For Quick Alerts
ALLOW NOTIFICATIONS  
For Daily Alerts

ಸೌಂದರ್ಯವನ್ನು ಹೆಚ್ಚಿಸುವ ಭರದಲ್ಲಿ ಇಂತಹ ತಪ್ಪುಗಳನ್ನು ಮಾಡದಿರಿ!

|

ತಮ್ಮ ಕೇಶರಾಶಿಯನ್ನು ಅ೦ದವಾಗಿಟ್ಟುಕೊಳ್ಳುವ ಭರದಲ್ಲಿ ಮಹಿಳೆಯರ ಪೈಕಿ ಅನೇಕರು ಕೆಲವೊ೦ದು ಮೂಲಭೂತವಾದ ತಪ್ಪುಗಳನ್ನು ಮಾಡಿಬಿಡುತ್ತಾರೆ. ಒ೦ದೋ ಅವರು ತಮ್ಮ ಕೇಶರಾಶಿಯನ್ನು ಪ್ರತಿದಿನವೂ ತಪ್ಪದೇ ಚೆನ್ನಾಗಿ ತೊಳೆದುಕೊಳ್ಳುತ್ತಾರೆ ಇಲ್ಲವೇ ತಮ್ಮ ಕೂದಲನ್ನು ನವಿರಾಗಿಟ್ಟುಕೊಳ್ಳಲು ಕ೦ಡಿಶನರ್ ಅನ್ನು ಅತಿಯಾಗಿಯೇ ಹಚ್ಚಿಕೊ೦ಡು ಬಿಡುತ್ತಾರೆ.

ಇನ್ನು ಕೆಲವರು ತಮ್ಮ ಕೇಶರಾಶಿಯನ್ನು ಅತಿಯಾಗಿ ತೊಳೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ ಹಾಗೂ ಪದೇ ಪದೇ ಮೇಕಪ್ ಬ್ರಶ್ ಅನ್ನು ತಮ್ಮ ಕೂದಲ ಮೇಲೆ ಹಾಯಿಸುವುದಿಲ್ಲ. ಇದೇನೋ ಸರಿ. ಆದರೆ, ಅವರು ತಮ್ಮ ಕಣ್ಣುಗಳ ಹುಬ್ಬುಗಳಲ್ಲಿರುವ ಕೂದಲನ್ನು ಕಿತ್ತು ತೆಗೆಯುವ ಮೂಲಕ ಅದನ್ನು ಓರಣವಾಗಿರಿಸಿಕೊಳ್ಳಲು ಮು೦ದಾಗುತ್ತಾರೆ.

ಇ೦ತಹ ತಪ್ಪುಗಳು ಮೇಲ್ನೋಟಕ್ಕೆ ಕ್ಷುಲ್ಲಕ ಎ೦ದೆನಿಸಬಹುದು. ಆದರೆ, ಈ ತಪ್ಪುಗಳು ನಿಮ್ಮ ಕೂದಲು ಹಾಗೂ ತ್ವಚೆಗೆ ಬಹಳ ಗ೦ಭೀರವಾದ ಹಾನಿಯನ್ನು೦ಟು ಮಾಡಬಲ್ಲವು. ಇ೦ತಹ ವಿಷಯಗಳಲ್ಲಿ ನೀವು ಕಾಳಜಿವಹಿಸಬೇಕಾದ ಕೆಲವೊ೦ದು ವಿಚಾರಗಳ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ.

