For Quick Alerts
ALLOW NOTIFICATIONS  
For Daily Alerts

ಸಿಪ್ಪೆಸುಲಿಯುವ ಬೆರಳುಗಳನ್ನು ತೊಡೆದುಹಾಕಲು:9 ಸಲಹೆಗಳು

By Poornima heggade
|

ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆ ಅತ್ಯಂತ ಕಿರಿಕಿರಿ ನೀಡುವಂತದ್ದು ಮತ್ತು ನೀವು ಒಮ್ಮೆಯಾದರೂ ನಿಮ್ಮ ಜೀವನದಲ್ಲಿ ಇದನ್ನು ಅನುಭವಿಸಿಯೇ ಇರುತ್ತೀರಿ! ಉಗುರುಗಳ ಸುತ್ತಲೂ ಇರುವ ಚರ್ಮ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಬೆರಳುಗಳ ಸಿಪ್ಪೆಸುಲಿಯುವ ಸಾಮಾನ್ಯ ಕಾರಣಗಳು: ಎಸ್ಜಿಮಾ, ಅಲರ್ಜಿ, ಒಣ ಚರ್ಮ, ರಾಸಾಯನಿಕಗಳ ಬಳಕೆ, ಆಗಾಗ ಕೈ ತೊಳೆಯುವುದು, ಮತ್ತು ಕೆಲವು ಸಂದರ್ಭಗಳಲ್ಲಿ ಜೀವಸತ್ವ ಬಿ ಕೊರತೆ ಇತ್ಯಾದಿ. ನೀವು ಸೋಂಕು ಹೊಂದಿದ್ದರೆ ವೈದ್ಯಕೀಯ ಸಲಹೆಯನ್ನು ಪಡೆಯಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಸರ್ಗಿಕವಾಗಿ ಸ್ತನದ ಗಾತ್ರವನ್ನು ಹೆಚ್ಚಿಸುವುದು ಹೇಗೆ?

ಬೆರಳಿನ ಸಿಪ್ಪೆಸುಲಿಯುವ ಸಮಸ್ಯೆಗೆ ಹಲವಾರು ವೈದ್ಯಕೀಯ ಕಾರಣಗಳೂ ಇವೆ. ಬಾಹ್ಯ ಅಂಶಗಳಾದ ಸೂರ್ಯನ ಕಿರಣ ಮತ್ತು ಹೈಡ್ರೋಜನ್ ಗಳೂ ಕೂಡ ಈ ಸಮಸ್ಯೆಗೆ ಕೊಡುಗೆಗಳಾಗಿವೆ! ಬೆರಳಿನ ಸಿಪ್ಪೆಸುಲಿಯುವುದು ಚರ್ಮದ ಊತಕ್ಕೆ ಕಾರಣವಾಗಬಹುದು.

ಬೆರಳಿನ ಸಿಪ್ಪೆಸುಲಿಯುವ ಸಮಸ್ಯೆಗೆ ಹೆಚ್ಚಿನ ಕಾಳಜಿ ಮತ್ತು ಆರೈಕೆಯ ಅಗತ್ಯವಿದೆ. ನಿಮ್ಮ ಬೆರಳುಗಳಿಗೆ ಸರಿಯಾದ ಗಮನ ನೀಡುವ ಮೊದಲು, ಬೆರಳುಗಳ ಸಿಪ್ಪೆಸುಲಿಯುವ ಆರೈಕೆಯನ್ನು ಮಾಡುವುದು ಹೇಗೆ ಎಂದು ತಿಳಿಯುವುದು ಅತೀ ಮುಖ್ಯ . ನೀವು ಸರಿಯಾದ ರಕ್ಷಣೆ ನೀಡದಿದ್ದಲ್ಲಿ , ಸಿಪ್ಪೆಸುಲಿಯುವ ಸಮಸ್ಯೆ ಸೋಂಕುಗಳು ಮತ್ತು ಇತರ ಮತ್ತಷ್ಟು ತೊಂದರೆಗಳಿಗೆ ಕಾರಣವಾಗಬಹುದು. ಸೌಂದರ್ಯದ ಹೊರತಾಗಿ, ಬೆರಳುಗಳ ಸಿಪ್ಪೆಸುಲಿಯುವುದು ಕಿರಿಕಿರಿ ಮತ್ತು ಮುಜುಗರಕ್ಕೆ ಕಾರಣವಾಗುತ್ತದೆ.

