For Quick Alerts
ALLOW NOTIFICATIONS  
For Daily Alerts

ನಿಮ್ಮನ್ನು ಚಕಿತಗೊಳಿಸುವ ಕೆಲವು ಸೌಂದರ್ಯವರ್ಧಕ ಸಾಧನಗಳು!

|

ನಿಮಗೆ ಗೊತ್ತೇ? ನಿಮ್ಮ ಮೂತ್ರವು ನಿಮ್ಮ ಮುಖದ ಮೇಲಿನ ಆ ಕಡುಗೆಂಪು ಮೊಡವೆಗಳನ್ನು ನಿವಾರಿಸುತ್ತದೆಯೆಂದು, ಅಥವಾ ಆ ಒರಟಾದ ಕ್ರೀಮ್ ನಿಮ್ಮ ತ್ವಚೆಗೆ ಅತ್ಯುತ್ತಮವಾದ ಮೊಯಿಶ್ಚರೈಸರ್ ಆಗಿ ಉಪಯೋಗವಾಗುತ್ತದೆಂದು. ಇಂತಹ ಅದೆಷ್ಟೋ ವಿಲಕ್ಷಣವಾದ ಸೌಂದರ್ಯವರ್ಧಕ ಸಲಹೆಗಳು ಮತ್ತು ಚಮತ್ಕಾರಗಳು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಲು ನೆರವಾಗುತ್ತವೆ.

ಇಂತಹ ವಿಲಕ್ಷಣವಾದ ಕೆಲವೊಂದು ಸಲಹೆಗಳನ್ನು ನಾವು ನಿಮಗಾಗಿ ಇಂದು ನೀಡುತ್ತಿದ್ದೇವೆ. ಇವುಗಳು ನಿಮ್ಮ ಜೀವನದಲ್ಲಿ ಒಮ್ಮೆಯಾದರು ಕೆಲಸಕ್ಕೆ ಬರುತ್ತವೆ ತಪ್ಪದೆ ಓದಿ. ದ್ರವ ರೂಪದ ಆಂಟಾಸಿಡ್ ಅನ್ನು ಫೇಸ್ ಮಾಸ್ಕ್ ಆಗಿ ಬಳಸಿ ಎರಡು ಟೇಬಲ್ ಚಮಚದಷ್ಟು ದ್ರವ ರೂಪದ ಆಂಟಾಸಿಡ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿ ಕನಿಷ್ಟ 15 ನಿಮಿಷಗಳ ಕಾಲ ಬಿಡಿ. ನಿಮ್ಮ ಹೊಟ್ಟೆಯಲ್ಲಿ ಇದು ಹೇಗೆ ಕೆಲಸ ಮಾಡುತ್ತದೆಯೋ, ಅದೇ ರೀತಿ ಇದು ನಿಮ್ಮ ಮುಖದ ಮೇಲೂ ಸಹ ಕೆಲಸ ಮಾಡುವ ಚಮತ್ಕಾರವನ್ನು ನೀವೇ ಕಣ್ಣಾರೆ ನೋಡುತ್ತೀರಿ.

ಇದು ನಿಮ್ಮ ಮುಖದ ಮೇಲಿನ ಜಿಡ್ಡಿನಾಂಶವನ್ನು ಮತ್ತು ಆಮ್ಲವನ್ನು ತೆಗೆದು ಹಾಕುತ್ತದೆ. ಇದನ್ನು ತೊಳೆಯಿರಿ ಸಾಕು ಆಗ ಇದರ ಪರಿಣಾಮವನ್ನು ನೀವೇ ನೋಡುತ್ತೀರಿ.

ಮಯೊ ಒಂದು ಒಳ್ಳೆಯ ಹೇರ್ ಕಂಡೀಶನರ್

Handy beauty tricks

ನುಣುಪಾದ ಮಯೊನ್ನೈಸ್ (ಮೊಟ್ಟೆಯ ಜೊತೆ) ಆಗ ತಾನೇ ಶಾಂಪೂ ಹಾಕಿ ತೊಳೆದ ಮತ್ತು ಭಾಗಶಃ ಒದ್ದೆಯಾದ ಕೂದಲನ್ನು ಸ್ವಚ್ಛಗೊಳಿಸುತ್ತದೆ. ನಿಮ್ಮ ಮನೆಯಲ್ಲಿ ಸ್ಟೀಮರ್ ಇದ್ದಲ್ಲಿ, ಮಯೋ ಹಾಕಲಾದ ಕೂದಲನ್ನು ಅದರಿಂದ ಒಣಗಿಸಿ ಎಂಟು ಹತ್ತು ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಕೂದಲನ್ನು ತೊಳೆಯಿರಿ.

