For Quick Alerts
ALLOW NOTIFICATIONS  
For Daily Alerts

ಕಾಲಿನ ಸ್ನಾಯು ಸೆಳೆತಕ್ಕೆ ಮನೆಮದ್ದುಗಳು

By Madhumati Hiremath
|

ಪಾದಗಳ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಪಾದಗಳ ಸ್ನಾಯು ಸೆಳೆತ ಎಂದು ಗುರುತಿಸಬಹುದು. ಇದು ಅತ್ಯಂತ ಗಂಭೀರವಾದ ಸಮಸ್ಯೆ. ರೋಗಗ್ರಸ್ಥ ಪಾದದ ಭಾಗ ಕೆಂಪಾಗಿ ಊದಿಕೊಂಡಿರುತ್ತದೆ.

ಅಲ್ಲಿ ತುರಿಕೆಯ ಅನುಭವದ ಜೊತೆ ಅಸಹನೀಯ ನೋವೂ ಇರುತ್ತದೆ. ಈ ಸಮಸ್ಯೆಗೆ ಕಾರಣ, ಪಾದಗಳ ಮೇಲಿನ ಭಾರೀ ಒತ್ತಡ. ಕೆಲವು ಸಂದರ್ಭಗಳಲ್ಲಿ ಇದು ಅಸಮರ್ಪಕ ಅಳತೆಯ ಶೂಗಳಿಂದ ಆಗಿರಬಹುದು ಅಥವಾ ಬೊಜ್ಜು, ಮಧುಮೇಹ, ಪಾದಗಳಲ್ಲಾಗುವ ಚೂಪಾದ ಸ್ಪರ್ (ಕೆಲಿಕೇನಿಯಲ್ ಸ್ಪರ್‌ಗಳಂತಹ) ಗಳ ಕಾರಣಗಳಿಂದಲೂ ಪಾದಗಳ ಮೇಲೆ ಅಧಿಕ ಒತ್ತಡ ಬೀಳುವ ಸಾಧ್ಯತೆಗಳಿವೆ.

ಇಂತಹ ಸ್ನಾಯು ಸೆಳೆತಕ್ಕೆ ಮನೆಯಲ್ಲೇ ಔಷಧಿ ಇದೆ ಎಂದರೆ, ರೋಗ ವಾಸಿಯಾಯ್ತೇನೋ ಅನ್ನುವಷ್ಟು ಸಂತೋಷವಾಗುತ್ತದೆ ಅಲ್ಲವಾ ! ಈ ಸ್ನಾಯು ಸೆಳೆತದ ನರಳಿಕೆಯಿಂದ ನಿಮ್ಮನ್ನು ಪಾರು ಮಾಡಲೆಂದೇ ನಾವು ಕೆಲವು ಮನೆ ಮದ್ದುಗಳನ್ನು ಹೊತ್ತು ತಂದಿದ್ದೇವೆ. ಮನೆಯಲ್ಲಿ ಒಂದು ಸಲ ಮಾಡಿನೋಡಿ, ಈ ನೋವಿನಿಂದ ಮುಕ್ತಿ ಸಿಗುವುದಂತೂ ಖಚಿತ.

ಕಿವಿ ನೋವಿಗೆ ಇಲ್ಲಿದೆ ತ್ವರಿತ ರೀತಿಯ 10 ಪರಿಹಾರ!

ತೈಲ ಮಸಾಜ್:

ತೈಲ ಮಸಾಜ್:

ಸ್ವಲ್ಪ ಪ್ರಮಾಣ ತೈಲವನ್ನು ತೆಗೆದುಕೊಂಡು ನಿಮ್ಮ ಪಾದಗಳ ಮೇಲೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳುವದರಿಂದ ನೋವು ನಿವಾರಣೆಯಾಗುವುದು. ಬೇರೆ ಎಣ್ಣೆಗಳಿಗಿಂತ ಆಲಿವ್ ಎಣ್ಣೆ , ಉತ್ತಮ ಹಾಗು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ ಎನ್ನಲಾಗುವುದು.

