾರೆಟ್ ಮತ್ತು ಪಾಲಕದಂತಹ ತರಕಾರಿ ಹೆಚ್ಚು ಲಾಭಕಾರಿ. ಎರಡು ಕ್ಯಾರೆಟ್ ನ್ನು ರುಬ್ಬಿ ಮತ್ತು ಅದರ ಜ್ಯೂಸ್ ತೆಗೆಯಿರಿ. ಇದನ್ನು ದಿನದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಸಲ ಕುಡಿಯಿರಿ. ಕಿರಿಕಿರಿ ದೂರವಾಗುವವರೆಗೆ ಹೀಗೆ ಮಾಡಿ.

ಹಸಿ ಆಲೂಗಡ್ಡೆ

ಹಸಿ ಆಲೂಗಡ್ಡೆ

ಕಣ್ಣಿನ ತುರಿಕೆ ಸಮಸ್ಯೆಯನ್ನು ನಿವಾರಿಸಲು ಹಸಿ ಆಲೂಗಡ್ಡೆಯನ್ನು ಬಳಸಿ. ಸೌತೆಕಾಯಿಯ ಪರಿಹಾರದಂತೆ ಆಲೂಗಡ್ಡೆಯನ್ನು ತುಂಡು ಮಾಡಿ ಮತ್ತು ಎರಡರಿಂದ ನಾಲ್ಕು ಗಂಟೆಗಳ ಕಾಲ ಇದನ್ನು ಫ್ರಿಡ್ಜ್ ನಲ್ಲಿಡಿ. ಆಲೂಗಡ್ಡೆ ತುಂಡುಗಳನ್ನು ಕಣ್ಣಿನ ಮೇಲಿಡಿ ಮತ್ತು 10ರಿಂದ 15 ನಿಮಿಷಗಳ ಕಾಲ ಹಾಗೆ ಇಡಿ.

ಅಲೋವೆರಾ

ಅಲೋವೆರಾ

ಆಲೋವೆರಾ ಕಣ್ಣಿನ ತುರಿಕೆ ಸಮಸ್ಯೆಗೆ ಪರಿಣಾಮಕಾರಿ ಸುಲಭ ಮನೆಮದ್ದು. ಅಲೋವೆರಾ ಜ್ಯೂಸ್ ತಯಾರಿಸಿ ಮತ್ತು ಇದನ್ನು ಜೇನು ಹಾಗೂ ಎಲ್ಡರ್ಬೆರಿ ಬ್ಲಾಸಮ್ ಟೀ ಯೊಂದಿಗೆ ಮಿಶ್ರ ಮಾಡಿ. ಈ ಮಿಶ್ರಣದೊಂದಿಗೆ ನಿಮ್ಮ ಕಣ್ಣುಗಳನ್ನು ದಿನದಲ್ಲಿ ಎರಡು ಸಲ ತೊಳೆದರೆ ಕಣ್ಣಿನ ತುರಿಕೆ ಕಡಿಮೆಯಾಗುತ್ತದೆ.

English summary

Home remedies to treat eye itchiness

Most of us at some time or other have felt eye itchiness, it is a general problem and mostly becomes worse with some conditions like environment pollution, attack of dust and dirt, eye infections and allergies.
Story first published: Friday, February 21, 2014, 13:58 [IST]
X
Desktop Bottom Promotion