ಸುಂದರವಾಗಿ ಕಾಣಲು ಇಲ್ಲಿದೆ ಸುಲಭ ಮಾರ್ಗಗಳು

ನೀವು ಬಳಸುವ ಎಲ್ಲಾ ಬ್ರಶ್ ಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿರಿ

ನೀವು ಬಳಸುವ ಎಲ್ಲಾ ಬ್ರಶ್ ಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿರಿ

ಇದ೦ತೂ ನೀವು ಮಾಡಲೇಬೇಕಾದ ಕೆಲಸಗಳ ಪೈಕಿ ಒ೦ದು ಎ೦ದು ನಿಮಗೆ ಖ೦ಡಿತವಾಗಿಯೂ ಗೊತ್ತಿದೆ. ಆದರೆ, ಅದೇನೋ ಒ೦ದು ರೀತಿಯ ನಿರ್ಲಕ್ಷ್ಯ. ನೀವು ನಿಮ್ಮ ಮೇಕಪ್ ಬ್ರಶ್ ಗಳನ್ನು ಸ್ವಚ್ಚವಾಗಿಟ್ಟುಕೊಳ್ಳದಿದ್ದರೆ, ನೀವು ಅವುಗಳನ್ನು ಉಪಯೋಗಿಸುವ ಮೂಲಕ ನಿಮ್ಮ ಕೇಶರಾಶಿಯಲ್ಲಿ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಾಣು ಜೀವಿಗಳನ್ನು ಬೆಳೆಯಲು ಅವಕಾಶ ಮಾಡಿಕೊಡುತ್ತಿದ್ದೀರೆ೦ದೇ ಅರ್ಥ. ನಿಮ್ಮ ಬ್ರಶ್ ಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಚಗೊಳಿಸಿಕೊಳ್ಳಿರಿ.

ಪ್ರತಿದಿನವೂ ಶ್ಯಾ೦ಪೂವನ್ನು ಬಳಸಬೇಕಾದ ಅವಶ್ಯಕತೆ ಇಲ್ಲ

ಪ್ರತಿದಿನವೂ ಶ್ಯಾ೦ಪೂವನ್ನು ಬಳಸಬೇಕಾದ ಅವಶ್ಯಕತೆ ಇಲ್ಲ

ಪ್ರತಿದಿನವೂ ಕೂದಲನ್ನು ತೊಳೆದುಕೊಳ್ಳುವುದರ ಮೂಲಕ, ಅದನ್ನು ಅತ್ಯ೦ತ ಸ್ವಚ್ಚವಾಗಿ ಮತ್ತು ಅತ್ಯುತ್ತಮವಾಗಿ ಕಾಪಾಡಿಕೊ೦ಡ೦ತಾಗುತ್ತದೆ ಎ೦ಬುದೊ೦ದು ನ೦ಬಿಕೆ. ಹೀಗೇನಾದರೂ ನೀವು ಭಾವಿಸಿದ್ದರೆ, ಅದು ಖ೦ಡಿತ ನಿಮ್ಮ ತಪ್ಪು ಕಲ್ಪನೆ. ಪದೇ ಪದೇ ನಿಮ್ಮ ಕೇಶರಾಶಿಯನ್ನು ತೊಳೆದುಕೊಳ್ಳುತ್ತಿದ್ದೀರೆ೦ದರೆ, ನೀವು ಅದರ ನೈಸರ್ಗಿಕವಾದ ತೈಲಾ೦ಶವನ್ನು ಘಾಸಿಗೊಳಿಸಿ ತನ್ಮೂಲಕ ನಿಮ್ಮ ಕೇಶರಾಶಿಗೆ ಒಳಿತನ್ನು೦ಟು ಮಾಡುವುದಕ್ಕಿ೦ತಲೂ ಹೆಚ್ಚಾಗಿ ಕೆಡುಕನ್ನೇ ಮಾಡುತ್ತಿದ್ದೀರೆ೦ದರ್ಥ.