ಬಳಕೆಯ ವಿಧಾನ: ಎರಡು ಚಮಚ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಮಧ್ಯಮ ಶಾಖದಲ್ಲಿ ಬೆಚ್ಚಗೆ ಮಾಡಿರಿ. ಈಗ ಈ ತೈಲದಿಂದ ಬಾಧಿತ ಭಾಗಕ್ಕೆ ಕೆಲವು ನಿಮಿಷ ಮಸಾಜ್ ಮಾಡಿರಿ. ಈ ಪ್ರಕ್ರಿಯೆಯಿಂದ ಸ್ನಾಯುಗಳಲ್ಲಿ ರಕ್ತ ಪರಿಚಲನೆ ಉತ್ತೇಜಿತವಾಗಿ ನೋವು ದೂರವಾಗುತದೆ ಮತ್ತು ಆರಾಮದಾಯಕ ಭಾವನೆ ಮೂಡುತ್ತದೆ. ನೋವು ಸಂಪೂರ್ಣವಾಗಿ ಹೋಗುವವರೆಗೂ ಮಸಾಜನ್ನು ಮುಂದುವರಿಸಿ.

ಐಸ್ ಪ್ಯಾಕ್:

ಐಸ್ ಪ್ಯಾಕ್:

ಉರಿಯೂತ ಮತ್ತು ಪಾದಗಳಲ್ಲಿನ ಸ್ನಾಯು ಸೆಳೆತವನ್ನು ಗಣನೀಯವಾಗಿ ತಗ್ಗಿಸಲು ಐಸ್ ಪ್ಯಾಕ ಅತ್ಯುತ್ತಮ ಮಾರ್ಗ.

ಬಳಕೆಯ ವಿಧಾನ: ಕೆಲವು ಐಸ್ ತುಂಡುಗಳನ್ನು ಒಡೆದು ಅವುಗಳನ್ನು ಒಂದು ಚೀಲದಲ್ಲಿ ಇಟ್ಟು ಹತ್ತಿ ಬಟ್ಟೆಯಿಂದ ಆ ಚೀಲವನ್ನು ಸುತ್ತಿರಿ. ಕೆಲವು ನಿಮಿಷ ನಿಧಾನವಾಗಿ ಬಾಧಿತ ಭಾಗದ ಮೇಲೆ ಈ ಚೀಲವನ್ನು ಇರಿಸಿ. ನಿಮಗೆ ಬೇಕೆನಿಸಿದಲ್ಲಿ ಒಂದು ಬಾರಿಗೆ ಸುಮಾರು 15 ನಿಮಿಷಗಳ ಕಾಲ ಈ ಚೀಲವನ್ನು ಒಂದೇ ಸ್ಥಳದಲ್ಲಿ ಇರಿಸಬಹುದು. ಒಂದು ದಿನದಲ್ಲಿ ಹಲವಾರು ಬಾರಿ ಈ ಪ್ರಕ್ರಿಯೆಯನ್ನು ಮಾಡಬಹುದಾಗಿದೆ. ಇದರಿಂದ ನಿಮ್ಮ ಕಾಲಿಗೂ ವಿಶ್ರಾಂತಿ ದೊರೆಯುತ್ತದೆ.

ಉಪ್ಪು:

ಉಪ್ಪು:

ಸ್ನಾಯು ಸೆಳೆಯಕ್ಕೆ ಬೆಚ್ಚಗಿನ ನೀರು ಮತ್ತು ಎಪ್ಸಮ್ ಉಪ್ಪು ರಾಮಬಾಣವಿದ್ದಂತೆ.

ಬಳಕೆಯ ವಿಧಾನ: - ಹತ್ತು ಹದಿನೈದು ನಿಮಿಷ ಎಪ್ಸಮ್ ಉಪ್ಪು ಕರಗಿದ ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದಗಳನ್ನು ನೆನೆಸಿಡಿ. ನೀರಿನ ಬಿಸಿ ನೋವಿನ ಮೇಲೆ ಅದ್ಭುತ ಪರಿಣಾಮನ್ನು ಉಂಟು ಮಾಡುತ್ತದೆ. ಅಲ್ಲದೆ ಎಪ್ಸಮ್ ಉಪ್ಪು, ದೇಹವು ಕಳೆದು ಕೊಂಡ ಮೆಗ್ನೀಸಿಯಂ ಅನ್ನು ಪುನಃ ತುಂಬುವುದರಿಂದ ನೋವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ. ಈ ಮಿಶ್ರಣದಲ್ಲಿ ಶುಷ್ಕತೆ ಇರುವದರಿಂದ ದಿನದಲ್ಲಿ ಒಮ್ಮೆ ಮಾತ್ರ ಈ ಪರಿಹಾರವನ್ನು ಪ್ರಯತ್ನಿಸಿ. ಪ್ರಕ್ರಿಯೆಯ ನಂತರ ಪಾದಗಳಿಗೆ ತೇವಾಂಶ ಒದಗಿಸುವುದನ್ನು ಮರೆಯದಿರಿ.