ಡೈಪರ್ ರಾಷ್ ಕ್ರೀಮ್ ಒಣ ತ್ವಚೆಗೆ ಪರಿಹಾರವನ್ನೊದಗಿಸುತ್ತದೆ
ಈ ಕ್ರೀಮ್‍ಗಳು ತಮ್ಮಲ್ಲಿ ಯಥೇಚ್ಛವಾದ ಮೊಯಿಶ್ಚರೈಸಿಂಗ್ ಸಾಮರ್ಥ್ಯವನ್ನು ಹೊಂದಿರುತ್ತವೆ. ಜೊತೆಗೆ ಇವುಗಳಲ್ಲಿ ಉರಿ ಬಾವು ನಿವಾರಕ ಗುಣಗಳು ಸಹ ಇರುತ್ತವೆ. ಹಾಗಾಗಿ ಒಡೆದ ಮೊಣಕೈ, ಒಡೆದ ಹಿಮ್ಮಡಿ ಮುಂತಾದ ಕಡೆಗೆ ಇದನ್ನು ಹಚ್ಚಿ ಶೀಘ್ರ ಉಪಶಮನವನ್ನು ಪಡೆಯಿರಿ.

ಊದಿಕೊಂಡ ಕಣ್ಣುಗಳಿಗೆ ಆರೈಕೆ
ಒಂದು ಕಚ್ಛಾ ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅದನ್ನು ಎರಡು ಭಾಗವಾಗಿ ಕತ್ತರಿಸಿ, ಆದರೆ ತೊಳೆಯಬೇಡಿ. ಕೆಳಗೆ ಮಲಗಿಕೊಂಡು ಈ ಆಲೂಗಡ್ಡೆಗಳ ಹೋಳುಗಳನ್ನು ನಿಮ್ಮ ಕಣ್ಣುಗಳ ಮೇಲೆ 15 ನಿಮಿಷ ಇಡಿ. ನಿಮ್ಮ ಕಣ್ಣುಗಳ ಊತವು ಇದರಿಂದ ಕಡಿಮೆಯಾಗುವುದನ್ನು ನೀವೇ ನೋಡುವಿರಿ. ಇದಕ್ಕೆ ಕಾರಣ ಆಲೂಗಡ್ಡೆಗಳಲ್ಲಿರುವ ರಸಗಳು, ಇದಕ್ಕೆ ನೀವು ಧನ್ಯವಾದಗಳನ್ನು ಅರ್ಪಿಸಬೇಕು.

ನಿಮ್ಮ ಕೂದಲುಗಳಿಗೆ ಹೊಳಪನ್ನು ನೀಡಲು ನಿಂಬೆರಸವನ್ನು ಬಳಸಿ
ನಿಂಬೆರಸವು ಒಂದು ಅತ್ಯುತ್ತಮವಾದ ಬ್ಲೀಚಿಂಗ್ ಗುಣಗಳನ್ನು ತನ್ನೊಳಗೆ ಹೊಂದಿದೆ. ಹೀಗಾಗಿ ನೀವು ಕೂದಲಿನ ಬೇರನ್ನು ನಿಂಬೆರಸದಿಂದ ತೊಳೆದ ನಂತರ ಬಿಸಿಲಿನಲ್ಲಿ ಒಣಗಿಸಿ. ಅವುಗಳು ಫಳ ಫಳ ಎಂದು ಹೊಳೆಯಲು ಆರಂಭಿಸುತ್ತವೆ. ಆದರೂ ಸಹ ಈ ಪರಿಹಾರವು ದಟ್ಟವಾದ ಕಪ್ಪು ಕೂದಲಿನ ಮೇಲೆ ತನ್ನ ಪರಿಣಾಮವನ್ನು ಬೀರುವುದಿಲ್ಲ. ಸೌಂದರ್ಯ ವೃದ್ಧಿಗೆ ಬಳಸಿ ಚೆಂಡು ಹೂವಿನ ಆರೋಗ್ಯಕಾರಿ ಸಲಹೆ

ಹೊಳೆಯುವ ಕೂದಲುಗಳನ್ನು ಪಡೆಯಲು ವಿನೇಗರ್ ಅನ್ನು ಬಳಸಿ
ಒಂದು ಕ್ಯಾಪ್ ತುಂಬಾ ವಿನೆಗರ್ ಅನ್ನು ತೆಗೆದುಕೊಳ್ಳಿ ಅದನ್ನು ಕೂದಲಿಗೆ ಲೇಪಿಸಿ. ನಂತರ ತೊಳೆಯಿರಿ. ಈಗ ನೋಡಿ ಹೊಳೆಯುವ ಕೂದಲು ನಿಮ್ಮದಾಗಿರುತ್ತದೆ.