ಇದು ಸಾಮಾನ್ಯವಾಗಿ ತಾತ್ಕಾಲಿಕ ಸಮಸ್ಯೆಯಾಗಿರುವುದರಿಂದ ನೀವು ಕೆಲವು ಸಮಯ ಮತ್ತು ಪ್ರಯತ್ನ ಪಡಲು ತಯಾರಾಗಿದ್ದೀರಿ ಎಂದಾದರೆ ಇದರ ಚಿಕಿತ್ಸೆ ಬಹಳ ಸುಲಭ. ನೀವು ಸಿಪ್ಪೆಸುಲಿಯುವ ಬೆರಳುಗಳ ಆರೈಕೆಯನ್ನು ಹೇಗೆ ಮಾಡುವುದು ಎಂದು ಚಿಂತಿತರಾಗಿದ್ದರೆ, ಇಲ್ಲಿ ಕೆಲವು ಪರಿಣಾಮಕಾರಿ ಸಲಹೆಗಳಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗಾಯದ ಸಮಸ್ಯೆಗೆ ಸರಳ ಪರಿಹಾರಗಳು

ಬೆಚ್ಚಗಿನ ನೀರು

ಬೆಚ್ಚಗಿನ ನೀರು

ಬೆಚ್ಚಗಿನ ನೀರನ್ನು ಬಳಸಿ ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆಗೆ ಚಿಕಿತ್ಸೆ ನೀಡಲು ಸಹಾಯವಾಗುವ ಉತ್ತಮ ವಿಚಾರಗಳಲ್ಲಿ ಒಂದಾಗಿದೆ. ಸ್ವಲ್ಪ ಸಮಯ ಬೆಚ್ಚಗಿನ ನೀರಿನಲ್ಲಿ ನಿಮ್ಮ ಕೈಗಳನ್ನು ಅದ್ದಿ ನಿಮ್ಮ ಕೈ ಇನ್ನೂ ಆರ್ದ್ರವಾಗಿರುವಾಗಲೇ ಉತ್ತಮ ಮಾಯಿಶ್ಚರೈಸರ್ ಹಚ್ಚಿರಿ.

ಮಾಯಿಶ್ಚರೈಸರ್ ಬಳಸಿ

ಮಾಯಿಶ್ಚರೈಸರ್ ಬಳಸಿ

ಶುಷ್ಕ ಚರ್ಮ ಬೆರಳುಗಳ ಸಿಪ್ಪೆಸುಲಿಯುವ ಪ್ರಮುಖ ಕಾರಣಗಳಲ್ಲಿ ಒಂದು. ನೀವು ಈ ಸ್ಥಿತಿಯನ್ನು ಅನುಭವಿಸಿದರೆ ಒಂದು ಮಾಯಿಶ್ಚರೈಸರ್ ಬಳಸುವುದು ಮುಖ್ಯ. ನೀವು ಮಲಗುವ ಮೊದಲು ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮದ ತೇವಾಂಶ ಕಾಪಾಡಲು ಸಹಾಯ ಮಾಡುತ್ತದೆ .

ನಿಧಾನವಾಗಿ ಒರೆಸುವುದು

ನಿಧಾನವಾಗಿ ಒರೆಸುವುದು

ನಿಮ್ಮ ಕೈ ತೊಳೆದ ನಂತರ ಒರೆಸುವುದಾದರೆ ನಿಧಾನವಾಗಿ ಮಾಡಿ. ನಿಮ್ಮ ಬೆರಳುಗಳನ್ನು ಅದರಲ್ಲೂ ವಿಶೇಷವಾಗಿ, ನೀವು ಚಕ್ಕೆ ಬೆರಳನ್ನು ಹಾನಿ ಮಾಡುವ ಒರಟು ಬಟ್ಟೆಗಳನ್ನು ಎಂದಿಗೂ ಬಳಸಬೇಡಿ. ಇದು ಸಿಪ್ಪೆಸುಲಿಯುವ ಬೆರಳುಗಳಿಗೆ ವೇಗವಾಗಿ ಉಪಶಮನ ನೀಡಲು ಸಹಾಯವಾಗುತ್ತದೆ.

ಆಲಿವ್ ಎಣ್ಣೆ ಬಳಸಿ

ಆಲಿವ್ ಎಣ್ಣೆ ಬಳಸಿ

ನೀವು ಸುಲಭವಾಗಿ ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆಗೆ ಆರೈಕೆಯನ್ನು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ಅದಕ್ಕೊಂದು ಅದ್ಭುತ ಪರಿಹಾರ. ನಿಯಮಿತವಾಗಿ ನಿಮ್ಮ ಬೆರಳುಗಳ ಮೇಲೆ ಆಲಿವ್ ತೈಲ ಅನ್ವಯಿಸಿ. ಇದು ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆಯನ್ನು ನಿವಾರಿಸುವ ಮೂಲಕ ಅತ್ಯುತ್ತಮ ಆರ್ಧ್ರಕ ವಸ್ತುವಾಗಿ ಕಾರ್ಯ ನಿರ್ವಹಿಸುತ್ತದೆ.

