For Quick Alerts
ALLOW NOTIFICATIONS  
For Daily Alerts

ಕಪ್ಪು ಕುತ್ತಿಗೆ ಭಾಗವನ್ನು ಚಿಕಿತ್ಸೆಗೊಳಿಸುವ ಮನೆಮದ್ದುಗಳು

By Poornima Hegde
|

ನಿಮ್ಮ ಸೌಂದರ್ಯಕ್ಕೆ ಇಷ್ಟೇ ಮಿತಿ ಎಂದು ಅಂದುಕೊಳ್ಳುತ್ತಿದ್ದೀರೆ? ಇದು ಸಾಮಾನ್ಯವಾಗಿ ತಮ್ಮ ತ್ವಚೆಯ ಹೊಳಪಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲು ಹೊರಟಿರುವವರ ಪ್ರಶ್ನೆ. ಅವರು ಒಂದು ಸೌಂದರ್ಯ ಗಡಿಯನ್ನು ಹಾಕಿಕೊಂಡು ತಮ್ಮ ಮುಖಕ್ಕಿಂತ ಹೊರಗಿನ ಭಾಗ ಅಂದರೆ ಕುತ್ತಿಗೆ ಭಾಗವನ್ನೂ ಮರೆಯಾಗಿಸುತ್ತಾರೆ.

ಕುತ್ತಿಗೆಯ ಭಾಗವೂ ಸಹ ಮುಖದಷ್ಟೇ ಪ್ರಮುಖವಾಗಿದ್ದು, ಕುತ್ತಿಗೆಯ ಕಪ್ಪು ಕಲೆಯನ್ನು ಹೋಗಲಾಡಿಸಲು ಹಲವಾರು ಚಿಕಿತ್ಸೆಗಳಿವೆ. ಹಾಗಾಹಿ ನಿಮಗೆ ಅತ್ಯಗತ್ಯವಾಗಿರುವ ಕುತ್ತಿಗೆಯ ಸೌಂದರ್ಯವನ್ನೂ ಹೆಚ್ಚಿಸುವ ಕೆಲವು ನೈಸರ್ಗಿಕ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ.

ಕಾಲಿನ ಸ್ನಾಯು ಸೆಳೆತಕ್ಕೆ ಮನೆಮದ್ದುಗಳು

 ನಿಂಬೆ ರಸ:

ನಿಂಬೆ ರಸ:

ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಈ ಗುಣದಿಂದಾಗಿ ಚರ್ಮದ ಕಪ್ಪು ಭಾಗವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಎರಡು ಚಮಚ ಗುಲಾಬಿ ನೀರಿನೊಂದಿಗೆ(ರೋಸ್ ವಾಟರ್) ಎರಡು ಟಿ ಚಮಚ ನಿಂಬೆ ರಸ ಮಿಶ್ರಣ ಮಾಡಿ ಮತ್ತು ಹತ್ತಿ ಚೆಂಡನ್ನು ಬಳಸಿ ಕುತ್ತಿಗೆಯ ಕಪ್ಪಾದ ಭಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿದ ಮರುಕ್ಷಣವೇ ತೊಳೆಯಬೇಡಿ. ಅದನ್ನು ಇಡೀ ರಾತ್ರಿ ಹಗೆಯೇ ಬಿಟ್ಟು, ಮರುದಿನ ಬೆಳಿಗ್ಗೆ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ಒಂದು ತಿಂಗಳವರೆಗೆ ಈ ವಿಧಾನವನ್ನು ಪುನರಾವರ್ತಿಸಿ.

ಓಟ್ ಸ್ಕ್ರಬ್:

ಓಟ್ ಸ್ಕ್ರಬ್:

ಕಪ್ಪು ಚರ್ಮ ಅಥವಾ ಕುತ್ತಿಗೆ ಮೇಲೆ ಕಪ್ಪು ಕಲೆಯಾಗುವುದು ಅನಗತ್ಯ/ಮೃತ ಚರ್ಮದ ಕ್ರೋಢೀಕರಣದ ಕಾರಣ. ನಿಮ್ಮ ಚರ್ಮದ ಕಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಅನಗತ್ಯ ಚರ್ಮದ ಕೋಶಗಳನ್ನು ಚದುರಿಸುವಿಕೆಗೆ ಈ ಸ್ಕ್ರಬ್ ಸಹಾಯಮಾಡಬಹುದು.

 ಬಾಳೆಹಣ್ಣಿನ ಪ್ಯಾಕ್:

ಬಾಳೆಹಣ್ಣಿನ ಪ್ಯಾಕ್:

ನಿಮ್ಮ ಕುತ್ತಿಗೆಯ ಗಾಢ ವಲಯಕ್ಕೆ ಬಾಳೆಹಣ್ಣು ಮತ್ತು ಆಲಿವ್ ಪ್ಯಾಕ್ ತಯಾರಿಸಿ ಹಚ್ಚಿ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣನ್ನು ಮ್ಯಾಶ್ (ಹಿಚುಕಿ) ಎರಡು ಚಮಚ ಆಲಿವ್ ತೈಲದೊಂದಿದೆ ಸೇರಿಸಿ . ಕುತ್ತಿಗೆ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಕಪ್ಪು ಕಲೆಗಳನ್ನು ಮಾಯಮಾಡಲು ಮತ್ತು ಚರ್ಮವನ್ನು ಮೃದುವಾಗಿಸಲು ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಪ್ರಯತ್ನಿಸಿ.

ನಿಮ್ಮ ಚರ್ಮದ ಮೇಲೆ ಕಲೆಯನ್ನು ಕಡಿಮೆ ಮಾಡಲು ನೈಸರ್ಗಿಕವಾಗಿ ತಯಾರುಮಾಡಿದ ಈ ಸ್ಕ್ರಬ್ ನ್ನು ಪ್ರಯತ್ನಿಸಿ. ಒಂದು ಬಟ್ಟಲಿನಲ್ಲಿ ಎರಡು ಚಮಚ ಅಡುಗೆ ಸೋಡಾಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇರಿಸಿ. ನಿಮ್ಮ ಬೆರಳಿನಿಂದ ಈ ಪೇಸ್ಟ್ ನ್ನು ಅನ್ವಯಿಸಿ ಮತ್ತು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಡುಗೆ ಸೋಡಾವು ನಿಮ್ಮ ತ್ವಚೆಯ ಚೇತರಿಕೆಗೆ ಸಹಾಯ ಮಾಡುತ್ತದೆ. ಇದು ಕುತ್ತಿಗೆಯ ಮೇಲಿನ ಕಪ್ಪು ವಲಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಸನ್‌ಸ್ಕ್ರೀನ್ ಬಳಸಿ:

ಸನ್‌ಸ್ಕ್ರೀನ್ ಬಳಸಿ:

ನೀವು ಮನೆಯಿಂದ ಹೊರಗೆ ಹೋಗುವಾಗ, ನೀವು ಬಳಸುವ ಸನ್ಸ್ಕ್ರೀನ್ ನಿಮಗೆ ಕಾವಲು . ಕೆಲವರು ಮುಖದವರೆಗೆ ಮಾತ್ರ ಇದನ್ನು ಅನ್ವಯಿಸುತ್ತಾರೆ ಆದರೆ ಸೂರ್ಯನ ಶಾಖದ ಪರಿಣಾಮವನ್ನು ತಡೆಯಲು ಎಲ್ಲಾ ಭಾಗಗಳಿಗೆ ಅನ್ವಯಿಸವುದು ಉತ್ತಮ.


Story first published: Saturday, May 10, 2014, 15:15 [IST]
X
Desktop Bottom Promotion