ವಿನೆಗರ್:

ವಿನೆಗರ್:

ವಿನೆಗರ್ ಕೂಡ ಉರಿಯೂತ ಮತ್ತು ಪಾದಗಳಲ್ಲಿನ ಸ್ನಾಯು ಸೆಳೆತವನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿ. ಜೊತೆಗೆ ನೋವುನ್ನೂ ದೂರ ಮಾಡುತ್ತದೆ. ಬಿಸಿ ಮತ್ತು ತಣ್ಣಗಿನ ವಿನೆಗರ್ ಹೊದಿಕೆಗಳನ್ನು ದಲಾಯಿಸುವುದರೊಂದಿಗೆ ನೀವು ಸ್ನಾಯು ಸಮಸ್ಯೆಗೆ ಚಿಕಿತ್ಸೆ ಮಾಡಬಹುದು.

ಬಳಕೆಯ ವಿಧಾನ: ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಕೆಲವು ನಿಮಿಷ ಅದನ್ನು ಬಿಸಿ ಮಾಡಿ. ಇದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ ಬಾಧಿತ ಭಾಗದ ಮೇಲೆ ನಿಧಾನವಾಗಿ ಕಾವುಕೊಡಿ. ಈಗ ತಣ್ಣೀರಿನಲ್ಲಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣಮಾಡಿ, ಹತ್ತಿ ಬಟ್ಟೆ ಅದ್ದಿ ಮತ್ತೊಮ್ಮೆ ಬಾಧಿತ ಭಾಗಕ್ಕೆ ಹಚ್ಚಿರಿ. ಒಂದು ದಿನಕ್ಕೆ ಎರಡು ಮೂರು ಸಾರಿ ಈ ಕ್ರಿಯೆಯನ್ನು ಪುನರಾವರ್ತಿಸಿ ಮತ್ತು ನಂತರ ತೇವಾಂಶವಿರುವ ಕ್ರೀಮ್ ಅನ್ನು ಪಾದಗಳಿಗೆ ಲೇಪಿಸಿಕೊಳ್ಳಿ.

ಹಿಟ್ಟು:

ಹಿಟ್ಟು:

ನೋವಿನ ವಿರುದ್ದ ಹೋರಾಡಲು ಮತ್ತು ಚಿಕಿತ್ಸೆ ಪ್ರಕ್ರಿಯೆಯನ್ನು ವೇಗಗೊಳಿಸಲು ಹಿಟ್ಟು ಅತಿ ಸೂಕ್ತ ಘಟಕಾಂಶವಾಗಿದೆ. ಹಾಗೂ ಇದು ಮನೆಯಲ್ಲಿ ಸುಲಭವಾಗಿ ಸಿಗುವಂತಹದ್ದೂ ಆಗಿದೆ.

ಬಳಕೆಯ ವಿಧಾನ: ಹಿಟ್ಟು ಮತ್ತು ವೈನಿನ ಪೇಸ್ಟ್ ತಯಾರಿಸಿ ಬಾಧಿತ ಭಾಗಕ್ಕೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ. ಸ್ನಾಯು ಸೆಳೆತದಿಂದ ಬಳಲುತ್ತಿರುವ ಜನರು ಆದಷ್ಟೂ ಹಿಟ್ಟನ್ನು ತಿನ್ನದಿರುವುದು ಒಳ್ಳೆಯದು.

Story first published: Saturday, May 3, 2014, 15:18 [IST]
X
Desktop Bottom Promotion