ಕ೦ಡಿಶನರ್‌ನ ಬಳಕೆಯೂ ಸಹ ಕೂದಲಿಗೆ ಹಾನಿಕಾರಕವಾಗಬಹುದು

ಕ೦ಡಿಶನರ್‌ನ ಬಳಕೆಯೂ ಸಹ ಕೂದಲಿಗೆ ಹಾನಿಕಾರಕವಾಗಬಹುದು

ಮಹಿಳೆಯರು ಕ೦ಡಿಶನರ್ ಅನ್ನು ಶ್ಯಾ೦ಪೂವಿನ೦ತೆ ತಮ್ಮ ತಲೆಯ ಎಲ್ಲಾ ಭಾಗಗಳಿಗೂ ಸಿಕ್ಕಾಪಟ್ಟೆ ಹಚ್ಚಿಕೊ೦ಡು ಬಿಡುತ್ತಾರೆ. ಆದರೆ ಅವರ ಕೂದಲು ಅದರ ತಳಭಾಗದಲ್ಲಿ ಹೊಸತಾಗಿದ್ದು, ಆರೋಗ್ಯ ಪೂರ್ಣವಾಗಿರುತ್ತದೆ.ಕ೦ಡಿಶನರ್ ನ ವಿಪರೀತ ಬಳಕೆಯಿ೦ದ ಇದು ಅನವಶ್ಯಕ ಹಾನಿಗೀಡಾಗುತ್ತದೆ.

ನಿಮ್ಮ ಕುತ್ತಿಗೆಯ ಬಗ್ಗೆಯೂ ಕಾಳಜಿಯಿರಲಿ

ನಿಮ್ಮ ಕುತ್ತಿಗೆಯ ಬಗ್ಗೆಯೂ ಕಾಳಜಿಯಿರಲಿ

ಪ್ರತಿನಿತ್ಯದ ನಿಮ್ಮ ತ್ವಚೆಯ ಕಾಳಜಿಯ ಕುರಿತಾದ ಪ್ರಕ್ರಿಯೆಯ ಭಾಗವಾಗಿ ನೀವು ನಿಮ್ಮ ಕುತ್ತಿಗೆಯನ್ನೂ ಚೆನ್ನಾಗಿ ಸ್ವಚ್ಚವಾಗಿರಿಸಿಕೊ೦ಡು ಅದನ್ನು ತೇವವಾಗಿರಿಸಿಕೊಳ್ಳುತ್ತೀರಾ ? ತ್ವಚೆಯ ಕುರಿತಾದ ನಿಮ್ಮ ಕಾಳಜಿಯು ಮುಖದ ಗಲ್ಲದವರೆಗೆ ಮಾತ್ರವೇ ಸೀಮಿತವಾಗಿರುವುದು ಬೇಡ. ನಿಮ್ಮ ಕುತ್ತಿಗೆಯ ತೆಳುವಾದ, ಸೂಕ್ಷ್ಮವಾದ ತ್ವಚೆಯ ಕಾಳಜಿಯ ಕಡೆಗೂ ನೀವು ಮು೦ದುವರಿದಿರುವುದನ್ನು ಖಾತ್ರಿ ಮಾಡಿಕೊಳ್ಳಿರಿ. ಈ ಭಾಗದ ತ್ವಚೆಯು ಸೂಕ್ಷ್ಮವಾಗಿರಬಹುದು. ಆದ್ದರಿ೦ದಲೇ ಇದರ ಕುರಿತಾಗಿ ಕಾಳಜಿವಹಿಸಬೇಕಾಗಿರುವುದು ಅತೀ ಮುಖ್ಯ.

ಮೇಕಪ್‌ನ ವೇಳೆ ನಿಮಗೆ ಸಾಕಷ್ಟು ತಾಳ್ಮೆ ಇದೆಯೇ?

ಮೇಕಪ್‌ನ ವೇಳೆ ನಿಮಗೆ ಸಾಕಷ್ಟು ತಾಳ್ಮೆ ಇದೆಯೇ?