ರಾತ್ರೋ ರಾತ್ರಿ ಮೊಡವೆಗಳಿಂದ ಮುಕ್ತಿಯನ್ನು ಹೊಂದಿ!
ಇದು ಅತ್ಯಂತ ಪ್ರಸಿದ್ಧಿಯನ್ನು ಗಳಿಸಿರುವ ಪರಿಹಾರೋಪಾಯ- ನಿಮ್ಮ ಮುಖದ ಮೇಲಿನ ಮೊಡವೆಗಳ ಮೇಲೆ ಬಿಳಿಯ ಟೂಥ್‍ಫೇಸ್ಟ್ ಅನ್ನು ರಾತ್ರಿಯ ಸಮಯದಲ್ಲಿ ಲೇಪಿಸಿ. ಆದರೆ ಈ ಪರಿಹಾರವು ಸಾಧಾರಣ ಮೊಡವೆಗಳ ಮೇಲೆ ಮಾತ್ರ ಕೆಲಸ ಮಾಡುತ್ತದೆ. ಮುಖದ ತುಂಬಾ ಹರಡಿಕೊಂಡಿರುವ ಮೊಡವೆಗಳ ಮೇಲೆ ಇದು ಅಷ್ಟಾಗಿ ಪರಿಣಾಮವನ್ನು ಬೀರುವುದಿಲ್ಲ.

ಆಂಟಿ-ಸೆಲ್ಲೂಲೈಟ್ ಕ್ರೀಮ್ ಬಳಸಿ ಕೆನ್ನೆಗೆ ಧೃಡತ್ವವನ್ನು ನೀಡಿ
ಆಂಟಿ-ಸೆಲ್ಲೂಲೈಟ್ ಕ್ರೀಮ್ ನಿಮ್ಮ ಕೆನ್ನೆಗೆ ಶಕ್ತಿಯನ್ನು ನೀಡಿ ಜೋತು ಬೀಳುವುದನ್ನು ತಪ್ಪಿಸುತ್ತದೆ.

ಕೂದಲಿಗೆ ಆಲೀವ್ ಎಣ್ಣೆ
ನಿಮ್ಮ ಕೂದಲಿಗೆ ಆಲೀವ್ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ. ಇದರಿಂದ ನಿಮ್ಮ ಕೂದಲಿನ ಬುಡವು ಸದೃಢಗೊಳ್ಳುತ್ತದೆ. ಜೊತೆಗೆ ಇದು ನಿಮ್ಮ ಕೂದಲನ್ನು ರೇಷ್ಮೆಯಂತೆ
ನುಣುಪಾಗಿಸುತ್ತದೆ.

ಸೆಲ್ಯೂಲೇಟ್ ಹೊಡೆದೋಡಿಸಲು ಕಾಫಿಯನ್ನು ಬಳಸಿ
ಗ್ರೌಂಡ್ ಕಾಫಿಯನ್ನು ಸ್ಕ್ರಬ್ ರೀತಿ ಬಳಸಿ ನಿಮ್ಮ ತ್ವಚೆಗೆ ರಕ್ಷಣೆಯನ್ನು ಒದಗಿಸಬಹುದು. ಗ್ರೌಂಡ್ ಕಾಫಿಯನ್ನು ಆಲೀವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ ಅದನ್ನು ಸೆಲ್ಯೂಲೈಟ್‍ನಿಂದ ಭಾದೆಗೆ ಒಳಗಾಗಿರುವ ಪ್ರದೇಶಕ್ಕೆ ಹಚ್ಚಿ. ಅದರ ಮೇಲೆ ಕ್ಲಿಂಗ್ ಫಿಲ್ಮ್ ಅಥವಾ ಪ್ಲಾಸ್ಟಿಕ್ ಮುಚ್ಚಿ ಅದನ್ನು ಸುಮಾರು 20 ನಿಮಿಷ ಹಾಗೆಯೇ ಬಿಡಿ. ನಂತರ ತೊಳೆಯಿರಿ, ಮುಂದೆ ಇದನ್ನು ಪುನರಾವರ್ತಿಸಿ. ನಿಮ್ಮ ತೊಡೆ ಮತ್ತು ಸೊಂಟದ ಮೇಲೆ ಅಸಹ್ಯವಾಗಿ ಕಾಣುವ ಸೆಲ್ಯೂಲೇಟ್ ನಿವಾರಣೆಯಾಗುತ್ತದೆ.

English summary

Handy beauty tricks

Have you heard that your urine could help get rid of your zits, or that nappy rash cream is a great moisturiser? Well, that and many other weird beauty tips and tricks doing the rounds sometimes do work.
X
Desktop Bottom Promotion