ತೇವಾಂಶ ಕಾಯ್ದುಕೊಳ್ಳಿ

ತೇವಾಂಶ ಕಾಯ್ದುಕೊಳ್ಳಿ

ನಿಮ್ಮ ಸೌಂದರ್ಯ ಚಿಕಿತ್ಸೆಗಳ ಮೂಲಕ ಧನಾತ್ಮಕ ಫಲಿತಾಂಶಗಳನ್ನು ಒಮ್ಮೆ ಪಡೆದರೆ ನಿಮ್ಮ ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆಗೆ ಆರೈಕೆಯನ್ನು ಮಾಡುವ ಬಗೆ ಹೇಗೆ ಎಂಬುದರ ಬಗ್ಗೆ ಗೊಂದಲಗಳೇ ಇರುವುದಿಲ್ಲ. ಆದರೆ, ಬೇಗ ಚೇತರಿಕೆಗಾಗಿ, ಸಾಕಷ್ಟು ನೀರನ್ನು ಕುಡಿಯಿರಿ.

ಹಾಲನ್ನು ಬಳಸಿ

ಹಾಲನ್ನು ಬಳಸಿ

ಹಾಲು ನಿಮ್ಮ ಚರ್ಮದ ಮಾಯಿಶ್ವರೈಸರ್ ಕಾಯ್ದುಕೊಳ್ಳಲು ತುಂಬಾ ಪರಿಣಾಮಕಾರಿ. ಹತ್ತಿ ತುಂಡುಗಳಿಂದ ಹಾಲನ್ನು ಅದ್ದಿ ನಿಮ್ಮ ಬೆರಳುಗಳ ಮೇಲಿಡಿ. ಮಲಗುವ ಮೊದಲು ಪ್ರತಿದಿನ ಹೀಗೆ ಮಾಡುವುದರಿಂದ ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆಯನ್ನು ಗುಣಪಡಿಸಲು ಸಹಾಯವಾಗುತ್ತದೆ.

ಸೌತೆಕಾಯಿ ಬಳಸಿ

ಸೌತೆಕಾಯಿ ಬಳಸಿ

ನಿಮ್ಮ ಅಡಿಗೆಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಸಿಪ್ಪೆಸುಲಿಯುವ ಬೆರಳುಗಳ ಚಿಕಿತ್ಸೆಯನ್ನು ಹೇಗೆ ಮಾಡುವುದು ಎಂದು ತಿಳಿಯಲು ಬಯಸಿದರೆ, ಸೌತೆಕಾಯಿ ಉತ್ತಮ ಆಯ್ಕೆ. ಕತ್ತರಿಸಿದ ಸೌತೆಕಾಯಿಯನ್ನು ಬೆರಳುಗಳ ಮೇಲೆ ಉಜ್ಜಿ. ನೀವು ತುರಿದ ಹಸಿ ಸೌತೆಕಾಯಿಯನ್ನೂ ಗಾಯವಾದ ಭಾಗಕ್ಕೆ ಹಚ್ಚಬಹುದು.

ಓಟ್ಸ್

ಓಟ್ಸ್

ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆಗೆ ಮತ್ತೊಂದು ಪರಿಣಾಮಕಾರಿ ಆಯ್ಕೆ ಓಟ್ಸ್. ಬೆಚ್ಚಗಿನ ನೀರಿನಲ್ಲಿ ಓಟ್ಸ್ ಪುಡಿಯನ್ನು ಸೇರಿಸಿ. ಹತ್ತು ನಿಮಿಷಗಳ ಕಾಲ ಈ ಮಿಶ್ರಣದಲ್ಲಿ ನಿಮ್ಮ ಬೆರಳುಗಳನ್ನು ಅದ್ದಿ. ಆನಂತರ ನಿಮ್ಮ ಕೈಗಳನ್ನು ತೊಳೆದು, ಒಣಗಿಸಿ ಸೌಮ್ಯ ಮಾಯಿಶ್ಚರೈಸರ್ ಹಚ್ಚಿ.

ಪ್ರೊಟೀನ್ ಸೇವನೆ

ಪ್ರೊಟೀನ್ ಸೇವನೆ

ಪ್ರೋಟೀನ್, ಅಂಗಾಂಶಗಳ ಪುನರುತ್ಪಾದನೆಗೆ ಬಹಳ ಮುಖ್ಯ. ಈ ಪ್ರೋಟೀನ್ ಸೇವನೆ ಬೆರಳುಗಳ ಸಿಪ್ಪೆಸುಲಿಯುವ ಸಮಸ್ಯೆಗೆ ವೇಗದ ಪರಿಹಾರ ನೀಡುವಲ್ಲಿ ಪ್ರಮುಖ ಅಂಶವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಪ್ರೊಟೀನ್ ಸಮೃದ್ಧ ಆಹಾರಗಳನ್ನು ಸೇರಿಸಿ.

English summary

Get Rid Of Peeling Fingertips: Top 9 Tips

Peeling fingertip is an annoying problem that you might have experienced at least once in your life. The skin around your nails is very delicate making it more sensitive.
Story first published: Friday, February 21, 2014, 14:01 [IST]
X
Desktop Bottom Promotion