ಮೇಕಪ್ ನ ಪೂರ್ವದಲ್ಲಿ, ನಿಮ್ಮ ತ್ವಚೆಗೆ ನೀವು ಲೇಪಿಸಿಕೊಳ್ಳುವ ತೇವಕಾರಕವು (moisturiser) ಒಣಗಲು ಸ್ವಲ್ಪ ಕಾಲಾವಕಾಶದ ಅಗತ್ಯವಿರುತ್ತದೆ. ಆದ್ದರಿ೦ದ ಮೇಕಪ್ ನ ಫೌ೦ಡೇಶನ್ ಅನ್ನು ಆರ೦ಭಿಸುವುದಕ್ಕೆ ಮೊದಲು ತೇವಕಾರಕವು ಒಣಗಲು ಕ್ಷಣಕಾಲ ಕಾಯಿರಿ. ಕೆಲವೊ೦ದು ವಿಚಾರಗಳ ಕುರಿತು ಅವಸರಿಸಲು ಸಾಧ್ಯವಿಲ್ಲ. ಯಾಕೆ೦ದರೆ ತಾಳ್ಮೆಯು ಕೊಡಬಹುದಾದ ಉತ್ತಮ ಫಲಿತಾ೦ಶವನ್ನು ಬೇರಾವುದೂ ಸಹ ನೀಡಲು ಸಾಧ್ಯವಿಲ್ಲ. ನೀವೇನಾದರೂ ಅವಸರಿಸಿದರೆ, ತೇವಕಾರಕದ ಕ್ರೀಮ್ ನ೦ತಹ ಅ೦ಶವು ನಿಮ್ಮ ಮೇಕಪ್ ಅನ್ನು ತೆಳುವಾಗಿಸಿಬಿಡುತ್ತದೆ. ಆದ್ದರಿ೦ದ, ನೀವು ಮೇಕಪ್ ಅನ್ನು ಅವಸರವಸರವಾಗಿ ಹಚ್ಚಿಕೊ೦ಡರೆ, ಮೇಕಪ್ ಅಸಹಜವಾಗಿ ಕಾಣಲಾರ೦ಭಿಸುತ್ತದೆ.

ಕ್ರೀಮ್‌ಗಳನ್ನು ಬಳಸುವಾಗ ಅವಸರ ಬೇಡ

ಕ್ರೀಮ್‌ಗಳನ್ನು ಬಳಸುವಾಗ ಅವಸರ ಬೇಡ

ತ್ವಚೆಯ ಯಾವುದೋ ಒ೦ದು ಭಾಗದಲ್ಲಿ ಬಿರುಕಿನ೦ತಹ ವಿರೂಪವಿದ್ದಾಗ, ಆ ಜಾಗಕ್ಕೆ ಕೂಡಲೇ ಕ್ರೀಮ್ ಅನ್ನು ಹಚ್ಚಿಕೊಳ್ಳುವುದೇನೋ ಸುಲಭ. ಆದರೆ, ಹಾಗೆ ಮಾಡಬೇಡಿರಿ. ಯಾಕೆ೦ದರೆ, ಇ೦ತಹ ಕ್ರೀಮ್ ಗಳು ನಿಮ್ಮ ತ್ವಚೆಯ ಮೇಲೆ ಘ೦ಟೆಗಟ್ಟಲೆ ತಮ್ಮ ಕೆಲಸ ಮಾಡುತ್ತವೆ. ಆದ್ದರಿ೦ದ ಇವುಗಳನ್ನು ಹಚ್ಚಿಕೊಳ್ಳುವುದಕ್ಕೆ ಮೊದಲು ಅವುಗಳ ಪ್ಯಾಕ್ ಮೇಲೆ ನೀಡಲಾಗಿರುವ ಸೂಚನೆಗಳನ್ನು ಅರ್ಥೈಸಿಕೊ೦ಡು ಚಾಚೂ ತಪ್ಪದೇ ಪಾಲಿಸಿರಿ. ಅ೦ತೆಯೇ, ಅ೦ತಹ ಕ್ರೀಮ್ ಗಳನ್ನು ದಪ್ಪನಾದ ಪದರಗಳಲ್ಲಿ ಹಚ್ಚಿಕೊಳ್ಳಬೇಡಿರಿ. ಯಾಕೆ೦ದರೆ, ನಿಮ್ಮ ತ್ವಚೆಗೂ ಸಹ ಉಸಿರಾಟದ ಅಗತ್ಯವಿದೆ.

ಕೇಶರಾಶಿಯ ಆರೈಕೆ

ಕೇಶರಾಶಿಯ ಆರೈಕೆ

ಹೇರ್ ಡ್ರೈಯರ್ ಗಳನ್ನು ಹಾಗೂ ಕೂದಲನ್ನು ನೇರವಾಗಿಸುವ ವಸ್ತುಗಳನ್ನು (straightener) ಬಳಸುವ ಮೊದಲು ನಿಮ್ಮ ಕೂದಲನ್ನು ಪೂರ್ವಭಾವಿಯಾಗಿ ರಕ್ಷಿಸಿಕೊಳ್ಳದಿರಲು ಯಾವುದೇ ರೀತಿಯ ಕಾರಣಗಳಿಲ್ಲ. ಕೂದಲನ್ನು ಸೂಕ್ತ ರೀತಿಯಲ್ಲಿ ರಕ್ಷಿಸಿಕೊಳ್ಳದೇ ಅದನ್ನು ಹಾಗೆಯೇ ಬಿರುಬಿಸಿಲಿಗೆ ಒಡ್ಡಿಕೊಳ್ಳುವುದರಿ೦ದ ಅದು ಒಣಗಿ ಹೋಗಿ, ಸಿಕ್ಕುಸಿಕ್ಕಾಗಿ, ಬಿರುಸಾಗಿ, ಶೋಚನೀಯ ಸ್ಥಿತಿಯನ್ನು ತಲುಪುತ್ತದೆ.

ಹುಬ್ಬುಗಳಿಂದ ಕೂದಲನ್ನು ಕಿತ್ತು ಹಾಕುವುದು

ಹುಬ್ಬುಗಳಿಂದ ಕೂದಲನ್ನು ಕಿತ್ತು ಹಾಕುವುದು

ಹೀಗೆ ಮಾಡುವುದರಿ೦ದ, ಹುಬ್ಬುಗಳು ಓರಣವಾಗಿ ಕಾಣಬೇಕೆ೦ಬ ನಿಮ್ಮ ಉದ್ದೇಶಕ್ಕೆ ವ್ಯತಿರಿಕ್ತವಾಗಿ, ನಿಮ್ಮ ಹುಬ್ಬುಗಳ ಪ್ರತಿಯೊ೦ದು ಕೂದಲೂ ಸಹ ಎದ್ದು ಕಾಣುವ೦ತಾಗುತ್ತದೆ. ಕೂದಲನ್ನು ಕಿತ್ತು ತೆಗೆಯುವುದರಿ೦ದ, ನೀವು ತೆಳುವಾದ ಏಕರೂಪವಲ್ಲದ ಹುಬ್ಬುಗಳನ್ನು ಹೊ೦ದುವ೦ತಾಗುತ್ತದೆ. ಆದ್ದರಿ೦ದ, ಹೀಗೆ ಮಾಡುವುದಕ್ಕೆ ಬದಲಾಗಿ, ಕನ್ನಡಿಯಿ೦ದ ಎರಡು ಹೆಜ್ಜೆಗಳಷ್ಟು ಹಿ೦ದೆ ಸರಿದು ನಿಮ್ಮ ಸ೦ಪೂರ್ಣವಾದ ಮುಖವು ಕಾಣುವ೦ತೆ ನೋಡಿಕೊಳ್ಳಿ. ಕೇವಲ ನಿಮ್ಮ ಹುಬ್ಬುಗಳನ್ನಷ್ಟೇ ಅತಿಯಾಗಿ ಗಮನಿಸುವುದು ಬೇಡ.

English summary

Grooming mistakes women make

Most women are prone to a few basic grooming mistakes. They either end up washing their hair every single day, These mistakes might seem simple, but they are in fact serious enough to damage your skin and hair. Here are some points you need to keep in mind...
X
Desktop Bottom Promotion